ಮತ್ತೆ ಬಿಎಸ್‌ವೈ ಮಂತ್ರ : ಲಿಂಗಾಯತ ಮತಗಳ ಕ್ರೋಡೀಕರಿಸಲು ಬಿಜೆಪಿ ಕಸರತ್ತು

Date:

ಬಿಜೆಪಿ ಹೈಕಮಾಂಡ್‌ ಗೆ ಈಗಾಗಲೇ 2028ರ ವಿಧಾನಸಭಾ ಚುನಾವಣೆಯ ತಲೆಬಿಸಿ ಶುರುವಾಗಿದೆ. ಪಕ್ಷದಲ್ಲಿ ಸಮರ್ಥ ರಾಜಕೀಯ ಮುಖವಿಲ್ಲ. ಅದಕ್ಕಾಗಿ ಯಡಿಯೂರಪ್ಪ ಅವರನ್ನೇ ʼಅಪ್ಪʼ ಎನ್ನಬೇಕಾಗಿದೆ. ರಾಜ್ಯದ ಮಟ್ಟಿಗೆ “ಬಿಎಸ್‌ವೈ ಇನ್ನೂ ಪಕ್ಷದ ಶಕ್ತಿ”ಯಾಗಿ ಉಳಿದಿದ್ದಾರೆ. ಕಾಂಗ್ರೆಸ್ ಕಡೆಗೆ ಕೊಂಚ ವಾಲಿದ ಲಿಂಗಾಯತ ಮತಗಳನ್ನು ಬಿಜೆಪಿಯೆಡೆಗೆ ಮರಳಿ ತರುವ ಯತ್ನಕ್ಕೆ ಈಗ ಮುಂದಾಗಿದೆ.

ಕರ್ನಾಟಕ ರಾಜಕೀಯದ ಚದುರಂಗದಾಟದಲ್ಲಿ ‘ಲಿಂಗಾಯತ ಸಮುದಾಯ ನಾಯಕ’ ಎಂದೇ ಗುರುತಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜಕಾರಣಕ್ಕೆ ಪ್ರವೇಶಿಸಿ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮೇ.09ಕ್ಕೆ ಬೃಹತ್ ಸಮಾವೇಶ ಹಮ್ಮಿಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಮೇಲ್ನೋಟಕ್ಕೆ ಇದು ಪಕ್ಷದ ಸಂಘಟನೆಯಂತೆ ಕಂಡರೂ, ಚುನಾವಣಾ ತಂತ್ರಗಾರಿಕೆ ಎದ್ದು ಕಾಣಿಸುತ್ತಿದೆ.  

- Advertisement -

ಸಂಘಟನೆ ಅಥವಾ ಸಿದ್ಧಾಂತಕ್ಕಿಂತ ವ್ಯಕ್ತಿ ದೊಡ್ಡವನಾದ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಹಂತಹಂತವಾಗಿ ಬಿಜೆಪಿ ಹೈಕಮಾಂಡ್‌ ಬದಿಗೆ ತಳ್ಳುತ್ತಲೇ ಬಂದಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆರ್.ಎಸ್.‌ಎಸ್‌ ‘ಕೋಲೂ ಮುರಿಯಬಾರದು, ಹಾವೂ ಸಾಯಬಾರದುʼ ಎಂಬಂತೆ ನಡೆದುಕೊಂಡಿತ್ತು. ಆದಾಗ್ಯೂ, ಪಕ್ಷದ ಗೆಲುವಿಗೆ ಇಂತವರ ಮುಖ ಬೇಕಾಗಿತ್ತು. ರಾಜ್ಯದ ವಿಷಯದಲ್ಲಿ ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿಯೂ ಕೆಲಸ ಮಾಡುತ್ತಿಲ್ಲ. ಹೈಕಮಾಂಡ್‌ ಗೆ ಈಗಾಗಲೇ 2028ರ ವಿಧಾನಸಭಾ ಚುನಾವಣೆಯ ತಲೆಬಿಸಿ ಶುರುವಾಗಿದೆ. ಪಕ್ಷದಲ್ಲಿ ಸಮರ್ಥ ರಾಜಕೀಯ ಮುಖವಿಲ್ಲ. ಅದಕ್ಕಾಗಿ ಯಡಿಯೂರಪ್ಪ ಅವರನ್ನೇ ʼಅಪ್ಪʼ ಎನ್ನಬೇಕಾಗಿದೆ. ಯಡಿಯೂರಪ್ಪ ಅವರಿಗೂ ಈಗ ತನ್ನ ರಾಜಕೀಯ ವರ್ಚಸ್ಸು ದೆಹಲಿ ಮಟ್ಟದಲ್ಲಿ ತೋರಿಸಿಕೊಡಬೇಕಿದೆ. ಹಾಗಾಗಿ ಬಿಎಸ್‌ವೈ ಅವರ ಹೆಸರಿನಲ್ಲಿ ನಡೆಯುವ ಈ ಸಮಾವೇಶ ಬಿಜೆಪಿಯೊಳಗಿನ ಆಂತರಿಕ ಬಿಕ್ಕಟ್ಟನ್ನು ಮರೆಮಾಚುವ ಮತ್ತು ಹೈಕಮಾಂಡ್ ಮೇಲೆ ಒತ್ತಡ ಹೇರುವ ‘ಶಕ್ತಿ ಪ್ರದರ್ಶನ’ದಂತೆಯೂ ಕಾಣುತ್ತಿದೆ.

ಹೀಗೆ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು, ವೈಭವಯುತ ಸಮಾವೇಶದ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವುದು ಬಂಡವಾಳಶಾಹಿ ಪ್ರೇರಿತ ರಾಜಕಾರಣದ ಒಂದು ಭಾಗವಾಗಿದೆ. ಇದನ್ನೇ ಬಿಜೆಪಿ ಈಗ ಮುಂದುವರಿಸಿದೆ.

ಇದನ್ನೂ ಓದಿ : ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ತಂತ್ರ ಇದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಜಾತಿ ಸಮೀಕರಣಗಳನ್ನು ಬಳಸಿ ಒಂದು ಲಿಂಗಾಯತ ಸಮುದಾಯವನ್ನು ಓಲೈಸುವ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯುವ ಪ್ರಯತ್ನವಿದು.

ಲಿಂಗಾಯತ ಮತಗಳ ಕ್ರೋಢೀಕರಿಸಲು ಬಿಜೆಪಿ ಕಸರತ್ತು

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಡೆಗೆ ಕೊಂಚ ವಾಲಿದ ಲಿಂಗಾಯತ ಮತಗಳನ್ನು ಬಿಜೆಪಿಯೆಡೆಗೆ ಮರಳಿ ತರುವ ತಂತ್ರವೆಂದೇ ಕಾಣಿಸುತ್ತಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಲಿಂಗಾಯತ ಸಮುದಾಯ ದಶಕಗಳಿಂದ ಬಿಜೆಪಿಯ ಪರವಾಗಿಯೇ ನಿಂತಿದೆ. ಆದರೆ, ಇತ್ತೀಚೆಗಿನ ಕೆಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಈ ಲಿಂಗಾಯತ ಸಮುದಾಯದ ಮತಗಳನ್ನು ತನ್ನಡೆಗೆ ಸಣ್ಣ ಪ್ರಮಾಣದಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗ ಕಾಂಗ್ರೆಸ್‌ ಕಡೆಗೆ ವಾಲಿದ ಈ ‘ಮತ ಸಾಮ್ರಾಜ್ಯ’ವನ್ನು ಮರಳಿ ಪಡೆಯಲು ಬಿಜೆಪಿ ಮತ್ತೆ ಬಿ.ಎಸ್. ಯಡಿಯೂರಪ್ಪ ಅವರನ್ನೇ ಮುನ್ನೆಲೆಗೆ ತಂದಿದೆ. ಇದು ಚುನಾವಣಾ ದೃಷ್ಟಿಯಿಂದ ಕೇವಲ ಒಂದು ಸಮುದಾಯದ ಓಲೈಕೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

‘ಬಿಎಸ್‌ವೈ’ ಮಂತ್ರ: ನಾಯಕತ್ವದ ಅನಿವಾರ್ಯತೆ

ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಟ್ಟಿದ್ದರೂ, ಲಿಂಗಾಯತ ಮತಗಳ ವಿಷಯಕ್ಕೆ ಬಂದಾಗ ಅವರಿಗೆ ಪರ್ಯಾಯ ʼಸಮುದಾಯದ ನಾಯಕʼ ಸಿಕ್ಕಿಲ್ಲ ಎನ್ನುವುದು ಸ್ಪಷ್ಟ. ರಾಜ್ಯದ ಮಟ್ಟಿಗೆ “ಬಿಎಸ್‌ವೈ ಇನ್ನೂ ಪಕ್ಷದ ಶಕ್ತಿ”ಯಾಗಿ ಉಳಿದಿದ್ದಾರೆ. ವಯಸ್ಸಿನ ಕಾರಣಕೊಟ್ಟು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ, ಬಿಜೆಪಿ ಮೇಲೆ ಅಸಮಾಧಾನ ಹೊಂದಿದ್ದ ಲಿಂಗಾಯತ ಸಮುದಾಯವನ್ನು ಮರಳಿ ಓಲೈಸಿಕೊಳ್ಳುವುದಕ್ಕೆ ಹೆಣೆದಿರುವ ತಂತ್ರ ಎಂದೇ ಕಾಣಿಸುತ್ತಿದೆ.
ಇನ್ನು, ಯಡಿಯೂರಪ್ಪ ಅವರ ಪ್ರಭಾವ ಮತ್ತು ಶಿಫಾರಸ್ಸಿನ ಮೇಲೆಯೇ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೂ, ʼಸಮುದಾಯದ ನಾಯಕʼನಾಗಿ ವಿಜಯೇಂದ್ರ ಗುರುತಿಸಿಕೊಂಡಿಲ್ಲ. ಸಮುದಾಯ ವಿಜಯೇಂದ್ರ ಅವರನ್ನು ನಮ್ಮ ನಾಯಕ ಎಂದು ಪೂರ್ಣ ಸಮ್ಮತಿಯಿಂದ ಒಪ್ಪಿಕೊಳ್ಳುವುದಕ್ಕೆ ಮನಸ್ಸು ಮಾಡಿಲ್ಲ. ಹಾಗಾಗಿ ಮತ್ತೆ ಯಡಿಯೂರಪ್ಪ ಅವರ ಮುಂದಾಳತ್ವದಲ್ಲೇ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರದ ಪೀಠದಲ್ಲಿ ಪ್ರತಿಷ್ಠಾಪಿಸುವುದಕ್ಕೆ ಈಗಿಂದಲೇ ಪ್ರಯತ್ನಕ್ಕಿಳಿದಿದೆ.

ಜಾತಿಗಣತಿ ಮತ್ತು ಒಳಮೀಸಲಾತಿ ಅಸ್ತ್ರ

ಕಾಂಗ್ರೆಸ್ ಸರ್ಕಾರ ‘ಜಾತಿ ಗಣತಿ’ ವರದಿಯನ್ನು ಮುನ್ನೆಲೆಗೆ ತರುತ್ತಿರುವುದು ಲಿಂಗಾಯತ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಇದನ್ನು ಬಳಸಿಕೊಂಡು ಬಿಜೆಪಿ, “ಕಾಂಗ್ರೆಸ್ ಲಿಂಗಾಯತರ ಜನಸಂಖ್ಯೆಯನ್ನು ಕಡಿಮೆ ತೋರಿಸಿ ಸಮುದಾಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ” ಎಂಬ ವಾದವನ್ನು ಪ್ರಬಲವಾಗಿ ಮಂಡಿಸುತ್ತಿದೆ. ಈ ಮೂಲಕ ಸಮುದಾಯದಲ್ಲಿ ಭೀತಿ ಮತ್ತು ಅಸುರಕ್ಷಿತ ಭಾವನೆಯನ್ನು ಬಿತ್ತಿ, ಅವರನ್ನು ಮತ್ತೆ ಹಿಂದುತ್ವ ಮತ್ತು ಪಕ್ಷದ ಸಿದ್ಧಾಂತದ ಅಡಿಯಲ್ಲಿ ಒಗ್ಗೂಡಿಸಲು ಪ್ರಯತ್ನಿಸುತ್ತಿದೆ. ಇದೆಲ್ಲದಕ್ಕೂ ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣ ಮಹೋತ್ಸವದ ಕಾರ್ಯಕ್ರಮ ನೆಪವಾಗಿ ಸಿಕ್ಕಿದೆ.

