ಮೋದಿ ಭಜನೆಗೆ ಓಕೆ, ಹೋರಾಟಕ್ಕೆ ಹಿಂಜರಿಕೆ: ಇದು ‘ಅನುಕೂಲಕರ’ ದೇಶಭಕ್ತಿ! 

Date:

‌ಕೇವಲ ವಾಣಿಜ್ಯ ಜಾಹೀರಾತುಗಳು, ಬ್ರ್ಯಾಂಡ್ ಪ್ರಚಾರಗಳು ಮತ್ತು ಸ್ವಂತ ಲಾಭಕ್ಕಾಗಿ ಭಾರತದ ಸಮಾಜ ಹಾಗೂ ಅಭಿಮಾನಿಗಳನ್ನು ಬಳಸಿಕೊಳ್ಳುವ ರೀಲ್ ಸ್ಟಾರ್‌ಗಳಿಗಿಂತ, ದೇಶದ ಭವಿಷ್ಯಕ್ಕಾಗಿ ತನ್ನ ಜೀವವನ್ನೇ ಪಣಕ್ಕಿಟ್ಟಿರುವ ಸೋನಮ್ ವಾಂಗ್ಚುಕ್ ಅವರೇ ನಿಜವಾದ 'ಹೀರೋ' ಎನ್ನುವುದು ಸಾಬೀತಾಗಿದೆ. 

ಬೆಳ್ಳಿ ಪರದೆಯ ಮೇಲೆ ದೇಶಭಕ್ತಿಯ ಡೈಲಾಗ್‌ ಹೊಡೆಯುತ್ತ, ಕೋಟಿ ಕೋಟಿ ಯುವಜನರ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸಿನೆಮಾ ತಾರೆಗಳ ಮತ್ತು ಮೈದಾನದಲ್ಲಿ ರನ್‌ ಹೊಡೆದಾಗ ‘ದೇವರು’ ಎಂದು ಆರಾಧಿಸಲ್ಪಡುವ ಸೆಲೆಬ್ರಿಟಿಗಳ ಅಸಲಿ ಮುಖವಾಡ ಕಳಚಿಬಿದ್ದಿದೆ. ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಪರೀಕ್ಷಾ ಅಕ್ರಮ ಹಾಗೂ ಪೇಪರ್ ಲೀಕ್ ದಂಧೆಯ ವಿರುದ್ಧ 20 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಹೋರಾಟಗಾರ, ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ದೇಶಾದ್ಯಂತ ಆತಂಕ ಮನೆ ಮಾಡಿದ್ದರೂ, ನಮ್ಮ ದೇಶದ ಪ್ರಭಾವಿ ‘ಸ್ಟಾರ್‌ಗಳು’ ಮಾತ್ರ ಆಳುವ ಸರ್ಕಾರದ ಕೋಪಕ್ಕೆ ಗುರಿಯಾಗುವ ಭಯದಿಂದಲೋ ಅಥವಾ ತಮ್ಮ ಸ್ವಾರ್ಥಕ್ಕಾಗಿಯೋ ಮೌನಕ್ಕೆ ಶರಣಾಗಿದ್ದಾರೆ.

- Advertisement -

ಅಧಿಕಾರದಲ್ಲಿರುವವರನ್ನು ಓಲೈಸಲು, ಪ್ರಧಾನಿಯವರ ಗುಣಗಾನ ಮಾಡಲು ಅಥವಾ ಅವರ ಪರ ಪ್ರಚಾರ ಗಿಟ್ಟಿಸಿಕೊಳ್ಳಲು ಸದಾ ಮುಂಚೂಣಿಯಲ್ಲಿರುವ ಈ ಸೆಲೆಬ್ರಿಟಿಗಳಿಗೆ, ಅದೇ ಯುವ ಸಮೂಹದ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಾಗ ಧ್ವನಿ ಎತ್ತಲು ಮಾತ್ರ ‘ನಟನೆ’ಯ ಮುಖವಾಡ ಬೇಕಾಗುತ್ತದೆ. ತಮಗೆ ಅನುಕೂಲಕರವಾದಾಗ ಮಾತ್ರ ದೇಶಭಕ್ತಿಯನ್ನು ಪ್ರದರ್ಶಿಸುವ ಇವರ ರೀಲ್ ಮತ್ತು ರಿಯಲ್ ಬದುಕಿನ ಬೂಟಾಟಿಕೆಯನ್ನು ಬಯಲಿಗೆಳೆಯುವ ಕಟು ವಾಸ್ತವದ ಚಿತ್ರಣ ಇಲ್ಲಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ಬೆಳಗಾವಿ | ಬಿಸಿಲಿಗೂ ಕುಗ್ಗದೆ ಕಬ್ಬಿಗೆ ₹5500 ಬೆಲೆಗಾಗಿ...

