ಕಾಂಗ್ರೆಸ್‌ನ ಸಂಪತ್ತಿನ ಮರು ಹಂಚಿಕೆ ಸಮೀಕ್ಷೆಯನ್ನು ಐಪಿಎಲ್‌ಗೆ ಹೋಲಿಸಿದ ಕ್ರಿಕೆಟಿಗ ವೆಂಕಿ: ನೆಟ್ಟಿಗರ ಆಕ್ರೋಶ

Date:

ಭಾರತ ತಂಡದ ಮಾಜಿ ಕ್ರಿಕೆಟಿಗ ಕರ್ನಾಟಕದ ಬಿ ಎಸ್ ವೆಂಕಟೇಶ್ ಪ್ರಸಾದ್ ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆಯಾದ ಸಂಪತ್ತಿನ ಮರು ಹಂಚಿಕೆ ಸಮೀಕ್ಷೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಈ ಯೋಜನೆಯನ್ನು ‘ಕರುಣಾಜನಕ’ ಎಂದು ಕರೆದಿದ್ದಾರೆ.

ವೆಂಕಟೇಶ್ ಪ್ರಸಾದ್ ಅವರು ಕಾಂಗ್ರೆಸ್ ಹೆಸರನ್ನು ಬಳಸದೆ ಪರೋಕ್ಷವಾಗಿ ಟೀಕಿಸಿದ್ದು, ಸಂಪತ್ತಿನ ಮರು ಹಂಚಿಕೆ ಸಮೀಕ್ಷೆಯನ್ನು ಐಪಿಎಲ್ ತಂಡಗಳಿಗೆ ಹೋಲಿಸಿದ್ದಾರೆ.

“ರಾಜಕೀಯ ಪಕ್ಷವೊಂದರ ಚುನಾವಣಾ ಪ್ರಣಾಳಿಕೆಯು ಬಡವರಿಗೆ ಶ್ರೀಮಂತರ ಸಂಪತ್ತನ್ನು ಮರುಹಂಚಿಕೆ ಮಾಡುವುದಾಗಿದೆ. ನಿಜವಾಗಿಯು ಬಡವರನ್ನು ಮೇಲೆತ್ತಬೇಕಿದೆ, ಆದರೆ ಈ ಯೋಜನಾ ಪ್ರಕ್ರಿಯೆಯು ಕರುಣಾಜನಕವಾಗಿದೆ. ರಾಜಸ್ಥಾನ ರಾಯಲ್ಸ್, ಕೆಕೆಆರ್ ಹಾಗೂ ಹೈದರಾಬಾದ್ ತಂಡಗಳು ಗಳಿಸಿದ ತಲಾ 4 ಅಂಕಗಳನ್ನು ಕೆಳಗಿರುವ ಮೂರು ತಂಡಗಳಿಗೆ ಮರು ಹಂಚಿಕೆ ಮಾಡಿದರೆ ಅವರು ಪ್ಲೇಆಫ್‌ಗೆ ಹೋಗುತ್ತಾರೆ” ಎಂದು ಅಣಕಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ

ಕ್ರಿಕೆಟಿಗನ ನಡೆಯನ್ನು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಯಾಜ್ ಎಂಬ ನೆಟ್ಟಿಗರು ಮಣಿಪುರ ಹಿಂಸಾಚಾರ, ಚುನಾವಣಾ ಬಾಂಡ್ ಹಗರಣ, ಕುಸ್ತಿಪಟುಗಳ ಪ್ರತಿಭಟನೆ ಹಾಗೂ ರೈತರ ಪ್ರತಿಭಟನೆ ನಿಮಗೆ ತಿಳಿದಿದೆಯೆ? ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ನೆಟ್ಟಿಗರು, ಮುಂದಿನ ಪೀಳಿಗೆ ಉತ್ತಮ ಅನುಕೂಲಗಳನ್ನು ಪಡೆದು ಸಂತಸದಿಂದಿರುವುದು ನಿಮಗೆ ಇಷ್ಟವಿಲ್ಲದ ಕಾರಣ ನೀವು ಆರ್ಥಿಕ ಹಾಗೂ ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದೀರಿ ಎಂದು ಟೀಕಿಸಿದ್ದಾರೆ.

ಬೆಲೆ ಏರಿಕೆ, ಪೆಟ್ರೋಲ್ ಏರಿಕೆ, ಹಣದುಬ್ಬರ, ಕಪ್ಪು ಹಣ, ನೋಟು ರದ್ದತಿ, ಮನೆಗಳ ನೆಲಸಮ, ನರಮೇಧ, ರೈತರ ಪ್ರತಿಭಟನೆ, ಜೆಎನ್‌ಯು ಗಲಭೆಗಳ ಬಗ್ಗೆ ನೀವು ಬಾಯಿ ಬಿಡುತ್ತಿಲ್ಲ. ಇದಕ್ಕೆಲ್ಲ ಉತ್ತರ ಸಂಪತ್ತಿನ ಮರುಹಂಚಿಕೆಯಾಗಿದೆ. ಬಿಸಿಸಿಐನ ಪ್ರಭಾವಿ ಹುದ್ದೆ ಹಾಗೂ ರಾಜ್ಯಸಭೆ ಸೀಟಿಗಾಗಿ ಈ ರೀತಿ ಮಾತನಾಡುತ್ತಿದ್ದೀರಿ ಎಂದು ಮತ್ತೊಬ್ಬ ನೆಟ್ಟಿಗರು ಕುಟುಕಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತೆಲ್ಲವನ್ನು ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ನೀಡುತ್ತಾರೆ ಎಂದು ರಾಜಸ್ಥಾನದ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ ಒಂದು ದಿನದ ನಂತರ ವೆಂಕಟೇಶ್ ಪ್ರಸಾದ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಏಪ್ರಿಲ್‌ 6 ರಂದು ಹೈದರಾಬಾದ್‌ನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ರಾಹುಲ್ ಗಾಂಧಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆರ್ಥಿಕ ಹಾಗೂ ಸಾಂಸ್ಥಿಕ ಸಮೀಕ್ಷೆಯನ್ನು ಹಮ್ಮಿಕೊಂಡು ಅವರ ಸಂಪತ್ತನ್ನು ದೇಶದ ಕಡು ಬಡವರಿಗೆ ನೀಡಲಾಗುವುದು ಎಂದು ಹೇಳಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು: ಮೇಕೆ ಮೇಯಿಸುತ್ತಿದ್ದ ಮಹಿಳೆ ಹೊತ್ತೊಯ್ದ ಹುಲಿ

ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿ ಯೊಂದು ಹಠಾತ್ ದಾಳಿ ನಡೆಸಿ ಮಹಿಳೆಯನ್ನು ಹೊತ್ತೊಯ್ದ...

ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ 6 ಜನರ ಸಾವು

ಇಂದು ಮುಂಜಾನೆ ಹಾಸನ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿಯ ಬೆಂಗಳೂರು-ಮಂಗಳೂರು...

ಕೊಪ್ಪಳ | ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ : ಕೆ.ಫಣಿರಾಜ್

ದಶಕಗಳ ಹಿಂದೆ ನಡೆದಿರುವ ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ. ಆದರೆ...

ಟಿ20 ವಿಶ್ವಕಪ್ | ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಅಮೆರಿಕಕ್ಕೆ ಹಾರಿದ ಟೀಮ್ ಇಂಡಿಯಾದ ಮೊದಲ ಬ್ಯಾಚ್

ಜೂನ್ 2ರಿಂದ ಆರಂಭವಾಗಲಿರುವ 9ನೇ ಆವೃತ್ತಿಯ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ...