ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ ಕೊರತೆ, ಮಾನ್ಯತೆ ನವೀಕರಣಕ್ಕೆ ಕಠಿಣ ಮಾನದಂಡಗಳ ಪೂರೈಕೆಗೆ ಅಡ್ಡಿ ಹಾಗೂ ಕಡಿಮೆ ಶುಲ್ಕದಲ್ಲಿ ಸಿಬ್ಬಂದಿ ವೇತನ ನಿರ್ವಹಣೆಯ ಸವಾಲು, ಶಾಲಾ ಕಟ್ಟಡಗಳ ನಿರ್ವಹಿಸಲಾಗದೆ ಖಾಸಗಿ ಶಾಲೆಗಳ ಮಾಲೀಕರು ನಷ್ಟ ಅನುಭವಿಸುತ್ತದ್ದಾರೆ. ಇದರ ಪರಿಣಾಮವಾಗಿ ನಷ್ಟದಲ್ಲಿದ್ದ ಖಾಸಗಿ ಶಾಲೆಗಳು ಮುಂಚುವ ಹಂತಕ್ಕೆ ತಲುಪಿದ್ದು, ಸುಮಾರು 200 ಶಾಲಾ ಕಟ್ಟಡಗಳನ್ನು ಮಾರಿ, ಅಥವಾ ತಿಂಗಳಿಗೆ 5 ಲಕ್ಷದಿಂದ 40ಲಕ್ಷಕ್ಕೆ ಬಾಡಿಗೆ ನೀಡಿ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಖಾಸಗಿ ಶಾಲಾ ಮಾಲೀಕರು ಮುಂಚೂಣಿಯಲ್ಲಿದ್ದಾರೆ.
ಮುಚ್ಚುವ/ಮಾರುವ ಹಂತದಲ್ಲಿರುವ ಖಾಸಗಿ ಶಾಲೆಗಳಲ್ಲಿ ಹೆಚ್ಚಿನವುಗಳು ಬೆಂಗಳೂರಿನ ಸಣ್ಣ ಶಾಲೆಗಳು. ಇವುಗಳು ರಾಜ್ಯ ಹಾಗೂ ಕೆಂದ್ರ ಮಂಡಳಿಗಳಿಗೆ ಸಂಯೋಜಿತವಾಗಿರುವ ಸ್ವತಂತ್ರ ಹಾಗೂ ಸ್ವಾವಲಂಬಿ ಶಾಲೆಗಳಾಗಿದ್ದು, ಕಡಿಮೆ ಲಾಭ ಮತ್ತು ಕಡಿಮೆ ಖರ್ಚಿನಲ್ಲಿ ಪ್ರವೇಶದೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು. ಕೊರೋನಾ ಬಳಿಕ ಸಣ್ಣ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಕುಸಿತ ನಿರ್ವಹಣಾ ವೆಚ್ಚದ ಕೊರತೆ, ಕೋಟಿಗಟ್ಟಲೆ ಬೆಲೆ ಬಾಳುವ ಭೂಮಿ, ಶಾಲಾ ಕಟ್ಟಡಗಳು ಮತ್ತು ಮೂಲಸೌಕರ್ಯಗಳೊಂದಿಗೆ ಮಾಲೀಕರು ಮಾರಲು ಮುಂದಾಗಿದ್ದಾರೆ.
ಕಡಿಮೆ ಶುಲ್ಕಗಳೊಂದಿಗೆ ಸಣ್ಣ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಂಡಳಿ ಖಾಸಗಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಕಾರ್ಪೊರೇಟ್ ಶಾಲೆಗಳಿಗೆ, ವಿಶೇಷವಾಗಿ ಸಿಬಿಎಸ್ಇ ಹಾಗೂ ಐಸಿಎಸ್ಇ ಪಠ್ಯಕ್ರಮಕ್ಕೆ ಸ್ಥಳಾಂತರ ಮಾಡುತ್ತಿರುವರು. ಸಣ್ಣ ಖಾಸಗಿ ಶಾಲೆಗಳ ಸಿಬಿಎಸ್ಇ ಹಾಗೂ ಐಸಿಎಸ್ಇ ಪಠ್ಯಕ್ರಮ ಹೊಂದಿರುವ ಶಾಲೆಗಳು ತಮ್ಮ ವ್ಯಾಪ್ತಿಗೆ ಬರುವ, ಇಗಾಗಲೇ ಸಾಕಷ್ಟು ಹೆಸರು ಮಾಡಿರುವ ಕಾರ್ಪೊರೇಟ್ ಖಾಸಗಿ ಶಾಲೆಗಳ ಜೊತೆಗೆ ಸ್ಪರ್ಧಿಸಲಾಗದ ಸ್ಥಿತಿ ತಲುಪಿವೆ” ಎಂದು ಖಾಸಗಿ ಶಾಲಾ ಮಾಲೀಕರು ಹೇಳುತ್ತಿದ್ದಾರೆ.
ಕಾರ್ಪೋರೇಟ್ ಖಾಸಗಿ ಶಾಲೆಗಳು ತಮ್ಮ ಶಾಲೆಯ ಮೂಲಭೂತ ಸೌಕರ್ಯಗಳಿಗೆ, ಅಭಿವೃದ್ದಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತವೆ. ಜೊತೆಗೆ ಶಾಲೆಯಿಂದ 50 ಕಿಲೋ ಮೀಟರ್ ವ್ಯಾಪ್ತಿವರೆಗೂ ಶಾಲಾ ಬಸ್ ಸೌಲಭ್ಯ ಒದಗಿಸುತ್ತವೆ. ಆದರೆ ಸಣ್ಣ ಸಣ್ಣ ಖಾಸಗಿ ಶಾಲೆಗಳು 15ಕಿ.ಮೀಟರ್ ವ್ಯಾಪ್ತಿಗೆ ತಮ್ಮ ಬಸ್ ಸೌಲಭ್ಯ ಸೀಮಿತಗೊಳಿಸಿವೆ. ಕಾರ್ಪೋರೇಟ್ ಖಾಸಗಿ ಶಾಲೆಗಳು ಪಟ್ಟಣಗಳು, ಗ್ರಾಮೀಣ ಪ್ರದೇಶಗಳಲ್ಲಿಯೂ ಸ್ಥಾಪನೆ ಆಗಿದ್ದರಿಂದ ಸಣ್ಣ ಸಣ್ಣ ಖಾಸಗಿ ಶಾಲೆಗಳಿಗೆ ಮತ್ತಷ್ಟು ಹೊಡೆತ ಬಿದ್ದಂತಾಗಿದೆ.
ಶಾಲೆಗಳ ಮಾರಾಟ, ಬಾಡಿಗೆ ಮತ್ತು ಗುತ್ತಿಗೆಯಲ್ಲಿ ತೊಡಗಿರುವ ದಿ ಸ್ಕೂಲ್ ಕಂಪನಿಯ ಸ್ಥಾಪಕ ಎನ್. ಪ್ರಭಾಕರ್ ಅವರು “ಪ್ರತಿಯೊಂದು ಕಾರ್ಪೊರೇಟ್ ಶಾಲೆಯೂ ಜಿಲ್ಲಾ ಕೇಂದ್ರಗಳಿಗೆ ಬರುತ್ತಿದ್ದು, ಸಣ್ಣ, ಬಜೆಟ್ ಶಾಲೆಗಳಿಗೆ ಕಠಿಣ ಸ್ಪರ್ಧೆಯನ್ನು ಸೃಷ್ಟಿಸುತ್ತಿದೆ. ಅವರು ಒಂದೇ ಬಾರಿಗೆ ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ. ಅವರು ಮಾರ್ಕೆಟಿಂಗ್ ತಂತ್ರಗಳನ್ನು ಹೊಂದಿದ್ದಾರೆ, ಪ್ರವೇಶ ಶುಲ್ಕ ವಿನಾಯಿತಿಗಳನ್ನು ನೀಡುತ್ತಾರೆ ಮತ್ತು ಪೋಷಕರನ್ನು ಆಕರ್ಷಿಸಲು ಇತರ ಕೊಡುಗೆಗಳನ್ನು ನೀಡುತ್ತಾರೆ. ಅವರ ಶಾಲಾ ಬಸ್ಸುಗಳು 50 ಕಿ.ಮೀ ವರೆಗೆ ಚಲಿಸುತ್ತವೆ, ಆದರೆ ಸಣ್ಣ ಶಾಲೆಯ ಬಸ್ಸುಗಳು 15 ಕಿ.ಮೀ ವರೆಗೆ ಚಲಿಸಬಹುದು. ಅವರು ಮೂಲಸೌಕರ್ಯ ಮತ್ತು ಬ್ರಾಂಡಿಂಗ್‌ಗಾಗಿ ಹಣವನ್ನು ಖರ್ಚು ಮಾಡುತ್ತಾರೆ” ಎಂದು ಅವರು ಹೇಳಿದರು.
ಮಾನ್ಯತೆ ನವೀಕರಣಕ್ಕೆ ಮಾನದಂಡಗಳ ಪೂರೈಕೆ ಅಡ್ಡಿ:
ರಾಜ್ಯ ಮಂಡಳಿ ಖಾಸಗಿ ಶಾಲೆಗಳು ಶಾಲಾ ಶಿಕ್ಷಣ ಇಲಾಖೆಯ ಮಾನ್ಯತೆ ನವೀಕರಣದ ಮಾನದಂಡಗಳು ಅನುಸರಿಸಲು ಕಷ್ಟಪಡುತ್ತಿವೆ. ಏಕೆಂದರೆ ಇಲಾಖೆಯು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿತಂದಿದೆ. ತರಗತಿಗಳ ಕೊಠಡಿ ವಿಸ್ತಿರ್ಣ ಹೊಂದಿರಬೇಕು. ಮೂಲ ಭೂತಸೌಕರ್ಯದಿಂದ ಹಿಡಿದು ಸುರಕ್ಷತಾ ಕ್ರಮ, ಶಾಲೆಯಿಂದ ಒದಗಿಸುವ ಸೇವೆಗಳಲ್ಲಿ ಗುಣ್ಣಮಟ್ಟಕ್ಕೆ ಮಾನದಂಡ ವಿಧಿಸಿದೆ. ಬಹುತೇಕ ಖಾಸಗಿ ಶಾಲೆಗಳು ಸೀಮಿತ ಸಂಪನ್ಮೂಲಗಳ ಜೊತೆಗೆ ತರಗತಿಗಳನ್ನು ನಡೆಸುತ್ತಿದ್ದು, ಇಲಾಖೆಯ ಮಾನದಂಡಗಳನ್ನು ಪೂರೈಸಲಾಗಿರುವುದಿಲ್ಲ. ಹೀಗಾಗಿ ಕಳೆದ ವರ್ಷ, ಕರ್ನಾಟಕದಲ್ಲಿ ಸುಮಾರು 5500 ಖಾಸಗಿ ಶಾಲೆಗಳು ಮಾನ್ಯತೆ ನವೀಕರಣ ಮಾಡಿಸದೆ ಹಾಗೆ ಉಳಿದಿದ್ದು, ಕುಟುಂಬಗಳು, ಟ್ರಸ್ಟಿಗಳ ಮೂಲಕ ನಡೆಸಲಾಗುತ್ತಿರುವ ಖಾಸಗಿ ಶಾಲೆಗಳು ಸಂಕಷ್ಟದ ಸ್ಥಿತಿತಲುಪಿವೆ.
ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣಾ ಕಾರ್ಯದರ್ಶಿ ಡಿ. ಶಶಿಕುಮಾರ್, “ಕೋವಿಡ್ ಒಂದು ಆರಂಭದೊಂದಿಗೆ, ಕುಸಿಯುತ್ತಿರುವ ಜನಸಂಖ್ಯೆಯೊಂದಿಗೆ, ನಿರ್ವಹಣೆಯನ್ನು ಲೆಕ್ಕಿಸದೆ ಶಾಲೆಗಳಲ್ಲಿ ಶಿಶುವಿಹಾರಕ್ಕೆ ಪ್ರವೇಶ ಕಡಿಮೆಯಾಗಿದೆ. ವೆಚ್ಚಗಳು ಹೆಚ್ಚಿವೆ. 100-200 ವಿದ್ಯಾರ್ಥಿಗಳಿರುವ ಕೆಲವು ಶಾಲೆಗಳು ನಿರ್ವಹಣೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮತ್ತು ತಮ್ಮ ಜೇಬಿನಿಂದ ಹಣವನ್ನು ಪಾವತಿಸುತ್ತಿವೆ. ಅವರೆಲ್ಲರೂ ಈಗ ವ್ಯವಹಾರದಿಂದ ನಿರ್ಗಮಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ತೀವ್ರಗತಿಯ ಬೆಳವಣಿಗೆ, ಆರ್ಥಿಕ ಲಾಭಕ್ಕೆ ಖಾಸಗಿ ಶಾಲೆಗಳ ಮಾಲೀಕರು ರಿಯಲ್ ಎಸ್ಟೇಟ್ ಕಡೆಗೆ ಒಲವು ತೋರುತ್ತಿದ್ದಾರೆ. ಲಾಭ ಇಲ್ಲದ ಶಾಲಾ ಕಟ್ಟಡಗಳನ್ನು ಮಾರಾಟ ಮಾಡಿ, ರಿಯಲ್ ಎಸ್ಟೇಟ್ನಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿರುವುದು ಕೂಡ ಖಾಸಗಿ ಶಾಲೆಗಳ ಮಾರಾಟಕ್ಕೆ ಕಾರಣ ಎನ್ನಲಾಗುತ್ತಿದೆ.
ನಗರದ ಕೆಲ ಶಾಲಾಕಟ್ಟಡಗಳಿಗೆ ಅಧಿಕೃತ ದಾಖಲೆಗಳ ಕೊರತೆ, ಕಟ್ಟಡದ ಮೇಲಿರುವ ಸಾಲ, ಕೋರ್ಟ್ ವ್ಯಾಜ್ಯಗಳಿದ ಮಾರಾಟಕ್ಕೆ ತೊಡಕು ಎದುರಾಗಿದ್ದು, ಅತ್ತ ಲಾಭವೂ ಇಲ್ಲದೇ, ಇತ್ತ ಮಾರಾಟವು ಆಗದೆ ಕೆಲ ಮಾಲೀಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.




