ಬೆಂಗಳೂರು | ಆಸ್ತಿಯಲ್ಲಿ ಪಾಲು ಕೇಳಿದ ಮಗನ ಮೇಲೆ ಆ್ಯಸಿಡ್ ಎರಚಿದ ತಂದೆ

Date:

ಆಸ್ತಿಯಲ್ಲಿ ಪಾಲು ನೀಡುವಂತೆ ಕೇಳಿದ ಮಗನ ಮೇಲೆ ತಂದೆಯೊಬ್ಬ (ನಿವೃತ್ತ ಪೊಲೀಸ್ ಅಧಿಕಾರಿ) ಆ್ಯಸಿಡ್ ಎರಚಿದ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಲ್ಲಸಂದ್ರದಲ್ಲಿ ನಡೆದಿದೆ.

ಆರೋಪಿ ತಂದೆ ನಿವೃತ್ತ ಪಿಎಸ್‌ಐ ರಾಮಕೃಷ್ಣಯ್ಯ, ಅವರ ಹಿರಿಯ ಮಗ ಉಪೇಂದ್ರ ಹಾಗೂ ಪುತ್ರಿ ಕಲಾವತಿ ಬಂಧಿತರು. ಸಂತ್ರಸ್ತ ಕಿರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ತಿಯಲ್ಲಿ ಪಾಲು ನೀಡುವಂತೆ ತಂದೆ ರಾಮಕೃಷ್ಣಯ್ಯ ಬಳಿ ಆಗಾಗ ಕಿರಣ್ ಕೇಳುತ್ತಿದ್ದರು. ಆ ಆಸ್ತಿ ಮತ್ತು ಮನೆಯನ್ನು ಸ್ವಯಾರ್ಜಿತವಾಗಿ ಸಂಪಾದಿಸಿದ್ದೇನೆ. ನಿನಗೆ ನೀಡುವುದಿಲ್ಲ ಎಂದು ರಾಮಕೃಷ್ಣಯ್ಯ ಹೇಳಿದ್ದರು. ಈ ವಿಚಾರವಾಗಿ ತಂದೆ-ಮಗನ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ, ನಿವೃತ್ತ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆದ ರಾಮಕೃಷ್ಣಯ್ಯ ಅವರ ಹಿರಿಯ ಮಗ ಉಪೇಂದ್ರಕುಮಾರ್‌ ಹಾಗೂ ಮಗಳು ಕಲಾವತಿ ಜತೆ ಬೆಂಗಳೂರಿನ ಮಲ್ಲಸಂದ್ರದ ಮನೆಯಲ್ಲಿ ವಾಸವಾಗಿದ್ದಾರೆ. ವಿವಾಹಿತರಾದ ಕಿರಣ್‌ ಪತ್ನಿಯೊಂದಿಗೆ ಶೆಟ್ಟಿಹಳ್ಳಿಯಲ್ಲಿ ವಾಸವಾಗಿದ್ದಾರೆ.

ಮಾ.22ರಂದು ರಾತ್ರಿ ಕಿರಣ್‌ ತನ್ನ ತಂದೆಯ ಮನೆ ಬಳಿ ಹೋಗಿ ಆಸ್ತಿ ಮತ್ತು ಮನೆಯಲ್ಲಿ ಪಾಲು ಕೊಡುವಂತೆ ಕೇಳಿದ್ದರು. ಇದರಿಂದ ಕೆರಳಿದ ರಾಮಕೃಷ್ಣಯ್ಯ, ಕಿರಣ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಟಿ ದಾಸರಹಳ್ಳಿಯಲ್ಲಿದೆ ಎನ್ನಲಾದ ಆಸ್ತಿಯಲ್ಲಿ ರಾಮಕೃಷ್ಣಯ್ಯ ಮತ್ತು ಕಿರಣ್ ಪಾಲು ಕೇಳಿದ್ದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದದ ವೇಳೆ, ನಿವೃತ್ತ ಪಿಎಸ್‌ಐ ರಾಮಕೃಷ್ಣಯ್ಯ ಉಪೇಂದ್ರ ಹಾಗೂ ಕಲಾವತಿ ಅವರು ಕಿರಣ್‌ ಮೇಲೆ ಆಸಿಡ್‌ ಎರಚಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಉಪೇಂದ್ರಕುಮಾರ್‌ ಮತ್ತು ಕಲಾವತಿ ಸಹ ತಂದೆಯ ಜತೆ ಸೇರಿ ಕಿರಣ್‌ಗೆ ಹಿಗ್ಗಾಮುಗ್ಗಾ ಥಳಿಸಿ, ಬೆದರಿಕೆ ಹಾಕಿದ್ದಾರೆ. ಕಿರಣ್‌ನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಸಿಡ್ ಎರಚಿದ ಕಾರಣ ಕಿರಣ್ ಅವರ ಒಂದು ಕಣ್ಣಿನಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ದೇಹದ ಮೇಲೆ ತೀವ್ರ ಸುಟ್ಟಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೆಟ್ರೋ ಕಾಮಗಾರಿ | ಏಪ್ರಿಲ್ 1ರಿಂದ ‘ಒಂದು ವರ್ಷ’ ಈ ರಸ್ತೆಯಲ್ಲಿ ಸಂಚಾರ ಬಂದ್

ಯಾವ ರಾಸಾಯನಿಕವನ್ನು ಬಳಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸುತ್ತಿದ್ದೇವೆ. ಸಂತ್ರಸ್ತನ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಲ್ಲೆ, ಆಸಿಡ್‌ ದಾಳಿ, ನಿಂದನೆ, ಅಪರಾಧ ಸಂಚು ಆರೋಪದಡಿ ರಾಮಕೃಷ್ಣಯ್ಯ, ಉಪೇಂದ್ರಕುಮಾರ್‌ ಮತ್ತು ಕಲಾವತಿ ವಿರುದ್ಧ ದೂರು ದಾಖಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ರೈತರ ಕಬ್ಬಿನ ಬಿಲ್‌ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳು : ರೈತ ಸಂಘ ಪ್ರತಿಭಟನೆ

ಕಬ್ಬು ಪೂರೈಸಿದ ರೈತರಿಗೆ ಆರೇಳು ತಿಂಗಳಾದರೂ ಕಬ್ಬಿನ ಬಿಲ್‌ ಪಾವತಿಸದ ಸಕ್ಕರೆ...

ಮಂಡ್ಯ | ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ ‘ ಸೇರಿದ ಅಣ್ಣೂರು ಗ್ರಾಮ ಪಂಚಾಯಿತಿ

ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಅಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ...

ಗುಬ್ಬಿ | ಜೂನ್ 16 ರಂದು ಕಸಾಪ ಆಜೀವ ಸದಸ್ಯರ ಸಭೆ : ತಾಲ್ಲೂಕು ಅಧ್ಯಕ್ಷ ಎಚ್.ಸಿ.ಯತೀಶ್.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಆಜೀವ ಸದಸ್ಯರ ಸಭೆಯನ್ನು ಇದೇ...

ರಾಯಚೂರು | ಹಣ ದುರ್ಬಳಕೆ ಪಿಡಿಒ ಅಮಾನತು

ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಲಿಂಗಸೂಗೂರು ತಾಲ್ಲೂಕು ಕೋಠಾ ಗ್ರಾಮ...

Download Eedina App Android / iOS

X