ದಸರಾ ಸಿನಿಮೋತ್ಸವ: ಸಂಸ್ಕೃತಿಯ ವಿಕೇಂದ್ರೀಕರಣ ಮತ್ತು ದೃಶ್ಯ ಪ್ರಜ್ಞೆಯ ಉಳಿವು

Date:

ಸಿನಿಮೋತ್ಸವಗಳನ್ನು ಲಾಭ-ನಷ್ಟದ ವ್ಯಾಪಾರಿ ಕನ್ನಡಕದಿಂದ ನೋಡುವುದು ಸರಿಯಲ್ಲ. ದಸರೆಯ ಸಾಂಸ್ಕೃತಿಕ ಘನತೆಯ ಭಾಗವಾಗಿ, ಹೊಸ ತಲೆಮಾರಿನ ದೃಶ್ಯ ಸಾಕ್ಷರತೆಯನ್ನು ಬೆಳೆಸಲು ಈ ಸಿನಿಮೋತ್ಸವವನ್ನು ಜೀವಂತವಾಗಿಟ್ಟು, ರಾಜ್ಯಾದ್ಯಂತ ಸಿನಿಮಾ ಸಂಸ್ಕೃತಿಯನ್ನು ವಿಕೇಂದ್ರೀಕರಣಗೊಳಿಸುವ ಬದ್ಧತೆಯನ್ನು ಸರ್ಕಾರ ತೋರಬೇಕಿದೆ.

ಮೈಸೂರು ದಸರಾ ಎಂದರೆ ಕೇವಲ ಅರಮನೆಯ ಬೆಳಕು, ಮೆರವಣಿಗೆ ಅಥವಾ ವಸ್ತುಪ್ರದರ್ಶನದ ಸಂಭ್ರಮ ಮಾತ್ರವಲ್ಲ, ಹಿಂದಿನಿಂದಲೂ ಅದು ನಾಟಕ, ಸಂಗೀತ, ನೃತ್ಯ, ಕಲೆ ಮತ್ತು ಸಾಹಿತ್ಯವನ್ನು ಪೊರೆದು ಬೆಳೆಸಿದ ಸಾಂಸ್ಕೃತಿಕ ಪರಂಪರೆ. ಈ ಬಹುಮುಖಿ ನಾಡಹಬ್ಬದಲ್ಲಿ ಸಿನಿಮಾ ಮಾಧ್ಯಮವೂ ಬೆರೆತು ದಶಕಗಳೇ ಕಳೆದಿವೆ. ಆದರೆ, ಈಗ ‘ಜನರ ಸ್ಪಂದನೆ ಕಡಿಮೆ’ ಎಂಬ ಸರಳ ಕಾರಣವನ್ನೊಡ್ಡಿ ದಸರಾ ಸಿನಿಮೋತ್ಸವವನ್ನೇ ಸಂಪೂರ್ಣವಾಗಿ ಕೈಬಿಡಲು ಹೊರಟಿರುವುದು ನಮ್ಮ ಸಾಂಸ್ಕೃತಿಕ ಪ್ರಜ್ಞೆಗೆ ಎದುರಾಗಿರುವ ಆತಂಕಕಾರಿ ನಡೆ.

- Advertisement -

ದಸರಾ ಸಿನಿಮೋತ್ಸವಕ್ಕೆ ಕೇವಲ ಎರಡೂವರೆ ದಶಕಗಳ ಇತಿಹಾಸವಲ್ಲ, ಅದರ ಬೇರುಗಳು ಐದಾರು ದಶಕಗಳಷ್ಟು ಹಿಂದಕ್ಕೆ ಹೋಗುತ್ತವೆ. ಶ್ರೀಕೃಷ್ಣ ಆಲನಹಳ್ಳಿಯವರು ಮತ್ತು ಅವರ ಒಡನಾಡಿಗಳು ಹಿಂದೆ ಈ ಮೈಸೂರು ದಸರಾ ಸಿನಿಮೋತ್ಸವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಜಾಗತಿಕ ಹಾಗೂ ಕಲಾತ್ಮಕ ಸಿನಿಮಾಗಳ ಪ್ರದರ್ಶನಗಳನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಅಂದು ಚಿತ್ರಮಂದಿರಗಳ ಬೆಳಗಿನ ಆಟಗಳಲ್ಲಿ ಕನಿಷ್ಠ ಟಿಕೆಟ್ ದರದಲ್ಲಿ ಸಾಮಾನ್ಯ ಜನರಿಗೂ, ವಿದ್ಯಾರ್ಥಿಗಳಿಗೂ ಅತ್ಯುತ್ತಮ ಸಿನಿಮಾಗಳು ಮುಖಾಮುಖಿಯಾಗುತ್ತಿದ್ದವು. ಸಿನಿಮಾ ಸಂಸ್ಕೃತಿಯನ್ನು ಆಡಂಬರವಿಲ್ಲದೆ ಸಹೃದಯರಿಗೆ ಮುಟ್ಟಿಸುವ ಅಂತಹ ಪ್ರಾಮಾಣಿಕ ಕಾಳಜಿ ಇಂದಿಗೂ ನಮಗೆ ಸ್ಫೂರ್ತಿಯಾಗಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಭಾರತದಲ್ಲಿ ಚಲನಚಿತ್ರೋತ್ಸವಗಳ ಇತಿಹಾಸವನ್ನು ಗಮನಿಸಿದರೆ, 1952ರಲ್ಲಿ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಬೆಂಬಲದೊಂದಿಗೆ ‘ಫಿಲ್ಮ್ ಡಿವಿಷನ್’ ಮುಂಬೈನಲ್ಲಿ ಮೊದಲ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು (IFFI) ಆರಂಭಿಸಿತು. ಬಳಿಕ ಅದನ್ನು ದೆಹಲಿ, ಕೋಲ್ಕತ್ತಾ, ಮದ್ರಾಸ್‌ಗಳಿಗೂ ಕೊಂಡೊಯ್ಯಲಾಯಿತು. ಭಾರತೀಯ ಸಿನಿಮಾದ ಕಥನ ಶೈಲಿ, ದೃಶ್ಯ ಸಂವೇದನೆ ಹಾಗೂ ಸೃಜನಶೀಲ ಪ್ರಯೋಗಗಳಲ್ಲಿ ಕಾಲಕಾಲಕ್ಕೆ ಆದಂತಹ ಅನೇಕ ಗುಣಾತ್ಮಕ ಬದಲಾವಣೆಗಳಿಗೆ ಮುನ್ನುಡಿ ಬರೆದದ್ದೇ ಇಂತಹ ಚಿತ್ರೋತ್ಸವಗಳು. ಆದರೆ ಇಂದು ನಮ್ಮ ರಾಜ್ಯದಲ್ಲಿ ಸಿನಿಮೋತ್ಸವಗಳೆಂದರೆ ಕೇವಲ ಬೆಂಗಳೂರಿನ ಮಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿವೆ. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉತ್ಸವ ನಡೆಯುವುದು ಅತ್ಯಂತ ಹೆಮ್ಮೆಯ ಸಂಗತಿ ನಿಜ, ಆದರೆ ಇಡೀ ರಾಜ್ಯದ ಸಿನಿಮಾ ಸಂಸ್ಕೃತಿ ಕೇವಲ ರಾಜಧಾನಿಯಲ್ಲೇ ಮುಗಿಯಬೇಕೆಂಬುದು ಎಷ್ಟು ಸಮಂಜಸ?

