ಯುಪಿಎಸ್‌ಸಿ ಫಲಿತಾಂಶ; ರಾಜ್ಯದ ಭಾವನಾ, ಆಕಾಶ್, ರವಿರಾಜ್ ಸೇರಿ 25ಕ್ಕೂ ಹೆಚ್ಚು ಉತ್ತೀರ್ಣ

Date:

  • 55ನೇ ರ‍್ಯಾಂಕ್ ಪಡೆದ ಹೆಚ್‌ ಎಸ್‌ ಭಾವನಾ ರಾಜ್ಯಕ್ಕೆ ಟಾಪರ್
  • ಮೊದಲ ರ‍್ಯಾಂಕ್ ಪಡೆದ ಇಶಿತಾ ಕಿಶೋರ್ ರಾಷ್ಟ್ರಕ್ಕೆ ಟಾಪರ್

ಕೇಂದ್ರ ಲೋಕಸೇವಾ ಆಯೋಗ 2022ನೇ ಸಾಲಿನ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಹೆಚ್‌ ಎಸ್‌ ಭಾವನಾ 55ನೇ ರ‍್ಯಾಂಕ್ ಪಡೆಯುವುದರೊಂದಿಗೆ ರಾಜ್ಯದ ಪೈಕಿ ಟಾಪರ್‌ ಆಗಿದ್ದಾರೆ.

ಇನ್ನುಳಿದಂತೆ ಕರ್ನಾಟಕದಿಂದ ಆಯ್ಕೆಯಾದವರ ಪಟ್ಟಿ ಇಂತಿದೆ;

  • ಡಿ ಸೂರಜ್ 197,
  • ಎ ಎಲ್ ಆಕಾಶ್ 210,
  • ರವಿರಾಜ್ ಅವಸ್ತಿ 224,
  • ಆರ್‌ ಚಲುವರಾಜ್ 238,
  • ಕೆ ಸೌರಭ್ 260,
  • ದಾಮಿನಿ ಎನ್‌ ದಾಸ್ 345,
  • ಪೂಜಾ ಎಂ 390,
  • ಜೆ ಭಾನುಪ್ರಕಾಶ್ 448,
  • ಶ್ರೀಕೇಶ್ ಕುಮಾರ್ ರೈ 457,
  • ಟಿ ಕೈಲಾಶ್ 465,
  • ಬಿ ಎಸ್‌ ಧನುಶ್ ಕುಮಾರ್ 501,
  • ರಾಹುಲ್ 508,
  • ಬಿ ವಿ ಶ್ರೀದೇವಿ 525,
  • ಆದಿನಾಥ್ ಪದ್ಮಣ್ಣ ತಮದಡ್ಡಿ 566,
  • ಸಿದ್ದಲಿಂಗಪ್ಪ ಕೆ ಪೂಜಾರ್ 589,
  • ವರುಣ್‌ ಕೆ ಗೌಡ 594,
  • ಮೇಘನಾ 617,
  • ಎಂ ಎಸ್ ತನ್ಮಯ್ 690,
  • ಸಿ ಪಿ ನಿಮಿಷಾಂಭ 659,
  • ಮೊಹಮ್ಮದ್ ಸಿದ್ದೀಕ್ 745,
  • ಅಕ್ಷಯ್ ಕುಮಾರ್ 746,
  • ಕೆ ಹೆಚ್‌ ಅಭಿಷೇಕ್ 813,
  • ಹೆಚ್‌ ಎಸ್‌ ಪದ್ಮನಾಭ 923,
  • ಹೆಚ್‌ ಪಿ ಮನೋಜ್ 929,

617ನೇ ರ‍್ಯಾಂಕ್ ಪಡೆದಿರುವ ಶಿವಮೊಗ್ಗ ಮೂಲದ ಮೇಘನಾ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. “ಮಗಳು ಎಂಜಿನಿಯರಿಂಗ್ ಮುಗಿಸುತ್ತಿದ್ದಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಬೆಳಿಗ್ಗೆ 7 ಗಂಟೆಗೆ ಗ್ರಂಥಾಲಯಕ್ಕೆ ಹೋಗಿ ಓದಿನಲ್ಲಿ ತೊಡಗಿಕೊಳ್ಳುತ್ತಿದ್ದಳು. ಈ ಬಾರಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಇದ್ದು, ಆಕೆಯ ರ‍್ಯಾಂಕ್‌ಗೆ ಐಪಿಎಸ್‌ ಅವಕಾಶ ಸಿಗಬಹುದು” ಎಂದು ಮೇಘನಾ ಅವರ ತಂದೆ ಐಎಂ ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬಾರಿ ಒಟ್ಟು 933 ಮಂದಿ ಉತ್ತೀರ್ಣರಾಗಿದ್ದು, ಮೊದಲ ನಾಲ್ಕು ರ‍್ಯಾಂಕ್‌ಗಳನ್ನು ಮಹಿಳೆಯರೆ ಪಡೆದಿರುವುದು ವಿಶೇಷವಾಗಿದೆ.

