‘ಜೂಟ್ ಕೀ ದುಕಾನ್’ – ಕಳೆದೊಂದು ದಶಕದಿಂದ ಬಿಜೆಪಿ ಕಟ್ಟಿದ ಸುಳ್ಳುಗಳ ಮಳಿಗೆ

Date:

ಮೋದಿ ಸರ್ಕಾರ ಕೊಂಡುಕೊಂಡ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಬಿಜೆಪಿ ಸರ್ಕಾರದ ಪರವಾಗಿಯೇ ಅಂದರೆ ಸುಳ್ಳುಗಳ ಪರವಾಗಿಯೇ ನಿಲ್ಲುತ್ತಿರುವುದು ಈ ಸುಳ್ಳು ಕಥನಗಳಿಗೆ ಅಧಿಕೃತ ಮುದ್ರೆ ಸಿಗುವಂತೆ ಮಾಡಿದೆ. ಪ್ರಶ್ನೆ ಮಾಡಬೇಕಾದ ಮಾಧ್ಯಮಗಳೇ ಪ್ರಚಾರದ ಭಾಗವಾಗಿದ್ದಾಗ ಸುಳ್ಳನ್ನು ಸತ್ಯವೆಂದು ನಂಬಿಸುವುದು ಇನ್ನಷ್ಟು ಸರಳವಲ್ಲವೇ? ಇಂತಹ ಸಂದರ್ಭದಲ್ಲಿ ಕಳೆದೊಂದು ದಶಕದಿಂದ ಬಿಜೆಪಿ ಕಟ್ಟಿದ ಸುಳ್ಳುಗಳ ಮಳಿಗೆಯಲ್ಲಿ 'ಅತಿ ಜನಪ್ರಿಯ' ಸುಳ್ಳುಗಳತ್ತ ನಾವೂ ಕೊಂಚ ಕಣ್ಣಾಯಿಸೋಣ. 

ಪ್ರಜಾಪ್ರಭುತ್ವದ ಮೂಲಸ್ತಂಭ ಇರಬೇಕಾದದ್ದು ಸತ್ಯ, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಆಡಳಿತದ ಮೇಲೆ. ಆದರೆ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸತ್ಯವೆಂಬುದು ಮರೆಯಾಗಿದೆ, ಮುಚ್ಚುಮರೆ ಹೆಚ್ಚಾಗಿದೆ, ಹೊಣೆಗಾರಿಕೆ ಎಂಬುದು ಮರೀಚಿಕೆ. ಅಂದಿನಿಂದ ಇಂದಿನವರೆಗೂ ಬಿಜೆಪಿಯ ಚುನಾವಣಾ ಪ್ರಚಾರ ಮತ್ತು ತಂತ್ರಗಳನ್ನು ಗಮಿನಿಸಿದರೆ ಬಿಜೆಪಿಗೆ ‘ಸುಳ್ಳಿನ ಅಂಗಡಿ ತೆರೆಯುವುದು’ (‘ಜೂಟ್ ಕೀ ದುಕಾನ್’) ಅಷ್ಟೊಂದು ಕಷ್ಟವೇನಲ್ಲ ಎಂಬುದು ಖಚಿತವಾಗುತ್ತದೆ. ಅದರಲ್ಲೂ ತನ್ನ ಈ ಜೂಟ್‌ ಕೀ ದುಕಾನ್‌ಗೆ ಕಣ್ಕಟ್ಟಿಸುವ ಸತ್ಯವೆಂಬ ಬಣ್ಣ ಬಳಿದು ರಂಗು ಅಳಿಯದಂತೆ ಕಾಪಾಡಿಕೊಳ್ಳುತ್ತಿದೆ. ಆದರೆ ಈ ಅಂಗಡಿಗೆ ಅಂಟಿದ ನಕಲಿ ಸತ್ಯದ ವರ್ಣ ನಿಜವಾದ ಸತ್ಯವೆಂಬ ನೀರಿನಿಂದ ತೊಯ್ದು ಹೋಗುತ್ತಿದೆ. ಸದ್ಯ ಜನರಿಗೆ ವಾಸ್ತವತೆಯ ಅರಿವಾಗುತ್ತಿದೆ.

