ಬಾಲಿವುಡ್‌ನ ಸ್ಫುರದ್ರೂಪಿ ನಟ ಧರ್ಮೇಂದ್ರ… ಇನ್ನು ನೆನಪು ಮಾತ್ರ

Date:

89ರ ಹರೆಯದಲ್ಲೂ ತಮ್ಮ ಎಂದಿನ ತಮಾಷೆ, ಉಡಾಫೆ, ಲವಲವಿಕೆಯ ಮಾತು ಮತ್ತು ವರ್ತನೆಗಳಿಂದ ಹರೆಯದ ಹುಡುಗನಂತಿದ್ದ ಧರ್ಮೇಂದ್ರ, ಒಂದು ತಲೆಮಾರನ್ನು ಪ್ರಭಾವಿಸಿದ ನಟ. ಹಿಂದಿ ಚಿತ್ರೋದ್ಯಮದಲ್ಲಿ ಸುಮಾರು ಆರು ದಶಕಗಳ ಕಾಲ ನಟಿಸಿ, ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದೆ ಉಳಿದ ಹಿ-ಮ್ಯಾನ್.

ಭಾರತೀಯ ಚಿತ್ರರಂಗದ ಮೊದಲ ಆಕ್ಷನ್ ಹೀರೋ, ಬಾಲಿವುಡ್‌ನ ಹಿ-ಮ್ಯಾನ್ ಎಂದು ಪ್ರಸಿದ್ಧರಾದ ಧರ್ಮೇಂದ್ರ, ಡಿಸೆಂಬರ್ 8ಕ್ಕೆ 90ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿತ್ತು. ಆ ಸಂಭ್ರಮಕ್ಕೆ ಕೇವಲ ಒಂದು ವಾರ ಮಾತ್ರ ಬಾಕಿ ಇತ್ತು. ಅಷ್ಟರಲ್ಲಿಯೇ ಜವರಾಯ ಬಂದು ಕರೆದುಕೊಂಡು ಹೋಗಿಯೇಬಿಟ್ಟ.

- Advertisement -

ಕಳೆದ ವಾರವಷ್ಟೇ ಅನಾರೋಗ್ಯದ ಕಾರಣಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಧರ್ಮೇಂದ್ರರಿಗೆ ಆಶ್ರುತರ್ಪಣ ಬಿಟ್ಟ ಸುದ್ದಿ ಮಾಧ್ಯಮಗಳು ನಿಧನರಾದರೆಂದು ಬಿತ್ತರಿಸಿದ್ದವು. ಅಭಿಮಾನಿಗಳ ಆಕ್ರೋಶಕ್ಕೂ ಗುರಿಯಾಗಿದ್ದವು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ನಂತರ ಮನೆಗೆ ತೆರಳಿ, ಕೇಕ್ ಕಟ್ ಮಾಡಿ, ಅಭಿಮಾನಿಗಳತ್ತ ಕೈ ಬೀಸುತ್ತಿರುವ ದೃಶ್ಯಗಳು ಅದೇ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಇನ್ನಷ್ಟು ಕಾಲ ಇರಲಿ ಎಂದು ಆಶಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಆದರೆ, ಇಂದು ಅಧಿಕೃತವಾಗಿ ಧರ್ಮೇಂದ್ರ ಅವರು ನಿಧನರಾಗಿರುವ ಸುದ್ದಿಯನ್ನು ಅವರ ಕುಟುಂಬ ಬಿತ್ತರಿಸಿದೆ. ನಿಧನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಹಿಂದಿ ಚಿತ್ರರಂಗದ ದಿಗ್ಗಜರು ಧರ್ಮೇಂದ್ರರ ನಿವಾಸದತ್ತ, ಸ್ಮಶಾನದತ್ತ ತೆರಳುತ್ತಿರುವ ದೃಶ್ಯಗಳು ಗೋಚರಿಸುತ್ತಿವೆ. ಧರ್ಮೇಂದ್ರ ನಟನೆಯ ಚಿತ್ರಗಳು, ಪಾತ್ರಗಳ ಕುರಿತ ಮಾತು-ಹಾಡು-ನೆನಪು ಅಭಿಮಾನಿಗಳನ್ನು ಆವರಿಸಿದೆ. ಅವರನ್ನು ದುಃಖದ ಮಡುವಿಗೆ ನೂಕಿದೆ.