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕು, ಸಕ್ಕರೆಗೆ ಪ್ರತಿ ಕೆ.ಜಿ.ಗೆ ₹60 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಸೋನಮ್‌ ವಾಂಗ್ಚುಕ್‌ ಅವರ ಈ ಪ್ರತಿಭಟನೆಯ ಹಿಂದೆ ದೇಶದ ಯುವ ಸಮೂಹದ ಆಕ್ರೋಶವಿದೆ. ಇತ್ತೀಚೆಗಷ್ಟೇ UGC, NET ಪರೀಕ್ಷೆಯ ಪೇಪರ್ ಲೀಕ್ ಆಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿತು. ಇದರ ಬೆನ್ನಲ್ಲೇ CBSE 12ನೇ ತರಗತಿಯ ಪೇಪರ್‌ಗಳ ಮೌಲ್ಯಮಾಪನದಲ್ಲಿ ಭಾರೀ ಅಕ್ರಮಗಳು ಹೊರಬಂದವು; ಒಂದು ಮಗುವಿನ ರಿಸಲ್ಟ್ ಮತ್ತೊಬ್ಬನಿಗೆ ಹ್ಯಾಂಡೋವರ್ ಮಾಡಿದ ಇತಿಹಾಸದಲ್ಲೇ ಕಾಣದ ಅಪರಾಧ ವ್ಯವಸ್ಥೆಯೊಳಗೆ ನಡೆಯಿತು. ಈ ಅನ್ಯಾಯದ ವಿರುದ್ಧ ನೊಂದ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದಾಗ, ಅಧಿಕಾರದ ಪರ ಇರುವ ಗೋದಿ ಮೀಡಿಯಾ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪ್ರಶ್ನೆ ಕೇಳಿದವರನ್ನು ‘ಪಾಕಿಸ್ತಾನಿಗಳು’ ಅಂತ ಕರೆದು ಅವಮಾನಿಸಲು ಶುರು ಮಾಡಿತು. 

ಕಳೆದ 11 ವರ್ಷಗಳಲ್ಲಿ ಅಧಿಕೃತವಾಗಿಯೇ 80ಕ್ಕೂ ಹೆಚ್ಚು ಪೇಪರ್ ಲೀಕ್‌ಗಳು ನಡೆದಿವೆಯೆಂದರೆ ದೇಶದ ಯುವಕರ ಭವಿಷ್ಯವನ್ನು ಇಲ್ಲಿ ಓಪನ್ ಆಗಿ ಹರಾಜು ಹಾಕಲಾಗುತ್ತಿರುವುದು ಸ್ಪಷ್ಟವಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ಮಗು ಕೇವಲ 5 ನಿಮಿಷ ತಡವಾಗಿ ತಲುಪಿದರೆ ನಿಯಮದ ಹೆಸರಿನಲ್ಲಿ ಆತನನ್ನು ಪರೀಕ್ಷೆಯಿಂದಲೇ ಹೊರಹಾಕಲಾಗುತ್ತದೆ. ಆದರೆ ಇಡೀ ಪರೀಕ್ಷೆಯ ಪೇಪರ್ ಮೊದಲೇ ಲೀಕ್ ಆಗಿ ಹೊರಬಂದರೆ ಕೇವಲ ಒಂದು ಕ್ಷಮೆಯಾಚನೆಯ ಮೂಲಕ ಸರ್ಕಾರ ನುಣುಚಿಕೊಳ್ಳುತ್ತದೆ. ಪರೀಕ್ಷಾ ಲೀಕ್‌ನಿಂದ ಬೇಸತ್ತು 21 ವಿದ್ಯಾರ್ಥಿಗಳು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಗುರಿಯನ್ನು ಸೋನಮ್‌ ವಾಂಗ್ಚುಕ್‌ ಹಾಕಿಕೊಂಡಿದ್ದಾರೆ. 20 ದಿನಗಳಿಂದ ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 

ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರವೇಶಿಸಿ, “ಯಾವುದೇ ನಾಗರಿಕರ ಜೀವವು ಅತ್ಯಂತ ಅಮೂಲ್ಯವಾದುದು, ಅವರ ಜೀವ ಉಳಿಸಲು ಅಧಿಕಾರಿಗಳು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಮತ್ತು ಅಗತ್ಯವಿದ್ದರೆ ವೈದ್ಯಕೀಯ ಚಿಕಿತ್ಸೆ ನೀಡಿ ಅವರ ಆರೋಗ್ಯವನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯಲ್ಲಿ ಸೇರಿಕೊಂಡ ನಂತರ ಆರಂಭವಾದ ಈ ಸತ್ಯಾಗ್ರಹಕ್ಕೆ ಶಬಾನಾ ಅಜ್ಮಿ, ಜೀನತ್ ಅಮಾನ್, ಪ್ರಕಾಶ್ ರಾಜ್, ನಾಸಿರುದ್ದೀನ್ ಶಾ, ರತ್ನಾ ಪಾಠಕ್ ಶಾ, ಅಭಯ್ ಡಿಯೋಲ್, ಸೋನಿ ರಜ್ದಾನ್ ಮತ್ತು ಓಮಿ ವೈದ್ಯ ಹಾಗೂ ಇಮ್ರಾನ್ ಖಾನ್, ಫಾತಿಮಾ ಸನಾ ಶೇಖ್, ಸೋನಾಕ್ಷಿ ಸಿನ್ಹಾ ಅವರಂತಹ ಚಿತ್ರರಂಗದ ಕೆಲವು ಪ್ರಮುಖರು ಮಾನವೀಯತೆಯ ಆಧಾರದ ಮೇಲೆ ಮುಕ್ತವಾಗಿ ಬೆಂಬಲ ಸೂಚಿಸಿದ್ದಾರೆ. 

ಆದರೆ, ದೇಶದ ಕೋಟ್ಯಂತರ ಜನ ಯಾರನ್ನು ‘ದೇವರೆಂದು’ ಆರಾಧಿಸುತ್ತಾರೋ, ಅಂತಹ ಅತ್ಯಂತ ಪ್ರಭಾವಿ ಮತ್ತು  ಉಳಿದ ಸೆಲೆಬ್ರಿಟಿಗಳ ಮೌನ ಹಾಗೂ ನುಣುಚಿಕೊಳ್ಳುವ ನಡವಳಿಕೆ ಮಾತ್ರ ಸಾರ್ವಜನಿಕರಲ್ಲಿ ತೀವ್ರ ಇರುಸುಮುರುಸು ಮತ್ತು ಆಕ್ರೋಶವನ್ನು ಉಂಟುಮಾಡಿದೆ.

