10 ಗಂಟೆ ಇಂಡಿಗೋ ವಿಮಾನ ವಿಳಂಬ: ಪೈಲಟ್ ಮೇಲೆ ಹಲ್ಲೆಗೈದ ಪ್ರಯಾಣಿಕ; ವಿಡಿಯೋ ವೈರಲ್

Date:

10 ಗಂಟೆಗಳ ಕಾಲ ಇಂಡಿಗೋ ವಿಮಾನ ಪ್ರಯಾಣ ವಿಳಂಬಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಪ್ರಯಾಣಿಕನೋರ್ವ ಪೈಲಟ್ ಮೇಲೆಯೇ ಹಲ್ಲೆಗೈದ ಆಘಾತಕಾರಿ ಘಟನೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

- Advertisement -

ಘಟನೆಯ ದೃಶ್ಯ ಪ್ರಯಾಣಿಕರೋರ್ವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ದೆಹಲಿಯಿಂದ ಗೋವಾಕ್ಕೆ ಹೊರಟಿದ್ದ ಇಂಡಿಗೋ 6E2175 ಸಂಖ್ಯೆಯ ವಿಮಾನವು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಗಂಟೆಗಳ ಕಾಲ ಹೊರಡಲು ತಡವಾಗಿತ್ತು. ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದ ಸಹ ಪೈಲಟ್ ಅನೂಪ್ ಕುಮಾರ್ ಎಂಬುವವರ ಮೇಲೆ ಕುಪಿತಗೊಂಡ ಪ್ರಯಾಣಿಕನೋರ್ವ ಹಲ್ಲೆಗೈದಿದ್ದಾನೆ. ಹಲ್ಲೆಗೈದವನನ್ನು ಸಾಹಿಲ್ ಕಟಾರಿಯಾ ಎಂದು ಗುರುತಿಸಲಾಗಿದೆ.

ಕೊನೆಯ ಸೀಟಿನಲ್ಲಿ ಕುಳಿತಿದ್ದ ಸಾಹಿಲ್ ಕಟಾರಿಯಾ ಆಕ್ರೋಶದಿಂದ ಸಹಕ್ಯಾಪ್ಟನ್ ಬಳಿ ಓಡಿಹೋಗಿ ಹಲ್ಲೆಗೈದಿದ್ದಾನೆ. ಆಹಾರ ಸೇವೆ ನೀಡುವ ಟ್ರಾಲಿಯನ್ನು ಕೂಡ ಹಾರಿ, ಮತ್ತೆ ಹಲ್ಲೆಗೈಯ್ಯಲು ಯತ್ನಿಸಿದಾಗ ಗಗನಸಖಿಯರು ಹಾಗೂ ಇತರೆ ಪ್ರಯಾಣಿಕರು ತಡೆದಿದ್ದಾರೆ. ಈ ಎಲ್ಲ ಬೆಳವಣಿಗೆ ಪ್ರಯಾಣಿಕರೋರ್ವರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅವರು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲಾಗಿದೆ.

ಹಲ್ಲೆಗೈದ ಬಳಿಕ ಆರೋಪಿಯು, ಕ್ಯಾಪ್ಟನ್‌ಗೆ, “ಚಲಾಯಿಸುವುದಾದದರೆ ಚಲಾಯಿಸು, ನೀನು ಚಲಾಯಿಸುವುದಿಲ್ಲ ಎಂದಾದರೆ ಇಲ್ಲಿಂದ ತೊಲಗು” ಎಂದು ಹಿಂದಿಯಲ್ಲಿ ಹೇಳಿದ್ದಾನೆ. ಈ ವೇಳೆ ಗಗನಸಖಿಯೋರ್ವರು ಭಾವುಕರಾಗಿ, “ನೀವು ಈ ರೀತಿಯಾಗಿ ಮಾಡಬಾರದು” ಎಂದು ಎರಡು ಮೂರು ಸಲ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇಂಡಿಗೋ ತಡ: ಅಂತಾರಾಷ್ಟ್ರೀಯ ವಿಮಾನ ಮಿಸ್ ಮಾಡಿಕೊಂಡ ಪ್ರಯಾಣಿಕ

ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದು ಇಲ್ಲಿಂದ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರೊಬ್ಬರು ಇಂಡಿಗೋ ವಿಮಾನ ತಡವಾದ ಕಾರಣಕ್ಕೆ ವಿಮಾನ ಮಿಸ್ ಮಾಡಿಕೊಂಡ ಘಟನೆ ಕೂಡ ಬೆಳಕಿಗೆ ಬಂದಿದೆ.

ದೇಬರ್ಘ್ಯಾ ದಾಸ್‌ ಎಂಬುವವರು ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದು, “ಶನಿವಾರ ಮಧ್ಯಾಹ್ನ ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊರಡಬೇಕಿತ್ತು. ಆರು ಬಾರಿ ನಾನಾ ಕಾರಣ ನೀಡಿ ಪ್ರಯಾಣ ಮುಂದೂಡಲಾಯಿತು. ಕೊನೆಗೆ ಬೆಳಗಿನ ಜಾವ ವಿಮಾನ ಹೊರಡುವ ಸಮಯ ಪ್ರಕಟಿಸಲಾಯಿತು. ಆದರೆ ಅದು ಸ್ಪಷ್ಟವಾಗಿರಲಿಲ್ಲ. ಈ ಬಗ್ಗೆ ಇಂಡಿಗೋ ಸಂಸ್ಥೆಯ ಸಿಬ್ಬಂದಿಗೂ ಸ್ಪಷ್ಟತೆ ಇರಲಿಲ್ಲ. ನಾನು ಬೆಳಗಿನ ಜಾವ ಬೆಂಗಳೂರಿಗೆ ತೆರಳಿ ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣ ಮುಂದುವರೆಸಬೇಕು ಎನ್ನುವ ಮಾಹಿತಿ ನೀಡಿದರೂ ಸೂಕ್ತ ಉತ್ತರ ಬರಲಿಲ್ಲ. ಕೊನೆಗೆ ಕೋಲ್ಕತ್ತಾದಿಂದಲೇ ಬೆಂಗಳೂರಿಗೆ ನೇರ ವಿಮಾನದಲ್ಲಿ ಹೋಗುವ ನಿರ್ಧಾರ ಕೈಗೊಂಡ ದಾಸ್‌ ಅವರು ಪ್ರಯಾಣ ದರ ಹಿಂದಿರುಗಿಸುವಂತೆ ಕೋರಿದರು. ಅದಕ್ಕೂ ಸೂಕ್ತ ಸ್ಪಂದನೆ ಬರಲಿಲ್ಲ” ಎಂದು ತಮಗಾದ ಕಹಿ ಅನುಭವವನ್ನು ಎಕ್ಸ್‌ ಪೋಸ್ಟ್‌ ಮೂಲಕ ಹಂಚಿಕೊಂಡರು.

“ತಮ್ಮದೇ ತಪ್ಪು ಇಟ್ಟುಕೊಂಡು ನಮ್ಮ ಮೇಲೆಯೇ ತಪ್ಪು ಹೇರುವ ಪ್ರಯತ್ನವನ್ನು ಇಂಡಿಗೋ ಸಿಬ್ಬಂದಿ ಮಾಡಿದರು. ನೀವು ಮೊದಲೇ ಪ್ರಯಾಣ ಆರಂಭಿಸಬೇಕಿತ್ತು ಎನ್ನುವ ಉಪದೇಶವನ್ನು ನೀಡಿದರು. ನೀವು ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣ ಮಾಡುತ್ತಿರಬೇಕು ಎಂದು ಹೀಯಾಳಿಸಿದರು. ಇದೆಲ್ಲವನ್ನೂ ಎದುರಿಸಿ ಪ್ರಯಾಣ ನಡೆಸಬೇಕಾಯಿತು. ಜನರ ಹಣ ಹಾಗೂ ಸಮಯಕ್ಕೆ ಶೂನ್ಯ ಬೆಲೆ ಇದೆ ಎನ್ನುವುದು ಇಡೀ ಘಟನೆಯಿಂದ ಸಾಬೀತಾಗಿದೆ” ಎಂದು ದಾಸ್‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ನನ್ನ ಒತ್ತಡಕ್ಕೆ ಮಣಿದು ಕೊನೆಗೂ ಇಂಡಿಗೋ ಸಂಸ್ಥೆ ಎರಡು ಗಂಟೆಯ ಬಳಿಕ ಟಿಕೆಟ್‌ ಹಣ ವಾಪಸ್‌ ನೀಡಲು ಸಮ್ಮತಿಸಿದರು” ಎಂದು ದೇಬರ್ಘ್ಯಾ ದಾಸ್‌ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎಸ್‌ಐಆರ್ ರದ್ದತಿಗೆ ಅ.2ರಂದು ಬೃಹತ್ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸುವುದು, ಪಟ್ಟಿಯಿಂದ...

ಚಿಕ್ಕಮಗಳೂರು | ಚೇತನ್ ಗೊಡ್ಲುಮನೆ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ 

ಗೊಡ್ಲುಮನೆ ಹೆಚ್.ಹೆಚ್. ರಮೇಶ್ ಗೌಡ ಹಾಗೂ ಹೆಚ್.ಆರ್. ಜಯಲಕ್ಷ್ಮಿ ದಂಪತಿಯ ಹಿರಿಯ...

ಬೇಲೂರು | ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಪ್ರಕಾಶ್ ರಾಜ್ ಮಾಲಾರ್ಪಣೆ 

SIR ವಿರೋಧಿ ಒಕ್ಕೂಟದಿಂದ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ಬೇಲೂರು...

ಉಡುಪಿ | ಶಾರ್ಜಾದಲ್ಲಿ ಹತ್ಯೆಗೀಡಾದ ಅಲ್ವಿನ್ ಪ್ರಕಾಶ್ ಕುಂದರ್‌ಗೆ ಹುಟ್ಟೂರಿನಲ್ಲಿ ಅಂತಿಮ ನಮನ

ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ನಿಗೂಢವಾಗಿ ಹತ್ಯೆಗೀಡಾದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ...