ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಹಾಗೂ ಸ್ಪಿನ್ನರ್‌ಗಳಾದ ಆರ್ ಅಶ್ವಿನ್, ಆರ್ ಚಾಹಲ್ ಅವರ ದಾಳಿಗೆ ಸಿಲುಕಿದ ಡೆಲ್ಲಿ ಕ್ಯಾಪಿಟಲ್ಸ್ 57 ರನ್‌ಗಳ ಅಂತರದಲ್ಲಿ ಸೋಲಿಗೆ ಶರಣಾಯಿತು.
ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 16ನೇ ಆವೃತ್ತಿಯ 11ನೇ ಪಂದ್ಯದಲ್ಲಿ ರಾಜಸ್ಥಾನ್ ನೀಡಿದ 200 ನ್‌ಗಳ ಸವಾಲನ್ನು ಬೆನ್ನಟ್ಟಿದ ಡೆಲ್ಲಿ ತಂಡ 9 ವಿಕೆಟ್ ನಷ್ಟಕ್ಕೆ 142 ರನ್‌ಗಳಷ್ಟೆ ಗಳಿಸಲು ಶಕ್ತವಾಯಿತು. ಇದರೊಂದಿಗೆ ಡೆಲ್ಲಿ ಟೂರ್ನಿಯಲ್ಲಿ ಸತತ ಮೂರು ಸೋಲು ಕಂಡಿತು.
ನಾಯಕ ಡೇವಿಡ್ ವಾರ್ನರ್ ಅರ್ಧ ಶತಕ 65 (55 ಎಸೆತ, 7 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಲಲಿತ್ ಯಾದವ್ 38 (24 ಎಸೆತ, 5 ಬೌಂಡರಿ) ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸಮನ್‌ಗಳ್ಯಾರೂ ಪ್ರತಿರೋಧ ತೋರದೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಟ್ರೆಂಟ್ ಬೌಲ್ಟ್ 29/3, ಆರ್ ಚಾಹಲ್ 27/3 ಹಾಗೂ ಆರ್ ಅಶ್ವಿನ್ 25/2 ವಿಕೆಟ್ ಕಬಳಿಸಿ ರಾಜಸ್ಥಾನ ಗೆಲುವಿನ ರೂವಾರಿಯಾದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್, ಯಶಸ್ವಿ ಜೈಸ್ವಾಲ್ ಮತ್ತು ಜಾಸ್ ಬಟ್ಲರ್ ಅವರ ಅರ್ಧ ಶತಕದ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಕಲೆ ಹಾಕಿತು. ಇವರಿಬ್ಬರು ಯಶಸ್ವಿ ಜೈಸ್ವಾಲ್ 60 ರನ್ (31 ಚೆಂಡು,11 ಬೌಂಡರಿ, 1 ಸಿಕ್ಸರ್) ಮತ್ತು ಜಾಸ್ ಬಟ್ಲರ್ 79 ರನ್ (51 ಎಸೆತ, 11 ಬೌಂಡರಿ, 1 ಸಿಕ್ಸರ್) ಪೇರಿಸುವ ಮೂಲಕ ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲೇ 98 ರನ್ ಗಳಿಸಿದ್ದರು.
ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ 21 ಎಸೆತಗಳಲ್ಲಿ 4 ಸಿಕ್ಸರ್ ಮತ್ತು ಒಂದು ಬೌಂಡರಿ ಮೂಲಕ 39 ರನ್ ಗಳಿಸಿ ರಾಯಲ್ಸ್ ಮೊತ್ತವನ್ನು 199ಕ್ಕೆ ಕೊಂಡೊಯ್ದರು. ಡೆಲ್ಲಿ ಪರ ಮುಕೇಶ್ ಕುಮಾರ್ 2 ಮತ್ತು ಕುಲ್‌ದೀಪ್ ಯಾದವ್ ಮತ್ತು ರೋವ್‌ಮನ್ ಪೊವೆಲ್ ತಲಾ ಒಂದು ವಿಕೆಟ್ ಪಡೆದರು.