ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

Date:

- Advertisement -

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ ಬದುಕಿನ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ಕ್ಷೇತ್ರ. ಆದರೆ ಶತಮಾನಗಳ ಕಾಲ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಅದನ್ನು ಬಹುತೇಕ ಪುರುಷರ ಸ್ವಾಭಾವಿಕ ಹಕ್ಕಿನಂತೆ ರೂಪಿಸಿತು. ಅಥವಾ “ರಾಜಕೀಯ ಪುರುಷರ ಜನ್ಮಸಿದ್ಧ ಹಕ್ಕು” ಎಂಬ ಅಲಿಖಿತ ಧೋರಣೆ ಇಂದಿಗೂ ರಾಜಕೀಯ ಸಂಸ್ಕೃತಿಯ ಹಲವು ಪದರಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ಏನೂ ಇಲ್ಲ- ನಾಸೆರ್...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇರಾನಿನ ಕವಿ ನಾಸೆರ್ ಫಯ್ಜ್ ಅವರ ಕವನವೊಂದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್‌ ಭಾಗ್ಯ ಅಳುವ ಮಗವೊಂದನು ಸುಟ್ಟು ಬೂದಿ ಮಾಡಿದರು. ಅವನು ಏನೂ ಇಲ್ಲವೆಂದ. ತನ್ನೆಲ್ಲಾ...

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ...

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ ಸಂಚು ನಡೆದಿದೆ. ಕೇಂದ್ರ ಸರ್ಕಾರ (ಮೋದಿ-ಶಾ ಜೋಡಿ) ಮತ್ತು ಚುನಾವಣಾ ಆಯೋಗ (ಗ್ಯಾನೇಶ್‌ ಕುಮಾರ್‌) ಜಂಟಿಯಾಗಿ ಎಸ್‌ಐಆರ್‌ ಹೆಸರಿನಲ್ಲಿ ಅರ್ಹ...

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು...

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ ಮಹಿಳಾ ಕ್ರೀಡಾಪಟುಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಬಡತನ, ಗಾಯದ ನೋವು ಹಾಗೂ ಸಮಾಜದ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು 14 ಚಿನ್ನದ...

ಮನೆಯೊಳಗೆ ಯಾರು ಮಾತನಾಡಬೇಕು, ಯಾರು ನಿರ್ಧಾರ ತೆಗೆದುಕೊಳ್ಳಬೇಕು, ಯಾರು ಹಿರಿಯರ ಮಾತು ಕೇಳಬೇಕು ಎಂಬ ನಿಯಮಗಳು ಹೇಗೆ ರೂಪಿಸಲ್ಪಟ್ಟವೋ, ಅದೇ ಮನೋಭಾವ ನಿಧಾನವಾಗಿ ರಾಜಕೀಯ ಸಂಸ್ಕೃತಿಯೊಳಗೂ ಪ್ರವೇಶಿಸಿತು. “ಮಹಿಳೆ ಮಾತನಾಡಬಹುದು; ಆದರೆ ಎಷ್ಟು ಮಾತನಾಡಬೇಕು ಎಂಬುದನ್ನು ಪುರುಷನೇ ನಿರ್ಧರಿಸಬೇಕು” ಎಂಬ ಅಲಿಖಿತ ನಿಯಮ ರಾಜಕೀಯದಲ್ಲೂ ಕಾಣಿಸಿಕೊಳ್ಳತೊಡಗಿತು.

ಮಹಿಳೆಯರನ್ನು ರಾಜಕೀಯಕ್ಕೆ ಕರೆತರುವುದು, ಆದರೆ ಅಧಿಕಾರಕ್ಕೆ ಕರೆತಂದ ಹಾಗೆಯೇ?

