ಬೈಜೂಸ್‌ನಿಂದ 160 ಕೋಟಿ ಬಾಕಿ: ಕಂಪನಿ ಕಾನೂನುಗಳ ನ್ಯಾಯಮಂಡಳಿಯ ಮೊರೆಹೋದ ಬಿಸಿಸಿಐ

Date:

Advertisements

ಒಂದರ ನಂತರ ಒಂದಾಗಿ ಹಲವಾರು ಸಮಸ್ಯೆಗಳಲ್ಲಿ ಸಿಲುಕುತ್ತಾ ಬರುತ್ತಿರುವ ಬೈಜೂಸ್ ಈಗ ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ.

ವಿದೇಶ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಬೈಜೂಸ್ ಸಂಸ್ಥೆಗೆ ಜಾರಿ ನಿರ್ದೇಶನಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದ ಕೆಲದಿನಗಳ ಬೆನ್ನಲ್ಲೇ 160 ಕೋಟಿ ಬಾಕಿ ಇರಿಸಿದ ಹಿನ್ನೆಲೆಯಲ್ಲಿ ಬೈಜೂಸ್‌ ವಿರುದ್ಧ ಬಿಸಿಸಿಐ, ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಮಂಡಳಿ (ಎನ್ ಸಿಎಲ್ ಟಿ)ಯ ಮೊರೆ ಹೋಗಿದೆ.

ಒಪ್ಪಂದ ಕೊನೆಗೊಂಡ ಬಳಿಕ ಬೈಜೂಸ್ ಕಂಪನಿ ಪಾವತಿಸಬೇಕಾದ 160 ಕೋಟಿ ರೂಪಾಯಿ ಬಾಕಿಯನ್ನು ವಸೂಲಿ ಮಾಡಿಕೊಡುವಂತೆ ಕೋರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎನ್ ಸಿಎಲ್ ಟಿ ಕದ ತಟ್ಟಿದೆ.

Advertisements

ಬೈಜೂಸ್ ಅನ್ನು ನಿರ್ವಹಿಸುತ್ತಿರುವ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕಳೆದ ಸೆಪ್ಟೆಂಬರ್‌ನಲ್ಲಿ ಬಿಸಿಸಿಐ ಎನ್‌ಸಿಎಲ್‌ಟಿಯ ಬೆಂಗಳೂರು ಪೀಠದ ಮುಂದೆ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ. ಈ ಪ್ರಕರಣವು ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಗಳ ಪ್ರಾಯೋಜಕತ್ವದ ಹಕ್ಕುಗಳ ವಿವಾದಕ್ಕೆ ಸಂಬಂಧಿಸಿದೆ.

2022ರ ಮಾರ್ಚಿನಲ್ಲಿ ಕೊನೆಗೊಂಡ ಪ್ರಾಯೋಜಕತ್ವ ಗುತ್ತಿಗೆಗೆ ಸಂಬಂಧಿಸಿದಂತೆ ಈ ವ್ಯಾಜ್ಯ ನಡೆಯುತ್ತಿದೆ. ಕಳೆದ ಆರು ತಿಂಗಳಿನಿಂದ ಈ ಮೊತ್ತ ಬಾಕಿ ಇದ್ದು, ಇದನ್ನು ವಸೂಲಿ ಮಾಡಿ ಕೊಡುವಂತೆ ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಮಂಡಳಿಗೆ ಸಲ್ಲಿಸಿದ ದೂರಿನಲ್ಲಿ ಬಿಸಿಸಿಐ ಕೋರಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೈಜೂಸ್ ಕಂಪನಿಯ ವಕ್ತಾರರು, “ನಾವು ಬಿಸಿಸಿಐ ಜತೆ ಈ ವ್ಯಾಜ್ಯವನ್ನು ಇತ್ಯರ್ಥಪಡಿಸಲು ಮಾತುಕತೆ ನಡೆಸುತ್ತಿದ್ದೇವೆ. ಇದು ಸದ್ಯದಲ್ಲೇ ಇತ್ಯರ್ಥವಾಗಲಿದೆ” ಎಂದು ಹೇಳಿಕೆ ನೀಡಿದ್ದಾರೆ.

2022ರ ಮಾರ್ಚಿನಲ್ಲಿ ಕೊನೆಗೊಂಡ ಪ್ರಾಯೋಜಕತ್ವದ ಅವಧಿಯೊಳಗೆ ಬೈಜೂಸ್ ಎಲ್ಲ ಮೊತ್ತವನ್ನು ಪಾವತಿಸಿತ್ತು. ಹೊಸ ಪ್ರಾಯೋಜಕರನ್ನು ಹುಡುಕುವವರೆಗೆ ಈ ಒಪ್ಪಂದ ಮುಂದುವರಿಸುವಂತೆ ಬೈಜೂಸ್‌ನೊಂದಿಗೆ ಬಿಸಿಸಿಐ ಕೇಳಿಕೊಂಡಿತ್ತು. ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಬೈಜೂಸ್‌ ಈ ಒಪ್ಪಂದದಿಂದ ಹೊರಬರಲು ಬಯಸಿತ್ತು. ಆದರೆ ಬಿಸಿಸಿಐ, ಒಂದಷ್ಟು ಸಮಯ ಮುಂದುವರಿಸುವಂತೆ ಮನವೊಲಿಸಿತ್ತು.

bcci

ಈ ಕಾರಣದಿಂದ ಬೈಜೂಸ್ 35 ದಶಲಕ್ಷ ಡಾಲ‌ರ್ ಮೊತ್ತಕ್ಕೆ 2023ರ ನವೆಂರ್‍‌ವರೆಗೆ ಬಿಸಿಸಿಐ ಜತೆಗಿನ ಜೆರ್ಸಿ ಪ್ರಾಯೋಜಕತ್ವ ಒಪ್ಪಂದವನ್ನು ಮಂದುವರಿಸಿತ್ತು. ಡಿಸೆಂಬ‌ರ್‍‌ನಿಂದ ಒಪ್ಪಂದ ಮುರಿದುಕೊಳ್ಳಲು ಬೈಜೂಸ್‌ ಕೇಳಿಕೊಂಡಾಗ, ಹೊಸ ಪ್ರಾಯೋಜಕರು ಹೊಸ ಹಣಕಾಸು ವರ್ಷದಿಂದ ಸಿಗುತ್ತಾರೆ. ಈ ಕಾರಣಕ್ಕೆ ಒಪ್ಪಂದವನ್ನು 2024ರ ಮಾರ್ಚ್ ವರೆಗೆ ಮುಂದುವರಿಸುವಂತೆ ಕೋರಿತ್ತು.

ಈ ಅವಧಿಗೆ ಪಾವತಿಸಬೇಕಾದ 160 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಈ ವ್ಯಾಜ್ಯ ನಡೆಯುತ್ತಿದೆ. ಬೈಜೂಸ್‌ನ ಉದ್ಯೋಗಿಗಳಿಗೆ ವೇತನ ಪಾವತಿ ಬಾಕಿ ಇರುವ ಹಿನ್ನೆಲೆಯಲ್ಲಿ, ಬಿಸಿಸಿಐಗೆ ಇರಿಸಿಕೊಂಡಿರುವ ಬಾಕಿ ಹಣ ಪ್ರಥಮ ಆದ್ಯತೆಯಲ್ಲ ಎಂದು ಕಂಪನಿಯ ತಜ್ಞರು ಅಭಿಪ್ರಾಯಪಟ್ಟಿದ್ದರು.

‘ಎಜುಕೇಶನ್ ಟೆಕ್ ಸಂಸ್ಥೆ’ಯಾಗಿರುವ ಬೈಜೂಸ್ 2019ರಿಂದ ಭಾರತೀಯ ಕ್ರಿಕೆಟ್ ತಂಡದ ಪಾಲುದಾರರಾಗಿದ್ದು, ತಂಡದ ಆಟಗಾರರು ಧರಿಸುವ ಜೆರ್ಸಿಯ ಮುಂಭಾಗದಲ್ಲಿ ಬೈಜೂಸ್ ಲೋಗೋವನ್ನು ಕಾಣಬಹುದು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

Download Eedina App Android / iOS

X