- Advertisement -

ರಾಜಕೀಯ ಲಾಭಕ್ಕಾಗಿ ಹಾಗೂ ಮತದಾರರ ಭಾವನೆಗಳನ್ನು ತಲುಪಲು ಸುಳ್ಳುಗಳು, ಅರ್ಧಸತ್ಯಗಳು ಮತ್ತು ಕಲ್ಪಿತ ಕಥನಗಳನ್ನು ವ್ಯವಸ್ಥಿತವಾಗಿ ಮಾರುಕಟ್ಟೆಗೆ ಬಿಡುವುದು ಬಿಜೆಪಿಗೆ ಅತ್ಯಂತ ಸುಲಭದ ಕೆಲಸ. ಈ ಸುಳ್ಳು ಹರಡಲು ಬಿಜೆಪಿಯ ಐಟಿ ಸೆಲ್ ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ವಾಟ್ಸಾಪ್, ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಯಾವುದೇ ಆಧಾರವಿಲ್ಲದ ಸುದ್ದಿಯನ್ನು ಅಥವಾ ಎಡಿಟ್ ಮಾಡಿದ ವೀಡಿಯೊಗಳನ್ನು ನಿಮಿಷಗಳಲ್ಲಿ ಕೋಟ್ಯಂತರ ಜನರಿಗೆ ತಲುಪಿಸುವ ಬೃಹತ್ ಜಾಲ ಅವರ ಬಳಿಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನೂ ಓದಿ: ಮುಸ್ಲಿಂ ಮೀಸಲಾತಿ | ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ರವಿವರ್ಮ ಕುಮಾರ್

ಗತಕಾಲದ ನಾಯಕರನ್ನು, ಇತಿಹಾಸದ ಘಟನೆಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು ಈ ‘ಸುಳ್ಳಿನ ಅಂಗಡಿ’ಯ ಮತ್ತೊಂದು ಪ್ರಮುಖ ಉತ್ಪನ್ನ. ಪ್ರಸ್ತುತ ಎದುರಾಗಿರುವ ವೈಫಲ್ಯಗಳನ್ನು ಮರೆಮಾಚಲು ಭೂತಕಾಲದ ನೆಪಗಳನ್ನು ಮುನ್ನೆಲೆಗೆ ತರಲಾಗುತ್ತಿರುವುದು ವಾಸ್ತವ. ಅದರಲ್ಲೂ ಈ ಮೋದಿ ಸರ್ಕಾರ ಕೊಂಡುಕೊಂಡ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಬಿಜೆಪಿ ಸರ್ಕಾರದ ಪರವಾಗಿಯೇ ಅಂದರೆ ಸುಳ್ಳುಗಳ ಪರವಾಗಿಯೇ ನಿಲ್ಲುತ್ತಿರುವುದು ಈ ಸುಳ್ಳು ಕಥನಗಳಿಗೆ ಅಧಿಕೃತ ಮುದ್ರೆ ಸಿಗುವಂತೆ ಮಾಡಿದೆ. ಪ್ರಶ್ನೆ ಮಾಡಬೇಕಾದ ಮಾಧ್ಯಮಗಳೇ ಪ್ರಚಾರದ ಭಾಗವಾಗಿದ್ದಾಗ ಸುಳ್ಳನ್ನು ಸತ್ಯವೆಂದು ನಂಬಿಸುವುದು ಇನ್ನಷ್ಟು ಸರಳವಲ್ಲವೇ? ಇಂತಹ ಸಂದರ್ಭದಲ್ಲಿ ಕಳೆದೊಂದು ದಶಕದಿಂದ ಬಿಜೆಪಿ ಕಟ್ಟಿದ ಸುಳ್ಳುಗಳ ಮಳಿಗೆಯಲ್ಲಿ ‘ಅತಿ ಜನಪ್ರಿಯ’ ಸುಳ್ಳುಗಳತ್ತ ನಾವೂ ಕೊಂಚ ಕಣ್ಣಾಯಿಸೋಣ.

ಬಿಜೆಪಿಯ ‘ಅತಿ ಜನಪ್ರಿಯ’ ಸುಳ್ಳುಗಳು

ಉದ್ಯೋಗ ಸೃಷ್ಟಿಯೆಂಬ ಬಿಜೆಪಿಯ ರೋಚಕ ಸುಳ್ಳು: 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಏರುವುದಕ್ಕೂ ಮುನ್ನ ಮೊದಲು ನೀಡಿದ ಜನಪ್ರಿಯ ಭರವಸೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂಬುದು. ಆದರೆ ಸೃಷ್ಟಿಯಾಗಿದೆಯೇ? ಈ ಭರವಸೆ ಸುಳ್ಳು ಎಂಬುದೇ ಈಗಾಗಲೇ ಖಚಿತವಾಗಿದೆ. ಅಧಿಕೃತ PLFS (ಆವರ್ತಕ ಕಾರ್ಮಿಕ ಬಲ ಸಮೀಕ್ಷೆ) ಅಂಕಿ-ಅಂಶಗಳ ಪ್ರಕಾರ, ಸಂಘಟಿತ ವಲಯದಲ್ಲಿ ಕೆಲ ಉದ್ಯೋಗಗಳು ಸೃಷ್ಟಿಯಾಗಿದೆ. ಆದರೆ ನಿರುದ್ಯೋಗ ದರ ಇಂದಿಗೂ ಯುವಜನರಲ್ಲಿ ಸವಾಲಾಗಿ ಉಳಿದಿವೆ. ‘ವರ್ಷಕ್ಕೆ 2 ಕೋಟಿ ಉದ್ಯೋಗ’ ಎಂಬುದು ನಿಖರ ಅಂಕಿ-ಅಂಶವಾಗಿ ಈಡೇರಿಲ್ಲ.

ಇದನ್ನೂ ಓದಿ: ಮೋದಿ ಸುಳ್ಳುಗಳು | ಮತದಾರರ ಋಣ ತೀರಿಸುತ್ತಾರಾ ಮೋದಿ?

15 ಲಕ್ಷ ರೂ. ನಿಮ್ಮ ಬ್ಯಾಂಕಿಗೆ ಬಂತೇ?: ಮೋದಿ ಹೇಳಿದ ಮತ್ತೊಂದು ಜನಪ್ರಿಯ ಸುಳ್ಳು 15 ಲಕ್ಷ ರೂ. ನಿಮ್ಮ ಬ್ಯಾಂಕಿಗೆ ಹಾಕುವುದು. 2014ರಲ್ಲಿ ಅಧಿಕಾರಕ್ಕೆ ಬಂದರೆ ವಿದೇಶಿ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡಲಾಗುವುದು ಎಂಬ ಪ್ರಚಾರವನ್ನು ಬಿಜೆಪಿಗರು, ಮೋದಿ ವ್ಯಾಪಕವಾಗಿ ಮಾಡಿದ್ದರು. ಆದರೆ ಇದು ಬರೀ ಚುನಾವಣಾ ‘ಜುಮ್ಲಾ’ ಎಂಬುದು ಈಗಾಗಲೇ ಖಚಿತವಾಗಿದೆ. ಮೋದಿ ಒಂದಲ್ಲ ಎರಡಲ್ಲ ಮೂರನೇ ಬಾರಿಗೆ ಪ್ರಧಾನಿಯಾದರೂ ಕಪ್ಪು ಹಣ ಭಾರತಕ್ಕೆ ಬಂದಿಲ್ಲ, ನಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಯೂ ಜಮೆಯಾಗಿಲ್ಲ.

ಬೆಲೆ ಏರಿಕೆ ಇಳಿಸಿದ್ದೇವೆ ಎಂಬ ಹುಸಿ: ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ ಎಂದು ಬಿಜೆಪಿ ಆಗಾಗೇ ಹೇಳುತ್ತಲೇ ಇದೆ. ಆದರೆ 2014ರಲ್ಲಿ ₹410 ರಿಂದ ₹450ರಷ್ಟಿದ್ದ ಎಲ್‌ಪಿಜಿ ದರ ಈಗ ₹944.50ಕ್ಕೆ ಏರಿದೆ. ಸಾಮಾನ್ಯ ಜನರ ಮೇಲಿನ ಹೊರೆ ಹೆಚ್ಚಾಗಿದೆ. ಪೆಟ್ರೋಲ್, ಡಿಸೇಲ್, ಇತರೆ ದಿನ ಬಳಕೆ ವಸ್ತುಗಳ ಕತೆಯೂ ಇದೆ. ಒಟ್ಟಾರೆಯಾಗಿ ಗ್ರಾಹಕರ ಜೇಬಿಗೆ ಕತ್ತರಿ, ಕಾರ್ಪೋರೆಟ್ ದೊರೆಗಳ ಸಾಲ ಮನ್ನಾ!

ಅಷ್ಟಕ್ಕೂ ಇಂದಿನ ರಾಜಕೀಯ ತಂತ್ರಗಾರಿಕೆಯಲ್ಲಿ ಪ್ರತಿಯೊಂದು ಪಕ್ಷವೂ ತನಗೆ ಅನುಕೂಲಕರವಾದ ಸುಳ್ಳುಗಳನ್ನು ಹೇಳುತ್ತವೆ. ಆದರೆ ಬಿಜೆಪಿ ನಾಯಕರಷ್ಟು ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಷ್ಟು ಹಸಿ ಹಸಿ ಸುಳ್ಳು ಹೇಳಲು ‘ದಮ್’ ಇರಬೇಕು ಎಂಬುದು ಮಾತ್ರ ನಿಜ. ಈ ವೇಳೆ ಅಧಿಕೃತ ಸರ್ಕಾರಿ ದತ್ತಾಂಶಗಳು, ಸ್ವತಂತ್ರ ಫ್ಯಾಕ್ಟ್-ಚೆಕಿಂಗ್ ಸಂಸ್ಥೆಗಳ ವರದಿಗಳು ಮತ್ತು ಆರ್ಥಿಕ ತಜ್ಞರ ವಿಶ್ಲೇಷಣೆಗಳನ್ನು ಆಧಾರವಾಗಿಟ್ಟುಕೊಂಡು ರಾಜಕೀಯ ಹೇಳಿಕೆಗಳನ್ನು ತೂಗಿ ನೋಡಬೇಕಾದ ಅನಿವಾರ್ಯವಿದೆ. ಆದರೆ ಅಲ್ಲೂ ಬಿಜೆಪಿಯ ಸುಳ್ಳು ಪ್ರಚಾರಕರು ತುಂಬಿರುವಾಗ ಅಲ್ಲಲ್ಲಿ ಚೆಲ್ಲಿರುವ ಸತ್ಯಗಳನ್ನು ನಾವು ಹೆಕ್ಕಬೇಕಷ್ಟೆ.

ಸುಳ್ಳಿನ ಆಧಾರದ ಮೇಲೆ ಕಟ್ಟುವ ರಾಜಕೀಯ ಅಂಗಡಿ ತಾತ್ಕಾಲಿಕವಾಗಿ ಚುನಾವಣೆಗಳನ್ನು ಗೆಲ್ಲಿಸಿಕೊಡಬಹುದು. ಗೆಲ್ಲಲು ಈಗ ಎಸ್‌ಐಆರ್ ಸಹಾಯವೂ ಇದೆ. ಆದರೆ, ದೀರ್ಘಾವಧಿಯಲ್ಲಿ ಇದು ದೇಶದ ಸಾಮಾಜಿಕ ಸಾಮರಸ್ಯ ಮತ್ತು ಆರ್ಥಿಕ ಭವಿಷ್ಯಕ್ಕೆ ತೀವ್ರ ಧಕ್ಕೆ ತರುತ್ತದೆ ಎಂಬುದು ಸ್ಪಷ್ಟ. ಅದರ ಪ್ರಭಾವ ಈಗಾಗಲೇ ಶುರುವಾಗಿದೆ. ಸಾರ್ವಜನಿಕರು ಮತ್ತು ಯುವಜನತೆ ಪ್ರಚಾರದ ಮಾತುಗಳನ್ನು ಕುರುಡಾಗಿ ನಂಬದೆ, ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಮತ್ತು ಪರಿಶೀಲಿಸುವ ಜಾಗೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಇಂತಹ ‘ಸುಳ್ಳಿನ ಅಂಗಡಿಗಳ’ ವ್ಯಾಪಾರಕ್ಕೆ ಬ್ರೇಕ್ ಹಾಕಲು ಸಾಧ್ಯ. ಪ್ರಜಾಪ್ರಭುತ್ವದಲ್ಲಿ ಯಾವುದೇ ‘ಜೂಟ್ ಕೀ ದುಕಾನ್’ ಪ್ರಚಾರಕ್ಕೆ ಮರುಳಾಗದೆ, ವಾಸ್ತವಿಕ ಅಂಕಿ-ಅಂಶಗಳ ಆಧಾರದ ಮೇಲೆ ನಿರ್ಧಾರ ತಳೆಯುವುದೇ ಜಾಗೃತ ನಾಗರಿಕತೆಯ ಲಕ್ಷಣ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...