ಇದನ್ನು ಓದಿದ್ದೀರಾ?: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನ

Dharmendra1

1960ರಲ್ಲಿ ಹಿಂದಿ ಚಿತ್ರರಂಗಕ್ಕೆ ಅಡಿ ಇಟ್ಟ ಸ್ಫುರದ್ರೂಪಿ ಯುವಕ ಧರ್ಮೇಂದ್ರ, ದಿಲ್ ಭೀ ತೇರ ಹಮ್ ಬೀ ತೆರೆ ಚಿತ್ರದಿಂದ ಬಣ್ಣ ಹಚ್ಚಿದರು. ಧರ್ಮೇಂದ್ರ ಅವರ ವಿಶೇಷವೆಂದರೆ, 60ರ ದಶಕದಲ್ಲಿ ಬಂದ ಅವರ ಅನ್ಪಡ್, ಬಂದಿನಿ, ಅನುಪಮಾ, ಆಯಾ ಸಾವನ್ ಜೂಮ್ ಕೆ ಚಿತ್ರಗಳಲ್ಲಿನ ಪಾತ್ರಗಳು. ಆ ಪಾತ್ರಗಳೆಲ್ಲವೂ ಶ್ರೀಸಾಮಾನ್ಯನ ಪಾತ್ರಗಳೇ ಆಗಿದ್ದವು. ಅವರ ಹೃದಯವನ್ನು ಸಲೀಸಾಗಿ ಸೂರೆ ಹೊಡೆದಿದ್ದರು. ಆನಂತರ ನಟನೆಯಲ್ಲಿ ಪಳಗಿದ ಪೈಲ್ವಾನನಾದ ಧರ್ಮೇಂದ್ರ- ಶೋಲೆ, ಧರಮ್ ವೀರ್, ಚುಪ್ಕೆ ಚುಪ್ಕೆ, ಮೇರ ಗಾಂವ್ ಮೇರಾ ದೇಶ್, ಡ್ರೀಮ್ ಗರ್ಲ್ ಚಿತ್ರಗಳಲ್ಲಿ ಜನಪ್ರಿಯ ನಾಯಕನಟನಾಗಿ ಹೊರಹೊಮ್ಮಿದರು.

ಹೆಂಗಳೆಯರ ಕನಸಿನ ಡಾರ್ಲಿಂಗ್ ಆದ ಧರ್ಮೇಂದ್ರ, ಆ ಕಾಲದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಮೀನಾಕುಮಾರಿಯ ಹಾಟ್ ಫೇವರಿಟ್ ಆಗಿದ್ದರು. ಆದರೆ, ಧರ್ಮೇಂದ್ರ ಅವರನ್ನು ವರಿಸಲಿಲ್ಲ. ಆ ನಂತರ ಆಕೆ ಆಲ್ಕೋಹಾಲಿಕ್ ಅಡಿಕ್ಟ್ ಆಗಿ, ಆ ಅಪವಾಧ ಧರ್ಮೇಂದ್ರರ ಮೇಲೆ ಬರುವಂತಾಗಿತ್ತು. ಆ ನಂತರ ಡ್ರೀಮ್ ಗರ್ಲ್ ಎಂದೇ ಖ್ಯಾತಳಾದ ಹೇಮಾ ಮಾಲಿನಿಯನ್ನು ಬಹುವಾಗಿ ಇಷ್ಟಪಟ್ಟು, ಮದುವೆಯಾದರು.

ಇಂತಹ ಧರ್ಮೇಂದ್ರ ಇಳಿಗಾಲದಲ್ಲಿಯೂ ಕ್ಯಾಮರಾ ಮುಂದೆ ನಿಲ್ಲುವುದನ್ನು ನಿಲ್ಲಿಸಲಿಲ್ಲ. ಇತ್ತೀಚಿನ ನಟ-ನಟಿಯರಾದ ಶಾಹಿದ್ ಕಪೂರ್ ಮತ್ತು ಕೀರ್ತಿ ಸಸೂನ್ ನಟಿಸಿರುವ ತೇರಿ ಬಾತೋ ಮೇ ಐಸಿ ಉಲ್ಜಾ ಜಿಯಾ ಚಿತ್ರದಲ್ಲಿ ನಟಿಸಿದ್ದರು. ಹಾಗೆಯೇ ತಮ್ಮ ಪರಮಾಪ್ತ ಗೆಳೆಯ ಅಮಿತಾಭ್ ಬಚ್ಚನ್ ಜೊತೆ ಇಕ್ಕಿಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಗಳು ಇದೇ ಡಿಸೆಂಬರ್ 25ರಂದು ಬಿಡುಗಡೆಗೆ ಸಿದ್ಧವಾಗಿದ್ದವು. ಅಷ್ಟರಲ್ಲಿಯೇ ಧರ್ಮೇಂದ್ರ ಕೊನೆಯುಸಿರೆಳೆದಿದ್ದಾರೆ.

