ಬೆಂಗಳೂರು | ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ; ಆದರೆ, ತಜ್ಞರ ಯೋಚನೆಯೇನು?

Date:

ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೇ, 2023ರಲ್ಲಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ ಎಂದು ವಿಶ್ವ ವಾಯು ಗುಣಮಟ್ಟ ವರದಿಯ ಅಂಕಿ ಅಂಶಗಳು ಬಹಿರಂಗಪಡಿಸಿವೆ.

2023ರಲ್ಲಿ ಬೆಂಗಳೂರಿನ ಸರಾಸರಿ ಪಿಎಮ್‌ 2.5 ಮೌಲ್ಯವು ಪ್ರತಿ ಕ್ಯಾಬಿಕ್ ಮೀಟರ್‌ಗೆ 28.6 ಮೈಕ್ರೋಗ್ರಾಂಗಳಷ್ಟಿತ್ತು. 2022ರಲ್ಲಿ ಪ್ರತಿ ಕ್ಯಾಬಿಕ್ ಮೀಟರ್‌ಗೆ 31.5 ಮೈಕ್ರೋಗ್ರಾಂಗಳಷ್ಟು ದಾಖಲಾಗಿದೆ. ಇದು 2018ರಿಂದ ನಗರವು ಕಂಡ ಅತ್ಯುತ್ತಮ ಗಾಳಿಯ ಗುಣಮಟ್ಟವಾಗಿದೆ.

ಜಗತ್ತಿನಾದ್ಯಂತ ಮೌಲ್ಯಮಾಪನ ಮಾಡಲಾದ 7,812 ನಗರಗಳ ಪೈಕಿ ಬೆಂಗಳೂರು 673ನೇ ಅತ್ಯಂತ ಕಲುಷಿತ ನಗರವಾಗಿದೆ. ದೆಹಲಿ, ಹೈದರಾಬಾದ್ ಹಾಗೂ ಕೋಲ್ಕತ್ತಾ ಸೇರಿದಂತೆ ದೇಶದ ಇತರ ಮೆಟ್ರೋಪಾಲಿಟನ್ ನಗರಗಳಿಗಿಂತ ಬೆಂಗಳೂರು ಕಡಿಮೆ ಮಾಲಿನ್ಯವನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಹವಾಮಾನ ಬದಲಾವಣೆಗಳು ಸುಧಾರಿತ ಗಾಳಿಯ ಗುಣಮಟ್ಟಕ್ಕೆ ಕಾರಣ. ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವಲ್ಲಿ ಇನ್ನೂ ಬಹಳ ಸಮಯ ಕಾಯಬೇಕಿದೆ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ನಗರದಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುತ್ತಿದೆ ಎಂದು ನಾವು ಭ್ರಮೆಯಲ್ಲಿರಬಾರದು. ಹವಾಮಾನದ ಅಂಶಗಳ ಕಾರಣದಿಂದಾಗಿ ಸುಧಾರಣೆ ದಾಖಲಾಗಿದೆ. ಎಲ್ ನಿನೊ ಪರಿಣಾಮವು ಕಣಗಳನ್ನು ಕರಾವಳಿಯ ಕಡೆಗೆ ಹರಡುತ್ತದೆ. ಇದು ಬೆಂಗಳೂರಿನ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು” ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ (ಎನ್‌ಐಎಎಸ್) ಚೇರ್ ಪ್ರೊಫೆಸರ್ ಗುಫ್ರಾನ್ ಬೇಗ್ ಹೇಳಿದ್ದಾರೆ.

“10 ಪಟ್ಟು ಹೆಚ್ಚು ಮಾಲಿನ್ಯಕಾರಕಗಳನ್ನು ಹೊರಸೂಸುವುದರಿಂದ ಡೀಸೆಲ್ ವಾಹನಗಳನ್ನು ಶೀಘ್ರದಲ್ಲೇ ಇತರ ಇಂಧನ ರೂಪಾಂತರಗಳಿಗೆ ಪರಿವರ್ತಿಸಬೇಕು” ಎಂದು ಪ್ರೊಫೆಸರ್ ಬೇಗ್ ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯ ಪ್ರೊಫೆಸರ್ ಟಿ ವಿ ರಾಮಚಂದ್ರ ಅವರು ಮಾತನಾಡಿ, “ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ವಾಹನಗಳು ಹೊರಸೂಸುವಿಕೆಯು ಮಾಲಿನ್ಯವೂ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಅದಕ್ಕೆ ಪೂರಕವಾಗಿ ನಗರದಲ್ಲಿ ಹಸಿರು ಹೊದಿಕೆ ಕಡಿಮೆಯಾಗುತ್ತಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾರ್ಚ್​ 28ರಂದು 7 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು; ಬಿಸಿಗಾಳಿಯ ಮುನ್ಸೂಚನೆ

“ರಸ್ತೆಯಲ್ಲಿ ವಾಹನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸುಮಾರು 70% ಬೆಂಗಳೂರಿನ ನಾಗರಿಕರು ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ಪರಿಸ್ಥಿತಿ ಹೀಗಿರುವಾಗ, ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆಯನ್ನು ನಾವು ನಿರೀಕ್ಷಿಸಲಾಗುವುದಿಲ್ಲ” ಎಂದು ಅವರು ಹೇಳಿದರು.

“ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಮತ್ತು ಅದನ್ನು ಹೆಚ್ಚು ಮಿತವ್ಯಯಗೊಳಿಸಲು ತಕ್ಷಣದ ಅಗತ್ಯವಿದೆ. ಉತ್ತಮ ಸಂಚಾರ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಅವರು ಹೇಳಿದರು.

“2023ರಲ್ಲಿ ಜನವರಿ, ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಗರದಲ್ಲಿ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು ದಾಖಲಿಸಿದೆ. ಏಕೆಂದರೆ, ಚಳಿಗಾಲದ ತಿಂಗಳುಗಳು ಸಾಮಾನ್ಯವಾಗಿ ಹೆಚ್ಚು ವಾಯು ಮಾಲಿನ್ಯವನ್ನು ಬಹಿರಂಗಪಡಿಸುತ್ತವೆ. ಏಕೆಂದರೆ, ಈ ಸಮಯದಲ್ಲಿ ಮೋಡಗಳು ಸ್ಪಷ್ಟವಾಗಿರುತ್ತವೆ ಮತ್ತು ಗಾಳಿಯಲ್ಲಿ ತೇವಾಂಶವಿರುವುದಿಲ್ಲ” ಎಂದರು.

ಮೂಲ: ಡೆಕ್ಕನ್ ಹೆರಾಲ್ಡ್‌

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ನಟ ದ್ವಾರಕೀಶ್ ನಿಧನಕ್ಕೆ ಶಿವರಾಜ್‌ಕುಮಾರ್ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ ನಿಧನರಾದರು....

ದಾವಣಗೆರೆ | ಲೋಕಸಭಾ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐ ಬೆಂಬಲ ಘೋಷಣೆ

ದೇಶಾದ್ಯಂತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷವು ಇಂಡಿಯಾ ಒಕ್ಕೂಟದ...

ವಿಜಯೇಂದ್ರ, ಸಿಟಿ ರವಿ, ಪಿ.ರಾಜೀವ್‌ನಿಂದ ಬಿಜೆಪಿ ಹಾಳಾಗುತ್ತಿದೆ: ಮಾಲೀಕಯ್ಯ ಗುತ್ತೇದಾರ ಕಿಡಿ

ಸಹೋದರ ನಿತಿನ್ ಗುತ್ತೇದಾರ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಚಿವ...