ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಐಸಿಸಿ ಟಿ20 ವಿಶ್ವಕಪ್ನ ಎ ಗ್ರೂಪ್ನ ಪಂದ್ಯದಲ್ಲಿ ಟೀಮ್ ಇಂಡಿಯಾವು ಆತಿಥೇಯ ಅಮೆರಿಕ ತಂಡವನ್ನು 7 ವಿಕೆಟ್ಗಳಿಂದ ಸೋಲಿಸುವ ಮೂಲಕ ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದೆ.
ಅಮೆರಿಕ ನೀಡಿದ್ದ 111 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ರೋಹಿತ್ ಶರ್ಮಾ ಬಳಗ, 18.2 ಓವರ್ಗಳಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡು ಗುರಿ ತಲುಪಿತು.
ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆ ಜೋಡಿಯು ಮುರಿಯದ ನಾಲ್ಕನೇ ವಿಕೆಟ್ಗೆ 67 ರನ್ಗಳ ಜೊತೆಯಾಟ ನಡೆಸಿದರು. ಸೂರ್ಯಕುಮಾರ್ ಯಾದವ್ ಅವರು 49 ಎಸತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ನ ನೆರವಿನಿಂದ 50 ರನ್ ಗಳಿಸುವ ಮೂಲಕ ಅರ್ಧಶತಕ ಬಾರಿಸಿ ಮಿಂಚಿದರು.
A vital unbeaten 5⃣0⃣ in the chase! 👍 👍
Well played, Suryakumar Yadav! 🙌 🙌
Scorecard ▶️ https://t.co/HTV9sVyS9Y#T20WorldCup | #TeamIndia | #USAvIND | @surya_14kumar pic.twitter.com/FS72US64ty
— BCCI (@BCCI) June 12, 2024
ಅಮೆರಿಕ ಪರ ಮೊದಲ ಓವರ್ ಎಸೆದ ಕಳೆದ ಪಂದ್ಯದ ಹೀರೋ ಸೌರಭ್ ನೇತ್ರವಾಕರ್, ಮೊದಲ ಓವರ್ನ ಎರಡನೇ ಎಸೆತದಲ್ಲಿ ಟೀಮ್ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿಯವರ ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು. ಕಳೆದ ಮೂರೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯವರ ಬ್ಯಾಟ್ನಿಂದ ಸರಿಯಾದ ರನ್ಗಳೇ ಬಂದಿಲ್ಲ.
ಆ ಬಳಿಕ ಮೂರನೇ ಓವರ್ನ ಎರಡನೇ ಎಸೆತದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಪಡೆಯುವ ಮೂಲಕ ಕೂಡ ಸೌರಭ್ ನೇತ್ರವಾಕರ್ ಮತ್ತೊಮ್ಮೆ ಆಘಾತ ನೀಡಿದರು. ಔಟಾಗುವುದಕ್ಕೂ ಮುನ್ನ ರೋಹಿತ್ ಶರ್ಮಾ 6 ಎಸೆತಗಳಲ್ಲಿ 3 ರನ್ ಗಳಿಸಲಷ್ಟೇ ಶಕ್ತರಾದರು.
ನಂತರ ಕ್ರೀಸ್ನಲ್ಲಿದ್ದ ರಿಷಭ್ ಪಂತ್ಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು. ರಿಷಭ್ ಪಂತ್ 18 ರನ್ ಗಳಿಸಿದ್ದಾಗ ಅಲಿ ಖಾನ್ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಬಳಿಕ ಇನ್ನಿಂಗ್ಸ್ ಕಟ್ಟಿದ ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆ ಜೋಡಿಯು ಮುರಿಯದ ನಾಲ್ಕನೇ ವಿಕೆಟ್ಗೆ 67 ರನ್ಗಳ ಜೊತೆಯಾಟ ನಡೆಸಿ, ಗುರಿ ಮುಟ್ಟಿಸುವಲ್ಲಿ ಸಫಲರಾದರು. ಶಿವಂ ದುಬೆ 35 ಎಸೆತಗಳಲ್ಲಿ 31 ರನ್(1 ಬೌಂಡರಿ, 1 ಸಿಕ್ಸ್) ಗಳಿಸಿ, ಅಜೇಯರಾಗುಳಿದರು.
Efforts fell short today on the field as India won by 7 wickets. #T20WorldCup | #USAvIND | #WeAreUSACricket 🇺🇸 pic.twitter.com/4WeILCZqg6
— USA Cricket (@usacricket) June 12, 2024
ಒಂದು ಹಂತದಲ್ಲಿ ಟೀಮ್ ಇಂಡಿಯಾವನ್ನು ಕಾಡಿದ ಅಮೆರಿಕ ಬೌಲರ್ಗಳು, ಪಂದ್ಯವನ್ನು ತಮ್ಮತ್ತ ಸೆಳೆಯಲು ಸಂಘಟಿತ ಪ್ರಯತ್ನ ನಡೆಸಿದರಾದರೂ, ಸೂರ್ಯಕುಮಾರ್ ಯಾದವ್ 23 ರನ್ ಗಳಿಸಿದ್ದಾಗ ಸೌರಭ್ ನೇತ್ರವಾಕರ್ ಬಿಟ್ಟ ಕ್ಯಾಚ್ ಟೀಮ್ ಇಂಡಿಯಾ ಪಾಲಿಗೆ ವರದಾನವಾಗಿ ಪರಿಣಮಿಸಿತು. ಕ್ಯಾಚ್ ಬಿಟ್ಟಿದ್ದ ಅವಕಾಶ ಬಳಸಿಕೊಂಡ ಸೂರ್ಯಕುಮಾರ್ ಯಾದವ್, ಅರ್ಧಶತಕ ಗಳಿಸಿದ್ದಲ್ಲದೇ, ತಂಡವನ್ನು ಗುರಿ ಮುಟ್ಟಿಸುವಲ್ಲಿ ಸಫಲರಾದರು.
ಯುಎಸ್ಎ ಪರ ಉತ್ತಮ ಬೌಲಿಂಗ್ ನಡೆಸಿದ ಭಾರತೀಯ ಮೂಲದ ಸೌರಭ್ ನೇತ್ರವಾಕರ್ 18ಕ್ಕೆ 2 ವಿಕೆಟ್ ಗಳಿಸಿದರೆ, ಅಲಿ ಖಾನ್ 1 ವಿಕೆಟ್ ಪಡೆಯುವಲ್ಲಿ ಸಫಲರಾದರು.
ಟೀಮ್ ಇಂಡಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಎಡಗೈ ಬೌಲರ್ ಅರ್ಷ್ದೀಪ್ ಸಿಂಗ್ 4 ಓವರ್ಗಳನ್ನು ಎಸೆದು ಕೇವಲ 9 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದ್ದರಿಂದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Three out of three, and they’re through 🇮🇳#INDvUSA #T20WorldCup pic.twitter.com/MBvSUYZBec
— ESPNcricinfo (@ESPNcricinfo) June 12, 2024
