ಹಲವು ವಿವಾದಗಳ ನಡುವೆಯೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ ಎಂದೇ ಪರಿಗಣಿತವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಪ್ರಾರಂಭದ ದಿನಾಂಕವನ್ನು ಘೋಷಿಸಿದ ಬೆನ್ನಲ್ಲೇ, ಪಂದ್ಯಗಳ ವೇಳಾಪಟ್ಟಿಯನ್ನೂ ಕೂಡ ಇಂದು ಪ್ರಕಟಗೊಂಡಿದೆ.
ಮಾರ್ಚ್ 22ರಿಂದ ಐಪಿಎಲ್ ಪಂದ್ಯಗಳು ಆರಂಭವಾಗಲಿದ್ದು, ಲೋಕಸಭಾ ಚುನಾವಣೆಯ ಹೊರತಾಗಿಯೂ ಈ ವರ್ಷದ ಸಂಪೂರ್ಣ ಪಂದ್ಯಗಳು ಭಾರತದಲ್ಲಿಯೇ ನಡೆಯಲಿವೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದರು.
🚨 𝗦𝗧𝗢𝗣 𝗧𝗛𝗘 𝗣𝗥𝗘𝗦𝗦 – TATA #IPL2024 Schedule is HERE! 🤩
Get ready for the thrill, excitement and fun to begin! Save this post so you don’t have to search for it again 🔍
It’s #CSKvRCB, @msdhoni 🆚 @imVkohli in the opener! Who’s your pick ? 👀#IPLSchedule #IPLonStar pic.twitter.com/oNLx116Uzi
— Star Sports (@StarSportsIndia) February 22, 2024
ಇಂದು ಸಂಜೆ ಐಪಿಎಲ್‌ನ 17ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯವು ಮಾ.22ರ ಶುಕ್ರವಾರ ಸಂಜೆ 6.30ಕ್ಕೆ ಚೆನ್ನೈನ ಚಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ.
CSK VS RCB ON 22ND MARCH AT THE CHEPAUK ….!!! pic.twitter.com/1ub83t2u9l
— Mufaddal Vohra (@mufaddal_vohra) February 22, 2024
ಮೊದಲ ಹಂತದ ಎಲ್ಲ 21 ಪಂದ್ಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪ್ರತಿಯೊಂದು ತಂಡವು ಒಟ್ಟು ಐದು ಪಂದ್ಯಗಳನ್ನು ಆಡಲಿದೆ. ಏಪ್ರಿಲ್ 7ರಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡದ ನಡುವೆ 21ನೇ ಪಂದ್ಯವು ಲಕ್ನೋದಲ್ಲಿ ನಡೆಯಲಿದೆ.
RCB will play at the Chinnaswamy Stadium against Punjab, Kolkata and Lucknow from the first 5 matches. pic.twitter.com/mwN5T1fAY6
— Mufaddal Vohra (@mufaddal_vohra) February 22, 2024
ಆರ್‌ಸಿಬಿಯ ಪಂದ್ಯಗಳು ಹೀಗಿದೆ:
ಆರ್‌ಸಿಬಿಯು ಮಾ.22ರಂದು ಚೆನ್ನೈ, ಮಾ.25ರಂದು ಪಂಜಾಬ್, ಮಾ.29ರಂದು ಕೊಲ್ಕತ್ತಾ, ಏಪ್ರಿಲ್ 2ರಂದು ಲಕ್ನೋ ಹಾಗೂ ಏಪ್ರಿಲ್ 6ರಂದು ರಾಜಸ್ಥಾನದ ವಿರುದ್ಧ ಆಡಲಿದೆ. ಈ ಐದು ಪಂದ್ಯಗಳ ಪೈಕಿ ಮೂರು ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಪಂಜಾಬ್, ಕೊಲ್ಕತ್ತಾ, ಲಕ್ನೋ ವಿರುದ್ಧದ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯಲಿದೆ.
ಇದನ್ನು ಓದಿದ್ದೀರಾ? ಹಿಮ್ಮಡಿ ಶಸ್ತ್ರಚಿಕಿತ್ಸೆ: ಐಪಿಎಲ್ ಟೂರ್ನಿಯಿಂದ ಶಮಿ ಹೊರಗೆ
ಲೋಕಸಭಾ ಚುನಾವಣೆಯ ಪ್ರಯುಕ್ತ 2009ರಲ್ಲಿ ಮಾತ್ರ ಪೂರ್ಣ ಐಪಿಎಲ್ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. 2014ರ ಟೂರ್ನಿಯ ಭಾಗಶಃ ಪಂದ್ಯಗಳು ಯುಎಇನಲ್ಲಿ ನಡೆದಿದ್ದವು. 2019ರಲ್ಲಿ ಚುನಾವಣೆಯ ಹೊರತಾಗಿಯೂ ಐಪಿಎಲ್ ಟೂರ್ನಿ ಭಾರತದಲ್ಲಿ ನಡೆದಿದ್ದವು.
