ಕೊರಿಯಾದ ಯುವತಿ ಲೈವ್‌ನಲ್ಲಿರುವಾಗಲೇ ಲೈಂಗಿಕ ಕಿರುಕುಳ ನೀಡಿದ ಭಾರತೀಯ ವ್ಯಕ್ತಿ!

Date:

Advertisements
  • ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್
  • ಯುವಕನನ್ನು ಅಮಿತ್ ಎಂದು ಗುರುತಿಸಿದ ನೆಟ್ಟಿಗರು

ಕೊರಿಯಾದ ಯುವತಿಯೋರ್ವಳು ಲೈವ್‌ನಲ್ಲಿರುವಾಗಲೇ ಭಾರತೀಯ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಹಾಂಕಾಂಗ್‌ನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಹಾಂಕಾಂಗ್ ಪ್ರವಾಸದಲ್ಲಿದ್ದ ಕೊರಿಯಾದ ಯುವತಿ, ‘ಟ್ವಿಚ್ಛ್(Twitch)’ ಎಂಬ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವಾಗಲೇ ಹಿಂಬಾಲಿಸಿದ ಭಾರತೀಯ ವ್ಯಕ್ತಿಯೋರ್ವ, ‘ತನ್ನೊಂದಿಗೆ ಬಾ’ ಎಂದು ಬಲವಂತ ಮಾಡಿದ್ದಲ್ಲದೆ, ಅಸಭ್ಯವಾಗಿ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ.

‘ಕಂಟೆಂಟ್ ಕ್ರಿಯೇಟರ್’ ಆಗಿರುವ ಮೂಲತಃ ದಕ್ಷಿಣ ಕೊರಿಯಾದ ಯುವತಿ, ಆಕೆ ತನ್ನ ಮನೆಗೆ ರಾತ್ರಿ ಹಿಂದಿರುಗುತ್ತಿದ್ದಾಗ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

Advertisements

ಮೆಟ್ರೋ ನಿಲ್ದಾಣದಲ್ಲಿ ಆಕೆಗೆ ಎದುರುಗೊಂಡ ಭಾರತೀಯ ಯುವಕ, ಆಕೆಯ ಬಳಿ ಸುಮಾರು 15 ನಿಮಿಷ ಮಾತನಾಡುತ್ತಾ ಮೆಟ್ರೋ ಬಗ್ಗೆ ಮಾಹಿತಿ ನೀಡುತ್ತಾ, ಹೆಗಲ ಮೇಲೆ ಕೈ ಹಾಕಿ ಸ್ನೇಹ ಬೆಳೆಸಲು ಹಿಂಬಾಲಿಸಿದ್ದಾನೆ. ಆ ಬಳಿಕ ಮೆಟ್ರೋ ನಿಲ್ದಾಣದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ತನ್ನೊಂದಿಗೆ ಬರುವಂತೆ ಬಲವಂತ ಮಾಡಿದ್ದು, ಅದನ್ನು ಆಕೆ ಒಪ್ಪದಿದ್ದಾಗ ಗೋಡೆಗೆ ಬಿಗಿಯಾಗಿ ದೂಡಿ, ಅಸಭ್ಯವಾಗಿ ಆಕೆಯ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು, ತನ್ನ ರಕ್ಷಣೆಗಾಗಿ ಆಕೆ ಬೊಬ್ಬೆ ಹೊಡೆದಿದ್ದಾಳೆ.

ಅದೃಷ್ಟವಶಾತ್ ಘಟನಾ ಸ್ಥಳದ ಸಮೀಪದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಅಲಾರಾಂ ಒತ್ತಿದ ಪರಿಣಾಮ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಎಲ್ಲ ದೃಶ್ಯವು ವಿಡಿಯೋದಲ್ಲಿ ದಾಖಲಾಗಿದ್ದು, ಲೈವ್‌ ನೋಡುತ್ತಿದ್ದ ಹಲವು ಮಂದಿ ವೀಕ್ಷಕರು, ಅಲ್ಲಿಂದ ಓಡು, ಪೊಲೀಸರಿಗೆ ದೂರು ಕೊಡು ಎಂದು ಸಲಹೆ ನೀಡುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ವೈರಲಾಗಿದ್ದು, ಯುವಕನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಯುವಕನನ್ನು ಅಮಿತ್ ಎಂದು ಗುರುತಿಸಿದ ನೆಟ್ಟಿಗರು
ಕೊರಿಯಾದ ಯುವತಿಗೆ ಕಿರುಕುಳ ನೀಡಿರುವ ಯುವಕನ ಮುಖವು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಇದನ್ನು ಅನುಸರಿಸಿ ಯುವಕನ ಗುರುತನ್ನು ಪತ್ತೆ ಹಚ್ಚಿರುವ ನೆಟ್ಟಿಗರು, ಕಿರುಕುಳ ನೀಡಿದಾತನನ್ನು ಅಮಿತ್ ಎಂದು ಗುರುತಿಸಿದ್ದಾರೆ.

ನೆಟ್ಟಿಗರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ವೀಡಿಯೊದಲ್ಲಿರುವ ವ್ಯಕ್ತಿಯನ್ನು ಅಮಿತ್, ಈತ ರಾಜಸ್ಥಾನ ರೈಫಲ್ಸ್ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಹಿಮಾಚಲ ಪ್ರದೇಶದವ ಎಂದು ತಿಳಿಸಿದ್ದಾರೆ.

ಆದರೆ, ಕಿರುಕುಳದಿಂದ ನೊಂದ ಯುವತಿಯು ದೂರು ನೀಡಿರುವ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಆದರೆ ವಿಡಿಯೋ ವೈರಲಾಗಿರುವ ಹಿನ್ನೆಲೆಯಲ್ಲಿ ಆತನನ್ನು ಗುರುತಿಸಲಾಗಿದ್ದು, ಹಾಂಕಾಂಗ್ ಪೊಲೀಸರು 47 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ ಎಂದು ಹಾಂಕಾಂಗ್‌ನ ನಿವಾಸಿಯೊಬ್ಬರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

‘ನಮ್ಮ ಸಿಬ್ಬಂದಿಯಲ್ಲ’ ಎಂದ ಹೋಟೆಲ್

ಇನ್ನು ನೆಟ್ಟಿಗರು ಹಂಚಿಕೊಂಡ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ರೈಫಲ್ಸ್ ಇಂಡಿಯನ್ ರೆಸ್ಟೋರೆಂಟ್‌ನ ಮಾಲೀಕರು, ಸೆಂಟ್ರಲ್ ಎಂಟಿಆರ್ ಸ್ಟೇಷನ್‌ನಲ್ಲಿ ನಡೆದ ಘಟನೆಯ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿದಿದೆ. ಈ ವ್ಯಕ್ತಿಯು ಕಳೆದ ಒಂದು ವರ್ಷದಿಂದ ರಾಜಸ್ಥಾನ ರೈಫಲ್ಸ್ ತಂಡ ಅಥವಾ ಬ್ಲ್ಯಾಕ್ ಶೀಪ್ ಕಂಪೆನಿಯ ಭಾಗವಾಗಿಲ್ಲ. ಈ ಘಟನೆಯನ್ನು ನಾವು ಖಂಡಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.


eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X