ಮಹಿಳೆಯರು ರಾಜಕೀಯಕ್ಕೆ ಬಂದಾಗ ಈ ವ್ಯವಸ್ಥೆ ತಕ್ಷಣವೇ ಬದಲಾಗಲಿಲ್ಲ. ಮಹಿಳೆಯರನ್ನು ಸಭೆಗಳಿಗೆ ಕರೆತರುವುದು, ಪ್ರಚಾರಕ್ಕೆ ಬಳಸುವುದು, ಮಹಿಳಾ ಮತದಾರರನ್ನು ಸಂಘಟಿಸುವುದು, ಮನೆಮನೆಗೆ ಹೋಗಿ ಪಕ್ಷದ ಸಂದೇಶ ತಲುಪಿಸುವುದು—ಇವೆಲ್ಲದಲ್ಲಿ ಮಹಿಳೆಯರ ಶಕ್ತಿಯನ್ನು ರಾಜಕೀಯ ಪಕ್ಷಗಳು ಗುರುತಿಸಿದವು.

ಆದರೆ ಇಲ್ಲಿಯೇ ಗಂಡಾಳ್ವಿಕೆಯ ರಾಜಕೀಯ ಸಂಸ್ಕೃತಿಯ ಮತ್ತೊಂದು ಮುಖ ಕಾಣಿಸುತ್ತದೆ. ಮಹಿಳೆಗೆ ರಾಜಕೀಯ ಪ್ರಜ್ಞೆ ಬೆಳೆಸುವ ಬದಲು, ಆಕೆಯನ್ನು ರಾಜಕೀಯದ ಪ್ರಚಾರದ ಸರಕಾಗಿ ಬಳಸಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.
ಮಹಿಳೆಯನ್ನು ಸಭೆಯ ಬಾಗಿಲಿನೊಳಗೆ ಕರೆತಂದು ಕುರ್ಚಿ ಕೊಡುವುದು ಸುಲಭ. ಆದರೆ ನಿರ್ಧಾರ ನಡೆಯುವ ಮೇಜಿನ ಬಳಿ ಆಕೆಗೆ ಸ್ಥಾನವಿಲ್ಲದಿದ್ದರೆ, ಆಕೆ ಕೊಠಡಿಯಲ್ಲಿದ್ದಾಳೆ—ಆದರೆ ಅಧಿಕಾರದೊಳಗಿಲ್ಲ. ಎಂಬುದನ್ನು ಸಾರಿ ಹೇಳುತ್ತಿದೆ.
ರಾಜಕೀಯ ಸಮಾವೇಶದ ದೊಡ್ಡ ಪೆಂಡಾಲ್ ಕೆಳಗೆ, ಗಾಡಿ ಹತ್ತಿಸಿ ಕರೆತಂದ ಸಾವಿರಾರು ಮಹಿಳೆಯರತ್ತ ನಾಯಕರು ಕೈಬೀಸಿ, “ಇಗೋ ನೋಡಿ, ನಮ್ಮದು ಮಹಿಳಾ ಪರವಾದ ಪಕ್ಷ” ಎಂದು ಹೇಳಿಕೊಳ್ಳುವ ದೃಶ್ಯವನ್ನು ನಾವು ಆಗಾಗ್ಗೆ ಕಾಣುತ್ತೇವೆ. ಮಹಿಳೆಯರ ದೊಡ್ಡ ಗುಂಪನ್ನು ತೋರಿಸುವುದು ಮಹಿಳಾ ಸಬಲೀಕರಣದ ಸಾಕ್ಷಿಯಂತೆ ಪ್ರದರ್ಶಿಸಲಾಗುತ್ತದೆ.
ಸಂಖ್ಯೆ ಹೆಚ್ಚಾದರೆ ಸಬಲೀಕರಣವಾಗುತ್ತದೆಯೇ? ಆದರೆ, ಇಲ್ಲಿಯೇ ಪ್ರಶ್ನೆಗಳು ಕೇಳಬೇಕಾಗುತ್ತದೆ.

ಆ ಮಹಿಳೆಯರು ಸಮಾವೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದಷ್ಟೇ ಮಹಿಳಾ ಸಬಲೀಕರಣವೇ?

ಅವರಲ್ಲಿ ಎಷ್ಟು ಜನರಿಗೆ ರಾಜಕೀಯದ ನಿರ್ಧಾರ ಪ್ರಕ್ರಿಯೆಯಲ್ಲಿ ಸ್ಥಾನವಿದೆ?
ಆಕೆಯ ಕೈಯಲ್ಲಿ ಪಕ್ಷದ ಧ್ವಜ ಇರಬಹುದು; ಆದರೆ ಪಕ್ಷದ ನೀತಿ ರೂಪಿಸುವ ಅಧಿಕಾರ ಆಕೆಯ ಕೈಯಲ್ಲಿದೆಯೇ?
ಆಕೆ ಸಾವಿರಾರು ಜನರ ನಡುವೆ ಕುಳಿತು ನಾಯಕನ ಮಾತಿಗೆ ಚಪ್ಪಾಳೆ ತಟ್ಟಬಹುದು; ಆದರೆ ಅದೇ ನಾಯಕನ ರಾಜಕೀಯ ನಿರ್ಧಾರವನ್ನು ಪ್ರಶ್ನಿಸುವ ಅವಕಾಶ ಆಕೆಗೆ ಇದೆಯೇ?
ಆಕೆಯನ್ನು ವೇದಿಕೆಯ ಕೆಳಗೆ ಸಾವಿರಾರು ಸಂಖ್ಯೆಯಲ್ಲಿ ತೋರಿಸಬಹುದು; ಆದರೆ ನಿರ್ಧಾರದ ಮೇಜಿನ ಬಳಿ ಎಷ್ಟು ಮಹಿಳೆಯರು ಕುಳಿತಿದ್ದಾರೆ?

ಮಹಿಳೆಯರ ದೃಶ್ಯವಲ್ಲ, ಅವರ ನಿರ್ಧಾರಾಧಿಕಾರವೇ ಮುಖ್ಯ

ಜನಸಾಗರದ ನಡುವೆ ಮಹಿಳೆ ಕಾಣಿಸಿಕೊಳ್ಳಬಹುದು; ಆದರೆ ಅಧಿಕಾರದ ನಕ್ಷೆಯಲ್ಲಿ ಆಕೆಯ ಹೆಸರು ಕಾಣಿಸದಿದ್ದರೆ, ಆ ದೃಶ್ಯ ಕೇವಲ ಸಂಖ್ಯೆಯ ಪ್ರದರ್ಶನವಾಗುತ್ತದೆ. ಇದು ಕೇವಲ ಒಂದು ಪಕ್ಷದ ಪ್ರಶ್ನೆಯಲ್ಲ. ಇದು, ಪುರುಷ ಪ್ರಧಾನ ರಾಜಕೀಯಯದ ಸಾಂಸ್ಕ್ರತಿಕ ಗಂಡಾಳ್ವಿಕೆಯ ಪ್ರಶ್ನೆ.

ಮಹಿಳಾ ಕಲ್ಯಾಣ ಮತ್ತು ಮಹಿಳಾ ರಾಜಕೀಯ ಸಬಲೀಕರಣ ಒಂದೇ ಅಲ್ಲ

ಪುರುಷ ರಾಜಕಾರಣಿಗಳು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದೇವೆ, ಮಹಿಳೆಯರಿಗೆ ಇಷ್ಟೊಂದು ಸೌಲಭ್ಯಗಳನ್ನು ನೀಡಿದ್ದೇವೆ, ನಮ್ಮದು ಮಹಿಳಾ ಪರವಾದ ಪಕ್ಷ ಎಂದು ಹೇಳಿಕೊಳ್ಳಬಹುದು. ಆ ಯೋಜನೆಗಳು ಮಹಿಳೆಯರ ಬದುಕಿಗೆ ಪ್ರಯೋಜನಕಾರಿಯಾಗಿರಬಹುದು. ಆದರೆ, ಮಹಿಳೆಯರಿಗಾಗಿ ಯೋಜನೆ ರೂಪಿಸುವುದು ಮತ್ತು ಮಹಿಳೆಯರನ್ನು ರಾಜಕೀಯವಾಗಿ ಸಬಲಗೊಳಿಸುವುದು ಎರಡೂ ಒಂದೇ ಅಲ್ಲ. ಮಹಿಳೆಗೆ ಏನು ಕೊಡಬೇಕು ಎಂದು ನಿರ್ಧರಿಸುವ ಕೈ ಮತ್ತು ಮಹಿಳೆಯೇ ಏನು ಬೇಕೆಂದು ನಿರ್ಧರಿಸುವ ಕೈ—ಇವೆರಡರ ನಡುವೆ ಇರುವ ಅಂತರವೇ ಅಧಿಕಾರದ ಅಂತರ.
“ನಮಗೆ ಏನು ನೀಡಲಾಗಿದೆ?” ಎಂಬ ಪ್ರಶ್ನೆಯ ಜೊತೆಗೆ “ನಾವು ಏನು ನಿರ್ಧರಿಸುತ್ತಿದ್ದೇವೆ?” ಎಂಬ ಪ್ರಶ್ನೆಯೂ ಬರಬೇಕು. “ಯಾವ ಪಕ್ಷ ಮಹಿಳಾ ಪರ?” ಎಂಬ ಪ್ರಶ್ನೆಯ ಜೊತೆಗೆ “ಆ ಪಕ್ಷದೊಳಗೆ ಮಹಿಳೆಯರಿಗೆ ಎಷ್ಟು ನಿರ್ಧಾರಾಧಿಕಾರವಿದೆ?” ಎಂಬ ಪ್ರಶ್ನೆಯೂ ಬರಬೇಕು.

ಮಹಿಳೆಯ ರಾಜಕೀಯ ಪ್ರಜ್ಞೆ ಏಕೆ ಮುಖ್ಯ?

ರಾಜಕೀಯ ಪ್ರಜ್ಞೆ ಎಂದರೆ ನಾಯಕರು ಹೇಳುವುದನ್ನು ತಿಳಿದುಕೊಂಡು ಪುನರಾವರ್ತಿಸುವುದು ಅಲ್ಲ. ರಾಜಕೀಯ ಪ್ರಜ್ಞೆ ಎಂದರೆ ಅಧಿಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು; ನೀತಿಗಳನ್ನು ಪ್ರಶ್ನಿಸುವುದು; ತನ್ನ ಹಕ್ಕುಗಳನ್ನು ಅರಿಯುವುದು; ಜನರ ಸಮಸ್ಯೆಗಳನ್ನು ರಾಜಕೀಯ ಪ್ರಶ್ನೆಗಳಾಗಿ ಗುರುತಿಸುವುದು; ಪಕ್ಷದೊಳಗಿನ ನಿರ್ಧಾರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು.

ಮಹಿಳೆಯ ಸಾಮರ್ಥ್ಯಕ್ಕೆ ರಾಜಕೀಯದಲ್ಲೇ ಏಕೆ ಅನುಮಾನ?

ಒಬ್ಬ ಮಹಿಳೆ ಯಶಸ್ವಿ ಉದ್ಯಮಿಯಾಗಬಲ್ಲಳು. IAS, IPSನಂತಹ ಅತ್ಯಂತ ಜವಾಬ್ದಾರಿಯುತ ಸಾರ್ವಜನಿಕ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲಳು. ವಿಜ್ಞಾನ, ಶಿಕ್ಷಣ, ವೈದ್ಯಕೀಯ, ಕಾನೂನು, ಸೇನೆ, ಆಡಳಿತ, ಉದ್ಯಮ—ಎಲ್ಲ ಕ್ಷೇತ್ರಗಳಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬಲ್ಲಳು. ಹಾಗಾದರೆ ಅದೇ ಮಹಿಳೆ ರಾಜಕೀಯಕ್ಕೆ ಬಂದಾಗ ಮಾತ್ರ ಆಕೆಯ ಸಾಮರ್ಥ್ಯವನ್ನು ಏಕೆ ಅನುಮಾನಿಸಬೇಕು? ಎಂಬ ಪ್ರಶ್ನೆಯಲ್ಲಿಯೇ ಗಂಡಾಳ್ವಿಕೆಯ ಮುಖ ಪರಿಚಯವಾಗುತ್ತದೆ.

ಇಲ್ಲಿ ನಾವು ಶೋಧಿಸಬೇಕಾದದ್ದು, ಸಮಸ್ಯೆ ಮಹಿಳೆಯ ಸಾಮರ್ಥ್ಯದಲ್ಲೇ ಇದೆಯೇ? ಅಥವಾ ರಾಜಕೀಯದೊಳಗೆ ನಿರ್ಮಿಸಲ್ಪಟ್ಟಿರುವ ಗಂಡಾಳ್ವಿಕೆಯ ಅಧಿಕಾರದ ಸಂಸ್ಕೃತಿಯಲ್ಲಿದೆಯೇ? ಎಂಬುದನ್ನು.

ಮಹಿಳೆಯ ಕೈಗಳು ಶಸ್ತ್ರಚಿಕಿತ್ಸೆ ಮಾಡಬಲ್ಲವು, ಸಂಸ್ಥೆಯನ್ನು ಮುನ್ನಡೆಸಬಲ್ಲವು, ಆಡಳಿತ ನಡೆಸಬಲ್ಲವು; ಆದರೆ ರಾಜಕೀಯದ ಬಾಗಿಲಿಗೆ ಬಂದಾಗ ಅದೇ ಕೈಗೆ ಕೇವಲ ಧ್ವಜವನ್ನು ಕೊಟ್ಟು ನಿಲ್ಲಿಸುವುದೇಕೆ? ಇದು ಪ್ರಜ್ಞಾವಂತ ಮಹಿಳೆಯರನ್ನು ಕಾಡಬೇಕಾದ ಪ್ರಶ್ನೆ.

ಮಹಿಳೆ ಯಾರದೋ ರಾಜಕೀಯದ ನೆರಳಾಗಬೇಕೇ?

ಮಹಿಳೆಯನ್ನು ಕೇವಲ ಕಾರ್ಯಕರ್ತೆ, ಪ್ರಚಾರಕಿ, ಮತಸಂಗ್ರಹಕಿ ಅಥವಾ ನಾಯಕನ ಬೆಂಬಲಿಗ ಎಂಬ ಪಾತ್ರಗಳಲ್ಲೇ ಸೀಮಿತಗೊಳಿಸಿದರೆ, ಆಕೆಯ ಸಾಮರ್ಥ್ಯ ರಾಜಕೀಯ ಅಧಿಕಾರವಾಗಿ ರೂಪಾಂತರಗೊಳ್ಳಲು ಅವಕಾಶ ಸಿಗುವುದಿಲ್ಲ.

ಆದ್ದರಿಂದ ಮಹಿಳೆಯರು ಈಗ ತಮ್ಮನ್ನು ತಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು: “ನಾನು ರಾಜಕೀಯದಲ್ಲಿ ಯಾರಿಗಾಗಿ ಕೆಲಸ ಮಾಡುತ್ತಿದ್ದೇನೆ?” ಎಂಬುದಷ್ಟೇ ಅಲ್ಲ—“ನನ್ನ ರಾಜಕೀಯದಲ್ಲಿ ನನ್ನದೇ ಧ್ವನಿಗೆ ಆದ್ಯತೆ ಎಲ್ಲಿದೆ?”

“ನಾನು ಯಾರ ಪರವಾಗಿ ಜೈಕಾರ ಹಾಕುತ್ತಿದ್ದೇನೆ?” ಎಂಬುದಷ್ಟೇ ಅಲ್ಲ—“ನಾನು ಯಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ?”

“ನನ್ನನ್ನು ವೇದಿಕೆಗೆ ಏಕೆ ಕರೆಯಲಾಗಿದೆ?” ಎಂಬುದಷ್ಟೇ ಅಲ್ಲ—“ನಿರ್ಧಾರದ ಮೇಜಿನ ಬಳಿ ನನ್ನ ಸ್ಥಾನ ಇದೆಯೇ?”

ಮಹಿಳೆಯರಿಗೆ ಈ ಪ್ರಶ್ನೆಗಳು ಹುಟ್ಟಿದ ಕ್ಷಣದಿಂದಲೇ ರಾಜಕೀಯ ಪ್ರಜ್ಞೆಯ ನಿಜವಾದ ಆರಂಭವಾಗುತ್ತದೆ.

ಪ್ರಚಾರದ ಸಂಖ್ಯೆಯಿಂದ ನಿರ್ಧಾರದ ಶಕ್ತಿಯವರೆಗೆ

ಮಹಿಳೆ ಯಾರದೋ ರಾಜಕೀಯದ ಸಂಖ್ಯೆಯಾಗಬೇಕಿಲ್ಲ. ಯಾರದೋ ಸಮಾವೇಶದ ದೃಶ್ಯವಾಗಬೇಕಿಲ್ಲ. ಯಾರದೋ ಪ್ರಚಾರದ ಸಾಧನವಾಗಬೇಕಿಲ್ಲ. ಅವಳು ಯಾರದೋ ರಾಜಕೀಯದ ನೆರಳಾಗಿ ನಿಲ್ಲಬೇಕಿಲ್ಲ; ತನ್ನದೇ ರಾಜಕೀಯದ ಬೆಳಕಾಗಬೇಕು. ಆಕೆ ತನ್ನದೇ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಪ್ರಶ್ನಿಸಬೇಕು. ಚರ್ಚಿಸಬೇಕು. ನಿರ್ಧರಿಸಬೇಕು. ನಾಯಕತ್ವ ವಹಿಸಬೇಕು.

ಮಹಿಳೆಗೆ ಕೇವಲ ಕುರ್ಚಿ ಬೇಡ—ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಬೇಕು.

ಅವಳಿಗೆ ಕೇವಲ ಮೈಕ್ ಬೇಡ—ಅವಳ ಮಾತಿಗೆ ರಾಜಕೀಯ ಮಾನ್ಯತೆ ಬೇಕು.

ಅವಳಿಗೆ ಕೇವಲ ಸಮಾವೇಶದಲ್ಲಿ ಕಾಣಿಸಿಕೊಳ್ಳುವ ಪ್ರದರ್ಶನದ ವಸ್ತುವಾಗುವುದು ಬೇಡ—ರಾಜಕೀಯದ ನಿರ್ಧಾರ ಕೇಂದ್ರದಲ್ಲಿ ಸ್ಥಾನ ಬೇಕು.

ಅವಳಿಗೆ ಕೇವಲ ಯೋಜನೆಯ ಫಲಾನುಭವಿಯ ಸ್ಥಾನ ಬೇಡ—ಯೋಜನೆ ಮತ್ತು ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರ ಬೇಕು.

ಅವಳನ್ನು ಕೇವಲ ಪ್ರಚಾರದ ಸರಕಾಗಿ ಬಳಸಿಕೊಳ್ಳುವುದು ಬೇಡ—ಅಧಿಕಾರವನ್ನು ಹಂಚಿಕೊಳ್ಳಬೇಕು.

ರಾಜಕೀಯ ಪುರುಷರ ಖಾಸಗಿ ಸಾಮ್ರಾಜ್ಯವಲ್ಲ. ಅದು ಜನರ ಸಾರ್ವಜನಿಕ ಅಧಿಕಾರ.

ಮಹಿಳೆಯನ್ನು ರಾಜಕೀಯಕ್ಕೆ ಕರೆತರುವುದು ಮೊದಲ ಹೆಜ್ಜೆ. ಆಕೆಗೆ ರಾಜಕೀಯ ಪ್ರಜ್ಞೆ ನೀಡುವುದು ಎರಡನೇ ಹೆಜ್ಜೆ. ಆಕೆಯ ಸ್ವತಂತ್ರ ಧ್ವನಿಯನ್ನು ಬೆಳೆಸುವುದು ಮೂರನೇ ಹೆಜ್ಜೆ. ಆದರೆ ಆಕೆಯ ಧ್ವನಿಗೆ ನಿರ್ಧಾರಾಧಿಕಾರ ನೀಡುವುದೇ ಮಹಿಳೆಯ ನಿಜವಾದ ರಾಜಕೀಯ ಸಬಲೀಕರಣ.

ಕಾಣಿಸಿಕೊಳ್ಳುವುದರಿಂದ ನಿರ್ಧರಿಸುವುದರವರೆಗೆ

ಸಮಾವೇಶದಲ್ಲಿ ಮಹಿಳೆಯರ ಸಂಖ್ಯೆಯನ್ನು ತೋರಿಸಿ “ನಮ್ಮದು ಮಹಿಳಾ ಪರವಾದ ರಾಜಕೀಯ” ಎಂದು ಹೇಳಿಕೊಳ್ಳುವುದು ಸುಲಭ. ಆದರೆ ಆ ಮಹಿಳೆಯರಲ್ಲಿ ಎಷ್ಟು ಜನರು ಪ್ರಶ್ನಿಸುತ್ತಾರೆ, ಎಷ್ಟು ಜನರು ನೀತಿ ರೂಪಿಸುತ್ತಾರೆ, ಎಷ್ಟು ಜನರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದೇ ನಿಜವಾದ ಪ್ರಶ್ನೆ.

ಮಹಿಳೆ ರಾಜಕೀಯವಾಗಿ ಜಾಗೃತವಾಗುವ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ.

ಇದು ಕೇವಲ ಬಾಗಿಲು ತೆರೆಯುವ ಕಾಲವಲ್ಲ; ಬಾಗಿಲಿನ ಒಳಗಿರುವ ಅಧಿಕಾರದ ಕೊಠಡಿಗೂ ಮಹಿಳೆ ಪ್ರವೇಶಿಸುವ ಕಾಲ.

ಮಹಿಳೆ ರಾಜಕೀಯದಲ್ಲಿ ಕಾಣಿಸಿಕೊಳ್ಳುವುದು ಮಾತ್ರ ಸಾಕಾಗುವುದಿಲ್ಲ; ರಾಜಕೀಯವನ್ನು ಅರ್ಥಮಾಡಿಕೊಂಡು, ಪ್ರಶ್ನಿಸಿ, ತನ್ನದೇ ಧ್ವನಿಯಿಂದ ಅದನ್ನು ರೂಪಿಸುವ ಶಕ್ತಿಯೂ ಆಕೆಗೆ ಬರಬೇಕು.

ಈ ರಾಜಕೀಯದಲ್ಲಿ ಗಂಡಾಳ್ಬಿಕೆಯ ಸಂಸ್ಕೃತಿಯನ್ನು ಬದಲಾಯಿಸಲು ಇಡಬೇಕಾದ ಮೊದಲ ಹೆಜ್ಜೆ, ಮಹಿಳೆ ತನ್ನನ್ನು ಕೇವಲ ರಾಜಕೀಯದ ಭಾಗವಹಿಸುವವಳಾಗಿ ಅಲ್ಲ, ನಿರ್ಧಾರ ತೆಗೆದುಕೊಳ್ಳುವ ಹಕ್ಕುದಾರಳಾಗಿ ಅರಿತುಕೊಳ್ಳುವುದಾಗಿದೆ.

ಮಹಿಳೆ ರಾಜಕೀಯದ ಸಂಖ್ಯೆಯಾಗಬಾರದು — ನಿರ್ಧಾರದ ಶಕ್ತಿಯಾಗಬೇಕು.

ಆ ಜಾಗೃತಿ ಆರಂಭವಾಗುವ ಸರಿಯಾದ ಕಾಲಘಟ್ಟದಲ್ಲೇ ನಾವಿಂದು ನಿಂತಿದ್ದೇವೆ.
ಅಲ್ಲವೇ?

WhatsApp Image 2025 04 02 at 16.54.22 95e2f575
ಶೈಲಜಾ ಹಿರೇಮಠ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ ಪ್ರತಿಮೆ ತಲುಪಿದ ರೋಚಕ ಇತಿಹಾಸ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ ಮತ್ತು ಮೇಕೆ

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು...

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...