ಇದನ್ನು ಓದಿದ್ದೀರಾ?: ಮೈಸೂರು ಯುವ ದಸರಾ: ಉದ್ಘಾಟಕರಾಗಿ ನಟ ಪ್ರಭುದೇವ್‌ಗೆ ಅಧಿಕೃತ ಆಹ್ವಾನ

ಇದಕ್ಕೆ ಪಕ್ಕದ ಕೇರಳದ ಮಾದರಿ ನಮಗೆ ಅತ್ಯುತ್ತಮ ಪಾಠ. ತಿರುವನಂತಪುರಂನಲ್ಲಿ ಮುಖ್ಯ ಅಂತಾರಾಷ್ಟ್ರೀಯ ಚಿತ್ರೋತ್ಸವ (IFFK) ಮುಗಿದ ತಕ್ಷಣ, ಅಲ್ಲಿ ಪ್ರದರ್ಶನಗೊಂಡ ಅತ್ಯುತ್ತಮ ಚಿತ್ರಗಳಲ್ಲಿ ಆಯ್ದ ಕೆಲವನ್ನು ತೆಗೆದುಕೊಂಡು ಇತರ ಜಿಲ್ಲಾ ಕೇಂದ್ರಗಳಲ್ಲಿ ಪ್ರಾದೇಶಿಕ ಉತ್ಸವಗಳನ್ನಾಗಿ ಆಯೋಜಿಸುತ್ತಾರೆ. ಕೇವಲ ಒಂದು ಅಥವಾ ಎರಡು ಚಿತ್ರಮಂದಿರಗಳಲ್ಲಿ ಸಣ್ಣ ಪ್ರಮಾಣದಲ್ಲಾದರೂ ನಿರಂತರವಾಗಿ ಇಂತಹ ಪ್ರದರ್ಶನಗಳನ್ನು ನಡೆಸುತ್ತಾ ಬಂದಿದ್ದರಿಂದಲೇ ಅಲ್ಲಿನ ಜಿಲ್ಲೆಗಳಲ್ಲೂ ಗಂಭೀರ ಸಿನಿಮಾ ವೀಕ್ಷಕರ ವಲಯ ಬೆಳೆಯಲು ಸಾಧ್ಯವಾಯಿತು. ನಮ್ಮಲ್ಲೂ ಬೆಂಗಳೂರು ಚಿತ್ರೋತ್ಸವ ಮುಗಿದ ನಂತರ, ಆಯ್ದ ಸಿನಿಮಾಗಳನ್ನು ಮೈಸೂರು, ಧಾರವಾಡ, ಮಂಗಳೂರು, ಹಾಸನ, ಗುಲ್ಬರ್ಗದಂತಹ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಕೆಲಸವಾಗಬೇಕು. ಸತತವಾಗಿ ಕೆಲವು ವರ್ಷಗಳ ಕಾಲ ಹೀಗೆ ಆಯೋಜಿಸಿದರೆ ತಾನೇ ಇತರ ಜಿಲ್ಲೆಗಳಲ್ಲೂ ದೃಶ್ಯ ಸಾಕ್ಷರತೆ ಬೆಳೆಯುವುದು?

ವಾಸ್ತವವಾಗಿ, ದಸರಾ ಸಿನಿಮೋತ್ಸವಕ್ಕೆ ಕೇವಲ ಸ್ಥಳೀಯರು ಮಾತ್ರವಲ್ಲ, ಬೆಂಗಳೂರಿನಿಂದಲೂ ಸಹೃದಯ ಸಿನಿಪ್ರೇಮಿಗಳು ಬಂದು ವೀಕ್ಷಿಸಿದ ನಿದರ್ಶನಗಳಿವೆ. ಕನ್ನಡದ ಸ್ವತಂತ್ರ ಚಿತ್ರಗಳು (Independent Cinema) ಪ್ರದರ್ಶನಗೊಂಡ ಸಂದರ್ಭಗಳಲ್ಲಂತೂ, ಅವುಗಳ ನಿರ್ದೇಶಕರು ಮತ್ತು ಇಡೀ ತಂಡವೇ ಮೈಸೂರಿಗೆ ಬಂದು ಜನರೊಂದಿಗೆ ಮುಖಾಮುಖಿಯಾಗಿ ಕಲಾತ್ಮಕ ಚರ್ಚೆಗಳಲ್ಲಿ ತೊಡಗಿಸಿಕೊಂಡದ್ದನ್ನು ನಾವು ಕಂಡಿದ್ದೇವೆ.

ಆದರೆ, ‘ಜನ ಬರುತ್ತಿಲ್ಲ’ ಎಂಬ ಮಾತಿಗೆ ಆಯೋಜನೆಯ ತಂತ್ರದಲ್ಲೂ ಉತ್ತರವಿದೆ. ಅನೇಕ ಸ್ಕ್ರೀನ್‌ಗಳಲ್ಲಿ ಅಥವಾ ಮಾಲ್‌ಗಳಲ್ಲಿ ಪ್ರದರ್ಶನಗಳನ್ನು ಹಂಚಿಹಾಕಿದಾಗ ಜನ ಅಲ್ಲಲ್ಲಿ ಹರಿದುಹೋಗಿ ಚಿತ್ರಮಂದಿರಗಳು ಖಾಲಿ ಕಂಡಿರಬಹುದು. ಅದರ ಬದಲು, ಇಡೀ ಉತ್ಸವವನ್ನು ಕೇವಲ ಒಂದೆರಡು ಪ್ರಮುಖ ಆಡಿಟೋರಿಯಂ ಅಥವಾ ಸಿಂಗಲ್ ಸ್ಕ್ರೀನ್‌ಗಳಲ್ಲಿ ಕೇಂದ್ರೀಕರಿಸಿದರೆ, ಚದುರಿಹೋಗುವ ಸಿನಿಪ್ರೇಮಿಗಳೆಲ್ಲರೂ ಒಂದೇ ಸೂರಿನಡಿ ಸೇರುತ್ತಾರೆ. ಆಗ ಚಿತ್ರಮಂದಿರವೂ ತುಂಬಿ ತುಳುಕುತ್ತದೆ, ವೀಕ್ಷಕರಲ್ಲಿ ಉತ್ಸವದ ಸಂಭ್ರಮ ಹಾಗೂ ಸಾಂಘಿಕ ವಾತಾವರಣವೂ ಜೀವ ಪಡೆಯುತ್ತದೆ.

mysore dasara festival 2 1
ಮೈಸೂರು ದಸರಾ

ಸಿನಿಮೋತ್ಸವಗಳನ್ನು ಲಾಭ-ನಷ್ಟದ ವ್ಯಾಪಾರಿ ಕನ್ನಡಕದಿಂದ ನೋಡುವುದು ಸರಿಯಲ್ಲ. ಪ್ರೇಕ್ಷಕರು ಬರಲಿಲ್ಲ ಎಂದು ಸಾಂಸ್ಕೃತಿಕ ವೇದಿಕೆಯನ್ನು ಮುಚ್ಚುವುದು, ‘ರೋಗಿಗಳ ಸಂಖ್ಯೆ ಕಡಿಮೆಯಾಗಿದೆ’ ಎಂದು ಸಾರ್ವಜನಿಕ ಆಸ್ಪತ್ರೆಯನ್ನೇ ಮುಚ್ಚಿದಂತೆ. ಜನ ಕಡಿಮೆ ಬಂದರು ಎಂಬ ನೆಪವೊಡ್ಡಿ ಮೈಸೂರಿನಂತಹ ಸಾಂಸ್ಕೃತಿಕ ನಗರಿಯ ಸಿನಿಮೋತ್ಸವವನ್ನೇ ನಿಲ್ಲಿಸುವ ಬದಲು, ಹಳೆಯ ದಿನಗಳಂತೆ ಒಂದೆರಡು ಚಿತ್ರಮಂದಿರಗಳಲ್ಲಿ ಆಯ್ದ ಅತ್ಯುತ್ತಮ ಸಿನಿಮಾಗಳನ್ನಿಟ್ಟುಕೊಂಡು ಸಾಂಕೇತಿಕವಾಗಿಯಾದರೂ ಈ ಉತ್ಸವದ ಕೊಂಡಿಯನ್ನು ಉಳಿಸಿಕೊಳ್ಳಬೇಕು. ದಸರೆಯ ಸಾಂಸ್ಕೃತಿಕ ಘನತೆಯ ಭಾಗವಾಗಿ, ಹೊಸ ತಲೆಮಾರಿನ ದೃಶ್ಯ ಸಾಕ್ಷರತೆಯನ್ನು ಬೆಳೆಸಲು ಈ ಸಿನಿಮೋತ್ಸವವನ್ನು ಜೀವಂತವಾಗಿಟ್ಟು, ರಾಜ್ಯಾದ್ಯಂತ ಸಿನಿಮಾ ಸಂಸ್ಕೃತಿಯನ್ನು ವಿಕೇಂದ್ರೀಕರಣಗೊಳಿಸುವ ಬದ್ಧತೆಯನ್ನು ಸರ್ಕಾರ ತೋರಬೇಕಿದೆ.

Babu Eshwar Prasad
ಬಾಬು ಈಶ್ವರ್ ಪ್ರಸಾದ್
+ posts

ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಬಾಬು ಈಶ್ವರ್ ಪ್ರಸಾದ್
ಬಾಬು ಈಶ್ವರ್ ಪ್ರಸಾದ್
ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪಾವಳಿ ಸೀಸನ್‌ನಲ್ಲಿ ನಷ್ಟದ ಆತಂಕ: ‘ಇಂಡಿಯಾ’ ಒಕ್ಕೂಟದ ರ‍್ಯಾಲಿ ಮುಂದೂಡಲು ರಾಹುಲ್ ಗಾಂಧಿಗೆ ವರ್ತಕರ ಮನವಿ!

ದೀಪಾವಳಿ, ಧನತ್ರಯೋದಶಿ ಹಬ್ಬಗಳ ಸೀಸನ್‌ನಲ್ಲಿ ರಾಜಧಾನಿ ದೆಹಲಿಯಲ್ಲಿ ಭಾರಿ ಪ್ರಮಾಣದ ಶೃಂಗಾರ...

ಶಿವಮೊಗ್ಗ | ಜಿಲ್ಲಾ ಶೋಟೊಕಾನ್ ಕರಾಟೆ ಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು...

ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಬೇಕಾಬಿಟ್ಟಿ FIR ಹಾಕುವಂತಿಲ್ಲ, ಬಂಧಿಸುವಂತಿಲ್ಲ: ಪೊಲೀಸರಿಗೆ ಹೈಕೋರ್ಟ್ ಮಾರ್ಗಸೂಚಿಗಳೇನು?

ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಪೋಸ್ಟ್‌ಗಳು, ಅಭಿಪ್ರಾಯಗಳು...