10 ಗಂಟೆಗಳ ಕಾಲ ಇಂಡಿಗೋ ವಿಮಾನ ಪ್ರಯಾಣ ವಿಳಂಬಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಪ್ರಯಾಣಿಕನೋರ್ವ ಪೈಲಟ್ ಮೇಲೆಯೇ ಹಲ್ಲೆಗೈದ ಆಘಾತಕಾರಿ ಘಟನೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಘಟನೆಯ ದೃಶ್ಯ ಪ್ರಯಾಣಿಕರೋರ್ವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ದೆಹಲಿಯಿಂದ ಗೋವಾಕ್ಕೆ ಹೊರಟಿದ್ದ ಇಂಡಿಗೋ 6E2175 ಸಂಖ್ಯೆಯ ವಿಮಾನವು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಗಂಟೆಗಳ ಕಾಲ ಹೊರಡಲು ತಡವಾಗಿತ್ತು. ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದ ಸಹ ಪೈಲಟ್ ಅನೂಪ್ ಕುಮಾರ್ ಎಂಬುವವರ ಮೇಲೆ ಕುಪಿತಗೊಂಡ ಪ್ರಯಾಣಿಕನೋರ್ವ ಹಲ್ಲೆಗೈದಿದ್ದಾನೆ. ಹಲ್ಲೆಗೈದವನನ್ನು ಸಾಹಿಲ್ ಕಟಾರಿಯಾ ಎಂದು ಗುರುತಿಸಲಾಗಿದೆ.
A passenger punched an Indigo capt in the aircraft as he was making delay announcement. The guy ran up from the last row and punched the new Capt who replaced the previous crew who crossed FDTL. Unbelievable ! @DGCAIndia @MoCA_GoI pic.twitter.com/SkdlpWbaDd
— Capt_Ck (@Capt_Ck) January 14, 2024
ಕೊನೆಯ ಸೀಟಿನಲ್ಲಿ ಕುಳಿತಿದ್ದ ಸಾಹಿಲ್ ಕಟಾರಿಯಾ ಆಕ್ರೋಶದಿಂದ ಸಹಕ್ಯಾಪ್ಟನ್ ಬಳಿ ಓಡಿಹೋಗಿ ಹಲ್ಲೆಗೈದಿದ್ದಾನೆ. ಆಹಾರ ಸೇವೆ ನೀಡುವ ಟ್ರಾಲಿಯನ್ನು ಕೂಡ ಹಾರಿ, ಮತ್ತೆ ಹಲ್ಲೆಗೈಯ್ಯಲು ಯತ್ನಿಸಿದಾಗ ಗಗನಸಖಿಯರು ಹಾಗೂ ಇತರೆ ಪ್ರಯಾಣಿಕರು ತಡೆದಿದ್ದಾರೆ. ಈ ಎಲ್ಲ ಬೆಳವಣಿಗೆ ಪ್ರಯಾಣಿಕರೋರ್ವರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅವರು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲಾಗಿದೆ.
ಹಲ್ಲೆಗೈದ ಬಳಿಕ ಆರೋಪಿಯು, ಕ್ಯಾಪ್ಟನ್‌ಗೆ, “ಚಲಾಯಿಸುವುದಾದದರೆ ಚಲಾಯಿಸು, ನೀನು ಚಲಾಯಿಸುವುದಿಲ್ಲ ಎಂದಾದರೆ ಇಲ್ಲಿಂದ ತೊಲಗು” ಎಂದು ಹಿಂದಿಯಲ್ಲಿ ಹೇಳಿದ್ದಾನೆ. ಈ ವೇಳೆ ಗಗನಸಖಿಯೋರ್ವರು ಭಾವುಕರಾಗಿ, “ನೀವು ಈ ರೀತಿಯಾಗಿ ಮಾಡಬಾರದು” ಎಂದು ಎರಡು ಮೂರು ಸಲ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇಂಡಿಗೋ ತಡ: ಅಂತಾರಾಷ್ಟ್ರೀಯ ವಿಮಾನ ಮಿಸ್ ಮಾಡಿಕೊಂಡ ಪ್ರಯಾಣಿಕ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದು ಇಲ್ಲಿಂದ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರೊಬ್ಬರು ಇಂಡಿಗೋ ವಿಮಾನ ತಡವಾದ ಕಾರಣಕ್ಕೆ ವಿಮಾನ ಮಿಸ್ ಮಾಡಿಕೊಂಡ ಘಟನೆ ಕೂಡ ಬೆಳಕಿಗೆ ಬಂದಿದೆ.
ದೇಬರ್ಘ್ಯಾ ದಾಸ್ ಎಂಬುವವರು ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದು, “ಶನಿವಾರ ಮಧ್ಯಾಹ್ನ ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊರಡಬೇಕಿತ್ತು. ಆರು ಬಾರಿ ನಾನಾ ಕಾರಣ ನೀಡಿ ಪ್ರಯಾಣ ಮುಂದೂಡಲಾಯಿತು. ಕೊನೆಗೆ ಬೆಳಗಿನ ಜಾವ ವಿಮಾನ ಹೊರಡುವ ಸಮಯ ಪ್ರಕಟಿಸಲಾಯಿತು. ಆದರೆ ಅದು ಸ್ಪಷ್ಟವಾಗಿರಲಿಲ್ಲ. ಈ ಬಗ್ಗೆ ಇಂಡಿಗೋ ಸಂಸ್ಥೆಯ ಸಿಬ್ಬಂದಿಗೂ ಸ್ಪಷ್ಟತೆ ಇರಲಿಲ್ಲ. ನಾನು ಬೆಳಗಿನ ಜಾವ ಬೆಂಗಳೂರಿಗೆ ತೆರಳಿ ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣ ಮುಂದುವರೆಸಬೇಕು ಎನ್ನುವ ಮಾಹಿತಿ ನೀಡಿದರೂ ಸೂಕ್ತ ಉತ್ತರ ಬರಲಿಲ್ಲ. ಕೊನೆಗೆ ಕೋಲ್ಕತ್ತಾದಿಂದಲೇ ಬೆಂಗಳೂರಿಗೆ ನೇರ ವಿಮಾನದಲ್ಲಿ ಹೋಗುವ ನಿರ್ಧಾರ ಕೈಗೊಂಡ ದಾಸ್ ಅವರು ಪ್ರಯಾಣ ದರ ಹಿಂದಿರುಗಿಸುವಂತೆ ಕೋರಿದರು. ಅದಕ್ಕೂ ಸೂಕ್ತ ಸ್ಪಂದನೆ ಬರಲಿಲ್ಲ” ಎಂದು ತಮಗಾದ ಕಹಿ ಅನುಭವವನ್ನು ಎಕ್ಸ್ ಪೋಸ್ಟ್ ಮೂಲಕ ಹಂಚಿಕೊಂಡರು.
I had the worst flight experience of my life last night, with Indigo.
My 10PM Calcutta—Bangalore flight left at 4:41AM, after 6 delays totaling 7hrs. I missed an international flight.
“Always on-time” is false advertising from @IndiGo6E.
I’d avoid flying them again.
🧵
1/6 pic.twitter.com/PTljwo4sxx
— Deedy (@debarghya_das) January 13, 2024
“ತಮ್ಮದೇ ತಪ್ಪು ಇಟ್ಟುಕೊಂಡು ನಮ್ಮ ಮೇಲೆಯೇ ತಪ್ಪು ಹೇರುವ ಪ್ರಯತ್ನವನ್ನು ಇಂಡಿಗೋ ಸಿಬ್ಬಂದಿ ಮಾಡಿದರು. ನೀವು ಮೊದಲೇ ಪ್ರಯಾಣ ಆರಂಭಿಸಬೇಕಿತ್ತು ಎನ್ನುವ ಉಪದೇಶವನ್ನು ನೀಡಿದರು. ನೀವು ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣ ಮಾಡುತ್ತಿರಬೇಕು ಎಂದು ಹೀಯಾಳಿಸಿದರು. ಇದೆಲ್ಲವನ್ನೂ ಎದುರಿಸಿ ಪ್ರಯಾಣ ನಡೆಸಬೇಕಾಯಿತು. ಜನರ ಹಣ ಹಾಗೂ ಸಮಯಕ್ಕೆ ಶೂನ್ಯ ಬೆಲೆ ಇದೆ ಎನ್ನುವುದು ಇಡೀ ಘಟನೆಯಿಂದ ಸಾಬೀತಾಗಿದೆ” ಎಂದು ದಾಸ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
“ನನ್ನ ಒತ್ತಡಕ್ಕೆ ಮಣಿದು ಕೊನೆಗೂ ಇಂಡಿಗೋ ಸಂಸ್ಥೆ ಎರಡು ಗಂಟೆಯ ಬಳಿಕ ಟಿಕೆಟ್ ಹಣ ವಾಪಸ್ ನೀಡಲು ಸಮ್ಮತಿಸಿದರು” ಎಂದು ದೇಬರ್ಘ್ಯಾ ದಾಸ್ ತಿಳಿಸಿದ್ದಾರೆ.