‘ಮಹಿಳೆಯರೆಂಬ’ ಭಾವನೆಗಳ ಮೇಲೆ ರಾಜಕೀಯ ಮಾಡುವುದನ್ನು ಬಿಜೆಪಿ ಮೊದಲು ನಿಲ್ಲಿಸಲಿ

Date:

 ಇಲ್ಲಿ ಬಿಜೆಪಿಯ ಮೂಲ ಉದ್ದೇಶ ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಮರುವಿಂಗಡಣೆಗಾಗಿ ಸಂವಿಧಾನದಲ್ಲಿ 131ನೇ ವಿಧಿಗೆ ತಿದ್ದುಪಡಿ ತರುವುದಾಗಿತ್ತು. ವಿಪಕ್ಷಗಳ ಸಾಂಘಿಕ ಒಗ್ಗಟ್ಟಿನ ಹೋರಾಟದ ಬಲದಿಂದ ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷಗಳಲ್ಲಿ ಮೊದಲ ಬಾರಿಗೆ ಹಿನ್ನಡೆಯಾಗಿರುವುದಂತೂ ಸತ್ಯ.‌

“ನಾರಿ ಶಕ್ತಿ ವಂದನ ಅಧಿನಿಯಮ” ಎಂದು ಹೇಳಿಕೊಂಡು ಮಹಿಳೆಯರ ಘನತೆಯನ್ನು ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ ಹರಾಜು ಹಾಕುತ್ತಿದೆ. ಮೋದಿ ಸರ್ಕಾರ ದೇಶದ ಮಹಿಳೆಯರನ್ನು ಮೂರ್ಖರೆಂದು ಭಾವಿಸಿದಂತಿದೆ. ದೇಶದಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ತರಾತುರಿಯಲ್ಲಿ ಏಪ್ರಿಲ್ 16- 17 -18ನೇ ತಾರೀಖಿನಂದು ಕರೆದ ವಿಶೇಷ ಸಂಸತ್ ಅಧಿವೇಶನದ ನಾಟಕಕ್ಕೆ ತೆರೆ ಬಿದ್ದಿದೆ.

- Advertisement -

ಮುಖ್ಯವಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಚುನಾವಣೆಯ ಗೆಲುವಿಗಾಗಿ ಹರಸಾಹಸ ಮಾಡುತ್ತಿರುವ ಬಿಜೆಪಿ ಪಕ್ಷಕ್ಕೆ ಪ್ರಚಾರದ ಸರಕುಗಳು ಖಾಲಿಯಾಗಿವೆ. ಮತ್ತೊಂದು ಕಡೆ ಅಂತಾರಾಷ್ಟ್ರೀಯ ಒತ್ತಡಗಳು, ಅಮೆರಿಕ- ಇರಾನ್ ಯುದ್ಧದಿಂದ ಆಗುತ್ತಿರುವ ದುಷ್ಪರಿಣಾಮಗಳು, ಜೊತೆಗೆ ಎಫ್‌ಸ್ಟೀನ್ ಫೈಲಿನ ಅವ್ಯಕ್ತ ಭಯ ಒಂದೇ ಎರಡೇ, ಈ ಎಲ್ಲಾ ವಿಷಯಗಳನ್ನು ಮರೆಮಾಚಲು ಹಾಗೂ ಭವಿಷ್ಯದಲ್ಲಿ ಬಿಜೆಪಿಯು, ಉತ್ತರ ಭಾರತದ ಸೀಟುಗಳ ಮೂಲಕ ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಮಾಡಿರುವ ಹುನ್ನಾರವೇ, ಈ ಮಹಿಳಾ ಮೀಸಲಾತಿ 2026.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಇದನ್ನು ಓದಿದ್ದೀರಾ? 2023ರಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಮಸೂದೆಯನ್ನು ಮೋದಿ ಸರ್ಕಾರ ಜಾರಿ ಮಾಡಬಹುದಲ್ಲವೇ?

ಅಲ್ಲದೇ, ಇಲ್ಲಿ ಬಿಜೆಪಿಯ ಮೂಲ ಉದ್ದೇಶ ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಮರುವಿಂಗಡಣೆಗಾಗಿ ಸಂವಿಧಾನದಲ್ಲಿ 131ನೇ ವಿಧಿಗೆ ತಿದ್ದುಪಡಿ ತರುವುದಾಗಿತ್ತು. ವಿಪಕ್ಷಗಳ ಸಾಂಘಿಕ ಒಗ್ಗಟ್ಟಿನ ಹೋರಾಟದ ಬಲದಿಂದ ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷಗಳಲ್ಲಿ ಮೊದಲ ಬಾರಿಗೆ ಹಿನ್ನಡೆಯಾಗಿರುವುದಂತೂ ಸತ್ಯ.‌

ಈಗಾಗಲೇ ಏಪ್ರಿಲ್ 16, 2026ರಂದು ಸರ್ವ ಪಕ್ಷಗಳ ಅನುಮೋದನೆಯೊಂದಿಗೆ 33%ರಷ್ಟು ಮಹಿಳಾ ಮೀಸಲಾತಿ ಜಾರಿಯಾಗಿದೆ. ಸೆಪ್ಟೆಂಬರ್ 29- 2023 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತವನ್ನು ಹಾಕಿರುವುದು ಜಗತ್ತಿಗೆ ಗೊತ್ತಿದೆ.

ಅಷ್ಟಕ್ಕೂ ಸಂಸತ್ತಿನ ಒಟ್ಟು ಸದಸ್ಯ ಸಂಖ್ಯೆ 543. ಅದರಲ್ಲಿ NDAಗೆ ಇರುವ ಸದಸ್ಯ ಸಂಖ್ಯೆ 293, ಅಲ್ಲಿಗೆ 2/3 ಬಹುಮತ ಸಿಗಬೇಕಾದರೆ 362 ಸಂಖ್ಯಾಬಲ‌ ಬೇಕಾಗುತ್ತದೆ.‌ ಅದು NDA ಬಳಿ ಇಲ್ಲ.‌ ಅಲ್ಲದೇ ವಿಪಕ್ಷಗಳ ಮತ ಖರೀದಿಸಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೆ ಗೊತ್ತಿದೆ. ಆದರೂ, ಚುನಾವಣೆಯ ಪ್ರಚಾರದ ಸರಕಿಗಾಗಿ ಮಹಿಳೆಯೆಂಬ ಭಾವನೆಗಳೊಂದಿಗೆ ಬಿಜೆಪಿ ಪಕ್ಷ ಚೆಲ್ಲಾಟವಾಡುತ್ತಿದೆ.‌

ಎಲ್ಲವೂ ಪೂರ್ವ ನಿಯೋಜಿತ ಯೋಜನೆಯನ್ನು ತಯಾರಿಸಿ, ಮಹಿಳಾ ಮೀಸಲಾತಿಯ ಹೆಸರಲ್ಲಿ ಮತಯಾಚನೆಯ ಸರಕಿಗಾಗಿ ಮಹಿಳೆಯರನ್ನು ಬಳಸಿಕೊಂಡು ಮೋದಿಯವರು ರಾಷ್ಟ್ರದ ಮಹಿಳಾ ಅಸ್ಮಿತೆಗೆ ಅಪಮಾನ ಎಸಗಿದ್ದಾರೆ.

ಇದಾದ ಮರುಕ್ಷಣದಿಂದಲೇ, ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧಿಸುವುದರ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದೆ ಎಂದು ಈಗಾಗಲೇ ಮಡಿಲಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿರುವ ಮೋಶಾ ಗ್ಯಾಂಗ್ ಹಾದಿಬೀದಿಯಲ್ಲಿ ಮಹಿಳೆಯರ ಭಾವನೆಗಳನ್ನು ಅವಮಾನಿಸುತ್ತಿದೆ.‌

ಆದರೆ, ಕಾಂಗ್ರೆಸ್ ಪಕ್ಷ ಸ್ವಾತಂತ್ರ ಸಂಗ್ರಾಮದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಮುಕ್ತ ಅವಕಾಶ ಕೊಟ್ಟಿತು. ಸ್ವಾತಂತ್ರ್ಯನಂತರ ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿಯೂ 15 ಮಹಿಳೆಯರಿಗೆ‌ ಅವಕಾಶ ಕೊಟ್ಟಿತು. ಮುಖ್ಯವಾಗಿ ಸಂವಿಧಾನದಲ್ಲಿಯೂ ಅನುಚ್ಛೇದ 14ರಲ್ಲಿ ಮಹಿಳಾ ಸಮಾನತೆಯನ್ನು ನೀಡಿದ ಕಾರಣದಿಂದ, ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿಯೇ ಈ ದೇಶದ ಮಹಿಳೆಯರಿಗೆ ಮತ ಹಾಕುವ ಹಕ್ಕನ್ನು ಕೊಟ್ಟಿತು.

ಇದನ್ನು ಓದಿದ್ದೀರಾ? ಮಹಿಳಾ ಮೀಸಲಾತಿ: ಚುನಾವಣಾ ತಂತ್ರವಾಗಿಸಿಕೊಂಡಿತೇ ಮೋದಿ ಸರ್ಕಾರ?

BJP ಅಧಿಕಾರದ ಅವಧಿಗಿಂತಲೂ ಮೊದಲೇ ಈ ದೇಶಕ್ಕೆ ಒಬ್ಬ ಮಹಿಳಾ ಪ್ರಧಾನಿ, ಒಬ್ಬ ರಾಷ್ಟ್ರಪತಿ, ವಿವಿಧ ರಾಜ್ಯಗಳಲ್ಲಿ ‌28 ಮಹಿಳಾ ಮುಖ್ಯಮಂತ್ರಿಗಳಿಗೆ ಅವಕಾಶ ಕೊಟ್ಟಿತು.‌ 1992ರಲ್ಲಿ 73 & 74 ಸಾಂವಿಧಾನಿಕ ತಿದ್ದುಪಡಿ ಮಾಡಿ, ಸ್ಥಳೀಯ ಚುನಾವಣೆಯಲ್ಲೂ 50% ಮಹಿಳಾ ಮೀಸಲಾತಿ ಕೊಟ್ಟಿತು. ಹೀಗೆ ಸದಾ ರಾಜಕೀಯವಾಗಿ ಮಹಿಳೆಯರಿಗೆ ಶಕ್ತಿಯನ್ನು ತುಂಬಿದೆ.‌ ಒಂದು ದಿನವೂ BJP ಪಕ್ಷದ ಹಾಗೆ ಮಹಿಳೆಯರ ಭಾವನೆಗಳಿಗೆ ಧಕ್ಕೆ ತರುವ ಯೋಚನೆಯನ್ನು ಮಾಡಿಲ್ಲ ಎಂಬುದು ಅಷ್ಟೇ ಸತ್ಯವಾಗಿದೆ.

ಇದಾದ ನಂತರವೂ, ನಿರಂತರವಾಗಿ ಸಂಸತ್ ಮತ್ತು ವಿಧಾನಸಭೆಯ 33% ಮಹಿಳಾ‌ ಮೀಸಲಾತಿಗಾಗಿ ಮಸೂದೆಯನ್ನು ಮಂಡಿಸಿದರೂ, ಅದನ್ನು BJP ಪಕ್ಷ ವಿರೋಧಿಸುತ್ತಲೇ ಬಂದಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಆದರೂ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳನ್ನು ಟೀಕೆ ಮಾಡುವ ಸಲುವಾಗಿ ರಚಿತವಾದ ಈ ಯೋಜನೆ ನಕಲಿಯೆಂದು ಈಗ‌ ಜಗತ್ತಿಗೆ ತೋರಿಸಿ ನಗೆಪಾಟಲಾಗಿರುವುದು ಹಾಸ್ಯಾಸ್ಪದವಷ್ಟೇ.

BJP ಹೀಗೆ “ನಾರಿಶಕ್ತಿ ವಂದನೆ” ಎಂಬ ಸ್ಲೋಗನ್ ಬಳಕೆ ಮಾಡಿಕೊಂಡು ಮಹಿಳೆಯರ ಮೇಲೆ ಕರುಣೆ ತೋರುವುದನ್ನು ಬಿಟ್ಟು, ಮೋದಿಯವರಿಗೆ ’56’ ಇಂಚಿನ ಎದೆಯಲ್ಲಿ ತಾಕತ್ತಿದ್ದರೆ, ಇರುವ 543 ಸಂಖ್ಯೆಗೆ 33% ಮಹಿಳಾ ಮೀಸಲಾತಿ ಇಂದೇ ಜಾರಿ ಮಾಡುವುದರ ಮೂಲಕ ತಮ್ಮ ಬದ್ಧತೆಯನ್ನು ತೋರಿಸಲಿ. ಅದುಬಿಟ್ಟು ಹೀಗೆ ಮಹಿಳೆಯರ ಭಾವನೆಗಳ ಮೇಲೆ ರಾಜಕಾರಣ ಮಾಡಿದರೆ, ಅದೇ ಮಹಿಳೆಯರು ನಿಮ್ಮ ಅಧಿಕಾರ ಕಸಿದುಕೊಳ್ಳಲು ಮೂಲ ಕಾರಣೀಭೂತರಾಗುತ್ತಾರೆ. ಎಚ್ಚರ!

WhatsApp Image 2025 04 02 at 16.54.22 95e2f575
ಶೈಲಜಾ ಹಿರೇಮಠ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...