ಈ ತಾರೆಯರ ಬೂಟಾಟಿಕೆ ಎಷ್ಟು ಸ್ಪಷ್ಟವಾಗಿದೆ ಎಂದರೆ, ಸೋನಮ್ ವಾಂಗ್‌ಚುಕ್ ಅವರ ಹೋರಾಟದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ನಟ ವಿವೇಕ್ ಒಬೆರಾಯ್ ಅವರು “ನಾನೊಬ್ಬ ನಟ, ಇಂತಹ ವಿಷಯಗಳ ಬಗ್ಗೆ ಮಾತನಾಡುವ ರಾಜಕಾರಣಿಯಲ್ಲ” ಎಂದು ಅತ್ಯಂತ ಚಾಣಾಕ್ಷತನದಿಂದ ಜಾರಿಕೊಳ್ಳುತ್ತಾರೆ. ಆದರೆ ಇದೇ ನಟ ಬಹಿರಂಗವಾಗಿ ವೇದಿಕೆಗಳ ಮೇಲೆ ಪ್ರಧಾನಿ ಮೋದಿಯವರನ್ನು ಹೊಗಳುವಾಗ ಅಥವಾ ಅವರ ಪರ ಬಯೋಪಿಕ್ ಸಿನಿಮಾಗಳನ್ನು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವಾಗ ಈ ʼರಾಜಕೀಯದ ಅಡ್ಡಿʼ ಅವರಿಗೆ ನೆನಪಾಗುವುದೇ ಇಲ್ಲ. ತಮಗೆ ಅನುಕೂಲಕರವಾದಾಗ ರಾಜಕೀಯದ ಪರ ನಿಲ್ಲುವ ಇವರಿಗೆ ದೇಶಕ್ಕಾಗಿ ಜೀವ ಬಿಡುತ್ತಿರುವ ಹೋರಾಟಗಾರನ ಪರ ಧ್ವನಿ ಎತ್ತಲು ಮಾತ್ರ ನಟನೆಯ ಮುಖವಾಡ ಬೇಕಾಗುತ್ತದೆ.

ಇನ್ನು ಸೂಪರ್ ಸ್ಟಾರ್ ಆಮೀರ್ ಖಾನ್ ಅವರು ಸಭೆಯೊಂದರಲ್ಲಿ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಅನಿವಾರ್ಯವಾಗಿ ಉತ್ತರಿಸುತ್ತ, “ನಾವೆಲ್ಲರೂ ಅವರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ ಮತ್ತು ಇದು ಸುಖಾಂತ್ಯ ಕಾಣುತ್ತದೆಂದು ಭಾವಿಸುತ್ತೇವೆ” ಎಂಬ ಔಪಚಾರಿಕ ಹೇಳಿಕೆ ನೀಡಿ ಕೈತೊಳೆದುಕೊಂಡಿದ್ದಾರೆಯೇ ಹೊರತು, ಇವರೂ ಕೂಡ ಈ ಗಂಭೀರ ಸಾಮಾಜಿಕ ವಿಷಯದ ಬಗ್ಗೆ ಸ್ವಯಂಪ್ರೇರಿತರಾಗಿ ಯಾವುದೇ ಗಟ್ಟಿಯಾದ ನಿಲುವನ್ನು ತಳೆದಿಲ್ಲ.

ಮತ್ತೊಂದೆಡೆ, ಬೆಳ್ಳಿ ಪರದೆಯ ಮೇಲೆ ರಾಷ್ಟ್ರೀಯತೆ, ಸಮಾಜ ಸುಧಾರಣೆ ಮತ್ತು ದೇಶಭಕ್ತಿಯ ಪಾತ್ರಗಳನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಗಳಿಸುವ ಅಕ್ಷಯ್ ಕುಮಾರ್ ಇಂದು ಇಡೀ ಪರಿಸ್ಥಿತಿಯಿಂದ ಸಂಪೂರ್ಣವಾಗಿ ಕಾಣೆಯಾಗಿದ್ದಾರೆ. ಹಿಂದೆ ಪ್ರಧಾನಿಯವರನ್ನು ಸಂದರ್ಶನ ಮಾಡುವಾಗ “ನೀವು ಮಾವಿನ ಹಣ್ಣನ್ನು ಕಚ್ಚಿ ತಿಂತೀರಾ ಅಥವಾ ಜ್ಯೂಸ್ ಮಾಡಿ ತಿಂತೀರಾ?” ಎಂಬಂತಹ ಅತ್ಯಂತ ಹಾಸ್ಯಾಸ್ಪದ ಪ್ರಶ್ನೆ ಕೇಳಿ ಮುಜುಗರ ಸೃಷ್ಟಿಸಿದ ಇವರಿಗೆ, ಇಂದು ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದೇಶದ ಶ್ರೇಷ್ಠ ಶಿಕ್ಷಣತಜ್ಞನೊಬ್ಬ ಹಸಿವಿನಿಂದ ಕೃಶವಾಗುತ್ತಿದ್ದರೂ ಒಂದು ಸಣ್ಣ ಕಾಳಜಿಯ ಟ್ವೀಟ್ ಮಾಡಲು ಸಮಯವಿಲ್ಲದಂತಾಗಿದೆ. 

ಇನ್ನು ‘ತ್ರೀ ಇಡಿಯಟ್ಸ್’ ಸಿನಿಮಾದಲ್ಲಿ ಸೋನಮ್ ವಾಂಗ್ಚುಕ್ ಅವರ ಜೀವನದಿಂದಲೇ ಪ್ರೇರಿತವಾದ ‘ಫುನ್ಸುಕ್ ವಾಂಗ್ಡು’ ಪಾತ್ರದಲ್ಲಿ ನಟಿಸಿ ದೇಶಾದ್ಯಂತ ಮೆಚ್ಚುಗೆ ಗಳಿಸಿದವರು ನಟ ಆರ್. ಮಾಧವನ್. ಇವರ ಸಿನಿಮಾದಲ್ಲಿ ಅಂಥದ್ದೊಂದು ಅದ್ಭುತ ಪಾತ್ರದ ಮೂಲಕ ಶಿಕ್ಷಣ ಮತ್ತು ಪರಿಸರದ ಮಹತ್ವವನ್ನು ಸಾರಿದ ಮಾಧವನ್, ಇಂದು ಅದೇ ಪಾತ್ರಕ್ಕೆ ಸ್ಪೂರ್ತಿಯಾದ ರಿಯಲ್ ಹೀರೋ ದಿಲ್ಲಿಯ ಜಂತರ್ ಮಂತರ್‌ನಲ್ಲಿ ದೇಶದ ಹಿತಕ್ಕಾಗಿ ಉಪವಾಸ ಕೂತಾಗ ಮಾತ್ರ ತುಟಿ ಬಿಚ್ಚುತ್ತಿಲ್ಲ.

ಸಿನಿಮಾಗಳಲ್ಲಿ ಸೈಂಟಿಸ್ಟ್, ದೇಶಭಕ್ತ ಅಥವಾ ಪ್ರಜ್ಞಾವಂತ ನಾಗರಿಕನ ಪಾತ್ರಗಳನ್ನು ಮಾಡಿ ಕೋಟಿ ಕೋಟಿ ಸಂಭಾವನೆ ಪಡೆಯುವ ಇವರಿಗೆ, ಆ ಪಾತ್ರಗಳಿಗೆ ಜೀವ ತುಂಬಿದ ನೈಜ ವ್ಯಕ್ತಿ ತೀವ್ರ ಚಳಿಯಲ್ಲೂ ಹಕ್ಕುಗಳಿಗಾಗಿ ಹೋರಾಡುವಾಗ ಧ್ವನಿ ಎತ್ತಲು ಯಾಕೆ ಸಾಧ್ಯವಾಗುತ್ತಿಲ್ಲ? ಸಾರ್ವಜನಿಕವಾಗಿ ಕೇಳಿಬರುತ್ತಿರುವ ರಾಜಕೀಯ ವಿವಾದಗಳ ನಡುವೆ, ಸತ್ಯ ಏನೆಂಬುದನ್ನು ಜನರಿಗೆ ತಲುಪಿಸುವ ಜವಾಬ್ದಾರಿಯಿಂದ ಇವರೂ ಕೂಡ ಜಾರಿಕೊಳ್ಳುತ್ತಿರುವುದು ಇವರ ‘ರೀಲ್’ ಮತ್ತು ‘ರಿಯಲ್’ ಬದುಕಿನ ಅಂತರವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿದ್ದೀರಾ? ಆಸ್ತಿ ದಾಖಲೆಗಳು ಭಾರತೀಯ ಪೌರತ್ವಕ್ಕೆ ಪುರಾವೆಯಲ್ಲ: ಕೋಲ್ಕತ್ತಾ ಹೈಕೋರ್ಟ್