ಇಶಿತಾ ಕಿಶೋರ್ ಮೊದಲ ರ‍್ಯಾಂಕ್ ಪಡೆದಿದ್ದರೆ,ಗರಿಮಾ ಲೋಹಿಯಾ 2ನೇ ಶ್ರೇಣಿ, ಎನ್‌ ಉಮಾ ಹರತಿ ಮೂರನೇ ಹಾಗೂ ಸ್ಮೃತಿ ಮಿಶ್ರಾ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಈ ಬಾರಿ 25ಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? 2022ನೇ ಸಾಲಿನ ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಮೊದಲ ನಾಲ್ಕು ರ‍್ಯಾಂಕ್ ಪಡೆದ ಮಹಿಳೆಯರು

ಈ ಬಾರಿ ಉತ್ತೀರ್ಣರಾದವರಲ್ಲಿ ಸಾಮಾನ್ಯ ವಿಭಾಗದಿಂದ 345, ಆರ್ಥಿಕ ದುರ್ಬಲ ವರ್ಗದಡಿ 99, ಒಬಿಸಿಯಿಂದ 263, ಪರಿಶಿಷ್ಟ ಜಾತಿಯಿಂದ 154, ಪರಿಶಿಷ್ಟ ಪಂಗಡದ 72 ಅಭ್ಯರ್ಥಿಗಳು ಒಳಗೊಂಡಿದ್ದಾರೆ. 

ಐಎಎಸ್ 180,ಐಎಫ್ಎಸ್ 38, ಐಪಿಎಸ್ 200 ಸೇರಿದಂತೆ 1022 ಹುದ್ದೆಗಳು ಖಾಲಿಯಿವೆ ಎಂದು ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ಜೂನ್ 5, 2022 ರಂದು ನಡೆಸಲಾಯಿತು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು 2022ರ ಜೂನ್ 22 ರಂದು ಬಿಡುಗಡೆ ಮಾಡಲಾಯಿತು. ನಂತರ, ಮುಖ್ಯ ಪರೀಕ್ಷೆಯನ್ನು 2022ರ ಸೆಪ್ಟೆಂಬರ್ 16ರಿಂದ 25 ರವರೆಗೆ ನಡೆಸಲಾಯಿತು ಮತ್ತು ಫಲಿತಾಂಶಗಳನ್ನು 2022 ಡಿಸೆಂಬರ್ 6 ರಂದು ಘೋಷಿಸಲಾಯಿತು. ನಂತರ ಸಂದರ್ಶನಗಳು 2023ರ ಮೇ 18ರಂದು ಮುಕ್ತಾಯಗೊಂಡಿದ್ದವು. ಇದೀಗ ಅಂತಿಮ ಫಲಿತಾಂಶ ಬಿಡುಗಡೆಯಾಗಿದೆ.

ಫಲಿತಾಂಶ ನೋಡಲು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ https://www.upsc.gov.in/FR-CSM-22-engl-230523.pdf

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಮೋದಿ ದುರಾಡಳಿತ ಕೊನೆಗಾಣಿಸಬೇಕು: ಅಪ್ಪಾಸಾಹೇಬ ಯರನಾಳ

ಮೋದಿ ಹಿಟ್ಲರ್ ಶಾಹಿ ಆಡಳಿತ ಕೊನೆಗೊಳ್ಳುವ ಸಮಯ ಬಂದಿದೆ, ಮೋದಿ ಈ...

ತುಮಕೂರು | ಸ್ಟ್ರಾಂಗ್ ರೂಮ್ ಪರಿಶೀಲಿಸಿದ ಜಿಲ್ಲಾಧಿಕಾರಿ

ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ಷೇತ್ರ ವ್ಯಾಪ್ತಿಗೆ ಒಳಪಡುವ...

ಚಿಕ್ಕಬಳ್ಳಾಪುರ | ಅನುಚಿತ ಪ್ರಭಾವ, ಲಂಚ, ಭ್ರಷ್ಟಾಚಾರ ಪ್ರಕರಣದಡಿ ಕೆ.ಸುಧಾಕರ್ ವಿರುದ್ಧ ಎಫ್‌ಐಆರ್

ಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಲು ಮನೆಯೊಂದರಲ್ಲಿ ಅಕ್ರಮವಾಗಿ ಹಣ ದಾಸ್ತಾನು ಮಾಡಿದ್ದ...

ಗುಜರಾತ್ ಕರಾವಳಿಯಲ್ಲಿ 602 ಕೋಟಿ ರೂ. ಮೊತ್ತದ ಡ್ರಗ್ಸ್ ವಶ

ಭಯೋತ್ಪಾದನಾ ವಿರೋಧಿ ದಳ(ಎಟಿಎಸ್) – ನಾರ್ಕೋಟಿಕ್ಸ್ ಕಂಟ್ರೋಲ್‌ ಬ್ಯೂರೊ(ಎನ್‌ಸಿಬಿ) ಜಂಟಿ ಕಾರ್ಯಾಚರಣೆಯ...