ಇನ್ನು, ಬಿಜೆಪಿ ಸಾಂಪ್ರದಾಯಿಕವಾಗಿ ಮಠಾಧೀಶರೊಂದಿಗೆ ನಿಕಟ ಸಂಬಂಧ ಹೊಂದಿದೆ. ಕಾಂಗ್ರೆಸ್‌ನ ‘ಅಹಿಂದ’ ರಾಜಕಾರಣಕ್ಕೆ ಪ್ರತಿಯಾಗಿ, ಲಿಂಗಾಯತ ಮಠಗಳ ಬೆಂಬಲವನ್ನು ಕ್ರೋಡೀಕರಿಸುವುದು ಕೂಡ ಬಿಜೆಪಿಯ ಪ್ರಮುಖ ತಂತ್ರವಾಗಿದೆ. ಅಭಿವೃದ್ಧಿಗಿಂತ ಹೆಚ್ಚಾಗಿ ಧಾರ್ಮಿಕ ಅಸ್ಮಿತೆಯನ್ನು ಎಬ್ಬಿಸುವ ಮೂಲಕ ಲಿಂಗಾಯತ-ವೀರಶೈವ ಮತಗಳು ಚದುರದಂತೆ ನೋಡಿಕೊಳ್ಳಲು ಬಿಜೆಪಿ ಸನ್ನದ್ಧವಾಗಿದೆ. ಯಡಿಯೂರಪ್ಪರನ್ನು ಮುಂದೆ ಬಿಟ್ಟಿದೆ.

ಆದರೆ, ಈ ತಂತ್ರಗಳು ಎಷ್ಟು ಯಶಸ್ವಿಯಾಗುತ್ತವೆ ಎನ್ನುವುದು ಕುತೂಹಲಕಾರಿ. ಕೇವಲ ಒಬ್ಬ ನಾಯಕ ಅಥವಾ ಒಂದು ಕುಟುಂಬವನ್ನು ನಂಬಿ ಇಡೀ ಸಮುದಾಯವನ್ನು ಸೆಳೆಯಲು ಸಾಧ್ಯವೇ? ಲಿಂಗಾಯತ ಸಮುದಾಯದೊಳಗಿನ ಉಪಜಾತಿಗಳ (ಉದಾಹರಣೆಗೆ ಪಂಚಮಸಾಲಿ) ಮೀಸಲಾತಿ ಹೋರಾಟ ಬಿಜೆಪಿಗೆ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನಡೆಯುವ ಸಮಾವೇಶದ ಮೂಲಕ ಎದುರಿಸುವುದಕ್ಕೆ ಸಾಧ್ಯವಿದೆಯೇ?  

ಲಿಂಗಾಯತ ಪ್ರತ್ಯೇಕ ಧರ್ಮ: ರಾಜಕೀಯ ಮೇಲಾಟ

ಕರ್ನಾಟಕದ ರಾಜಕಾರಣದಲ್ಲಿ ‘ಲಿಂಗಾಯತ ಪ್ರತ್ಯೇಕ ಧರ್ಮ’ ಎನ್ನುವುದು ಕೇವಲ ಧಾರ್ಮಿಕ ಬೇಡಿಕೆಯಾಗಿ ಉಳಿದಿಲ್ಲ. ಅದು ಚುನಾವಣೆಯ ಪ್ರಬಲ ಅಸ್ತ್ರವಾಗಿ ಮಾರ್ಪಟ್ಟಿದೆ. 12ನೇ ಶತಮಾನದ ಬಸವಣ್ಣನವರ ಕ್ರಾಂತಿಕಾರಿ ಆಶಯಗಳನ್ನು ಬದಿಗಿಟ್ಟು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ವಿಚಾರವನ್ನು ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಸಾಮಾಜಿಕ ದುರಂತಗಳಲ್ಲೊಂದು.

ಲಿಂಗಾಯತ ಧರ್ಮದ ಮೂಲ ಸಿದ್ಧಾಂತವೇ ವೈದಿಕ ಶಾಹಿಯ ವಿರುದ್ಧದ ದನಿ. ಜಾತಿ ಪದ್ಧತಿ, ಲಿಂಗ ತಾರತಮ್ಯ ಮತ್ತು ಪುರೋಹಿತಶಾಹಿಯನ್ನು ಧಿಕ್ಕರಿಸಿ ಹುಟ್ಟಿದ ಈ ಚಳವಳಿಯನ್ನು ‘ಹಿಂದೂ ಧರ್ಮದ ಒಂದು ಭಾಗ’ ಎಂದು ಬಿಂಬಿಸುವುದು ಚಾರಿತ್ರಿಕ ಸತ್ಯಕ್ಕೆ ಮಾಡುವ ಅಪಚಾರ.

ಇದನ್ನೂ ಓದಿ : ಬಿಜೆಪಿಯಿಂದ ಭಯೋತ್ಪಾದನೆ ಮಟ್ಟ ಹಾಕುವ ಮಂತ್ರ; ಪುಲ್ವಾಮ, ಪಹಲ್ಗಾಮ್ ದಾಳಿಯ ತನಿಖೆ ಏನಾಯ್ತು?

ಆರ್‌.ಎಸ್‌.ಎಸ್ ಮತ್ತು ಬಿಜೆಪಿಯ ‘ಹಿಂದುತ್ವ’ದ ಅಡಿಯಲ್ಲಿ ಲಿಂಗಾಯತರನ್ನು ಉಳಿಸಿಕೊಳ್ಳುವುದು ಅವರ ಅನಿವಾರ್ಯತೆ. ಲಿಂಗಾಯತರು ಪ್ರತ್ಯೇಕ ಧರ್ಮ ಎಂದು ಗುರುತಿಸಿಕೊಂಡರೆ, ಅದು ಬಿಜೆಪಿಯ ಹಿಂದೂ ಮತಗಳ ಏಕೀಕರಣಕ್ಕೆ ದೊಡ್ಡ ಪೆಟ್ಟು ನೀಡುತ್ತದೆ. ಹೀಗಾಗಿಯೇ, ಬಿಜೆಪಿ ಈ ಹೋರಾಟವನ್ನು ‘ಹಿಂದೂ ಸಮಾಜವನ್ನು ಒಡೆಯುವ ಸಂಚು’ ಎಂದು ಬಣ್ಣಿಸಿ ಆರೋಪಿಸುತ್ತಲೇ ಬಂದಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಕಳೆದ ಸರ್ಕಾರದ ಅವಧಿಯಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಇದನ್ನು ಒಂದು ಸೈದ್ಧಾಂತಿಕ ಬದ್ಧತೆಯ ಬದಲಾಗಿ, ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವ ‘ಚುನಾವಣಾ ತಂತ್ರ’ವಾಗಿ ಬಳಸಿತ್ತು. ಇವೆಲ್ಲಾ ಬಿಜೆಪಿಗೆ ರಾಜಕೀಯವಾಗಿ ಪೆಟ್ಟು ನೀಡಿತ್ತು. ಹಾಗಾಗಿ ರಾಜಕೀಯವಾಗಿ ಚದುರಿಹೋದ ಲಿಂಗಾಯತ ಸಮುದಾಯದ ಮತಗಳನ್ನು ಒಟ್ಟುಗೂಡಿಸುವ ತಂತ್ರದ ಭಾಗವಾಗಿ ಯಡಿಯೂರಪ್ಪರನ್ನು ಬಿಜೆಪಿ ಮತ್ತೆ ಮೇಲೆ ಕಟ್ಟುತ್ತಿದೆ. ಬಿಜೆಪಿಗೆ ಯಡಿಯೂರಪ್ಪ ಮತ್ತೆ ಬಳಕೆಯಾಗುತ್ತಿದ್ದಾರೆ, ಬಿಜೆಪಿಯನ್ನು ತಮ್ಮ ಅಸ್ತಿತ್ವಕ್ಕಾಗಿ, ರಾಜ್ಯದಲ್ಲಿ ತಮ್ಮ ಪ್ರಭಾವಳಿಯನ್ನು ಕಾಪಿಟ್ಟುಕೊಳ್ಳುವುದಕ್ಕೆ ಯಡಿಯೂರಪ್ಪ ಬಳಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ಬೀದರ್‌ | 125 ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ : ಸಚಿವ ಈಶ್ವರ ಖಂಡ್ರೆ

ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ...