ಪ್ರಧಾನಮಂತ್ರಿ ಅಂಬಾನಿ ಕ್ಷಮಿಸಿ: ಭಾರತದಲ್ಲಿ ಸ್ಟಾರ್‌ಲಿಂಕ್ ವಿಳಂಬಕ್ಕೆ ಮುಕೇಶ್ ಅಂಬಾನಿ ವಿರುದ್ಧ ಎಲಾನ್ ಮಸ್ಕ್ ವ್ಯಂಗ್ಯ

Date:

ಭಾರತದಲ್ಲಿ ತಮ್ಮ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ‘ಸ್ಟಾರ್‌ಲಿಂಕ್’ ಮಾರುಕಟ್ಟೆಗೆ ಪ್ರವೇಶಿಸುವುದನ್ನು ದೇಶದ ಕೆಲವು ಉದ್ಯಮಿಗಳು, ಏಕಸ್ವಾಮ್ಯ ಹೊಂದಿರುವ ಪ್ರಭಾವಿಗಳು ತಡೆಯುತ್ತಿದ್ದಾರೆ ಎಂದು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಎಲಾನ್ ಮಸ್ಕ್ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮುಕೇಶ್ ಅಂಬಾನಿ ಅವರನ್ನು ಗುರಿಯಾಗಿಸಿಕೊಂಡು “ಪೂಜ್ಯ ಪ್ರಧಾನಮಂತ್ರಿ ಅಂಬಾನಿ ಅವರೇ, ನೀವೇ ಭಾರತದ ನಿಜವಾದ ಬಾಸ್ ಎಂದು ನನಗೆ ತಿಳಿಯದಿದ್ದಕ್ಕೆ ದಯವಿಟ್ಟು ನನ್ನ ಕ್ಷಮೆಯಾಚನೆಯನ್ನು ಸ್ವೀಕರಿಸಿ” ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಇದನ್ನೂ ಓದಿ: ಭಾರತದಲ್ಲಿ ಪರವಾನಗಿ ಪಡೆದ ಎಲಾನ್‌ ಮಸ್ಕ್‌ ಕಂಪನಿ ಸ್ಟಾರ್‌ಲಿಂಕ್

“ಸ್ಟಾರ್‌ಲಿಂಕ್ ಸೇವೆಯನ್ನು ಭಾರತಕ್ಕೆ ತಂದರೆ ಗ್ರಾಮೀಣ ಮತ್ತು ಇಂಟರ್ನೆಟ್ ತಲುಪದ ಪ್ರದೇಶಗಳಿಗೆ ಶಿಕ್ಷಣ ಹಾಗೂ ವಾಣಿಜ್ಯ ಅವಕಾಶಗಳು ಸಿಗುತ್ತವೆ. ಅದನ್ನು ಏಕಸ್ವಾಮ್ಯ ಬಯಸುವ ಉದ್ಯಮಿಗಳು ತಡೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಭಾರತೀಯ ಗ್ರಾಮೀಣ ಜನರಿಗೆ ಅಗ್ಗದ ದರದಲ್ಲಿ ಇಂಟರ್ನೆಟ್ ನೀಡುವುದಕ್ಕೆ ತಡೆಯೊಡ್ಡುವುದು ದೇಶದ ಜನರಿಗೆ ಮಾಡುವ ಅನ್ಯಾಯ ಎಂದಿದ್ದಾರೆ.

ಮಸ್ಕ್ ಅವರ ಈ ಬಹಿರಂಗ ಆರೋಪ ಮತ್ತು ವ್ಯಂಗ್ಯಕ್ಕೆ ಭಾರತ ಸರ್ಕಾರದ ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಕ್ಷಣ ಪ್ರತಿಕ್ರಿಯೆ ನೀಡಿದೆ. ಭಾರತದಲ್ಲಿ ಯಾವುದೇ ರಂಗದಲ್ಲೂ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸ್ಟಾರ್‌ಲಿಂಕ್, ಜಿಯೋ ಸ್ಯಾಟ್‌ಕಾಮ್ ಮತ್ತು ಭಾರ್ತಿ ಗ್ರೂಪ್ ಬೆಂಬಲಿತ ಯೂಟೇಲ್‌ಸ್ಯಾಟ್ ಒನ್‌ವೆಬ್ — ಮೂರೂ ಕಂಪನಿಗಳು ನಿಯಮಾವಳಿಗಳ ಒಂದೇ ಹಂತದಲ್ಲಿವೆ. ಸ್ಪೆಕ್ಟ್ರಮ್ ಬೆಲೆ ಪ್ರಕ್ರಿಯೆ ಮತ್ತು ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕ ಎಲ್ಲಾ ಕಂಪನಿಗಳಿಗೂ ನಿಯಮಾನುಸಾರ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ X ನಲ್ಲಿ ಮಸ್ಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಭಾರತಕ್ಕೆ ಸುಸ್ವಾಗತ ಎಲಾನ್, ನೀವಿನ್ನು ಮತ್ತೊಬ್ಬ ವ್ಯಕ್ತಿಯನ್ನು (ದಿ ಅದರ್ ಗೈ) ಅರಿಯುವುದು ಬಾಕಿ ಇದೆ” ಎಂದು ಮಾರ್ಮಿಕವಾಗಿ ಹೇಳಿದ್ದು, ಅದಕ್ಕೆ ಮಸ್ಕ್ ಧನ್ಯವಾದ ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿಯ ಶಾಂತಿಯುತ ಪ್ರತಿಭಟನೆ ಹತೋಟಿಗೆ ಕೇಂದ್ರದ ಸರ್ವಾಧಿಕಾರ ಧೋರಣೆ: ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಆಕ್ರೋಶ

ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತೋಟಿಗೆ ತರಲು ಮತ್ತು ಜನರ ಧ್ವನಿಯನ್ನು ಅಡಗಿಸಲು...

ಶಿವಮೊಗ್ಗ | ಅಹಿಂದ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷರಾಗಿ ಸ್ಟೆಲ್ಲಾ ಮಾರ್ಟಿನ್ ನೇಮಕ

ಕರ್ನಾಟಕ ರಾಜ್ಯ ಒಕ್ಕೂಟ (ರಿ.), ಬೆಂಗಳೂರು, ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ...

ಸಿಜೆಪಿ ಪ್ರತಿಭಟನೆ-ಹೆದರಿದ ಮೋದಿ: ದೆಹಲಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿ- ಕೇಂದ್ರದ ವಿರುದ್ಧ ತರೂರ್ ಕಿಡಿ

ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಾಡಲಾಗಿರುವ ಭಾರಿ ಭದ್ರತಾ ವ್ಯವಸ್ಥೆ ಮತ್ತು...

CJP ಪ್ರತಿಭಟನೆ | AISA ನಾಯಕಿ ನೇಹಾ ಬೋರಾ ವಶಕ್ಕೆ; ಪೊಲೀಸ್‌ ಬಸ್‌ ಸುತ್ತುವರಿದ ಪ್ರತಿಭಟನಾಕಾರರು

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ...