ಐಪಿಎಲ್ 2023 | ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ: ಮೀಸಲು ದಿನಕ್ಕೆ ಮುಂದೂಡಿಕೆ

Date:

ಐಪಿಎಲ್ 16ನೇ ಆವೃತ್ತಿಯ ಚೆನ್ನೈ ​ ಮತ್ತು ಗುಜರಾತ್​ ತಂಡಗಳ ನಡುವಿನ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ‌. ಈ ಹಿನ್ನಲೆಯಲ್ಲಿ ಭಾನುವಾರ ನಡೆಯಬೇಕಾಗಿದ್ದ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

2008ರಲ್ಲಿ ಐಪಿಎಲ್ ಆರಂಭದಾಗಿನಿಂದ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯವೊಂದು ಮೀಸಲು ದಿನಕ್ಕೆ ಮುಂದೂಡಿಕೆಯಾಗಿದೆ.

ಸೋಮವಾರವೂ ಮಳೆ ಮುಂದುವರಿದರೆ, ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾದ ಗುಜರಾತ್ ಟೈಟನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.


ಅಹಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಿಗದಿಯಾಗಿದ್ದ ಫೈನಲ್ ಪಂದ್ಯದ ಟಿಕೆಟ್’ಗಳೆಲ್ಲವೂ ಮಾರಾಟವಾಗಿತ್ತು.

ಆದರೆ ಪಂದ್ಯದ ಟಾಸ್‌’ಗೂ ಅರ್ಧ ಗಂಟೆ ಮೊದಲು ಆರಂಭಗೊಂಡ ಮಳೆ 9.15ರ ಹೊತ್ತಿಗೆ ಬಿಡುವು ಕೊಟ್ಟಿತು. ಈ ವೇಳೆ ಅಂಗಳಕ್ಕೆ ಹಾಕಿದ್ದ ಹೊದಿಕೆಗಳನ್ನೆಲ್ಲ ತೆಗೆಯಲಾಯಿತು. ಆದರೆ ಅಷ್ಟರಲ್ಲಿ ಪುನಃ ಮಳೆ ಜೋರಾಗಿಯೇ ಸುರಿಯತೊಡಗಿತು. ನಿಗದಿತ 20 ಓವರ್‌ಗಳ ಪಂದ್ಯಕ್ಕೆ ರಾತ್ರಿ 9.35ರ ‘ಡೆಡ್‌ ಲೈನ್‌’ ವಿಧಿಸಲಾಗಿತ್ತು. ಬಳಿಕ ಆರಂಭವಾದರೆ ನಿಯಮಗಳ‌ ಪ್ರಕಾರ ಓವರ್ ಕಡಿತವಾಗುತ್ತಿತ್ತು. ತಡರಾತ್ರಿ 12.06ರ ಅಂತಿಮ ಸಮಯವನ್ನು ನಿಗದಿಗೊಳಿಸಲಾಗಿತ್ತು. ಆದರೆ ಪಂದ್ಯ ನಡೆಸಲು ಅನುಕೂಲ ವಾತಾವರಣ ಇಲ್ಲದ ಕಾರಣ ಅಂತಿಮವಾಗಿ ಫೈನಲ್ ಫೈಟ್’ಅನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಪೈರ್ ಜೊತೆ ವಾಗ್ವಾದ: ಕೊಹ್ಲಿಗೆ ಶೇ.50 ರಷ್ಟು ದಂಡ

ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ತಂಡದ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ ವಿರುದ್ಧ ವಾಗ್ವಾದ...

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ...

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...