ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕು ಉಲ್ಲಂಘನೆ ಬಗ್ಗೆ ತನಿಖೆಯ ಭರವಸೆ ನೀಡಿದ ಸಚಿವರು

Date:

ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ಟ್ವೀಟ್‌ನಲ್ಲಿ ಟ್ವಿಟರ್ ಎಂಜಿನಿಯರ್ ದಾಬಿರಿ ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕು ಉಲ್ಲಂಘನೆ ಬಗ್ಗೆ ಆರೋಪಿಸಿದ್ದಾರೆ. ಇದು ಗೂಗಲ್ ಸಮಸ್ಯೆಯೆಂದು ವಾಟ್ಸ್‌ಆ್ಯಪ್‌ ಕಂಪನಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದೆ

ಹೊಸ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ ಸಿದ್ಧವಾಗುತ್ತಿದ್ದರೂ ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ತಕ್ಷಣವೇ ಗಮನಹರಿಸುವುದಾಗಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬುಧವಾರ ಹೇಳಿದ್ದಾರೆ.

ಫೋನ್ ಬಳಕೆಯಲ್ಲಿ ಇಲ್ಲದೆ ಇದ್ದಾಗಲೂ ವಾಟ್ಸ್‌ಆ್ಯಪ್‌ ಸ್ಮಾರ್ಟ್‌ಫೋನ್ ಬಳಕೆದಾರರ ಮೈಕ್ರೋಫೋನ್ ಬಳಸಿಕೊಂಡಿದೆ ಎನ್ನುವ ಆರೋಪದ ವಿರುದ್ಧ ತನಿಖೆ ನಡೆಸುವ ಭರವಸೆಯನ್ನು ಅವರು ನೀಡಿದ್ದಾರೆ. ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮತ್ತು ಟ್ವಿಟರ್ ಎಂಜಿನಿಯರ್ ಫೋಡ್ ದಾಬಿರಿ ಅವರು ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಮಾಡಿರುವ ಟ್ವೀಟ್‌ಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ಭರವಸೆ ನೀಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಾಟ್ಸ್‌ಆ್ಯಪ್‌ ನಾನು ಮಲಗಿರುವಾಗ ಮತ್ತು ಏಳುವ ಮೊದಲೇ ಬೆಳಿಗ್ಗೆ 6 ಗಂಟೆಯೊಳಗೂ ಹಿನ್ನೆಲೆಯಲ್ಲಿ ನನ್ನ ಮೈಕ್ರೋಫೋನ್ ಬಳಸುತ್ತಿದೆ “ ಎಂದು ಟ್ವಿಟರ್‌ನ ಎಂಜಿನಿಯರಿಂಗ್ ನಿರ್ದೇಶಕ ಫೋಡ್‌ ದಾಬಿರಿ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರವಾಗಿ ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್, “ಇದು ಒಪ್ಪಲಾಗದ ಖಾಸಗಿತನದ ಉಲ್ಲಂಘನೆ. ನಾವು ಈ ಬಗ್ಗೆ ತಕ್ಷಣವೇ ಪರಿಶೀಲಿಸುತ್ತೇವೆ ಮತ್ತು ಹೊಸ ದತ್ತಾಂಶ ರಕ್ಷಣೆ ಮಸೂದೆ ಸಿದ್ಧವಾಗುತ್ತಿದ್ದರೂ, ಈ ಖಾಸಗಿ ಹಕ್ಕಿನ ಉಲ್ಲಂಘನೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ದಾಬಿರಿ ಟ್ವೀಟ್ ವೈರಲ್ ಆಗಿದ್ದು, 65 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ. ಈ ಪ್ರಕರಣದ ಬಗ್ಗೆ ದಾಬಿರಿ ಜೊತೆಗೆ ಸಂಪರ್ಕದಲ್ಲಿರುವುದಾಗಿ ವಾಟ್ಸ್‌ಆ್ಯಪ್‌ ಕಂಪನಿ ಹೇಳಿದೆ. “ದಾಬಿರಿ ಪಿಕ್ಸಲ್ ಫೋನ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸುತ್ತಿದ್ದಾರೆ. ಇದು ಆಂಡ್ರಾಯ್ಡ್ ಫೋನ್ ಸಮಸ್ಯೆಯಾಗಿರುವುದರಿಂದ ಗೂಗಲ್‌ಗೆ ಈ ಬಗ್ಗೆ ತನಿಖೆ ನಡೆಸಿ ಪರಿಹಾರ ಕಂಡುಕೊಳ್ಳಲು ಹೇಳಲಾಗಿದೆ” ಎಂದು ವಾಟ್ಸ್‌ಆ್ಯಪ್‌ ಟ್ವೀಟ್ ಮೂಲಕ ಹೇಳಿದೆ.

ಮೈಕ್ ಸೆಟ್ಟಿಂಗ್ ಮೇಲೆ ಬಳಕೆದಾರರಿಗೆ ಪೂರ್ಣ ನಿಯಂತ್ರಣವಿದೆ ಎಂದು ಕಂಪನಿ ಹೇಳಿದೆ. “ಒಮ್ಮೆ ಪರವಾನಗಿ ನೀಡಿದಲ್ಲಿ ಬಳಕೆದಾರರು  ಕರೆ ಮಾಡುವಾಗ, ಧ್ವನಿ ಸಂದೇಶ ಅಥವಾ ವಿಡಿಯೋ ಕಳುಹಿಸುವಾಗ ಮಾತ್ರವೇ ವಾಟ್ಸ್‌ಆ್ಯಪ್‌ ಮೈಕ್ರೋಫೋನ್ ಬಳಕೆಯಾಗುತ್ತದೆ. ಸಂವಹನವು ಎನ್‌ಕ್ರಿಪ್ಟ್ ಆಗಿರುವುದರಿಂದ ವಾಟ್ಸ್‌ಆ್ಯಪ್‌ ಅದನ್ನು ಕೇಳಲಾಗದು” ಎಂದು ಕಂಪನಿ ಹೇಳಿದೆ.

ಆದರೆ ದಾಬಿರಿ ಅವರು ತಾವು ಮಲಗಿರುವಾಗ ವಿವಿಧ ಸಮಯದಲ್ಲಿ ವಾಟ್ಸ್‌ಆ್ಯಪ್‌ ಮೈಕ್ರೋಫೋನ್ ಬಳಸಿರುವ ಸ್ಕ್ರೀನ್‌ ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ 2ನೇ ಹಂತದ ಚುನಾವಣೆ: ಇವಿಎಂ ವಿರುದ್ಧ 290 ದೂರು ಸ್ವೀಕಾರ, ಶೇ.39 ಮತದಾನ

ದೇಶದ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ...

ಕೋಮು ದ್ವೇಷ ಭಾಷಣ; ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ 93 ನಿವೃತ ಅಧಿಕಾರಿಗಳ ಪತ್ರ

ರಾಜಸ್ಥಾನದ ಬನ್ಸ್‌ವಾರಾದಲ್ಲಿ ಏಪ್ರಿಲ್ 21ರಂದು ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ...

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...