ಲೋಕಸಭಾ ಚುನಾವಣೆ | ತುಮಕೂರು ಬಿಜೆಪಿಗೆ ನುಂಗಲಾರದ ಬಿಸಿತುಪ್ಪ

Date:

ಲೋಕಸಭೆ ಚುನಾವಣೆ ಸಮೀಪವಾಗುತ್ತಿರುವ ಬೆನ್ನಲ್ಲೆ ತುಮಕೂರಿನ ಬಿಜೆಪಿ ವಲಯದಲ್ಲಿ ಟಿಕೆಟ್ ಕದನ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಟಿಕೆಟ್‌ಗಾಗಿ ಬಿಜೆಪಿ ಪಾಳೆಯದಲ್ಲಿ ಬಣ ರಾಜಕೀಯ ಶುರುವಾಗಿದೆ. ಹೀಗಾಗಿ, ತುಮಕೂರು ಲೋಕಸಭಾ ಕ್ಷೇತ್ರ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಹಾಲಿ ಸಂಸದ ಜಿ.ಎಸ್ ಬಸವರಾಜು ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರಿಂದ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಬಿಜೆಪಿ ಟಿಕೆಟ್ ಪಡೆದೇ ತಿರುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಬಿಜೆಪಿ ಜಿಲ್ಲಾ ಖಜಾಂಚಿ, ಸಿದ್ಧಗಂಗಾ ಆಸ್ವತ್ರೆಯ ಡಾ. ಪರಮೇಶ್ ಅವರು ತಮಗೇ ಟಿಕೆಟ್‌ ಖಚಿತವೆಂದು ಹೇಳಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ನಡುವೆ ಹಾಲಿ ಸಂಸದ ಜಿ.ಎಸ್ ಬಸವರಾಜು ಮಾತ್ರ ಸೋಮಣ್ಣ ಅವರನ್ನು ತುಮಕೂರಿನಿಂದ ಕಣಕ್ಕಿಳಿಸಬೇಕು ಎನ್ನುತ್ತಿದ್ದಾರೆ. ಹಾಗಾಗಿ ಜಿಲ್ಲಾ ಬಿಜೆಪಿಯಲ್ಲಿ ಮೂರು ಬಣಗಳಾಗಿವೆ.

ಬಣ ರಾಜಕಾರಣಕ್ಕೆ ಬ್ರೇಕ್ ಹಾಕಲು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಶಂಕರ್ ಗೊಂದಲದ ಹೇಳಿಕೆ ಕೋಡುವಂತಿಲ್ಲ ಎಂದು ಪರ್ಮಾನು ಹೊರಡಿಸಿದ್ದಾರೆ. ಜೊತೆಗೆ, ತಾವೂ ಅಕಾಂಕ್ಷಿ ಎಂದು ಹೇಳಿದ್ದಾರೆ. ಇದರ ನಡುವೆ ಮಾಜಿ ಸಂಸದ ಮುದ್ದಹನುಮೇಗೌಡರ ಮೇಲೆ ಪ್ರೀತಿ ಹೊಂದಿರುವ ಬಿ ಸುರೇಶ್ ಗೌಡ, ಮುದ್ದಹನುಮೇಗೌಡರೇ ಬಿಜೆಪಿ ಅಭ್ಯರ್ಥಿಯಾಗಲಿ ಎನ್ನುತ್ತಿದ್ದಾರೆ. ಆದರೆ, ಅವರು ಕಾಂಗ್ರೆಸ್ ಸೇರಲು ವೇದಿಕೆ ಸಜ್ಜಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಾಜಿ ಸಚಿವ ಬಿ.ಸಿ.ನಾಗೇಶ್, ಎಸ್.ಡಿ. ದಿಲೀಪ್ ಕುಮಾರ್, ರಿಯಲ್ ಎಸ್ಟೆಟ್ ಉದ್ಯಮಿ ಚಿದಾನಂದ್, ವಿನಯ್ ಬಿದರೆ, ಹೆಚ್.ಎನ್ ಚಂದ್ರಶೇಖರ್. ಅಂಬಿಕಾ ಹುಲಿನಾಯ್ಕರ್, ದೊಡ್ಡಮನೆ ಗೌಪಾಲಗೌಡ ಕೂಟ ಟಿಕೆಟ್‌ ರೇಸ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.

ಸೋಮಣ್ಣಗೆ ವಿರೋಧ

ಬಿಜೆಪಿ ಟಿಕೆಟ್ ಬೇಡಿಕೆ ಮುಂದಿಟ್ಟಿರುವ ಸೋಮಣ್ಣ ಅವರಿಗೆ ಸ್ವಪಕ್ಷೀಯರು, ಸ್ವಜಾತಿಯವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಮಾಜಿ ಸಚಿವ ವಿ ಸೋಮಣ್ಣ ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ರಾಜಕೀಯ ಅಸ್ತ್ರಗಳನ್ನು ಪ್ರಯೋಗಿಸಿಸುತಿದ್ದಾರೆ. ಬಿಜೆಪಿ ಟಿಕೇಟ್ ಖಾತ್ರಿಗೆ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಹಾಲಿ ಸಂಸದ ಜಿ.ಎಸ್ ಬಸವರಾಜು ಸಾಥ್ ನೀಡಿದ್ದಾರೆ.

ತುಮಕೂರಿನಲ್ಲಿ ಬಿಜೆಪಿ ಟಿಕೆಟ್ ಬಯಸಿರುವ ಮಾಜಿ ಸಚಿವ ವಿ.ಸೋಮಣ್ಣ ದೆಹಲಿಯಲ್ಲಿ ನಿಂತು ರಾಜ್ಯಸಭೆ ಟಿಕೆಟ್‌ ಬೇಕೆಂಬ ಇಂಗಿತವನ್ನು ವ್ಯಕ್ತ ಪಡಿಸಿದ್ದರು. ರಾಜ್ಯಸಭೆ, ಇಲ್ಲವೇ ಲೋಕಸಭೆ ಎಂಬ ದಾಳ ಉರುಳಿಸಿದ್ದರು. ಅದರೆ, ರಾಜ್ಯಸಭೆಗೆ ಹೋಗಬೇಕೆಂಬ ಬಯಕೆ ಫಲಕಾರಿಯಾಗಿಲ್ಲ. ಇದೀಗ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ವಿ.ಸೋಮಣ್ಣ ಬಿಜೆಪಿ ಪಾಳೆಯುದಲ್ಲಿ ಸಂಚನ ಸೃಷ್ಟಿಸಿದ್ದಾರೆ. ಅದರೆ, ಸ್ಥಳೀಯ ಆಕಾಂಕ್ಷಿಗಳು ಬೆಂಕಿ ಉಗುಳುತಿದ್ದಾರೆ.

ಸೋಮಣ್ಣ ಹೊರಗಿನವರು ಎಂಬ ದಾಳ ಉರುಳಿಸಿ ಸೋಮಣ್ಣರನ್ನು ತುಮಕೂರಿಗೆ ಬಾರದಂತೆ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ರಿಯೆಲ್ ಎಸ್ಟೆಟ್ ಉದ್ಯಮಿ, ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಚಿದನಾಂದ್, ಭಹಿರಂಗವಾಗಿಯೇ ಸೋಮಣ್ಣ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಹಾಗೆ ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್, ಎಸ್.ಡಿ ದಿಲೀಪ್ ಕುಮಾರ್ , ಮಾಧುಸ್ವಾಮಿ ಕೂಡ ಸೋಮಣ್ಣಗೆ ವಿರುದ್ಧವಿದ್ದಾರೆ. ಹೊಲಸಿಗರಿಗೆ ಟಿಕೆಟ್ ನೀಡಬಾರದು ಎಂಬ ವಾದಕ್ಕೆ, ಸೋಮಣ್ಣ ಪಕ್ಷನಿಷ್ಠೆ, ತ್ಯಾಗವೆಂಬ ಪ್ರತಿವಾದ ಮುಂದಿಟ್ಟಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಹಿರಂಗವಾಗಿಯೇ ಸಂಸದ ಜಿ.ಎಸ್ ಬಸವರಾಜು ವಿರುದ್ದ ತೋಡೆ ತಟ್ಟಿ, ಬಸವರಾಜು ಒಳಒಪ್ಪಂದದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಎಸ್.ಡಿ ದಿಲೀಪ್ ಕುಮಾರ್ ಪಕ್ಷೇತರವಾಗಿ ಸ್ಪರ್ಧಿಸಿ ಶಕ್ತಿ ಪ್ರದರ್ಶಿಸಿದ್ದರು. ನಂತರ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಕುದಲೆಳೆ ಅಂತರಲ್ಲಿ ಸೋತಿದ್ದರು. ಈಗ, ಲೋಕಸಭಾ ಚುನಾವಣೆಗೂ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದಾರೆ. ಇಲ್ಲದಿದ್ದರೆ, ಮಾಧುಸ್ವಾಮಿಗೆ ಟಿಕೆಟ್ ಕೊಡಬೇಕು ಎಂದೂ ಹೇಳುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಕಚೇರಿಗಳಿಗೆ ಅನಗತ್ಯ ಅಲೆದಾಟಕ್ಕೆ ಬ್ರೇಕ್; ಇನ್ನು ಮುಂದೆ ಮನೆಯಿಂದಲೇ ರಿಜಿಸ್ಟ್ರೇಷನ್: ಸಚಿವ ಕೃಷ್ಣ ಬೈರೇಗೌಡ

ಬಸವರಾಜು ಅವರ ವಿರೋಧಿ ಬಣ ಶಾತಯಾಗತಾಯ ಬಸವರಾಜು ಬಣಕ್ಕೆ ಟಿಕೆಟ್ ಕೈ ತಪ್ಪಿಸಿ ಪಕ್ಷದೊಳಗೆ ಬಸವರಾಜು ಬಣವನ್ನು ಮಣಿಸಲು ಎಲ್ಲ ಸಿದ್ದತೆ ಮಾಡಿಕೊಂಡಿದೆ. ಇದು ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಹಿರಂಗವಾಗಿತ್ತು.

ತುಮಕೂರಿನಲ್ಲಿ ವಿಧಾನಸಭೆಯಲ್ಲಿ ಮಣಿದವರು, ಬಿಜೆಪಿಯ ಜಿಲ್ಲಾ ಹುದ್ದೆಗಳಿಲ್ಲಿರುವವರಲ್ಲಿ ಹಲವರು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸದ್ಯ, ಬಿಜೆಪಿ-ಜೆಡಿಎಸ್‌ ಮೈತ್ರಿ ಇರುವುದರಿಂದ ತುಮಕೂರು ಯಾವ ಪಕ್ಷದ ಪಾಲಿಗೆ ಹೋಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೂ, ಬಿಜೆಪಿಗೆ ಕ್ಷೇತ್ರ ಸಿಕ್ಕರೆ, ಮೈತ್ರಿ ಇರುವುದರಿಂದ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಹಲವಾರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆರೆ, ಅವರಿಗೆ ತುಮಕೂರು ಲೋಕಸಭೆ ಫಲಿತಾಂಶದ ಚರಿತ್ರೆ ಅರ್ಥವಾಗಿಲ್ಲ ಎನ್ನುವುದು ಅಷ್ಟೇ ಸತ್ಯ. ಮೈತ್ರಿಯಲ್ಲಿ ಗೆಲುವೇನು ಸುಭವಲ್ಲ. ಒಳ ಏಟಿನ ಆತಂಕ ತಪ್ಪಿದ್ದಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತಗಟ್ಟೆಯ ಮತದಾನದ ಅಂಕಿಅಂಶ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಲು ಸುಪ್ರೀಂ ನಕಾರ

ಪ್ರತಿ ಮತಗಟ್ಟೆಯ ಮತದಾನದ ಅಂಕಿಅಂಶಗಳನ್ನು ಒದಗಿಸುವ ಫಾರ್ಮ್‌ 17ಸಿ ಪ್ರತಿಗಳನ್ನು ತನ್ನ...

ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲು; ಸಿಎಂಗೆ ಅಭಿನಂದನೆ ಸಲ್ಲಿಸಿದ ಉಡಚಪ್ಪ ಮಾಳಗಿ

ರಾಜ್ಯದಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡುವ ಸಂಬಂಧ ಅಧಿಕೃತ ಆದೇಶ ಹೊರಡಿಸಲು...

ವಿಜಯಪುರ | ರೈತರ ಸಮಸ್ಯೆಗಳ ಪರಿಹಾರಕ್ಕೆ ರೈತಸಂಘ ಆಗ್ರಹ

ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು...

ಮೇ ಸಾಹಿತ್ಯ ಮೇಳ | ಹುಚ್ಚಮ್ಮ ಚೌಧರಿ ಕುಣಿಕೇರಿಗೆ ‘ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ’

ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ...