ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

Date:

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ ಆಡಳಿತ, ಸುಧಾರಿಸದ ಜನರ ಜೀವನಮಟ್ಟವೇ ಹೊಸ ನಾಯಕನತ್ತ ನೋಡುತ್ತಿದೆ. ವ್ಯವಸ್ಥೆಯ ಬದಲಾವಣೆ(regime change) ಎಂಬ ವಿಶ್ಲೇಷಣೆಗೂ ಕಾರಣವಾಗಿದೆ.

ದೇಶದಲ್ಲಿ ಸದ್ಯಕ್ಕೆ ವ್ಯವಸ್ಥೆಯ ಬದಲಾವಣೆ(regime change) ಕುರಿತು ಚರ್ಚೆಯಾಗುತ್ತಿದೆ. ಅಂದರೆ, ಚಾಲ್ತಿಯಲ್ಲಿರುವ ಸಾಂಸ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೊಸ ರೂಪಕ್ಕೆ ತರುವುದಕ್ಕಾಗಿ. ಅದರಲ್ಲೂ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಲಿಕ್ಕಾಗಿ. ಅಂದರೆ, ದೇಶದ ಆಡಳಿತ ಪ್ರಕ್ರಿಯೆ, ಕಾನೂನು ರಚನೆ ಮತ್ತು ಸಾರ್ವಜನಿಕ ಸೇವೆಗಳನ್ನು ಹೆಚ್ಚು ಪಾರದರ್ಶಕ, ಜವಾಬ್ದಾರಿಯುತ ಮತ್ತು ಜನಸ್ನೇಹಿಯನ್ನಾಗಿ ಮಾಡಲು ಬೇಕಾದ ಮೂಲಭೂತ ಮಾರ್ಪಾಡುಗಳಿಗಾಗಿ.

- Advertisement -

ಇದು ದೆಹಲಿಯ ಜೆನ್ ಜೀ ಹೋರಾಟದ ಫಲ. ಇದು ದೇಶದಾದ್ಯಂತ ಚಾಲ್ತಿಗೆ ಬರುತ್ತಿದ್ದಂತೆ, ಆಡಳಿತಾರೂಢ ಬಿಜೆಪಿಯಿಂದ ಮತ್ತೊಮ್ಮೆ ವ್ಯಕ್ತಿತ್ವಹರಣದ ಪ್ರಚಾರಾಂದೋಲನ ಶುರುವಾಗಿದೆ. ನಿನ್ನೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ‘ಜಗತ್ತು ಹೊಸ ವ್ಯವಸ್ಥೆಯತ್ತ ಸಾಗುತ್ತಿದ್ದರೆ, ದೇಶದಲ್ಲಿ ಕೆಲವರು ಅವ್ಯವಸ್ಥೆಯ ಕನಸು ಕಾಣುತ್ತಿದ್ದಾರೆ’ ಎಂದು ಕುಟುಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಪ್ರತಿಭಟನೆಗಳು ಮತ್ತು ಧರಣಿಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಬಿಜೆಪಿ ಮುಂದಿನ 30 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ. ಪ್ರತಿಪಕ್ಷಗಳ ನಕಾರಾತ್ಮಕ ರಾಜಕಾರಣವು, ಅವು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲಿದೆ’ ಎಂದಿದ್ದಾರೆ.

ಇದಕ್ಕೆ ಪೂರಕವಾಗಿ ಯುರೋಪ್‌ ಸೇರಿದಂತೆ ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ಉಲ್ಲೇಖಿಸಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್, ‘ಅತೃಪ್ತಿ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಲು ವಿವಿಧ ಶಕ್ತಿಗಳು ಕೆಲಸ ಮಾಡುತ್ತಿವೆ. ಆಡಳಿತ ಬದಲಾವಣೆಯ ಷಡ್ಯಂತ್ರಕ್ಕೆ ಬಲಿಯಾಗಬಾರದು. ಸರ್ಕಾರ ಉರುಳಿಸುವ ಶಕ್ತಿಗಳಿಗೆ ಭಾರತದಲ್ಲಿ ಜಾಗವಿಲ್ಲ’ ಎಂದಿದ್ದಾರೆ.

ಅಂದರೆ, ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ ಮತ್ತು ಆರ್‍ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬುಡಕ್ಕೆ ಬಿಸಿ ನೀರು ಬಿದ್ದಿದೆ. ಪ್ರತಿಯಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೇಲೆ ದಾಳಿ ಶುರುವಾಗಿದೆ.

ಇದನ್ನು ಓದಿದ್ದೀರಾ?: ‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು ಸೇರಿ 11 ಬಂದರುಗಳನ್ನು ಮಾರಲು ಹೊರಟ ಮೋದಿ

modi rahul 5
ರಾಹುಲ್ ಗಾಂಧಿ ಮತ್ತು ಮೋದಿ

ಭಾರತದ ರಾಜಕೀಯ ಇತಿಹಾಸದಲ್ಲಿ ಆಡಳಿತಾರೂಢ ವ್ಯವಸ್ಥೆಯಿಂದ ಇಷ್ಟೊಂದು ವ್ಯಾಪಕವಾಗಿ, ಇಷ್ಟೊಂದು ತೀವ್ರವಾದ ದ್ವೇಷ ಮತ್ತು ನಿಂದನೆಗೆ ಬೇರೆ ಯಾವ ರಾಜಕಾರಣಿಯೂ ಗುರಿಯಾಗಿಲ್ಲ. ಕಳೆದ 12 ವರ್ಷಗಳಿಂದ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮತ್ತು ತಿರಸ್ಕಾರದ ತಿಪ್ಪೆಗೆ ಹಾಕಿ ತುಳಿಯುವ ಉದ್ದೇಶದಿಂದ ಬೃಹತ್ ಪ್ರಮಾಣದ ಪ್ರಚಾರಾಂದೋಲನ ನಡೆಸಲಾಗಿದೆ. ರಾಜಕೀಯವಾಗಿ ಮಾತ್ರವಲ್ಲ, ರೂಪಕದ ಮೂಲಕ ಅವರನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನೂ ಮಾಡಲಾಗಿದೆ. ಈ ಪ್ರಯತ್ನದ ಭಾಗವಾಗಿ, ಅವರನ್ನು ದ್ವೇಷಕ್ಕೆ ಅರ್ಹವಾದ ವ್ಯಕ್ತಿಯಾಗಿ, ಏನನ್ನೂ ಸಾಧಿಸಲಾಗದ ಅಸಮರ್ಥ ರಾಜಕಾರಣಿಯಾಗಿ, ಅವರ ಇಡೀ ರಾಜಕೀಯ ಪಯಣವು ವಂಶಪಾರಂಪರ್ಯ ಅಧಿಕಾರ ಮತ್ತು ಸವಲತ್ತುಗಳಿಂದಲೇ ರೂಪಿಸಲ್ಪಟ್ಟದ್ದೆಂದು ಬಿಂಬಿಸುವ ಹೊಣೆಯನ್ನು ಮುಖ್ಯವಾಹಿನಿಯ ಮಡಿಲ ಮಾಧ್ಯಮಗಳಿಗೆ ವಹಿಸಿಕೊಡಲಾಗಿದೆ.

ಇದರಿಂದಾಗಿ, ಮೋದಿಯವರ ಅತ್ಯಂತ ಕಟು ಟೀಕಾಕಾರರು ಕೂಡ, ರಾಹುಲ್ ಗಾಂಧಿಯವರ ಬಗ್ಗೆ ಒಂದು ಒಳ್ಳೆಯ ಮಾತು ಆಡಲು, ಆಡಿದ್ದನ್ನು ಕೇಳಿಸಿಕೊಳ್ಳಲು ಸಿದ್ಧರಿರಲಿಲ್ಲ. ಅಷ್ಟೇ ಅಲ್ಲ, ‘ಅವರು ಪಪ್ಪು, ಜೀವನಪೂರ್ತಿ ಹಾಗೆಯೇ ಉಳಿಯುತ್ತಾರೆ’ ಎಂಬುದು ಎಲ್ಲೆಡೆ ಕೇಳಿಬರುತ್ತಿದ್ದ ಸಾಮಾನ್ಯ ಅಭಿಪ್ರಾಯವಾಗಿತ್ತು. ಉನ್ನತ ಮಟ್ಟದ ಗಣ್ಯರಿಂದ ಹಿಡಿದು ಬೀದಿಯ ಸಾಮಾನ್ಯ ಜನರವರೆಗೆ- ಬಹುತೇಕ ಎಲ್ಲರ ಅಭಿಪ್ರಾಯವೂ ಇದೇ ಆಗಿತ್ತು. ಇದು ರಾಹುಲ್ ಗಾಂಧಿಯವರಿಗೆ ತಿಳಿಯದ ಸಂಗತಿಯೇನಲ್ಲ. ಒಮ್ಮೆ ‘ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರಲು ಒಂದು ಮಿಲಿಯನ್ ಡಾಲರ್‌ ಖರ್ಚು ಮಾಡಲಾಗಿದೆ’ ಎಂದು ಕೂಡ ಹೇಳಿದ್ದರು.

ಇಷ್ಟರ ನಡುವೆಯೂ, ರಾಹುಲ್ ಗಾಂಧಿಯವರನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವುದು ತಪ್ಪು, ಅವರು ಪ್ರಚಾರಾಂದೋಲನದ ಬಲಿಪಶು, ಅವರ ಬಗ್ಗೆ ಪ್ರಾಮಾಣಿಕವಾದ ಅಭಿಪ್ರಾಯ ರೂಪಿಸಿಕೊಳ್ಳಲು ನಮ್ಮ ಪೂರ್ವಗ್ರಹದ ಕನ್ನಡಕಗಳನ್ನು ತೆಗೆದಿಡಬೇಕು ಎಂದು ಕೆಲವರಾದರೂ ನಂಬಿದ್ದರು. ಆದರೆ ಅವರನ್ನೂ ಅಣಕಿಸಿ ಅಪಹಾಸ್ಯ ಮಾಡಲಾಗುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ಇಂದು ರಾಹುಲ್ ಗಾಂಧಿಯವರನ್ನು ಭರವಸೆಯ ಬೆಳಕಾಗಿ ನೋಡಲಾಗುತ್ತಿದೆ. ಅವರು ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಮರ್ಥ ನಾಯಕ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಭಾರತೀಯ ರಾಜಕಾರಣಕ್ಕೆ ಮೋದಿ ಸರ್ಕಾರ ನೀಡಿದ ಬಹಳ ಮುಖ್ಯ ಕೊಡುಗೆಗಳಲ್ಲಿ ಪ್ರಚಾರಾಂದೋಲನದ ವ್ಯಾಪಕ ಬಳಕೆಯೂ ಒಂದು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ತನ್ನ ಸ್ಥಾಪನೆಯ ಕಾಲದಿಂದಲೂ ಪ್ರಚಾರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಂದಿದೆ. ಸದ್ಯದ ಸಂದರ್ಭದಲ್ಲಿ ಇದು ಇನ್ನಷ್ಟು ತೀವ್ರತೆ ಪಡೆದಿದೆ.

ವಾಸ್ತವವಾಗಿ, ಪ್ರಚಾರದ ಮೂಲಕ ರಾಹುಲ್ ಗಾಂಧಿಯವರನ್ನು ಸಾರ್ವಜನಿಕ ಅಪಹಾಸ್ಯದ ತಿಪ್ಪೆಗುಂಡಿಗೆ ತಳ್ಳುವ ಮೊದಲು, ದೇಶದ ಭವಿಷ್ಯವನ್ನೇ ಬದಲಿಸಬಲ್ಲ ಉದ್ಧಾರಕನಂತೆ ನರೇಂದ್ರ ಮೋದಿಯವರನ್ನು ನಮ್ಮ ಮುಂದೆ ಪ್ರಸ್ತುತಪಡಿಸಲಾಗಿತ್ತು. ಗುಜರಾತ್ ಗಲಭೆಗಳ ಕಾಲದಲ್ಲಿ ಖಳನಾಯಕನಂತೆ ಕಾಣಲಾಗುತ್ತಿದ್ದ ವ್ಯಕ್ತಿಯನ್ನು ಪ್ರಚಾರದ ಮೂಲಕವೇ ದೇಶದ ಭವಿಷ್ಯವನ್ನು ಬದಲಿಸುವ ನಾಯಕನನ್ನಾಗಿ ಪ್ರತಿಷ್ಠಾಪಿಸಲಾಗಿತ್ತು. ಒಬ್ಬ ಸಾಮಾನ್ಯನನ್ನು ‘ನಾಯಕೋತ್ತಮ’ನನ್ನಾಗಿ ರೂಪಿಸಬಹುದು ಎಂಬುದಕ್ಕೆ ಮೋದಿ ಒಂದು ಸ್ಪಷ್ಟ ಉದಾಹರಣೆಯಾಗಿತ್ತು.

ರಾಹುಲ್ ಗಾಂಧಿಯವರನ್ನು ‘ಪಪ್ಪು’ ಎಂದು ಬಿಂಬಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ್ದರೆ, ಅಷ್ಟೇ ಪ್ರಮಾಣದ ಅಥವಾ ಅದಕ್ಕಿಂತ ಹಲವು ಪಟ್ಟು ಹೆಚ್ಚಿನ ಹಣ ಮತ್ತು ಸಂಪನ್ಮೂಲಗಳನ್ನು ಬಳಸಿ ಮೋದಿಯವರನ್ನು ದೈವಿಕ ವ್ಯಕ್ತಿಯಾಗಿ, ಆರಾಧನಾಮೂರ್ತಿಯಾಗಿ, ಸಮರ್ಥ ನಾಯಕನಾಗಿ ರೂಪಿಸಲಾಯಿತು. ಈ ಪ್ರಚಾರದ ಆಟದಲ್ಲಿ ಅವರು ಗೆಲುವು ಪಡೆದರು ಎಂಬುದನ್ನು ನಿರಾಕರಿಸಲಾಗದು.

ಮೋದಿಯವರ ವ್ಯಕ್ತಿತ್ವದ ಬಿಂಬ ಎಷ್ಟು ಪ್ರಭಾವಶಾಲಿಯಾಗಿ ರೂಪಿಸಲ್ಪಟ್ಟಿತ್ತೆಂದರೆ, ವಿಚಾರವಂತರು, ಗಣ್ಯರು ಮತ್ತು ಪತ್ರಕರ್ತರು ಕೂಡ ಅವರ ಮೋಹಕ್ಕೆ ಒಳಗಾಗಿದ್ದರು.  ಸಣ್ಣಪುಟ್ಟ ಟೀಕೆಗಳಿಗೂ ಸಿಡಿದೇಳುವ ಸ್ಥಿತಿ ರೂಢಿಸಿಕೊಂಡಿದ್ದರು.

ಇದು ಮೋದಿಯವರ ವ್ಯಕ್ತಿತ್ವವನ್ನು ಕೀಳಾಗಿ ಕಾಣುವುದಾಗಲಿ, ರಾಹುಲ್ ಗಾಂಧಿಯವರನ್ನು ವೈಭವೀಕರಿಸುವುದಾಗಲಿ ಅಲ್ಲ. ಬದಲಿಗೆ, ಪ್ರಚಾರದ ಶಕ್ತಿ ಎಷ್ಟು ಪ್ರಬಲವಾಗಿದೆ ಮತ್ತು ಅದು ಜನರ ವಿವೇಚನೆಯನ್ನು ಹೇಗೆ ಮಸುಕಾಗಿಸಲಿದೆ ಎಂಬುದನ್ನು ಹೇಳುವುದಾಗಿದೆ.

modi publicity 1
ಪ್ರಚಾರದ ಮೂಲಕವೇ ನಾಯಕನಾದ ಮೋದಿ

ಏಕೆಂದರೆ, ಮೋದಿಯವರ ವ್ಯಕ್ತಿತ್ವದ ಬಿಂಬವನ್ನು ಕೃತಕವಾಗಿ ರೂಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಒಬ್ಬ ಸಮರ್ಥ ಸಂವಹನಕಾರರಾಗಿ ಅವರ ಪ್ರತಿಭೆ ನಿರ್ಣಾಯಕ ಪಾತ್ರ ವಹಿಸಿದೆ. ಇದರಲ್ಲಿ ಎರಡು ಮಾತಿಲ್ಲ. ಇದಕ್ಕೆ ವಿರುದ್ಧವಾಗಿ, ಸಂವಹನವೇ ರಾಹುಲ್ ಗಾಂಧಿಯವರ ಬಹುದೊಡ್ಡ ದೌರ್ಬಲ್ಯವಾಗಿದೆ. ಆದರೆ ಕಾಲಕ್ರಮೇಣ ರಾಹುಲ್ ಹೊಸ ಸಂವಹನ ವಿಧಾನವೊಂದನ್ನು ಬೆಳೆಸಿಕೊಳ್ಳುವ ಮೂಲಕ ಆ ಕೊರತೆಯನ್ನು ಸರಿದೂಗಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ ಈಗ ಕಾಂಗ್ರೆಸ್‌ನ ಒಬ್ಬ ಸಂಸದ ಮತ್ತು ನಾಯಕ ಎನ್ನುವುದನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಅಧ್ಯಕ್ಷ ಇತ್ಯಾದಿ ಏನೂ ಅಲ್ಲ. ಆದರೆ, ಪಾರ್ಲಿಮೆಂಟ್‌ನಲ್ಲಿ ಅವರು ಸಂವಿಧಾನವನ್ನು ಎತ್ತಿ ಹಿಡಿದು ಮಾಡಿದ ಸತ್ಯ ಪ್ರತಿಜ್ಞೆ ಮತ್ತು ಸತ್ಯಪ್ರತಿಜ್ಞೆಗೆ ಅವರ ಹೆಸರನ್ನು ಕೂಗಿ ಕರೆದಾಗ ಇಡೀ ಪಾರ್ಲಿಮೆಂಟ್‌ನಲ್ಲಿ ಅವರ ಪರ ಕೇಳಿದ ಜಯಕಾರವೇ ಆ ವ್ಯಕ್ತಿಯನ್ನು ನಾಯಕನನ್ನಾಗಿ ನೋಡಿದೆ.

ಇನ್ನು ಭಾರತ್ ಜೋಡೋ ಯಾತ್ರೆ, ಭಾರತ್ ಜೋಡೋ ನ್ಯಾಯ ಯಾತ್ರೆ ಸಹಿತ ಅನೇಕ ಸಂದರ್ಭಗಳಲ್ಲಿ ನೂರಕ್ಕೂ ಅಧಿಕ ಬಾರಿ ಪತ್ರಿಕಾಗೋಷ್ಠಿ ನಡೆಸಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನೇರ ನಿಷ್ಠುರ ನಾಯಕನನ್ನಾಗಿ ರೂಪಿಸಿದೆ.

‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮವು ಅವರ ಈ ಹೊಸ ಸಂವಹನ ವಿಧಾನಕ್ಕೆ ಒಂದು ಉತ್ತಮ ಉದಾಹರಣೆ. ಬಹುಶಃ ಅವರ ತಂಡವು ಅವರಲ್ಲಿದ್ದ ಮಿತಿಗಳನ್ನು ಅರಿತುಕೊಂಡಿದೆ. ಪ್ರಸ್ತುತಿ, ಗ್ರಾಫಿಕ್ಸ್, ಚಿತ್ರಗಳು ಮತ್ತು ದೃಶ್ಯಗಳ ಮೂಲಕ ಸಂವಹನ ನಡೆಸುವ ಒಂದು ಹೊಸ ಮಾದರಿಯನ್ನು ಅದು ರೂಪಿಸಿದೆ. ಸರ್ಕಾರದಿಂದ ಅನ್ಯಾಯಕ್ಕೊಳಗಾದವರ ಕಥೆಗಳನ್ನು ಹೇಳಲು ಸಂತ್ರಸ್ತರನ್ನು ಈ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಈ ಪ್ರಯತ್ನದಲ್ಲಿ ರಾಹುಲ್ ಗಾಂಧಿ ಕೇವಲ ವಕ್ತಾರನಾಗಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ, ಕಥನ ಕಟ್ಟುವ ಸೂತ್ರಧಾರನಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಕುರ್ಚಿಯಲ್ಲಿ ಕುಳಿತುಕೊಳ್ಳದೆ, ಘನ-ಗಾಂಭೀರ್ಯತೆ ತೋರದೆ, ಮೈಕ್ ಹಿಡಿದು ವೇದಿಕೆಯಲ್ಲಿ ಓಡಾಡುತ್ತಾ ಜನರೊಂದಿಗೆ ಬೆರೆಯುತ್ತಾರೆ. ಕಠಿಣವಾದ ಗಣಿತ ಸೂತ್ರವೊಂದನ್ನು ಬಿಡಿಸಿ ವಿವರಿಸುವ ಪ್ರಾಧ್ಯಾಪಕರಂತೆ ವಿಷಯಗಳನ್ನು ನಿರೂಪಿಸುತ್ತಾರೆ.

ಮೋದಿ ಮಾತನಾಡುವಾಗ ಸಂವಹನ ಮಾಧ್ಯಮ ಮತ್ತು ವಿಷಯ ಎರಡರ ಮೇಲೂ ಸಂಪೂರ್ಣ ಹಿಡಿತ ಹೊಂದಿರುವ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ ರಾಹುಲ್ ಗಾಂಧಿ ಕಥೆ ಹೇಳುವ ನಿರೂಪಕನಂತೆ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳುತ್ತಾರೆ. ಮೋದಿಯವರು, ತಮ್ಮ ಧ್ವನಿಯಲ್ಲಿ ಹೆಚ್ಚು ಏರಿಳಿತಗಳನ್ನು ತರುತ್ತಾರೆ. ಆದರೆ ರಾಹುಲ್, ಸಮಚಿತ್ತದಿಂದ ಸರಳವಾಗಿ ಸ್ಪಷ್ಟವಾಗಿ ವಿವರಿಸುತ್ತಾರೆ.

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಅವರು ಹೇಗಿದ್ದಾರೋ ಹಾಗೆಯೇ ಕಾಣಿಸಿಕೊಳ್ಳುತ್ತಾರೆ. ತಮ್ಮನ್ನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬಿಂಬಿಸಿಕೊಳ್ಳುತ್ತಾರೆ. ಒಂದು ರೀತಿಯಲ್ಲಿ, ಸವಲತ್ತುಗಳ ಹಿನ್ನೆಲೆಯಿಂದ ಬಂದ ರಾಜಕೀಯ ವಂಶಸ್ಥ ಎಂಬ ಮಿಥ್ ಒಡೆದುಹಾಕಲು ಪ್ರಯತ್ನಿಸುತ್ತಾರೆ. ಆ ನಿಟ್ಟಿನಲ್ಲಿ ಅವರು, ಸಾಮಾನ್ಯವಾಗಿ ರಾಜಕಾರಣಿಗಳು ಧರಿಸುವ ಖಾದಿ ಕುರ್ತಾ-ಪೈಜಾಮ ಬಿಟ್ಟು, ಟಿ-ಶರ್ಟ್ ಮತ್ತು ಸಡಿಲವಾದ ಪ್ಯಾಂಟ್‌ಗಳಲ್ಲಿ ಆರಾಮವಾಗಿರುತ್ತಾರೆ. ಟಿ-ಶರ್ಟ್ ಧರಿಸುವ ಮೂಲಕವೇ ಹೊಸ ರಾಜಕೀಯ ಸಂಸ್ಕೃತಿ ನೆಲೆಗೊಳಿಸಲು ಬಯಸುತ್ತಾರೆ.

ಒಂದು ಕಾಲದಲ್ಲಿ ಅವರ ಈ ಅಸಾಂಪ್ರದಾಯಿಕ ಸ್ವಭಾವವೇ ದೆಹಲಿಯ ರಾಜಕೀಯ ವಲಯದಲ್ಲಿ ಅವರ ವಿರುದ್ಧದ ಟೀಕೆಗಳಿಗೆ ಮತ್ತು ತಪ್ಪು ತಿಳಿವಳಿಕೆಗಳಿಗೆ ಕಾರಣವಾಗಿತ್ತು. ಆದರೆ ಇಂದು ಅದೇ ಗುಣ ಅವರ ಆಕರ್ಷಣೆ ಮತ್ತು ಚೈತನ್ಯದ ಮೂಲವಾಗುತ್ತಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ, ‘ಜ್ಞಾನೇಶ್, ಕೆಲಸ ಮುಗಿದಿದೆ, ಬ್ರೋ’ ನೋಡಬಹುದು. ಅದು ಹೊಸ ತಲೆಮಾರಿನ ಜನರೊಂದಿಗೆ, ವಿಶೇಷವಾಗಿ ಜೆನ್ ಜೀಗಳೊಂದಿಗೆ ನೇರವಾಗಿ ಬೆರೆಯಲು ಸಾಧ್ಯ ಮಾಡಿದ ಬಗೆಯನ್ನು ಅವಲೋಕಿಸಬಹುದು.

ಇದನ್ನು ಓದಿದ್ದೀರಾ?: SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

ರಾಹುಲ್ 1

ಸಂವಹನ ಕಲೆಯಲ್ಲಿ ನಿಪುಣರೆಂದು ಪರಿಗಣಿಸಲ್ಪಡುವ ಮೋದಿಯವರೇ ಇಂದಿನ ಹೊಸ ತಲೆಮಾರಿನ ಯುವಜನರೊಂದಿಗೆ ಸಂಪರ್ಕ ಬೆಳೆಸಲು ಹೆಣಗಾಡುತ್ತಿರುವುದು ಅಚ್ಚರಿಯ ಸಂಗತಿಯಲ್ಲ. ವ್ಯಕ್ತಿತ್ವ ರೂಪಿಸಿಕೊಳ್ಳುವುದು ಎಂದರೆ ಕೇವಲ ಸುಂದರವಾಗಿ ಮಾತನಾಡುವುದು, ಚೆನ್ನಾಗಿ ಉಡುಪು ಧರಿಸುವುದು ಅಥವಾ ಇತರರನ್ನು ಆಕರ್ಷಿಸುವುದಲ್ಲ. ನಮ್ಮ ಆಲೋಚನೆ, ಮಾತು, ನಡವಳಿಕೆ, ಆತ್ಮವಿಶ್ವಾಸ ಮತ್ತು ಜೀವನದ ದೃಷ್ಟಿಕೋನವನ್ನು ಉತ್ತಮಗೊಳಿಸಿಕೊಳ್ಳುವುದು.

ಈ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ ಆಡಳಿತ, ಸುಧಾರಿಸದ ಜನರ ಜೀವನಮಟ್ಟವೇ ಹೊಸ ನಾಯಕನತ್ತ ನೋಡುತ್ತಿದೆ. ವ್ಯವಸ್ಥೆಯ ಬದಲಾವಣೆ(regime change) ಎಂಬ ವಿಶ್ಲೇಷಣೆಗೂ ಕಾರಣವಾಗಿದೆ.

ಇದು ಭಾರತದ ರಾಜಕಾರಣದ ದಿಕ್ಕನ್ನು ನಿರ್ಧರಿಸಬಲ್ಲದೇ, ಕಾದು ನೋಡಬೇಕು.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ.1ರಿಂದ GST ವಿನಾಯಿತಿ ಸಡಿಲಿಕೆ; ಉದ್ದೇಶಿತ ಬದಲಾವಣೆಗಳೇನು?

ಸಣ್ಣ ಇ-ಕಾಮರ್ಸ್ ಮಾರಾಟಗಾರರಿಗೆ GST ನೋಂದಣಿ ಸರಳಗೊಳಿಸುವುದು, ತೆರಿಗೆ ಮರುಪಾವತಿಯನ್ನು ತ್ವರಿತಗೊಳಿಸುವುದು...

ಸುದೀರ್ಘ ವಿಚಾರಣಾಧೀನ ಬಂಧನ ‘ಶಿಕ್ಷೆ’ಯಾಗದಿರಲಿ: ₹979 ಕೋಟಿ ಹಗರಣದ ಆರೋಪಿಗಳಿಗೆ ಸುಪ್ರೀಂ ಜಾಮೀನು

​₹979.45 ಕೋಟಿ ಮೌಲ್ಯದ ಸರ್ಕಾರಿ ಗುತ್ತಿಗೆಗಳನ್ನು ಪಡೆಯಲು ವಂಚನೆ ಹಾಗೂ ಅಕ್ರಮ...

ಮೈಸೂರು ದಸರಾ ವೇದಿಕೆಯಲ್ಲಿ ಕಂಗಟಿ ಗ್ರಾಮದ ಮಹಿಳೆಯರ ಕೋಲಾಟ ಪ್ರದರ್ಶನ

ನಾಡಹಬ್ಬ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ...

ಏಕನಾಥ ಶಿಂಧೆ ಒಲಿಸಿಕೊಳ್ಳಲು 500 ಕೋಟಿ ಹಣ ನೀಡಿದ ಬಿಜೆಪಿ: ಜಾರಂಗೆ ಪಾಟೀಲ್ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಬಿಡುಗಡೆ ಮಾಡಿರುವ ವಿವಾದಾತ್ಮಕ ಆಡಿಯೊ...