ಕೊಲೆಯ ಹಿಂದಿದೆಯೇ ನಟ ದರ್ಶನ್ ಕೈವಾಡ? ಏನಿದು ಪ್ರಕರಣ?

Date:

ಜೂನ್ 11ರಂದು ಬೆಳಿಗ್ಗೆಯೇ ನಟ ದರ್ಶನ್ ಅಭಿಮಾನಿಗಳಿಗೆ ಆಘಾತ ಉಂಟಾಗುವ ಪ್ರಸಂಗವೊಂದು ನಡೆದಿದೆ. ರೇಣುಕಾಸ್ವಾಮಿ ಎಂಬುವವರ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ಅವರನ್ನು ಬೆಂಗಳೂರಿನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ, ದರ್ಶನ್ ಅವರ ಆಪ್ತೆ ಎನ್ನಲಾಗಿರುವ ಪವಿತ್ರಾ ಗೌಡ ಅವರನ್ನು ಕೂಡ ಆರ್‌.ಆರ್‌.ನಗರ ಪೊಲೀಸರು ಬಂಧಿಸಿದ್ದಾರೆ.

- Advertisement -

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು, ಉದ್ಯಮಿ ವಿನಯ್, ದರ್ಶನ್ ಬಾಡಿಗಾರ್ಡ್ಸ್‌ ಸೇರಿದಂತೆ ಹಲವರಿದ್ದಾರೆ. ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಪೊಲೀಸರು ಪವಿತ್ರಾಗೌಡ ಅವರನ್ನು ಅನ್ನಪೂರ್ಣೇಶ್ವರಿ ಠಾಣೆಗೆ ಕರೆ ತಂದಿದ್ದಾರೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ನಾಲ್ವರ ವಿಚಾರಣೆ ನಡೆಯುತ್ತಿದೆ. ಇನ್ನುಳಿದ ಆರೋಪಿಗಳನ್ನು ಪೊಲೀಸರು ಕಾಮಾಕ್ಷಿಪಾಳ್ಯ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಠಾಣೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕಾಮಾಕ್ಷಿಪಾಳ್ಯದ ರಾಜಕಾಲುವೆಯಲ್ಲಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿದ್ದ ಸ್ಥಳದಲ್ಲೇ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ರಾಜಕಾಲುವೆ ಬಳಿ ಬರುತ್ತಿರುವುದರಿಂದ ಕಾಮಾಕ್ಷಿಪಾಳ್ಯದ ರಿಂಗ್ ರೋಡ್‌ನಲ್ಲಿ ಟ್ರಾಫಿಕ್‌ಜಾಮ್ ಉಂಟಾಗಿದೆ. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಏನಿದು ಪ್ರಕರಣ?

ಜೂನ್ 9ರಂದು ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್‌ನ ಪಕ್ಕದಲ್ಲಿರುವ ರಾಜಕಾಲುವೆ ಬಳಿ ಮೃತದೇಹವೊಂದು ಪತ್ತೆಯಾಗಿತ್ತು. ಅಲ್ಲಿಯೇ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ಗೆ ಈ ಮೃತದೇಹ ಕಾಣಿಸಿತ್ತು. ಅಲ್ಲದೇ, ಮೃತದೇಹವನ್ನು ನಾಯಿಗಳು ಎಳೆದಾಡಿದ್ದವು. ಶವದ ಒಂದು ಭಾಗ ಮೋರಿಯ ಪಕ್ಕದಲ್ಲಿದ್ದರೇ, ಮತ್ತೊಂದು ಭಾಗ ಮೋರಿಯಲ್ಲಿ ಬಿದ್ದಿತ್ತು. ಇದನ್ನು ಕಂಡ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶವವನ್ನು ಮೊದಲ ಬಾರಿ ನೋಡಿದ್ದ ಅನುಗ್ರಹ ಅಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ರಾಮ್ ದೋರ್​​ ಜೀ ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪಾರ್ಟ್ಮೆಂಟ್ ಮುಂಭಾಗ ಗಸ್ತು ಮಾಡುತ್ತಿದ್ದಾಗ ಮೃತದೇಹ ಪತ್ತೆಯಾಗಿತ್ತು. 35 ವರ್ಷ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಅಲ್ಲದೇ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕೊಲೆ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸೆಕ್ಯೂರಿಟಿ ಗಾರ್ಡ್ ಆಗ್ರಹಿಸಿದ್ದರು.

ಅಲ್ಲದೇ, ಡೆಲಿವೆರಿ ಬಾಯ್ ಮನು ಎಂಬಾತನೂ ಕೂಡ ಮೃತದೇಹವನ್ನು ಮೊದಲು ಕಂಡಿದ್ದಾಗಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. “ಮೊದಲಿಗೆ ನಾನು ಕಂಡಾಗ ಯಾರೋ ಕುಡಿದು ಬಿದ್ದಿರಬಹುದು ಎಂದುಕೊಂಡಿದ್ದೇ, ಆ ನಂತರ ಮೃತದೇಹವನ್ನು ನಾಯಿಗಳನ್ನು ಕಚ್ಚಿ ತಿನ್ನುತ್ತಿದ್ದವು. ಬಳಿಕ, ನಾನು ನಾಯಿಗಳನ್ನು ಓಡಿಸಿದೆ. ನಾಯಿಗಳು ಕಿವಿಯನ್ನು ಕಚ್ಚಿ ತಿಂದಿದ್ದವು. ಬಳಿಕ, ಈ ವಿಚಾರ ಕೇಳಿ ತುಂಬಾ ಶಾಕ್ ಆಯಿತು” ಎಂದಿದ್ದಾರೆ.

ಮೊದಲಿಗೆ ಅಪರಿಚಿತ ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದ ಹಿನ್ನೆಲೆ, ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಘಟನೆ ಸಂಬಂದ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಜೂನ್ 8ರಂದು ರೇಣುಕಾಸ್ವಾಮಿಯ ಕೊಲೆಯಾಗಿದೆ ಎಂದು ಹೇಳಲಾಗಿದೆ. ಜೂನ್ 9ರಂದು ಕಾಮಾಕ್ಷಿಪಾಳ್ಯದ ಮೋರಿಯಲ್ಲಿ ಒಂದು ಶವ ಸಿಕ್ಕಿದೆ. ಆ ದೇಹ ಯಾರದ್ದು ಎಂದು ತನಿಖೆ ಮಾಡಿದಾಗ ಚಿತ್ರದುರ್ಗದ ರೇಣುಕಾಸ್ವಾಮಿ ಎಂದು ಗೊತ್ತಾಗಿದೆ. ಬೆಂಗಳೂರಿನ ಗಿರಿನಗರ ಮೂಲದ ಮೂವರು ಏಕಾಏಕಿ ಪೊಲೀಸ್ ಠಾಣೆಗೆ ಬಂದು ನಾವೇ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿ, ಕೊಲೆ ಮಾಡಿದ್ದೇವೆಂದು ಹೇಳಿಕೊಂಡಿದ್ದರು. ಆದರೆ, ಪೊಲೀಸರು ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಳಿಕ, ಘಟನೆ ಹಿಂದಿನ ಕಾರಣ ಗೊತ್ತಾಗಿದೆ ಎಂದು ಹೇಳಲಾಗಿದೆ.

ಯಾರು ಈ ರೇಣುಕಾಸ್ವಾಮಿ?

ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿ. ಈತ ಅಪೊಲೋ ಮೆಡಿಕಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಈತ ಬೆಸ್ಕಾಂ ನಿವೃತ್ತ ನೌಕರನ ಮಗ. ಕೊಲೆಯಾದ ವ್ಯಕ್ತಿ ನಟ ದರ್ಶನ್ ಅಭಿಮಾನಿ ಕೂಡ.

ಶನಿವಾರ ಮನೆಯಿಂದ ಹೊರಟವರು ಮತ್ತೆ ಮನೆಗೆ ವಾಪಸ್ ಆಗಿರಲಿಲ್ಲ. ರೇಣುಕಾಸ್ವಾಮಿ ಶವವಾಗಿ ಪತ್ತೆಯಾಗಿರುವ ಮಾಹಿತಿಯನ್ನು ಬೆಂಗಳೂರು ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ವ್ಯಕ್ತಿಯ ಮುಖ, ತಲೆ ಹಾಗೂ ಕಿವಿಗೆ ರಕ್ತದ ಗಾಯ ಆಗಿರುವುದು ಕಂಡುಬಂದಿತ್ತು.

ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ ಇತರ ತಾಂತ್ರಿಕ ಆಧಾರದ ಮೇಲೆ ಕೆಲವರನ್ನು ಬಂಧಿಸಿದ್ದಾರೆ. ಅವರ ವಿಚಾರಣೆ ಬಳಿಕ ಇದು ಚಿತ್ರದುರ್ಗದ ರೇಣುಕಾಸ್ವಾಮಿ ಎಂದು ತಿಳಿದು ಬಂದಿದೆ. ಅಲ್ಲದೇ, ಆರೋಪಿಗಳು ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ. ಇದರ ಹಿಂದೆ ಚಿತ್ರ ನಟ ದರ್ಶನ್ ಇರುವುದು ತಿಳಿದು ಬಂದಿದೆ. ಈ ಹಿನ್ನೆಲೆ, ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜೂನ್ 11ರಂದು ಬೆಳಿಗ್ಗೆ 8.30ಕ್ಕೆ ಬೆಂಗಳೂರು ವಿಜಯನಗರ ಎಸಿಪಿ ಚಂದನ್ ನೇತೃತ್ವದಲ್ಲಿ ನಟ ದರ್ಶನ್ ಅವರನ್ನು ಮೈಸೂರಿನ ರ್‍ಯಾಡಿಸನ್ ಹೋಟೆಲ್​ನಲ್ಲಿ ಬಂಧಿಸಲಾಗಿದೆ. ದರ್ಶನ್ ಬಂಧನದ ಬೆನ್ನಲ್ಲೇ ಆರ್.ಆರ್‌.ನಗರದಲ್ಲಿ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೈಸೂರಿನಲ್ಲಿ ದರ್ಶನ್ ಅವರನ್ನು ಬಂಧಿಸಿದ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಕೊಲೆ ಕೇಸ್‌ನಲ್ಲಿ ದರ್ಶನ್ ಆರೋಪಿಯ ಜೊತೆ ನಿರಂತರ ಸಂಪರ್ಕದ ಇರೋದು ಗೊತ್ತಾಗಿದೆ. ಆರೋಪಿಯ ವಿಚಾರಣೆ ವೇಳೆಯೂ ನಟ ದರ್ಶನ್ ಹೆಸರು ಬಾಯಿಬಿಟ್ಟಿದ್ದ ಎನ್ನಲಾಗಿದೆ.

ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಅಭಿಮಾನಿ

ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದು, ದರ್ಶನ್ ಆಪ್ತೆ ಪವಿತ್ರಾ ಗೌಡಯಿಂದಾಗಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಕಾರಣಕ್ಕೆ ಪವಿತ್ರಾ ಮೇಲಿನ ಸಿಟ್ಟಿನಿಂದ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದನು. ಇದರಿಂದಾಗಿ ದರ್ಶನ್, ರೇಣುಕಾ ಸ್ವಾಮಿ ಮೇಲೆ ಸಿಟ್ಟಾಗಿ ಬುದ್ಧಿಕಲಿಸಲು ನಿಶ್ಚಯಿಸಿದ್ದರು ಎನ್ನಲಾಗಿದೆ.

ಚಿತ್ರದುರ್ಗದಿಂದ, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಲು ಒಂದು ವಾರಗಳ ಕಾಲ ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಘು ಸಹಾಯ ಪಡೆಯಲಾಗಿತ್ತು. ರಘು ಹಾಗೂ ಅವನ ಸಹಚರರು ರೇಣುಕಾಸ್ವಾಮಿಯನ್ನು ಒಂದು ವಾರಗಳ ಕಾಲ ಗಮನಿಸಿದ್ದರು. ಆತನ ನಂಬರ್ ಪಡೆದು ಹುಡುಗಿಯ ರೀತಿ ಮಾತನಾಡಿ ಆತನನ್ನು ಸ್ಥಳವೊಂದಕ್ಕೆ ಬರುವಂತೆ ಹೇಳಿದ್ದರು ಎನ್ನಲಾಗಿದೆ.

ಕೊಲೆ ಹೇಗಾಯ್ತು?

ಕೊಲೆಯಾದ ರೇಣುಕಾಸ್ವಾಮಿ ಎಂಬುವನು ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್, ಫೋಟೋ ಕಳಿಸಿದ್ದನು. ಅಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ, ನಟ ದರ್ಶನ್ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆತರುವಂತೆ ಅವರ ಫ್ಯಾನ್ ಸಂಘಟನೆ ಅಧ್ಯಕ್ಷನಿಗೆ ಕರೆ ಮಾಡಿದ್ದರು. ಜೂ 8 ರಂದು ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

ಬಳಿಕ, ದರ್ಶನ್ ಸ್ನೇಹಿತ ಉದ್ಯಮಿ ವಿನಯ್ ಅವರ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಪಟ್ಟಣಗೆರೆ ಶೇಡ್​​ನಲ್ಲಿ ಆರೋಪಿಗಳು ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿಗೆ ಹಿಂಸೆ ನೀಡಿದ್ದಾರೆ. ಕಾದ ಕಬ್ಬಿಣದ ಸಲಾಕೆಯಿಂದ ರೇಣುಕಾಸ್ವಾಮಿ ಅವರಿಗೆ ಬರೆ ಹಾಕಿದ್ದಾರೆ. ಬಳಿಕ ಅವರ ಗುಪ್ತಾಂಗಕ್ಕೆ ಹಲವು ಬಾರಿ ಒದ್ದು ಹಲ್ಲೆ ಮಾಡಿದ್ದಾರೆ. ನಂತರ ತಲೆಗೆ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ರೇಣುಕಾಸ್ವಾಮಿ ದೇಹದ ಮೇಲೆ ಸುಟ್ಟಿರುವ ಗಾಯಗಳಿವೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ವಾಮಿ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ರೇಣುಕಾಸ್ವಾಮಿ ಅವರಿಗೆ ದರ್ಶನ್ ಸೇರಿ 4 ಜನರಿಂದ ಶೆಡ್‌ನಲ್ಲಿ ಬಲವಾದ ಆಯುಧದಿಂದ ಹಲ್ಲೆ‌ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ನಟ ದರ್ಶನ್ ಬಂಧನ | ವಿಚಾರಣೆ ಬಳಿಕ ಮುಂದಿನ ಕ್ರಮ; ಪೊಲೀಸ್ ಆಯುಕ್ತ ಬಿ. ದಯಾನಂದ್

ಬಂಧಿತ ಆರೋಪಿಗಳು ಬಾಯಿಬಿಟ್ಟಿದ್ದೇನು?

ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಎನ್ನುವವರು ಅಸಭ್ಯವಾಗಿ ಮೆಸೇಜ್ ಮಾಡಿದ್ದರು. ದರ್ಶನ್ ನಿರ್ದೇಶನದ ಮೇರೆಗೆ ರೇಣುಕಾಸ್ವಾಮಿ ಅವರನ್ನು ಕಾಮಾಕ್ಷಿಪಾಳ್ಯದ ಶೆಡ್‌ಗೆ ಕರೆದುಕೊಂಡು ಬಂದು ಬಲವಾಗಿ ಹೊಡೆಯಲಾಗಿದೆ. ಆ ಟೈಮ್‌ನಲ್ಲಿ ಅಲ್ಲಿ ದರ್ಶನ್, ಪವಿತ್ರಾ ಗೌಡ ಅವರು ಇದ್ದರು ಎಂದು ಆರೋಪಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕಾಂಟ್ಯಾಕ್ಸ್ ಲಿಸ್ಟ್, ವಾಟ್ಸಾಪ್ ಕಾಲ್‌ನಲ್ಲಿ ದರ್ಶನ್ ಅವರ ನಂಬರ್ ಇದ್ದು, ಕೆಲ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗಿದೆ. ಹೆಚ್ಚಿನ ವಿಚಾರಣೆ ನಡೆಯಬೇಕಿದ್ದು ಮಾಹಿತಿ ಹೊರಬೀಳಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...