ಇನ್ನು ಐಪಿಎಲ್ ಬಂತೆಂದರೆ ಸಾಕು ಯುವಜನತೆ ಮತ್ತು ವಿದ್ಯಾರ್ಥಿ ಅಭಿಮಾನಿಗಳಿಂದ ದೇವರೆಂದೇ ಕರೆಸಿಕೊಳ್ಳುವ, ಮೈದಾನದಲ್ಲಿ ಇವರ ರನ್ ಗಳಿಕೆಗೆ ಅಬ್ಬರಿಸುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಗಲಿ, ಅಥವಾ ಅವರ ಪತ್ನಿ ಅನುಷ್ಕಾ ಶರ್ಮಾ ಅಭಿಮಾನಿಗಳ ‘ಅತ್ತಿಗೆ’ ಅಂತಲೇ ಕರೆಸಿಕೊಂಡವರು ಈಗ ಈ ಗಂಭೀರ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮೂಕರಾಗಿದ್ದಾರೆ. ಈಗಾಗಲೇ ಲಂಡನ್‌ನಲ್ಲಿ ನೆಲೆಸಲು ಯೋಜನೆ ರೂಪಿಸಿರುವ ಇಂತಹ ಜಾಗತಿಕ ಸೆಲೆಬ್ರಿಟಿಗಳಿಗೆ ಭಾರತದ ಸಾಮಾನ್ಯ ಜನರ ಸಮಸ್ಯೆಗಳಾಗಲಿ ಅಥವಾ ಇಲ್ಲಿನ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆಯಾಗಲಿ ಯಾವುದೇ ನೈಜ ಕಾಳಜಿ ಇಲ್ಲ ಎಂಬುದು ಅವರ ಈ ಮೌನದಿಂದ ಜಗಜ್ಜಾಹೀರಾಗಿದೆ. ಕೇವಲ ವಾಣಿಜ್ಯ ಜಾಹೀರಾತುಗಳು, ಬ್ರ್ಯಾಂಡ್ ಪ್ರಚಾರಗಳು ಮತ್ತು ಸ್ವಂತ ಲಾಭಕ್ಕಾಗಿ ಭಾರತದ ಸಮಾಜ ಹಾಗೂ ಅಭಿಮಾನಿಗಳನ್ನು ಬಳಸಿಕೊಳ್ಳುವ ರೀಲ್ ಸ್ಟಾರ್‌ಗಳಿಗಿಂತ, ದೇಶದ ಭವಿಷ್ಯಕ್ಕಾಗಿ ತನ್ನ ಜೀವವನ್ನೇ ಪಣಕ್ಕಿಟ್ಟಿರುವ ಸೋನಮ್ ವಾಂಗ್ಚುಕ್ ಅವರೇ ನಿಜವಾದ ‘ಹೀರೋ’ ಎನ್ನುವುದು ಸಾಬೀತಾಗಿದೆ. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಕ್ಟೋಬರ್ 12ರ ಸುಪ್ರೀಂ ಕೋರ್ಟ್ ಮೆರವಣಿಗೆ: ರಾಹುಲ್, ಅಖಿಲೇಶ್ ಸೇರಿ ವಿಪಕ್ಷ ನಾಯಕರಿಗೆ ನೋಟಿಸ್

ಕಳೆದ ಅಕ್ಟೋಬರ್ 12ರಂದು ಸುಪ್ರೀಂ ಕೋರ್ಟ್ ಕಡೆಗೆ ನಡೆಸಲಾದ ಮೆರವಣಿಗೆಗೆ ಸಂಬಂಧಿಸಿದಂತೆ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ – ಜಯಂತ್‌ ಪರ್ಮಾರ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ...

ಪೊಲೀಸ್ ವಿರುದ್ಧ ಲೈಂಗಿಕ ಕಿರುಕುಳ ದೂರಿನ ಬೆನ್ನಲ್ಲೇ ಜಾತಿನಿಂದನೆ ಕೇಸ್: ಯೂಟ್ಯೂಬರ್ ಯುವತಿ ಬಂಧಿಸದಂತೆ ಸುಪ್ರೀಂ ಆದೇಶ

ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಯುವ ಪತ್ರಕರ್ತೆ...