ಐಪಿಎಲ್‌ 16 ಕ್ವಾಲಿಫೈಯರ್​ 2 | ಗುಜರಾತ್‌ vs ಮುಂಬೈ; ಅಹಮದಾಬಾದ್‌ನಲ್ಲಿ ʻಮಿನಿ ಫೈನಲ್‌ʼ!

Date:

ಐಪಿಎಲ್‌ 16ನೇ ಆವೃತ್ತಿಯು ಉಪಾಂತ್ಯ ಹಂತ ತಲುಪಿದೆ. ಮಾರ್ಚ್‌ 31 ರಂದು 10 ತಂಡಗಳೊಂದಿಗೆ ಆರಂಭವಾಗಿದ್ದ ಟೂರ್ನಿಯಲ್ಲಿ ಇದೀಗ ಕೇವಲ 3 ತಂಡಗಳು ಸ್ಪರ್ಧಾಕಣದಲ್ಲಿವೆ.

ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಕ್ವಾಲಿಫೈಯರ್​-2 ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್​ ಟೈಟಾನ್ಸ್ ಮತ್ತು ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗೆದ್ದವರು ಫೈನಲ್‌ ಟಿಕೆಟ್‌ ಪಡೆಯಲಿದ್ದು, ಸೋತವರ ಐಪಿಎಲ್‌ 16ನೇ ಆವೃತ್ತಿಯ ಅಭಿಯಾನ ಇಂದಿಗೆ ಕೊನೆಯಾಗಲಿದೆ.

ಕ್ವಾಲಿಪೈಯರ್​-1 ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ತಂಡವನ್ನು ಮಣಿಸಿ ಎಂಎಸ್‌ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ಈಗಾಗಲೇ ಮೊದಲ ತಂಡವಾಗಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಇಂದಿನ ಗುಜರಾತ್-ಮುಂಬೈ ಪಂದ್ಯದ ವಿಜೇತರು ಇದೇ ಮೈದಾನದಲ್ಲಿ ಮೇ 29ರಂದು ಚಾಂಪಿಯನ್‌ ಪಟ್ಟಕ್ಕಾಗಿ ನಡೆಯುವ ಫೈನಲ್‌ ಪಂದ್ಯದಲ್ಲಿ ಸಿಎಸ್‌ಕೆ ಸವಾಲನ್ನು ಎದುರಿಸಬೇಕಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪಾದಾರ್ಪಣೆ ಆವೃತ್ತಿಯಲ್ಲೇ ಚಾಂಪಿಯನ್‌ ಪಟ್ಟಕ್ಕೇರಿದ ಗುಜರಾತ್‌ ಟೈಟನ್ಸ್‌ ಮತ್ತು ಐಪಿಎಲ್‌ ಇತಿಹಾಸದಲ್ಲಿಯೇ ಅತಿಹೆಚ್ಚು ಬಾರಿ (5) ಪ್ರಶಸ್ತಿ ಗೆದ್ದ ಖ್ಯಾತಿಯ ಮುಂಬೈ ಇಂಡಿಯನ್ಸ್‌ ತಂಡಗಳ ನಡುವಿನ ಇಂದಿನ ಪಂದ್ಯವನ್ನು ಮಿನಿ ಫೈನಲ್‌ ಎಂದೇ ಬಣ್ಣಿಸಲಾಗುತ್ತಿದೆ.  

ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ತಂಡವನ್ನು ಮುಂಬೈ ಇಂಡಿಯನ್ಸ್ 81 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತ್ತು. ಸತತ 7 ಪಂದ್ಯಗಳಲ್ಲಿ ಅಜೇಯರಾಗಿರುವ ಮುಂಬೈ ಅದೇ ಆತ್ಮವಿಶ್ವಾಸದೊಂದಿಗೆ ಇಂದು ಕಣಕ್ಕಳಿಯಲಿದೆ. ಬ್ಯಾಟಿಂಗ್‌ನಲ್ಲಿ ಪ್ರಮುಖವಾಗಿ ಇಶಾನ್‌ ಕಿಶನ್‌, ಸೂರ್ಯ ಕುಮಾರ್​ ಯಾದವ್​, ಕ್ಯಾಮರೂನ್​ ಗ್ರೀನ್​ ಹಾಗೂ ಟಿಮ್​ ಡೇವಿಡ್​ ಅವರನ್ನು ಮುಂಬೈ ಅವಲಂಬಿಸಿದೆ. ​ ಜಸ್ಪಿತ್​ ಬುಮ್ರಾ ಮತ್ತು ಜೋಫ್ರಾ ಆರ್ಚರ್​ ಅನುಪಸ್ಥಿತಿಯಲ್ಲಿ ಯುವ ವೇಗಿ ಆಶಿಶ್ ಮಧ್ವಾಲ್‌​ ತಂಡದ ಭರವಸೆಯಾಗಿದ್ದಾರೆ.

ಮತ್ತೊಂದೆಡೆ ಲೀಗ್‌ ಹಂತದಲ್ಲಿ 14 ರಲ್ಲಿ 10 ಪಂದ್ಯಗಳನ್ನು ಗೆದ್ದು 20 ಅಂಕಗಳೊಂದಿಗೆ ಮೊದಲ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದ್ದ ಹಾರ್ದಿಕ್‌ ಪಾಂಡ್ಯ ಪಡೆ ಕ್ವಾಲಿಪೈಯರ್​-1 ಪಂದ್ಯದಲ್ಲಿ ಧೋನಿ ಬಳಗಕ್ಕೆ 15 ರನ್‌ಗಳ ಅಂತರದಲ್ಲಿ  ಶರಣಾಗಿತ್ತು. ಬಲಿಷ್ಠ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗವನ್ನು ಹೊಂದಿದ್ದರೂ ಸಹ ಧೋನಿ ಹೆಣೆದ ತಂತ್ರಕ್ಕೆ ಪಾಂಡ್ಯಾ ಬಳಗದ ಯೋಜನೆ ತಲೆಕೆಳಗಾಗಿತ್ತು.‌

ಈ ಸುದ್ದಿ ಓದಿದ್ದೀರಾ?: ಐಪಿಎಲ್‌ 2023 | ದಾಖಲೆಯ 10ನೇ ಬಾರಿ ಫೈನಲ್ ಪ್ರವೇಶಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌

ಆರಂಭಿಕ ಶುಭಮನ್​ ಗಿಲ್, ನಾಯಕ ಹಾರ್ದಿಕ್​,  ಡೇವಿಡ್‌ ಮಿಲ್ಲರ್​, ವಿಜಯ ಶಂಕರ್, ಕೊನೆಯಲ್ಲಿ ತೆವಾಟಿಯ ಮತ್ತು ರಶೀದ್‌ ಖಾನ್‌ ತಂಡದ ಬ್ಯಾಟಿಂಗ್​ ಭರವಸೆಯಾಗಿದ್ದಾರೆ. ಬೌಲಿಂಗ್‌ನಲ್ಲಿ ಅನುಭವಿ  ಮುಹಮ್ಮದ್​ ಶಮಿ, ರಶೀದ್ ಖಾನ್ ಹಾಗೂ ನೂರ್‌ ಅಹ್ಮದ್‌ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಮುಖಾಮುಖಿ: ಮುಂಬೈ ಮತ್ತು ಗುಜರಾತ್​ ತಂಡಗಳು ಇದುವರೆಗೂ ಒಟ್ಟು 3 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 2 ಮತ್ತು ಗುಜರಾತ್‌ 1 ಗೆಲುವು ಕಂಡಿದೆ. ಪ್ಲೇ ಆಫ್​ ಹಂತದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.  

ಸಂಭಾವ್ಯ ತಂಡ:

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾಫ್

ಗುಜರಾತ್​ ಟೈಟಾನ್ಸ್​​: ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ದಾಸುನ್ ಶನಕ, ರಾಹುಲ್ ತೆವಾಟಿಯಾ, ರಶೀದ್ ಖಾನ್, ಯಶ್ ದಯಾಲ್, ನೂರ್ ಅಹ್ಮದ್,ಮುಹಮ್ಮದ್ ಶಮಿ, ಮೋಹಿತ್ ಶರ್ಮಾ

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಪೈರ್ ಜೊತೆ ವಾಗ್ವಾದ: ಕೊಹ್ಲಿಗೆ ಶೇ.50 ರಷ್ಟು ದಂಡ

ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ತಂಡದ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ ವಿರುದ್ಧ ವಾಗ್ವಾದ...

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ...

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...