ಏರ್ ಇಂಡಿಯಾ ‘ಕನಿಷ್ಕ’ ಬಾಂಬ್ ದಾಳಿಯಲ್ಲಿ ಖಲಿಸ್ತಾನಿಗಳ ಕೈವಾಡ; 41 ವರ್ಷಗಳ ಬಳಿಕ ಒಪ್ಪಿದ ಕೆನಡಾ

Date:

1985ರ ಏರ್ ಇಂಡಿಯಾ ‘ಕನಿಷ್ಕ’ (ಫ್ಲೈಟ್ 182) ಬಾಂಬ್ ದಾಳಿಯ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಕೈವಾಡವಿತ್ತು ಎಂಬುದನ್ನು ಕೆನಡಾದ ಗುಪ್ತಚರ ಸಂಸ್ಥೆ (CSIS) ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ದುರಂತ ಸಂಭವಿಸಿ 41 ವರ್ಷಗಳ ಬಳಿಕ ಕೆನಡಾ ಸರ್ಕಾರ ಈ ಸತ್ಯವನ್ನು ಸಾರ್ವಜನಿಕವಾಗಿ ಘೋಷಿಸಿದೆ.

- Advertisement -

CSIS (Canadian Security Intelligence Service) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, “ಜೂನ್ 23, 1985 ರಂದು ಕೆನಡಾ ಮೂಲದ ಖಲಿಸ್ತಾನಿ ಉಗ್ರಗಾಮಿಗಳು ಇರಿಸಿದ್ದ ಬಾಂಬ್ ವಿಮಾನವನ್ನು ಧ್ವಂಸಗೊಳಿಸಿತು” ಎಂದು ನೇರವಾಗಿ ಉಲ್ಲೇಖಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಇದನ್ನೂ ಓದಿ: ಮಾದಕ ವಸ್ತು ಕಳ್ಳಸಾಗಣೆ; ಭಾರತ ಮೂಲದ ಕೆನಡಾ ಪ್ರಜೆ ಅಮೆರಿಕದಲ್ಲಿ ಬಂಧನ

ಈ ಬಾಂಬ್ ದಾಳಿಯ ಹಿಂದೆ ನಿಷೇಧಿತ ಖಲಿಸ್ತಾನಿ ಉಗ್ರಗಾಮಿ ಸಂಘಟನೆ ‘ಬಬರ್ ಖಾಲ್ಸಾ’ ಪಾತ್ರವಿದೆ ಎಂದು ಭಾರತ ಮೊದಲಿನಿಂದಲೂ ಹೇಳುತ್ತಾ ಬಂದಿತ್ತು. ಆದರೆ ಇಷ್ಟು ವರ್ಷಗಳ ಕಾಲ ಕೆನಡಾ ಸರ್ಕಾರವಾಗಲಿ ಅಥವಾ ಅಲ್ಲಿನ ತನಿಖಾ ಸಂಸ್ಥೆಗಳಾಗಲಿ ಈ ದುರಂತವನ್ನು ಕೇವಲ ‘ವಿಮಾನ ಅಪಘಾತ’ ಅಥವಾ ‘ಭಯೋತ್ಪಾದಕ ಕೃತ್ಯ’ ಎಂದು ಕರೆಯುತ್ತಿದ್ದವೇ ಹೊರತು ‘ಖಲಿಸ್ತಾನಿ ಉಗ್ರರು’ ಎಂಬ ಪದವನ್ನು ಬಳಸಲು ಹಿಂಜರಿಯುತ್ತಿದ್ದವು. ಆದರೆ ಈಗ ಇತಿಹಾಸದಲ್ಲೇ ಮೊದಲ ಬಾರಿಗೆ ಕೆನಡಾ ತಾನಾಗಿಯೇ ಈ ಖಲಿಸ್ತಾನಿ ಉಗ್ರಗಾಮಿ ಸಂಘಟನೆ ಹೆಸರನ್ನು ಉಲ್ಲೇಖಿಸಿದೆ. ಇದರಿಂದಾಗಿ ಭಾರತದ ಸುದೀರ್ಘ ಹೋರಾಟಕ್ಕೆ ಮತ್ತು ನಿಲುವಿಗೆ ಜಯ ಸಿಕ್ಕಂತಾಗಿದೆ.

ಏನಿದು ಕನಿಷ್ಕ ವಿಮಾನ ದುರಂತ?

1985ರ ಜೂನ್ 23ರಂದು ಟೊರಾಂಟೋದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 747 ‘ಕನಿಷ್ಕ’ ವಿಮಾನವು ಅಟ್ಲಾಂಟಿಕ್ ಸಾಗರದ ಮೇಲೆ (ಐರ್ಲೆಂಡ್ ಕರಾವಳಿಯ ಸಮೀಪ) ಹಾರಾಟ ನಡೆಸುತ್ತಿದ್ದಾಗ ಉಗ್ರರು ಲಗೇಜ್ ಬಾಕ್ಸ್‌ನಲ್ಲಿ ಇಟ್ಟಿದ್ದ ಬಾಂಬ್ ಸ್ಫೋಟಗೊಂಡಿತ್ತು.

ಈ ಸ್ಫೋಟದಲ್ಲಿ ವಿಮಾನದಲ್ಲಿದ್ದ 329 ಪ್ರಯಾಣಿಕರು ಮತ್ತು ಸಿಬ್ಬಂದಿ ದುರ್ಮರಣಕ್ಕೀಡಾದರು. ಈ ಪೈಕಿ 268 ಮಂದಿ ಕೆನಡಾ ಪೌರತ್ವ ಹೊಂದಿದ್ದ ಭಾರತೀಯ ಮೂಲದವರಾಗಿದ್ದರು ಹಾಗೂ 24 ಮಂದಿ ಭಾರತೀಯರಾಗಿದ್ದರು.

2001ರ ಸೆಪ್ಟೆಂಬರ್ 11ರ (9/11) ಅಮೆರಿಕ ದಾಳಿಗೂ ಮುನ್ನ, ವಾಯುಯಾನ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ವಿಮಾನ ಬಾಂಬ್ ದಾಳಿ ಇದಾಗಿತ್ತು. ಪ್ರಮುಖ ಖಲಿಸ್ತಾನಿ ಉಗ್ರಗಾಮಿ ಸಂಘಟನೆಯಾದ ‘ಬಬ್ಬರ್ ಖಲ್ಸಾ’ ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿತ್ತು ಎಂದು ತನಿಖೆಗಳಿಂದ ಸಾಬೀತಾಗಿತ್ತು.

ಕೆನಡಾದ ಈ ಐತಿಹಾಸಿಕ ಒಪ್ಪಿಗೆಯನ್ನು ‘ಹಿಂದೂ ಕೆನಡಿಯನ್ ಫೌಂಡೇಶನ್’ ಸೇರಿದಂತೆ ಹಲವು ಸಂಘಟನೆಗಳು ಸ್ವಾಗತಿಸಿವೆ. “ಈ ಸ್ಪಷ್ಟತೆ ಅತ್ಯಂತ ಅಗತ್ಯವಾಗಿತ್ತು. ಇಷ್ಟು ವರ್ಷಗಳ ಕಾಲ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಸಿಕ್ಕಿರಲಿಲ್ಲ. ಈಗಲಾದರೂ ಕೆನಡಾ ಸರ್ಕಾರ ಅಲ್ಲಿನ ಖಲಿಸ್ತಾನಿ ಉಗ್ರಗಾಮಿಗಳನ್ನು ಜಾಗತಿಕ ಭಯೋತ್ಪಾದಕರು ಎಂದು ಘೋಷಿಸಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸಂತ್ರಸ್ತರ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...