ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ ತಂತ್ರವೋ?

Date:

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, “ವಂದೇ ಮಾತರಂ” ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ ಬೆಳವಣಿಗೆಯ ಕುರಿತಾದ ರಾಜಕೀಯ ವ್ಯಾಖ್ಯಾನವಾಗಿದೆ.

- Advertisement -

ಮನೆಗೆ ಬೆಂಕಿ ಹೊತ್ತಿರುವಾಗ, ಹೊಗೆಯ ದಿಕ್ಕು ತೋರಿಸುತ್ತಾ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನದಂತಾಗಬಾರದು ರಾಜಕೀಯ. ಇತಿಹಾಸದ ಪುಟಗಳನ್ನು ತೆರೆದಾಗ, ಯಾವುದು ರಾಷ್ಟ್ರಗೌರವ ಮತ್ತು ಯಾವುದು ರಾಜಕೀಯ ಚಿತ್ತಚದುರಿಕೆ ಎಂಬುದನ್ನು ವಿವೇಚಿಸುವುದು ಅಗತ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ತಾಯಿ ಸೋನಾಲಿ ವಾಕೋಡೆ ಕೇಳಿದ ಪ್ರಶ್ನೆ. ಈ ಪ್ರಶ್ನೆ ಕೇವಲ ಮಗನನ್ನು ಕಳೆದುಕೊಂಡ ತಾಯಿಯ...

ಬಾಗಲಕೋಟೆ | ಮುಂದುವರಿದ ಬಿಸಿಲ ಬೇಗೆ: ಮಳೆ ನಿರೀಕ್ಷೆಯಲ್ಲಿ...

ಮಳೆಗಾಲ ಮುಗಿಯುವ ಹಂತದಲ್ಲಿದ್ದರೂ ಬಾಗಲಕೋಟೆ ಜಿಲ್ಲೆಯಲ್ಲಿ ವಾತಾವರಣ ಮಾತ್ರ ಬೇಸಿಗೆಯ ಸ್ವರೂಪ ಪಡೆದುಕೊಂಡಿದೆ. ಮಳೆಗಾಗಿ ಎದುರು ನೋಡುತ್ತಿರುವ ರೈತರಿಗೆ ಬಿಸಿಲು ಮತ್ತಷ್ಟು ಆತಂಕ ಮೂಡಿಸಿದ್ದು, ಜಿಲ್ಲೆಯಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತಾಪಮಾನ...

ಇತ್ತೀಚೆಗೆ, ಕೇಂದ್ರ BJP ನೇತೃತ್ವದ NDA ಸರ್ಕಾರ ವಂದೇ ಮಾತರಂನ 6 ಚರಣಗಳನ್ನು ಹಾಡಲು ನಿಯಮ ಜಾರಿ ಮಾಡಿ, ಜನಸಾಮಾನ್ಯರ ಮನಸ್ಸನ್ನು ತನ್ನ ಹಳೆ ಚಾಳಿಯಂತೆ ಭಾವನಾತ್ಮಕವಾಗಿ ಸೆಳೆಯಲು ಪ್ರಯತ್ನ ಮಾಡಿತು.

ಆದರೆ ಈ ನಿರ್ಧಾರದ ಸಂದರ್ಭ ಮತ್ತು ಸಮಯವನ್ನು ಗಮನಿಸಿದಾಗ, ಒಂದು ಕಡೆ ದೆಹಲಿಯ ಜಂತರ್ ಮಂತರನಲ್ಲಿ Gen-Z ಯುವ ಸಮುದಾಯ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಭಾರತದ ವಿವಿಧ ರಾಜ್ಯಗಳಲ್ಲೂ ಬೆಂಬಲ ವ್ಯಕ್ತವಾಯಿತು.

ಇನ್ನೊಂದು ಕಡೆ, ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಈ ಪ್ರತಿಭಟನೆಗೆ ಪರೋಕ್ಷವಾಗಿ ಬೆಂಬಲಿಸಿ, ಕಾಂಗ್ರೆಸ್ ಪಕ್ಷದ ವತಿಯಿಂದ ಸುದ್ದಿಗೋಷ್ಠಿ, ಪ್ರತಿಭಟನೆ, ವಿದ್ಯಾರ್ಥಿಗಳೊಂದಿಗಿನ ಸಂವಾದ ಹಾಗೂ ಪ್ರಧಾನಿ ಮನೆಯ ಮುಂದೆ ಪ್ರತಿಭಟನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದರು.

ಕೊನೆಗೂ ಸಂಸತ್ತಿನಲ್ಲಿ Gen-Z ಹೋರಾಟದಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು, BJP ಮತ್ತು ಮೋದಿ-ಷಾ ಅವರಿಗೆ ರಾಜಕೀಯವಾಗಿ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ವಿರೋಧ ಪಕ್ಷದ ಅಭಿಪ್ರಾಯ.

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, “ವಂದೇ ಮಾತರಂ” ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ ಬೆಳವಣಿಗೆಯ ಕುರಿತಾದ ರಾಜಕೀಯ ವ್ಯಾಖ್ಯಾನವಾಗಿದೆ.

ಇದಕ್ಕೆ ಇಂಬು ಕೊಡುವಂತೆ, ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠವು ಕರ್ನಾಟಕ ಸಂಗೀತ ವಿದ್ವಾಂಸ ಟಿ. ಎಂ. ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಧಾರ್ಮಿಕ ನಂಬಿಕೆ ಅಥವಾ conscientious objection ಆಧಾರದ ಮೇಲೆ ವಂದೇ ಮಾತರಂ ಹಾಡದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವ ಪ್ರಶ್ನೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂಬ ನಿಲುವನ್ನು ವ್ಯಕ್ತಪಡಿಸಿತು.

ಈ ಹಂತದಲ್ಲಿ ಇದು ಅಂತಿಮ ತೀರ್ಪು ಅಲ್ಲ. ನ್ಯಾಯಾಲಯವು ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದ್ದು, ವಿಚಾರಣೆ ಮುಂದುವರಿದಿದೆ. ಸುಪ್ರೀಂ ಕೋರ್ಟ್‌ನ ಈ ವಿಚಾರಣೆಯ ಬೆಳವಣಿಗೆಯಿಂದ ಕೇಂದ್ರ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ನಿಲುವಿನ ಕುರಿತು ಚರ್ಚೆ ಮತ್ತಷ್ಟು ತೀವ್ರವಾಗಿದೆ.

ಇತ್ತ ಕರ್ನಾಟಕದಲ್ಲಿಯೂ, ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಪರಿಹಾರ ಹಾಗೂ ಕಸ್ತೂರಿ ರಂಗನ್ ವರದಿಯ ವಿಚಾರವಾಗಿ ವಿಶೇಷ ಅಧಿವೇಶನ ಕರೆದ ಸಂದರ್ಭದಲ್ಲಿಯೂ, ಕರ್ನಾಟಕದ ಬಿಜೆಪಿ ನಾಯಕರು ಸದನದಲ್ಲಿ ಮುದ್ರಿತ ವಂದೇ ಮಾತರಂ ಚರಣಗಳನ್ನು ಸ್ಪಷ್ಟವಾಗಿ ಹಾಡದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ವಂದೇ ಮಾತರಂ ಹಾಡಲು ತೀರ್ಮಾನಿಸಿದ ಆದೇಶಕ್ಕೆ ಕರ್ನಾಟಕದ ರಾಜ್ಯಪಾಲರು ಆಕ್ಷೇಪಣೆ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಈ ವಿಚಾರವೂ ರಾಜಕೀಯ ಮತ್ತು ನ್ಯಾಯಾಂಗ ಚರ್ಚೆಯ ಭಾಗವಾಗಿದೆ.

ಏನಿದು ವಂದೇ ಮಾತರಂ ವಿವಾದ?

ಯಾಕೆ ಈ ಗೀತೆ ರಾಷ್ಟ್ರಗೀತೆಯಾಯಿತು? ಈ ಗೀತೆಯ ಆರು ಚರಣಗಳಲ್ಲಿ ಮೊದಲ ಎರಡು ಚರಣಗಳನ್ನು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹಾಡಲು ಅಂದಿನ ಕಾಂಗ್ರೆಸ್ ನಾಯಕತ್ವ ಏಕೆ ನಿರ್ಧರಿಸಿತು? ಇದನ್ನು ಅರ್ಥಮಾಡಿಕೊಳ್ಳಲು ಅದರ ಪೂರ್ವಾಪರ ಇತಿಹಾಸವನ್ನು ತಿಳಿದುಕೊಳ್ಳುವುದು ಅಗತ್ಯ.

◾ 1875 — ವಂದೇ ಮಾತರಂನ ರಚನೆ

ಬಂಕಿಮಚಂದ್ರ ಚಟ್ಟೋಪಾಧ್ಯಾಯರು ವಂದೇ ಮಾತರಂ ರಚಿಸಿದರು. ಇದು 1875ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. ನಂತರ 1882ರಲ್ಲಿ ಅವರ ‘ಆನಂದಮಠ’ ಕಾದಂಬರಿಯಲ್ಲಿ ಸೇರಿಸಲಾಯಿತು.

Bankimchand

◾ 1896 — ರವೀಂದ್ರನಾಥ ಟಾಗೋರ್ ಅವರಿಂದ ಗಾಯನ

1896ರಲ್ಲಿ ಕೊಲ್ಕತ್ತಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ವಂದೇ ಮಾತರಂ ಹಾಡಿದರು.

◾ 1905 — ಸ್ವದೇಶಿ ಚಳವಳಿ

1905ರ ಬಂಗಾಳ ವಿಭಜನೆಯ ವಿರುದ್ಧದ ಸ್ವದೇಶಿ ಚಳವಳಿಯಲ್ಲಿ ವಂದೇ ಮಾತರಂ ಪ್ರಮುಖ ರಾಷ್ಟ್ರೀಯ ಘೋಷಗೀತೆಯಾಯಿತು.

ಸ್ವಾತಂತ್ರ್ಯ ಹೋರಾಟದ ಸಭೆಗಳು, ಮೆರವಣಿಗೆಗಳು ಮತ್ತು ಚಳವಳಿಗಳಲ್ಲಿ ಅದು ವ್ಯಾಪಕವಾಗಿ ಮೊಳಗಿತು.

◾ 1937 — ಮೊದಲ ಎರಡು ಪದ್ಯಗಳ ಐತಿಹಾಸಿಕ ನಿರ್ಧಾರ

1937ರಲ್ಲಿ ವಂದೇ ಮಾತರಂನ ಸಂಪೂರ್ಣ ಪದ್ಯಗಳನ್ನು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹಾಡುವ ಕುರಿತು ಚರ್ಚೆ ನಡೆಯಿತು.

ಸುಭಾಷ್ ಚಂದ್ರ ಬೋಸ್ ಮತ್ತು ಜವಾಹರಲಾಲ್ ನೆಹರು ನಡುವೆ ಪತ್ರ ವ್ಯವಹಾರ ನಡೆಯಿತು.

20 ಅಕ್ಟೋಬರ್ 1937ರಂದು ನೆಹರು ಅವರು ಬೋಸ್ ಅವರಿಗೆ ಬರೆದ ಪತ್ರದಲ್ಲಿ ವಂದೇ ಮಾತರಂ ಕುರಿತು ರವೀಂದ್ರನಾಥ ಟಾಗೋರ್ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ವಿಷಯವನ್ನು ಪರಿಶೀಲಿಸಿತು.

ಮೊದಲ ಎರಡು ಪದ್ಯಗಳು ರಾಷ್ಟ್ರೀಯ ವೇದಿಕೆಗೆ ಎಲ್ಲರಿಗೂ ಹೆಚ್ಚು ಸ್ವೀಕಾರಾರ್ಹವಾಗಿವೆ ಎಂಬ ವಿಚಾರವನ್ನು ಪರಿಗಣಿಸಲಾಯಿತು.

ಆದ್ದರಿಂದ ರಾಷ್ಟ್ರೀಯ ಸಭೆಗಳಲ್ಲಿ ಮೊದಲ ಎರಡು ಪದ್ಯಗಳನ್ನು ಮಾತ್ರ ಹಾಡುವ ನಿರ್ಧಾರ ಕೈಗೊಳ್ಳಲಾಯಿತು. ಇದು ವಂದೇ ಮಾತರಂನ ಸಂಪೂರ್ಣ ಕೃತಿಯನ್ನು ತಿರಸ್ಕರಿಸುವ ನಿರ್ಧಾರವಾಗಿರಲಿಲ್ಲ. ಬಹುತ್ವದ ಭಾರತದಲ್ಲಿ ಎಲ್ಲರನ್ನೂ ಒಳಗೊಂಡ ರಾಷ್ಟ್ರೀಯ ವೇದಿಕೆಗೆ ಸೂಕ್ತವಾದ ಭಾಗವನ್ನು ಆಯ್ಕೆ ಮಾಡಿದ ಐತಿಹಾಸಿಕ ಹೊಂದಾಣಿಕೆಯಾಗಿತ್ತು.

◾ 1947 — ಸ್ವಾತಂತ್ರ್ಯದ ಸಂದರ್ಭದಲ್ಲಿ ನೆಹರು ಅವರ ಪಾತ್ರ

ಸ್ವಾತಂತ್ರ್ಯದ ಐತಿಹಾಸಿಕ ಕಾರ್ಯಕ್ರಮದಲ್ಲಿ ವಂದೇ ಮಾತರಂಗೆ ಸ್ಥಾನ ನೀಡುವಲ್ಲಿ ನೆಹರು ಅವರ ಪಾತ್ರ ದಾಖಲೆಗಳಲ್ಲಿ ಇದೆ.

4 ಆಗಸ್ಟ್ 1947ರಂದು ರಾಜೇಂದ್ರ ಪ್ರಸಾದ್ ಅವರಿಗೆ ಬರೆದ ಪತ್ರದಲ್ಲಿ, ಆಗಸ್ಟ್ 14ರ ಮಧ್ಯರಾತ್ರಿ ಸಂವಿಧಾನ ಸಭೆಯ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಮೊದಲ ಪದ್ಯವನ್ನು ಹಾಡಿಸುವಂತೆ ನೆಹರು ಸೂಚಿಸಿದ್ದರು.

◾ 15 ಆಗಸ್ಟ್ 1947 — ಆಕಾಶವಾಣಿಯಲ್ಲಿ ವಂದೇ ಮಾತರಂ

15 ಆಗಸ್ಟ್ 1947ರಂದು ಬೆಳಗ್ಗೆ 6:30ಕ್ಕೆ ಪಂ. ಓಂಕಾರನಾಥ ಠಾಕೂರ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಆಹ್ವಾನದ ಮೇರೆಗೆ ಆಕಾಶವಾಣಿಯಲ್ಲಿ ವಂದೇ ಮಾತರಂ ಹಾಡಿದರು.

ಆದ್ದರಿಂದ ಈ ಎರಡು ಘಟನೆಗಳನ್ನು ಪ್ರತ್ಯೇಕವಾಗಿ ನೆನಪಿಡಬೇಕು: 14 ಆಗಸ್ಟ್ 1947 — ನೆಹರು ಅವರು ಸಂವಿಧಾನ ಸಭೆಯ ಕಾರ್ಯಕ್ರಮದಲ್ಲಿ ಮೊದಲ ಪದ್ಯದ ವಂದೇ ಮಾತರಂ ಹಾಡಿಸುವಂತೆ ಸೂಚಿಸಿದರು.
15 ಆಗಸ್ಟ್ 1947 — ಪಂ. ಓಂಕಾರನಾಥ ಠಾಕೂರ್ ಅವರು ಆಕಾಶವಾಣಿಯಲ್ಲಿ ವಂದೇ ಮಾತರಂ ಹಾಡಿದರು.

◾ ಸುಚೇತಾ ಕೃಪಲಾನಿ ಮತ್ತು ಸ್ವಾತಂತ್ರ್ಯದ ಐತಿಹಾಸಿಕ ಕ್ಷಣ

ಸ್ವಾತಂತ್ರ್ಯದ ಮಧ್ಯರಾತ್ರಿ ಸಂವಿಧಾನ ಸಭೆಯ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಮೊದಲ ಪದ್ಯಕ್ಕೆ ಸ್ಥಾನ ನೀಡಲಾಗಿತ್ತು. ನೆಹರು ಅವರ ಪತ್ರದಲ್ಲಿ ಸುಚೇತಾ ಕೃಪಲಾನಿ ಅಥವಾ ಮತ್ತೊಬ್ಬ ಸದಸ್ಯರು ಅದನ್ನು ಹಾಡಬಹುದು ಎಂದು ಉಲ್ಲೇಖಿಸಲಾಗಿದೆ.

◾ 1950 — ವಂದೇ ಮಾತರಂಗೆ ರಾಷ್ಟ್ರೀಯ ಸ್ಥಾನ

24 ಜನವರಿ 1950ರಂದು ಸಂವಿಧಾನ ಸಭೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರು “ಜನ ಗಣ ಮನ” ಭಾರತದ ರಾಷ್ಟ್ರಗೀತೆ ಎಂದು ಘೋಷಿಸಿದರು.

ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರ ವಹಿಸಿದ “ವಂದೇ ಮಾತರಂ”ಗೆ ಜನ ಗಣ ಮನದೊಂದಿಗೆ ಸಮಾನ ಗೌರವ ಮತ್ತು ಸಮಾನ ಸ್ಥಾನ ನೀಡಲಾಗುವುದು ಎಂದು ಹೇಳಿದರು.

ಆದ್ದರಿಂದ ಜನ ಗಣ ಮನ — ಭಾರತದ ರಾಷ್ಟ್ರಗೀತೆ (National Anthem), ವಂದೇ ಮಾತರಂ — ಭಾರತದ ರಾಷ್ಟ್ರೀಯ ಗೀತೆ (National Song)

◾ 1955 — ನೆಹರು ಅವರ ಸ್ಪಷ್ಟೀಕರಣ

1955ರಲ್ಲಿ ನೆಹರು ಅವರು ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ಕುರಿತು ವಿವರಿಸುವಾಗ ವಂದೇ ಮಾತರಂಗೆ ವಿಶೇಷ ರಾಷ್ಟ್ರೀಯ ಸ್ಥಾನವಿದೆ ಎಂದು ಸ್ಪಷ್ಟಪಡಿಸಿದರು.

◾ 2026 — ಇಂದಿನ ಚರ್ಚೆ

2026ರಲ್ಲಿ ವಂದೇ ಮಾತರಂನ ಆರು ಚರಣಗಳ ಸಂಪೂರ್ಣ ಆವೃತ್ತಿಯನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಇಂದಿನ ಚರ್ಚೆಯನ್ನು 1937ರ ಐತಿಹಾಸಿಕ ನಿರ್ಧಾರದಿಂದ ಬೇರ್ಪಡಿಸಿ ನೋಡಲಾಗುವುದಿಲ್ಲ.

ಆಕಾಶವಾಣಿ 26 ಮಾರ್ಚ್ 2026ರಿಂದ ಆರು-ಚರಣಗಳ ಪೂರ್ಣ ಆವೃತ್ತಿಯನ್ನು ಪ್ರಸಾರ ಮಾಡಲು ಆರಂಭಿಸಿದೆ ಎಂದು PIB ಅಧಿಕೃತವಾಗಿ ತಿಳಿಸಿದೆ.

ಕೊನೆಯ ಮಾತು

ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಹೋರಾಟದ ಅಮೂಲ್ಯ ಪರಂಪರೆ. 1937ರಲ್ಲಿ ಮೊದಲ ಎರಡು ಪದ್ಯಗಳನ್ನು ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಿದ ಹಿನ್ನೆಲೆಯನ್ನು ವಂದೇ ಮಾತರಂನ ಅವಮಾನ ಅಥವಾ ತಿರಸ್ಕಾರ ಎಂದು ಅರ್ಥೈಸುವುದು ಇತಿಹಾಸದ ಸಮಗ್ರ ಚಿತ್ರಣವಾಗುವುದಿಲ್ಲ.

ಬಹುತ್ವದ ಭಾರತದಲ್ಲಿ ರಾಷ್ಟ್ರೀಯ ಸಂಕೇತಗಳ ಗೌರವ ಮತ್ತು ಎಲ್ಲರನ್ನೂ ಒಳಗೊಂಡ ರಾಷ್ಟ್ರೀಯ ಏಕತೆ — ಇವೆರಡನ್ನೂ ಒಟ್ಟಿಗೆ ಅರ್ಥಮಾಡಿಕೊಳ್ಳುವುದು ಮುಖ್ಯ.

ಇತಿಹಾಸವನ್ನು ಅಪೂರ್ಣವಾಗಿ ಅಥವಾ ರಾಜಕೀಯ ಉದ್ದೇಶಗಳಿಗೆ ಅನುಗುಣವಾಗಿ ತಿರುಚಿ ಮಂಡಿಸಿ ಗೊಂದಲ ಸೃಷ್ಟಿಸಿ, ಬಹುತ್ವ ಭಾರತ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಅಭದ್ರಗೊಳಿಸುವ ವಿವಾದಕ್ಕೆ ಕಾರಣ ಬಿಜೆಪಿಯ ಸಾಂಸ್ಕೃತಿಕ ರಾಜಕಾರಣದ ದಾಳಿಯಾಗಿದೆ.

ಸಂಸತ್ತಿನಲ್ಲಿ ಪ್ರಸ್ತುತ ಭಾರತದ ಜ್ವಲಂತ ಸಮಸ್ಯೆಗಳನ್ನು ಚರ್ಚೆ ಮಾಡಲು ಸಿದ್ಧವಿಲ್ಲದ ಬಿಜೆಪಿ ಕೇಂದ್ರ ಸರ್ಕಾರ, ದೇಶದ ಇಂದಿನ ಸಮಗ್ರ ಪರಿಸ್ಥಿತಿಯನ್ನು ಜನತೆಯ ಮುಂದೆ ಬರಬಾರದು ಎಂಬ ಕಾರಣಕ್ಕಾಗಿ, ಈಗ ವಂದೇ ಮಾತರಂ ರಾಷ್ಟ್ರಗೀತೆ ಸಂಪೂರ್ಣ ಚರಣಗಳ ಕುರಿತುವಾದ ಸೃಷ್ಟಿಸಿ, ಜನರ ಚಿತ್ತವನ್ನು ಮೂಲ ಸಮಸ್ಯೆಗಳಿಂದ ದೂರ ಇರಿಸುವ ಹುನ್ನಾರವಿದು.

ಆದರೆ ಮೂಲ ದಾಖಲೆಗಳನ್ನು ನೋಡಿದಾಗ, 1937ರ ನಿರ್ಧಾರದ ಕೇಂದ್ರದಲ್ಲಿದ್ದ ವಿಚಾರವು ರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಬಹುತ್ವವನ್ನು ಹೇಗೆ ಒಳಗೊಳ್ಳಬೇಕು ಎಂಬುದಾಗಿತ್ತು.

ಇತಿಹಾಸವೆಂಬ ಕನ್ನಡಿಯನ್ನು ಒಡೆದು ತುಂಡುಗಳನ್ನು ಮಾತ್ರ ಜನರ ಮುಂದೆ ಹಿಡಿದರೆ, ಪ್ರತಿಬಿಂಬ ಸತ್ಯವಾಗುವುದಿಲ್ಲ; ಸಂಪೂರ್ಣ ಕನ್ನಡಿಯಲ್ಲಿ ನೋಡಿದಾಗ ಮಾತ್ರ ಭಾರತದ ಬಹುತ್ವದ ನಿಜವಾದ ಚಿತ್ರ ಕಾಣಿಸುತ್ತದೆ.

ಆದ್ದರಿಂದ ವಂದೇ ಮಾತರಂನ ಗೌರವವನ್ನು ಉಳಿಸುವುದರ ಜೊತೆಗೆ, ಅದರ ಸಂಪೂರ್ಣ ಐತಿಹಾಸಿಕ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಅಗತ್ಯ.

ಮೂಲ ಉಲ್ಲೇಖಗಳು:

  1. ಜವಾಹರಲಾಲ್ ನೆಹರು–ಸುಭಾಷ್ ಚಂದ್ರ ಬೋಸ್ ಪತ್ರ ವ್ಯವಹಾರ — 20 ಅಕ್ಟೋಬರ್ 1937.
  2. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಂದೇ ಮಾತರಂ ಕುರಿತ ಚರ್ಚೆ — 1937.
  3. ಜವಾಹರಲಾಲ್ ನೆಹರು ಅವರು ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಬರೆದ ಪತ್ರ — 4 ಆಗಸ್ಟ್ 1947.
  4. ಸಂವಿಧಾನ ಸಭೆಯ ದಾಖಲೆ — 24 ಜನವರಿ 1950.
  5. ಭಾರತ ಸರ್ಕಾರದ “ವಂದೇ ಮಾತರಂ” ಕುರಿತ ಅಧಿಕೃತ ಐತಿಹಾಸಿಕ ಮಾಹಿತಿ.
  6. PIB — 2026ರಲ್ಲಿ ಆಕಾಶವಾಣಿಯಲ್ಲಿ ವಂದೇ ಮಾತರಂನ ಆರು ಚರಣಗಳ ಸಂಪೂರ್ಣ ಆವೃತ್ತಿಯ ಪ್ರಸಾರ ಕುರಿತ ಅಧಿಕೃತ ಪ್ರಕಟಣೆ
WhatsApp Image 2025 04 02 at 16.54.22 95e2f575
ಶೈಲಜಾ ಹಿರೇಮಠ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ |ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಸಿಎಂಗೆ ಮನವಿ

ಬೀದರ್ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಹಳ್ಳಿಖೇಡ (ಬಿ) ಸಮೀಪದ ಬೀದರ್ ಸಹಕಾರ...

ಆಲಮಟ್ಟಿ 3ನೇ ಹಂತಕ್ಕೆ ವೇಗ ನೀಡಲು ಅವಳಿ ಜಿಲ್ಲೆಗಳ ಹೋರಾಟಗಾರರ ರಣತಂತ್ರ

ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರ್‌ನಿಂದ 524.256...

ನಾವು ದುಡಿದದ್ದೆಲ್ಲವನ್ನೂ ತಾಯಿ ಗಂಗೆ ಕಸಿದೊಯ್ಯುತ್ತಾಳೆ- ಬಿಹಾರದ ನೆರೆಪೀಡಿತರ ಅಳಲು

​ಇತ್ತೀಚಿನ ಭೀಕರ ಪ್ರವಾಹದಿಂದಾಗಿ ಮನೆಮಠ ಕಳೆದುಕೊಂಡಿರುವ ನೂರಾರು ಜನರಿಗೆ ಬಿಹಾರದ ಭಾಗಲ್ಪುರ...