ವೇದಿಕೆಯಲ್ಲೇ ಮಾಜಿ ರಾಜ್ಯಪಾಲೆ ತಮಿಳ್‌ಸೈಗೆ ಎಚ್ಚರಿಕೆ ನೀಡಿದ ಅಮಿತ್ ಶಾ: ವಿಡಿಯೋ ವೈರಲ್

Date:

ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಎನ್ ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ರಾಜಕೀಯ ಚರ್ಚೆಗೆ ವೇದಿಕೆಯೊದಗಿಸಿದೆ.

ತೆಲಂಗಾಣದ ಮಾಜಿ ರಾಜ್ಯಪಾಲೆ ಹಾಗೂ ಬಿಜೆಪಿ ನಾಯಕಿ ತಮಿಳ್‌ಸೈ ಸೌಂದರರಾಜನ್ ಅವರನ್ನು ವೇದಿಕೆಯಲ್ಲಿಯೇ ಅಮಿತ್ ಶಾ ತರಾಟೆಗೆ ತೆಗೆದುಕೊಳ್ಳುವ ದೃಶ್ಯವೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸಮಾರಂಭದ ವೇಳೆ ವೇದಿಕೆ ಬರುತ್ತಿದ್ದಂತೆಯೇ ತಮಿಳ್‌ಸೈ, ಅಲ್ಲೇ ಕುಳಿತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವೆಂಕಯ್ಯ ನಾಯ್ಡು ಅವರಿಗೆ ವಂದಿಸಿದ್ದಾರೆ. ಪ್ರತಿಯಾಗಿ ವೆಂಕಯ್ಯ ನಾಯ್ಡು ಹಾಗೂ ಅಮಿತ್ ಶಾ ಕೂಡ  ವಂದಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದೇ ವೇಳೆ ಮುಂದೆ ಹೋಗುತ್ತಿದ್ದ ತಮಿಳ್‌ಸೈ ಅವರನ್ನು ವಾಪಸ್ ಕರೆದ ಅಮಿತ್ ಶಾ, ಎಚ್ಚರಿಕೆ ನೀಡುತ್ತಿರುವ ದೃಶ್ಯ ಕಂಡುಬಂದಿದೆ. ಈ ಎಚ್ಚರಿಕೆಯನ್ನು ಅಮಿತ್ ಶಾ ಪಕ್ಕದಲ್ಲೇ ಇದ್ದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಜೆಪಿ ನಡ್ಡಾ ಕೂಡ ಸಾಕ್ಷಿಯಾಗಿದ್ದಾರೆ.

ತಮಿಳ್‌ಸೈ ಅವರತ್ತ ತೋರುಬೆರಳು ಆಡಿಸುತ್ತಾ ಅಮಿತ್ ಶಾ ಅವರು ಎಚ್ಚರಿಕೆ ನೀಡಿರುವಂತೆ ಕಾಣಿಸಿದೆ. ಅವರ ಮಾತುಗಳನ್ನು ತಮಿಳ್ ಸೈ ಮೌನವಾಗಿ ಆಲಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯ ಕಂಡ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯ ಸೋಲಿನ ಬಳಿಕ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಹಾಗೂ ತಮಿಳ್‌ಸೈ ನಡುವೆ ಮನಸ್ತಾಪ ಭುಗಿಲೆದ್ದಿದೆ. ಈ ವಿಚಾರವಾಗಿ ಅಮಿತ್ ಶಾ ಅವರು ಮಾಜಿ ರಾಜ್ಯಪಾಲೆಯನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಹಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ.

“ತಮಿಳ್‌ಸೈ ಅವರಿಗೆ ಅಮಿತ್ ಶಾ ಅವರಿಂದ ಕಠಿಣ ಎಚ್ಚರಿಕೆ ರೀತಿ ಇದು ಕಾಣಿಸುತ್ತಿದೆ. ಆದರೆ ಈ ‘ಸಾರ್ವಜನಿಕ’ ಎಚ್ಚರಿಕೆಗೆ ಕಾರಣ ಏನಿರಬಹುದು? ಅನಗತ್ಯವಾದ ಸಾರ್ವಜನಿಕ ಹೇಳಿಕೆಗಳೇ?” ಎಂದು ತಮಿಳುನಾಡು ಬಿಜೆಪಿ ಸಾಮಾಜಿಕ ಮಾಧ್ಯಮ ಘಟಕದ ಉಪಾಧ್ಯಕ್ಷ ಕಾರ್ತಿಕ್ ಗೋಪಿನಾಥ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ಇದು ಯಾವ ರೀತಿಯ ರಾಜಕಾರಣ? ತಮಿಳುನಾಡಿನ ಪ್ರಮುಖ ಮಹಿಳಾ ರಾಜಕಾರಣಿಯನ್ನು ಸಾರ್ವಜನಿಕವಾಗಿ ಬೆದರಿಸುವುದು ಸೂಕ್ತವೇ? ಎಲ್ಲರಿಗೂ ಇದು ಕಾಣಿಸುತ್ತದೆ ಎನ್ನುವುದು ಅಮಿತ್ ಶಾಗೆ ತಿಳಿದಿರಬೇಕಿತ್ತು. ಬಹಳ ಕೆಟ್ಟ ಉದಾಹರಣೆ” ಎಂದು ತಮಿಳುನಾಡಿನ ಡಿಎಂಕೆ ವಕ್ತಾರ ಸರವಣನ್ ಅಣ್ಣಾದುರೈ ಟೀಕಿಸಿದ್ದಾರೆ.

ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಹಾಗೂ ತೆಲಂಗಾಣದ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿರುವ ತಮಿಳ್‌ಸೈ ಸೌಂದರ್‌ರಾಜನ್ ಅವರು, ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ ತಮಿಳುನಾಡಿನ ಚೆನ್ನೈ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರದಲ್ಲಿ ಬಿಜೆಪಿಗೆ ಒಂದೂ ಸೀಟು ಸಿಕ್ಕಿರಲಿಲ್ಲ. ಈ ಸೋಲಿಗೆ ಅಣ್ಣಾಮಲೈ ಕಾರಣ ಎಂದು ಪಕ್ಷದ ಒಂದು ಬಣ ಆರೋಪಿಸಿತ್ತು. ಮಾಜಿ ಮಿತ್ರ ಪಕ್ಷ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಿದ್ದರೆ, ಪಕ್ಷಕ್ಕೆ ಕೆಲವು ಸೀಟುಗಳಾದರೂ ಸಿಗುತ್ತಿದ್ದವು ಎಂದು ತಮಿಳ್‌ಸೈ ನೀಡಿದ್ದ ಹೇಳಿಕೆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದನ್ನು ಓದಿದ್ದೀರಾ? ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರು ಮೃತ್ಯು; ಉನ್ನತಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

ಅಲ್ಲದೇ, ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ಅಪರಾಧ ಹಿನ್ನೆಲೆಯ ಜನ ಪಕ್ಷದಲ್ಲಿ ಸೇರಿದ್ದಾರೆ” ಎಂದು  ತಿಳಿಸಿದ್ದರು. ಅದರ ಬಗ್ಗೆ ಬೇಸರಗೊಂಡಿದ್ದ ಅಮಿತ್ ಶಾ ಅವರು, “ಪಕ್ಷದ ವಿಚಾರಗಳ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡಬಾರದು. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು” ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶ | ಹಳಿತಪ್ಪಿದ ದಿಬ್ರುಗಢ ಎಕ್ಸ್‌ಪ್ರೆಸ್, 4 ಸಾವು

ಉತ್ತರ ಪ್ರದೇಶ ಗೋಂಡದ ರೈಲ್ವೆ ನಿಲ್ದಾಣದ ಸಮೀಪ ಚಂಡೀಗಢ – ದಿಬ್ರುಗಢ...

ಶಿವಾಜಿಯ ನಿಜ ಭಕ್ತರು ಮನೆಗಳಿಗೆ ಬೆಂಕಿ ಹಚ್ಚಿ ಲೂಟಿ ಮಾಡ್ತಾರಾ?; ದುಷ್ಕರ್ಮಿಗಳ ಅಟ್ಟಹಾಸಕ್ಕೆ ಗ್ರಾಮವೇ ಧ್ವಂಸ

ಗ್ರಾಮದಲ್ಲಿ ನರಕಯಾತನೆ ಅನುಭವಿಸುವಂತಹ ಕೃತ್ಯಗಳನ್ನು ಎಸಗಿದ್ದಾರೆ. ಮಹಿಳೆಯರ ಚಿನ್ನದ ಸರ ಕಸಿದುಕೊಂಡಿದ್ದಾರೆ....

ರೀಲ್ಸ್ ಮಾಡುವಾಗ 300 ಅಡಿ ಜಲಪಾತಕ್ಕೆ ಬಿದ್ದು ‘ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್’ ಮೃತ್ಯು

ಮುಂಬೈ ಮೂಲದ 'ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್' ಆನ್ವಿ ಕಾಮ್ದಾರ್ (27) ರೀಲ್ಸ್...

ಬಿಜೆಪಿ ಭಿನ್ನಮತೀಯರಿಗೆ ‘ಮಾನ್ಸೂನ್ ಆಫರ್’ ನೀಡಿದ ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ಬಿಜೆಪಿ ಭಿನ್ನಮತ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ...