ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

Date:

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ವಿಶ್ವ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 40 ವರ್ಷಗಳ ಹಿಂದೆ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು ನಿರ್ಮಿಸಿದ ದಾಖಲೆಯನ್ನು ಮೀರಿಸಿದ್ದಾರೆ.

ಚೆನ್ನೈ ಮೂಲದ 17 ವರ್ಷದ ಚೆಸ್‌ ಆಟಗಾರ ದೊಮ್ಮರಾಜು ಗುಕೇಶ್ ಚೆಸ್‌ ಆಡಿದ ಇತಿಹಾಸದಲ್ಲಿಯೇ ಈ ಪಂದ್ಯಾವಳಿ ಗೆದ್ದ ಮೊದಲ ಹದಿಹರೆಯದ ಆಟಗಾರ ಎನಿಸಿಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಶ್ವ ಚಾಂಪಿಯನ್‌ ಸವಾಲನ್ನು ನಿರ್ಧರಿಸಲು ನಡೆಯುವ ಪಂದ್ಯಾವಳಿಯಲ್ಲಿ ಗುಕೇಶ್ 14 ನೇ ಮತ್ತು ಅಂತಿಮ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಮುರಾ ಅವರೊಂದಿಗೆ ಸುಲಭವಾಗಿ ಡ್ರಾ ಸಾಧಿಸಿದರು.

ಅಂತಿಮ ಸುತ್ತಿನಲ್ಲಿ 9/14 ಅಂಕ ಗಳಿಸುವ ಮೂಲಕ ಗುಕೇಶ್‌ ಮೊದಲ ಸ್ಥಾನ ಪಡೆದರು. ಇದರೊಂದಿಗೆ ವಿಶ್ವನಾಥನ್ ಆನಂದ್ ಬಳಿಕ ಕ್ಯಾಂಡಿಡೇಟ್ಸ್ ಗೆದ್ದ ಎರಡನೇ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಮುಂದೆ ವಿಶ್ವ ಚೆಸ್ ಚಾಂಪಿಯನ್ ಆಗುವತ್ತ ಮಹತ್ವದ ಹೆಜ್ಜೆ ಇಟ್ಟಿರುವ ಗುಕೇಶ್‌, ಈ ವರ್ಷದ ಕೊನೆಯಲ್ಲಿ ಚೀನಾದ ಚೆಸ್‌ ಗ್ರಾಂಡ್‌ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ.

ಡಿಂಗ್ ಲಿರೆನ್‌ ವಿರುದ್ಧ ಗೆದ್ದರೆ, ಗುಕೇಶ್ ಅವರು ಕಿರಿಯ ವಿಶ್ವ ಚಾಂಪಿಯನ್ ಆಗುವ ಅವಕಾಶ ಪಡೆಯುತ್ತಾರೆ. ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ಗ್ಯಾರಿ ಕಾಸ್ಪರೋವ್ ಅವರು ಈ ಹಿಂದೆ ತಮ್ಮ 22ನೇ ವರ್ಷ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.

ಗುಕೇಶ್ ಅವರು 88,500 ಯುರೋಗಳ (ಅಂದಾಜು ರೂ 78.5 ಲಕ್ಷ) ನಗದು ಪ್ರಶಸ್ತಿಯನ್ನು ಗೆದ್ದಿದ್ದಾರೆ. ಒಟ್ಟು ಬಹುಮಾನ ಮೊತ್ತವು 5,00,000 ಯುರೋಗಳು. ವಿಶ್ವನಾಥನ್ ಆನಂದ್ ನಂತರ ಪ್ರತಿಷ್ಠಿತ ಪಂದ್ಯಾವಳಿಯನ್ನು ಗೆದ್ದ ಎರಡನೇ ಭಾರತೀಯರಾದರು. ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಗೆಲುವು 2014ರಲ್ಲಿ ಬಂದಿತ್ತು.

ಗುಕೇಶ್​ಗೆ ಇತಿಹಾಸ ಬರೆಯುವ ಅವಕಾಶ

17ನೇ ವಯಸ್ಸಿನಲ್ಲೇ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ ಚಾಲೆಂಜರ್ ಪಂದ್ಯವಾಡಲು ಅವಕಾಶ ಪಡೆದಿರುವ ಡಿ ಗುಕೇಶ್​ ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಏಕೆಂದರೆ ವಿಶ್ವ ಚೆಸ್ ಚಾಂಪಿಯನ್​ಶಿಪ್ ಗೆದ್ದರೆ ಈ ಪ್ರಶಸ್ತಿ ಪಡೆದ ವಿಶ್ವದ ಅತ್ಯಂತ ಕಿರಿಯ ಚೆಸ್ ಚತುರನೆಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಲಿದ್ದಾರೆ. ಸದ್ಯ ಈ ದಾಖಲೆ ರಷ್ಯಾದ ಚೆಸ್ ಚಾಣಕ್ಯ ಎನಿಸಿಕೊಂಡಿರುವ ಗ್ಯಾರಿ ಕಾಸ್ಪರೋವ್ ಹೆಸರಿನಲ್ಲಿದೆ.

1984 ರಲ್ಲಿ ವಿಶ್ವ ಚಾಂಪಿಯನ್​ ಅನಾಟೊಲಿ ಕಾರ್ಪೋವ್ ವಿರುದ್ಧ ಗೆಲ್ಲುವ ಮೂಲಕ 22 ವಯಸ್ಸಿನ ಗ್ಯಾರಿ ಕಾಸ್ಪರೋವ್ ಈ ದಾಖಲೆ ನಿರ್ಮಿಸಿದ್ದರು. ಇದೀಗ 17ನೇ ವಯಸ್ಸಿನಲ್ಲೇ ವಿಶ್ವ ಚಾಂಪಿಯನ್​ಗೆ ಸವಾಲೆಸೆಯುವ ಅವಕಾಶ ಪಡೆದಿರುವ ಡಿ ಗುಕೇಶ್ ಡಿಂಗ್ ಲಿರೆನ್ ವಿರುದ್ಧ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಪಂದ್ಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಗುಕೇಶ್ ಡಿ, “ಭಾರತದಲ್ಲಿ ಚೆಸ್ ವಿಜೃಂಭಿಸುತ್ತಿದೆ. ನಾವೆಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅಭ್ಯರ್ಥಿಗಳನ್ನು ಗೆಲ್ಲುವುದು ದೊಡ್ಡ ಸಾಧನೆಯಾಗಿದೆ” ಎಂದರು.

ಗುಕೇಶ್ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2025ರ ಐಪಿಎಲ್‌ನಲ್ಲೂ ಎಂಎಸ್ ಧೋನಿ ಆಡುವುದು ಅವರಿಗೆ ಬಿಟ್ಟ ವಿಚಾರ: ಚೆನ್ನೈ ಸಿಇಓ ಕಾಸಿ ವಿಶ್ವನಾಥನ್

ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ...

ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯದ ಪ್ರತಿ ಟಿಕೆಟ್ ಬೆಲೆ ಬರೋಬ್ಬರಿ 17 ಲಕ್ಷ ರೂ!

ಐಪಿಎಲ್ ಮುಗಿಯುತ್ತಾ ಬಂತು, ಇನ್ನೇನಿದ್ದರೂ ಕ್ರಿಕೆಟ್ ಅಭಿಮಾನಿಗಳಲ್ಲಿ ಟಿ20 ವಿಶ್ವಕಪ್ ಹುಚ್ಚು...

ಈ ಬಾರಿಯ ಐಪಿಎಲ್‌ನಲ್ಲಿ ಸದ್ದೇ ಮಾಡದ ಮ್ಯಾಕ್ಸ್‌ವೆಲ್ ಬ್ಯಾಟ್‌: ಗಳಿಸಿದ್ದು ಕೇವಲ 52 ರನ್!

ಬುಧವಾರ ಗುಜರಾತ್‌ನ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಎಲಿಮಿನೇಟರ್...

ಸೋಲಿನೊಂದಿಗೆ ಐಪಿಎಲ್‌ಗೆ ವಿದಾಯ ಹೇಳಿದ ‘ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್’

17ನೇ ಆವೃತ್ತಿಯ ಫೈನಲ್ ತಲುಪುವ ಭರವಸೆ ಮೂಡಿಸಿದ್ದ ಅಭಿಮಾನಿಗಳ ಫೇವರೀಟ್ ತಂಡ...