89ರ ಹರೆಯದಲ್ಲೂ ತಮ್ಮ ಎಂದಿನ ತಮಾಷೆ, ಉಡಾಫೆ, ಲವಲವಿಕೆಯ ಮಾತು ಮತ್ತು ವರ್ತನೆಗಳಿಂದ ಹರೆಯದ ಹುಡುಗನಂತಿದ್ದ ಧರ್ಮೇಂದ್ರ, ಒಂದು ತಲೆಮಾರನ್ನು ಪ್ರಭಾವಿಸಿದ ನಟ. ಹಿಂದಿ ಚಿತ್ರೋದ್ಯಮದಲ್ಲಿ ಸುಮಾರು ಆರು ದಶಕಗಳ ಕಾಲ ನಟಿಸಿ, ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದೆ ಉಳಿದ ಹಿ-ಮ್ಯಾನ್.

ಬಾಲಿವುಡ್‌ ಸಿನಿ ಜಗತ್ತಿನಲ್ಲಿ ಧರಂಜಿ ಎಂದು ಕರೆಯಲ್ಪಡುತ್ತಿದ್ದ ಧರ್ಮೇಂದ್ರ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವು ಹೆಚ್ಚಿನವು ನಾಯಕ ನಟನಾಗಿ, ಪ್ರಮುಖ ಮತ್ತು ಪೋಷಕ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಧರ್ಮೇಂದ್ರ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸದಿದ್ದರೂ, ಕರ್ನಾಟಕಕ್ಕೆ ಚಿರಪರಿಚಿತರಾಗಿದ್ದಾರೆ. ‘ಶೋಲೆ’ ಚಿತ್ರದ ಚಿತ್ರೀಕರಣಕ್ಕಾಗಿ ಕಲ್ಲುಬಂಡೆಗಳ ಊರು ರಾಮನಗರಕ್ಕೆ ಬಂದಿದ್ದರು. 1975ರಲ್ಲಿ ಬಿಡುಗಡೆಯಾದ ಶೋಲೆ ಸಿನಿಮಾವನ್ನು ರಾಮನಗರದ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಚಿತ್ರೀಕರಿಸಲಾಗಿತ್ತು. ಕೆಲವಾರು ತಿಂಗಳುಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಿದ್ದ ಧರ್ಮೇಂದ್ರರಿಗೆ ಕರ್ನಾಟಕವೆಂದಾಕ್ಷಣ ನೆನಪಾಗುತ್ತಿದ್ದುದು ರಾಮನಗರದ ಆ ಬೆಟ್ಟ-ಗುಡ್ಡಗಳೇ. ಸೂಪರ್ ಹಿಟ್ ಶೋಲೆ ಚಿತ್ರ ಅವರ ಚಿತ್ರಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸಿತು. ಹಾಗೆಯೇ ‘ಶೋಲೆ ಬೆಟ್ಟ’ ಎಂದೇ ಖ್ಯಾತವಾಗಿರುವ ರಾಮದೇವರ ಬೆಟ್ಟ, ಧರ್ಮೇಂದ್ರರ ನೆನಪನ್ನು ಚಿರಸ್ಥಾಯಿಯಾಗಿಸಿದೆ.

ಸಿನಿಮಾ ನಟನೆಯ ಜೊತೆಗೆ ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದ, ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದ ಧರ್ಮೇಂದ್ರ, ರಾಜಸ್ಥಾನದ ಬಿಕನೀರ್ ಲೋಕಸಭಾ ಕ್ಷೇತ್ರದಲ್ಲಿ 2004ರಲ್ಲಿ ಗೆದ್ದು ಲೋಕಸಭಾ ಸದಸ್ಯರೂ ಆಗಿದ್ದರು. ಇದಾದ ನಂತರ, ಪತ್ನಿ ಹೇಮಾ ಮಾಲಿನಿ ಅವರು ಚುನಾವಣೆಗೆ ಸ್ಪರ್ಧಿಸಿದಾಗ, ಮೂರು ಬಾರಿ ಗೆಲ್ಲಿಸಿಕೊಂಡು ಬರಲು ಪ್ರಮುಖ ಪಾತ್ರ ವಹಿಸಿದ್ದರು.

ಧರ್ಮೇಂದ್ರರಿಗೆ ಇಬ್ಬರು ಹೆಂಡತಿಯರು- ಪ್ರಕಾಶ್ ಕೌರ್ ಮತ್ತು ಹೇಮಾ ಮಾಲಿನಿ. 6 ಮಕ್ಕಳು ಮತ್ತು 13 ಮೊಮ್ಮಕ್ಕಳು. ಕುಟುಂಬದೊಂದಿಗೆ ಸಂತೋಷದಿಂದಿದ್ದ ಧರ್ಮೇಂದ್ರರಿಗೆ ಕೃಷಿ ಎಂದರೆ ಎಲ್ಲಿಲ್ಲದ ಆಸ್ಥೆ. ಯಾವಾಗಲೂ ತಮ್ಮ ಫಾರ್ಮ್ ಹೌಸ್‌ನಲ್ಲಿ ಟ್ರಾಕ್ಟರ್ ಓಡಿಸುತ್ತ, ಕಳೆ ಕೀಳುತ್ತ ನಗುನಗುತ್ತ ಓಡಾಡಿಕೊಂಡಿದ್ದವರು. ಈಗ ತಮ್ಮ ಪ್ರಿಯವಾದ ತೋಟವನ್ನೂ ತೊರೆದು ಹೋಗಿದ್ದಾರೆ.

GuGMC CWoAANERt 1750668649005 1750668661951

ಧರ್ಮೇಂದ್ರ ವೃತ್ತಿಜೀವನದಲ್ಲಿ ಅತ್ಯಂತ ಪ್ರಸಿದ್ಧವಾದ ಮತ್ತು ಮರೆಯಲಾಗದ ಕೆಲವು ಚಿತ್ರಗಳು:

ಶೋಲೆ(1975) ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ಸಂಜೀವ್ ಕುಮಾರ್- ಭಾರತೀಯ ಸಿನಿಮಾದ ಕಲ್ಟ್ ಕ್ಲಾಸಿಕ್. ‘ವೀರು’ ಪಾತ್ರದಲ್ಲಿ ಅವರ ಧರ್ಮೇಂದ್ರ ಮತ್ತು ‘ಜಯ್’ ಪಾತ್ರದಲ್ಲಿ ಅಮಿತಾಭ್ ಜೋಡಿ ಪ್ರಸಿದ್ಧಿ ಪಡೆದಿತ್ತು.

ಸೀತಾ ಔರ್ ಗೀತಾ(1972) ಹೇಮಾ ಮಾಲಿನಿ, ಸಂಜೀವ್ ಕುಮಾರ್- ಹಾಸ್ಯ ಮತ್ತು ರೊಮ್ಯಾನ್ಸ್ ಮಿಶ್ರಿತ ಸೂಪರ್ ಹಿಟ್ ಚಿತ್ರ.

ಫೂಲ್ ಔರ್ ಪತ್ಥರ್(1966) ಮೀನಾ ಕುಮಾರಿ- ಧರ್ಮೇಂದ್ರ ಅವರ ವೃತ್ತಿಜೀವನದ ಮೊದಲ ಆಕ್ಷನ್ ಹಿಟ್ ಮತ್ತು ‘ಆಕ್ಷನ್ ಹೀರೋ’ ಇಮೇಜ್ ನೀಡಿದ ಚಿತ್ರ.

ಯಾಧೋಂ ಕಿ ಬಾರಾತ್(1973) ವಿಜಯ್ ಅರೋರಾ, ಜೀತೇಂದ್ರ- ಬ್ಲಾಕ್‌ಬಸ್ಟರ್ ಮ್ಯೂಸಿಕಲ್ ಥ್ರಿಲ್ಲರ್.

ಚುಪ್ಕೆ ಚುಪ್ಕೆ(1975) ಅಮಿತಾಭ್ ಬಚ್ಚನ್, ಶರ್ಮಿಳಾ ಟ್ಯಾಗೋರ್- ಹಿಂದಿ ಸಿನಿಮಾದ ಅತ್ಯುತ್ತಮ ಹಾಸ್ಯ ಚಲನಚಿತ್ರಗಳಲ್ಲಿ ಒಂದು.

ಧರಮ್ ವೀರ್(1977) ಜೀತೇಂದ್ರ, ಝೀನತ್ ಅಮನ್- ಜನಪ್ರಿಯ ಫ್ಯಾಂಟಸಿ-ಆಕ್ಷನ್ ಚಿತ್ರ.

ಆಂಖೇಂ(1968) ಮಾಲಾ ಸಿನ್ಹಾ- ಸೂಪರ್ ಹಿಟ್ ಸ್ಪೈ ಥ್ರಿಲ್ಲರ್.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ ಹೊಸ ತಂತ್ರಜ್ಞಾನ?

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...