ʼಒಂದು ರಾಷ್ಟ್ರ,ಒಂದು ಚುನಾವಣೆ’ ಪರಿಕಲ್ಪನೆಯ ಆಳದಲ್ಲಿ ಚುನಾವಣಾ ಪ್ರಜಾಪ್ರಭುತ್ವದ ಬಗೆಗಿನ ತಿರಸ್ಕಾರ ಭಾವ ಅಡಗಿದೆ

Date:

ಅಧಿಕಾರವನ್ನು ನ್ಯಾಯಸಮ್ಮತತೆಯನ್ನು ಪಡೆಯಲು ಇರುವ ಚುನಾವಣೆಗಳನ್ನು ಒಂದು ಕಿರಿಕಿರಿ ಎಂಬಂತೆ ನೋಡಲಾಗಿದೆ. ಅವರಿಗೆ ಚುನಾವಣೆ ತಮ್ಮ ಅಧಿಕಾರವನ್ನು ಭದ್ರಪಡಿಸಲು ಇರುವ ಸಾಧನವಾಗಿದೆಯೇ ಹೊರತು, ಅದಕ್ಕೆ ಯಾವುದೇ ಬೆಲೆ ನೀಡಿದಂತೆ ಕಾಣುವುದಿಲ್ಲ. ಹೆಚ್ಚು ಕಡಿಮೆ ಅವರಿಗೆ ಇದು 'ಆಡಳಿತ'ದ ಹೆಸರಿನಲ್ಲಿ ಬಿಸಿನೆಸ್‌ ಮಾಡುವ ಒಂದು ಮಾರ್ಗ

ಕೆಲವು ದಿನಗಳ ಹಿಂದೆ, ತನ್ನದೇ ಪಕ್ಷದ ಪರವಾಗಿಯೇ ನಿಲ್ಲದ ಒಡಿಶಾದ ಬಿಜೆಡಿ ಸಂಸದ ಬಿಜಯಂತ್ ಜಯ್ ಪಾಂಡಾ ಅವರು ಟಿವಿ ಪ್ಯಾನೆಲ್ ಚರ್ಚೆಯೊಂದರಲ್ಲಿ ರಾಜ್ಯಗಳು ಒಟ್ಟಿಗೆ ಚುನಾವಣೆಯನ್ನು ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ಪ್ರತಿ ರಾಜ್ಯದ ಚುನಾವಣೆಯನ್ನು ಈಗ ಇಡೀ ದೇಶದ ಜನಾಭಿಪ್ರಾಯವೆಂದು ಪರಿಗಣಿಸಲಾಗುತ್ತಿರುವುದರಿಂದ ‘ಆಡಳಿತ ಯಂತ್ರವು’ ಒಂದು ಘಾತಕವಾಗಿ ಪರಿಣಮಿಸುತ್ತಿದೆ. ಪ್ರಧಾನಿ ಮೋದಿಯರು ಪ್ರತಿಪಾದಿಸುತ್ತಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಒಂದು ಸ್ವಾಗತಾರ್ಹ ಸುಧಾರಣೆಯಾಗಿದ್ದು, ಇದು ದೇಶದ ಸಮಯ, ಸಂಪನ್ಮೂಲ ಮತ್ತು ಶಕ್ತಿಯನ್ನು ಉಳಿಸುತ್ತದೆ ಹಾಗೂ ‘ಆಡಳಿತ’ ಯಾವುದೇ ಗೊಂದಲವಿಲ್ಲದೆ ಮುಂದುವರಿಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದರು. ಇದಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗುತ್ತದೆ. ಆದರೆ, ಪಾಂಡಾ ಅವರ ಪ್ರಕಾರ ಅಂತಹ ಒಂದು ತಿದ್ದುಪಡಿಯು ರಾಜಕೀಯ ಸುಧಾರಣೆಯ ಪ್ರತೀಕವಾಗಿದೆ.

ಕೆಲವು ವರ್ಷಗಳ ಹಿಂದಿನವರೆಗೆ ಗಣತಂತ್ರ ವ್ಯವಸ್ಥೆಯ ವಕಾಲತ್ತು ವಹಿಸುತ್ತಾ ಮಾತನಾಡುತ್ತಿದ್ದ ಈ ವ್ಯಕ್ತಿ ದಿಢೀರನೇ ಕೇಂದ್ರೀಕೃತ ವ್ಯವಸ್ಥೆಯನ್ನು ಸಮರ್ಥಿಸಿ ಇಂತಹ ಉದ್ದಟತನದ ಹೇಳಿಕೆಗಳನ್ನು ನೀಡುವುದು ವಿಪರ್ಯಾಸವೇ ಸರಿ. ರಾಜಕಾರಣಿಗಳ ಬೌದ್ಧಿಕ ದಿವಾಳಿತನ ನಮಗೆ ಅಚ್ಚರಿಯನ್ನು ಉಂಟು ಮಾಡದೇ ಇದ್ದರೂ ಶಕ್ತಿಶಾಲಿ ಫೆಡರಲ್ ಚಿಂತನೆಯ ಮೂಲಕ ರಾಜಕೀಯವಾಗಿ ಅಧಿಕಾರಕ್ಕೆ ಬಂದ ಪ್ರಾದೇಶಿಕ ಪಕ್ಷವೊಂದರ ಚುನಾಯಿತ ಪ್ರತಿನಿಧಿಯಾದ ಇವರು ಹೆಚ್ಚು ಸಂವೇದನಾಶೀಲರಾಗಿ ವರ್ತಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಬೃಹತ್‌ ಫೆಡರಲಿಸಂ ವ್ಯವಸ್ಥೆಯ ಶ್ರೇಣಿಕೃತ ವ್ಯವಸ್ಥೆಯನ್ನು ಮುರಿದು ಮತ್ತು ಅದರ ತತ್ವಗಳನ್ನು ನಾಶಮಾಡಲು ಕಾಯುತ್ತಿರುವ ಸಂಘ ಪರಿವಾರಕ್ಕೆ ಇವರು ಕೃತಜ್ಞರಾಗಿರುವುದು ದೊಡ್ಡ ದುರಂತ.

ಚುನಾವಣಾ ಸುಧಾರಣೆಯಂತೆ ಕಾಣುವ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವನೆಗೆ ಸಾಂವಿಧಾನಿಕವಾಗಿ ಗುರುತಿಸಲ್ಪಟ್ಟ ಮತ್ತು ವ್ಯಾಖ್ಯಾನಿಸಲ್ಪಟ್ಟಿರುವ ಪ್ರತಿಯೊಂದು ಆಡಳಿತ ಘಟಕದ ಸಣ್ಣ -ದೊಡ್ಡ ಡೊಮೇನ್‌ಗಳು ಸ್ವಾಯತ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿರುವ ನಮ್ಮ ಫೆಡರಲ್ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕಿಂಚಿತ್ತು ಗೌರವ ಕೂಡ ಇಲ್ಲ. ಆ ಡೊಮೇನ್ ಒಳಗೆ ಅದರ ಹಿತಾಸಕ್ತಿಗಳು, ಆದ್ಯತೆಗಳು, ನೀತಿಗಳು ಮತ್ತು ನಡವಳಿಕೆಗಳು ತನ್ನತನವನ್ನು ಕಾಯ್ದುಕೊಂಡು ಸಂವಿಧಾನದ ಕಡ್ಡಾಯಗೊಳಿಸಿರುವ ಆಶಯಗಳಿಗೆ ಬದ್ದವಾಗಿವೆಯೇ ಹೊರತು, ಕೇಂದ್ರಕ್ಕೆ ಅಧೀನವಾಗಿಲ್ಲ. ಒಂದು ರಾಜ್ಯದ ಶಾಸಕಾಂಗ ಸಭೆಯ ಅವಧಿಗೆ ಲೋಕಸಭೆಯ ಅವಧಿಯೊಂದಿಗೆ ಯಾವುದೇ ಸಂಬಂಧವಿಲ್ಲ, ಆದರೆ ಇದು ಆ ರಾಜ್ಯದ ಚುನಾವಣಾ ರಾಜಕೀಯದ ಮೇಲೆ ಪ್ರಾಥಮಿಕವಾಗಿ ಅವಲಂಬಿತವಾಗಿದೆ. ಇದು ಸ್ವಾತಂತ್ರ್ಯದ ನಂತರ ಹಲವು ವರ್ಷಗಳ ಕಾಲ ಇದ್ದಂತೆ ಲೋಕಸಭೆಯ ಅವಧಿಗೆ ಹೊಂದಿಕೆಯಾದರೂ, ಇದರಿಂದ ಉಪಯೋಗವಿದೆ ಎಂದು ಹೇಳಲು ಸಾಧ್ಯವಿಲ್ಲ. ಭಾರತದಂತಹ ಫೆಡರಲ್ ಪ್ರಜಾಪ್ರಭುತ್ವದಲ್ಲಿ ಕೇಂದ್ರದ ಆಡಳಿತಾತ್ಮಕ ಅನುಕೂಲಗಳು ಅಥವಾ ಚುನಾವಣಾ ಆಯೋಗ ರಾಜ್ಯದ ರಾಜಕೀಯ ಪ್ರಕ್ರಿಯೆಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಫೆಡರಲಿಸಂನ ಅತ್ಯಂತ ಮೂಲಭೂತ ತತ್ವಗಳ ಬಗೆಗಿನ ತಿರಸ್ಕಾರ ಭಾವ (ಕಳೆದ ವರ್ಷದವರೆಗೂ ಪ್ರಜಾಪ್ರಭುತ್ವಕ್ಕೆ ತಾವು ವಿಶಿಷ್ಟ ಕೊಡುಗೆ ನೀಡಿದ್ದೇನೆ ಎನ್ನುತ್ತಾ ನಮ್ಮ ಪ್ರಧಾನಮಂತ್ರಿಯವರು ‘ಕಾಪರೇಟಿವ್ ಫೆಡರಲಿಸಂʼನ ಚಾಂಪಿಯನ್ ಎಂದು ತಮ್ಮನ್ನು ಕರೆದುಕೊಂಡದನ್ನು ನಾವು ಮರೆಯಬಾರದು) ದೇಶದ ವೈವಿಧ್ಯತೆ ಮತ್ತು ಭಾರತೀಯ ರಾಜಕೀಯ ಹಾಗೂ ಭಾರತೀಯ ಸಮಾಜದ ಬಹುತ್ವದ ಬಗ್ಗೆ ಸಂಘಪರಿವಾರಕ್ಕಿರುವ ಆಳವಾದ ಅಪನಂಬಿಕೆಯನ್ನು ತೋರಿಸುತ್ತದೆ. ‘ಏಕರೂಪದ ರಾಷ್ಟ್ರ’ ಸಿದ್ದಾಂತವನ್ನು ಕೇಂದ್ರೀಕರಿಸಿ, ಮೊದಲು ‘ರಾಷ್ಟ್ರ’ವನ್ನು ರಾಜ್ಯದೊಂದಿಗೆ ಮತ್ತು ನಂತರ ರಾಜ್ಯವನ್ನು ಒಕ್ಕೂಟ ಅಥವಾ ಕೇಂದ್ರದೊಂದಿಗೆ ಜೋಡಿಸಿ ಅಧಿಕಾರಶಾಹಿಯಲ್ಲಿ ವ್ಯಾಪಕವಾದ ಏಕರೂಪತೆಯನ್ನು ತರುವುದೇ ಇವರ ಒಳಗೆ ಆಳವಾಗಿ ಹುದುಗಿರುವ ಹೆಬ್ಬಯಕೆ. ಇಲ್ಲಿ, ರಾಜ್ಯಗಳು ಮತ್ತು ಪ್ರಜಾಪ್ರಭುತ್ವದ ಇತರ ಘಟಕಗಳಾದ ಪಂಚಾಯತ್‌ಗಳು ಹಾಗೂ ಪುರಸಭೆಗಳು ತಮ್ಮನ್ನು ಫೆಡರಲ್ ಪ್ರಜಾಪ್ರಭುತ್ವದ ಸಮಾನ ಪಾಲುದಾರರೆಂದು ಪರಿಗಣಿಸದೆ, ಶ್ರೇಣೀಕೃತವಾಗಿ ತಮ್ಮ ಮೇಲಿರುವ ಆಡಳಿತದ ಘಟಕಗಳಿಗೆ ಅಧೀನ ಘಟಕಗಳಾಗಿ ಕೆಲಸಮಾಡಬೇಕಾಗುತ್ತದೆ.

ಬಿಜಯಂತ್ ಜಯ್ ಪಾಂಡಾ

‘ಒಂದು ರಾಷ್ಟ್ರ – ಒಂದು ಚುನಾವಣೆ’ ಪರಿಕಲ್ಪನೆಯ ಆಳದಲ್ಲಿ ಇರುವುದು ನಮ್ಮ ಫೆಡರಲ್ ವ್ಯವಸ್ಥೆಯನ್ನು ಕಡೆಗಣಿಸುವ ಯೋಚನೆ ಮಾತ್ರವಲ್ಲ, ಚುನಾವಣಾ ಪ್ರಜಾಪ್ರಭುತ್ವದ ಬಗೆಗಿನ ತಿರಸ್ಕಾರ ಭಾವವೂ ಗುಪ್ತವಾಗಿ ಅಡಗಿದೆ. ಅಧಿಕಾರವನ್ನು ನ್ಯಾಯಸಮ್ಮತತೆಯನ್ನು ಪಡೆಯಲು ಇರುವ ಚುನಾವಣೆಗಳನ್ನು ಒಂದು ಕಿರಿಕಿರಿ ಎಂಬಂತೆ ನೋಡಲಾಗಿದೆ. ಅವರಿಗೆ ಚುನಾವಣೆ ತಮ್ಮ ಅಧಿಕಾರವನ್ನು ಭದ್ರಪಡಿಸಲು ಇರುವ ಸಾಧನವಾಗಿದೆಯೇ ಹೊರತು, ಅದಕ್ಕೆ ಯಾವುದೇ ಬೆಲೆ ನೀಡಿದಂತೆ ಕಾಣುವುದಿಲ್ಲ. ಹೆಚ್ಚು ಕಡಿಮೆ ಅವರಿಗೆ ಇದು ‘ಆಡಳಿತ’ದ ಹೆಸರಿನಲ್ಲಿ ಬಿಸಿನೆಸ್‌ ಮಾಡುವ ಒಂದು ಮಾರ್ಗ.

ಕಾಲಕಾಲಕ್ಕೆ ಜನಾದೇಶವನ್ನು ಪಡೆಯಬೇಕಾದ ಅಗತ್ಯ ಇರುವುದರಿಂದ ಆಡಳಿತ ವ್ಯವಸ್ಥೆಗೆ ಇದೊಂದು ಅನಗತ್ಯ ಹೊರೆ ಎಂಬುದು ಒಂದು ಅಪಾಯಕಾರಿ ಹೇಳಿಕೆ. ‘ಆಡಳಿತ’ ಎಂಬುದು ತಾನೇ ಶ್ರೇಷ್ಠವೆಂದು ಬೀಗುವ ಅಧಿಕಾರಶಾಹಿಯಾಗಿದ್ದು, ಪ್ರಜಾಪ್ರಭುತ್ವದ ಹೊರಗೆ ನಿಂತು ಆಡಳಿತ ವ್ಯವಸ್ಥೆಯನ್ನು ಮತ್ತು ತನ್ನನ್ನು ನಿಯಂತ್ರಿಸುವ ಪೊಲಿಟಿಕಲ್‌ ಎಕ್ಸಿಕ್ಯೂಟಿವನ್ನು ಸಂರಕ್ಷಣೆ ಮಾಡುತ್ತದೆ. ಜನರಿಗೆ, ಅಂದರೆ ಮತದಾರರಿಗೆ ಇದರ ಜೊತೆಗೆ ಸಂಬಂಧವೇ ಇಲ್ಲ.

ಆಡಳಿತ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗಿ ಜನತೆ ಪಾಲ್ಗೊಳ್ಳುವ ಹಲವಾರು ವಿಭಿನ್ನ ವಿಧಾನಗಳಲ್ಲಿ ಹಳೆಯ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ವಿಧಾನಗಳಿಗೆ ಹೋಲಿಸಿದರೆ ಈ ಮನಸ್ಥಿತಿಯು ನಮ್ಮ ಪ್ರಜಾಪ್ರಭುತ್ವವನ್ನು ದುರಂತ ನೂಕುವ ಪ್ರಯತ್ನಕ್ಕೆ ಒಂದು ಸಾಕ್ಷಿಯಾಗಿ ಕಾಣುತ್ತದೆ. ಕೆಲವೊಮ್ಮೆ ಇದು ನೇರವಾಗಿ ಸಾರ್ವಜನಿಕ ವಿಚಾರಣೆಗಳು ಮತ್ತು ಜನಾಭಿಪ್ರಾಯ ಸಂಗ್ರಹಣೆಗಳ ಮೂಲಕವಾದರೆ, ಹೆಚ್ಚಾಗಿ ಚುನಾಯಿತ ಪ್ರತಿನಿಧಿಗಳೊಂದಿಗೆ ಸಮಾಲೋಚನೆಯ ಔಪಚಾರಿಕವಾದ ಸಾಂಸ್ಥಿಕ ಪ್ರಕ್ರಿಯೆಗಳ ಮೂಲಕ ಕೂಡ ನಡೆಯುತ್ತದೆ. ಕಾರ್ಯನಿರ್ವಾಹಕ ಅಧಿಕಾರದ (executive power) ಪ್ರಕ್ರಿಯೆಯಲ್ಲಿ ಸರ್ಕಾರಗಳು ಚುನಾಯಿತ ಪ್ರತಿನಿಧಿಗಳೊಂದಿಗೆ ನಿರಂತರವಾಗಿ ಸಂವಹನ ನಡೆಸುವ ಅಗತ್ಯವಿರುವ ವ್ಯಾಪಕವಾದ ಸಾಂಸ್ಥಿಕ ಕಾರ್ಯವಿಧಾನಗಳು (institutional mechanisms) ಕೂಡ ಅಸ್ತಿತ್ವದಲ್ಲಿವೆ. ಸಂಸತ್ತಿನ ಪರಿಶೀಲನೆಗಳು ಮತ್ತುಕಾರ್ಯನಿರ್ವಾಹಕ ನಿರ್ಧಾರ ತೆಗೆದುಕೊಳ್ಳುವುದರ ಮೇಲಿನ ನಿಯಂತ್ರಣವು ನಿರಂತರವಾಗಿದ್ದು, ಶಾಸಕಾಂಗ ಸಂಬಂಧಿತ ಸಮಿತಿಗಳೊಂದಿಗೆ ಸಮಾಲೋಚನೆ ನಡೆಸದೆ ಮತ್ತು ಅನುಮೋದನೆಯಿಲ್ಲದೆ ಕಾರ್ಯಾಂಗಕ್ಕೆ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಅವರ ಕಡೆಯಿಂದ ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು ಮತ್ತು ನೀತಿಗಳನ್ನು ಜಾರಿ ಮಾಡುವಾಗ ಅಥವಾ ಯಾವುದೇ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರು ತಮ್ಮ ಮತದಾರರ ಅಭಿಪ್ರಾಯಗಳಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು.

ಮತ್ತೊಂದು ಕಡೆ ನಮ್ಮಲ್ಲಿ ಶಾಸಕಾಂಗದ ಸಂಸ್ಥೆಗಳು ಕಾರ್ಯನಿರ್ವಾಹಕ ನಿರ್ಧಾರ (executive decision) ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹೊರಗಿನಿಂದ ಪಾತ್ರವನ್ನು ವಹಿಸುತ್ತವೆ. ರಾಜಕೀಯ ಮಟ್ಟದ ಸಮಾಲೋಚನೆಯು ಕಡಿಮೆ ಮತ್ತು ಅಸಮಂಜಸವಾಗಿರುತ್ತದೆ. ಉದಾಹರಣೆಗೆ, ಡಿಮಾನಿಟೈಸೇಷನ್‌ ನಂತಹ ನಿರ್ಧಾರವನ್ನು ಯಾವುದೇ ಪೂರ್ವ ಸಮಾಲೋಚನೆಯಿಲ್ಲದೆ ಮನಸ್ಸಿಗೆ ಬಂದಂತೆ ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜನರು ತಮಗೆ ಸಾಕಾಗಿ ಹೋಗಿರುವ ನಾಯಕರನ್ನು ಒದ್ದು ಓಡಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂಬುನದನ್ನು ಮನಸ್ಸಿನಲ್ಲಿಟ್ಟುಕೊಂಡು, ಅಧಿಕಾರದಲ್ಲಿರುವವರ ಬಗ್ಗೆ ಜನರು ಏನು ಯೋಚಿಸುತ್ತಾರೆ ಎಂಬುದನ್ನು ಅರಿಯಲು ಚುನಾವಣೆಗಳೇ ಏಕೈಕ ಮಾರ್ಗವೆಂದು ಪರಿಗಣಿಸಬೇಕು.

ಮತದಾರನಿಗೆ ತಾನು ಎಲ್ಲದರಲ್ಲೂ ತನ್ನದೇ ಮೇಲುಗೈ ಇರಬೇಕು ಎಂಬುದು ಅರಿವಾಗುವುದು ಚುನಾವಣೆಗಳ ಸಮಯದಲ್ಲಿ ಮಾತ್ರ. ರಾಜ್ಯ ಮಟ್ಟದ ಮತ್ತು ಪಂಚಾಯತ್, ಮುನ್ಸಿಪಲ್ ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಗಳೂ ಸಹ ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖವಾಗುವುದರೊಂದಿಗೆ, ಸಾಮಾಜಿಕ ಮಾಧ್ಯಮಗಳ ಶಕ್ತಿಯೊಂದಿಗೆ, ಅಧಿಕಾರದಲ್ಲಿರುವವರ ಮೇಲೆ ಪ್ರಭಾವ ಬೀರುತ್ತಾ, ಅವರ ದಬ್ಬಾಳಿಕೆಯನ್ನು ನಿಯಂತ್ರಣದಲ್ಲಿಡುವ ಶಕ್ತಿ ಚುನಾವಣೆಗಿದೆ.

ಒಂದಲ್ಲೊಂದು ರಾಜ್ಯವು ಕೆಲವು ತಿಂಗಳಿಗೊಮ್ಮೆ ಚುನಾವಣೆಗಳನ್ನು ನಡೆಸಬೇಕು ಮತ್ತು ಕೇಂದ್ರ ಸರ್ಕಾರವು ಪ್ರತಿ ಚುನಾವಣೆಯಲ್ಲೂ ಮತದಾರರ ಜೊತೆಗೆ ಸಂವೇದನಾಶೀಲವಾಗಿ ವರ್ತಿಸಬೇಕು ಎಂಬ ಅಂಶವೇ ಈಗಿನ ಕೇಂದ್ರ ಸರ್ಕಾರಕ್ಕೆ ಏಕರೂಪದ ಪ್ರೋಟೋ ಫ್ಯಾಸಿಸ್ಟ್‌ ಅಜೆಂಡಾವನ್ನು ಸ್ಥಾಪಿಸಲು ಕಷ್ಟವಾಗಿರುವುದಕ್ಕೆ ಕಾರಣಗಳಲ್ಲಿ ಒಂದು. ಪ್ರತಿ ರಾಜ್ಯಕ್ಕೆ ಭಿನ್ನವಾದ ರಾಜಕೀಯ ಲೆಕ್ಕಾಚಾರಗಳಿವೆ. ಜಾತಿ ಮತ್ತು ಸಮುದಾಯಗಳ ಪರಿಗಣನೆಗಳು ವಿಭಿನ್ನವಾಗಿ ಸಮತೋಲನದಲ್ಲಿರುತ್ತವೆ. ಇದಕ್ಕೆ ಅನುಗುಣವಾಗಿ ನೀತಿಗಳು ಹಾಗೂ ಯೋಜನೆಗಳನ್ನು ತಿರುಚಬೇಕಾಗುತ್ತದೆ. ಇದರಿಂದಾಗಿಯೇ ಏಕರೂಪದ ರಾಜಕೀಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ಬಿಜೆಪಿಗೆ ಕಷ್ಟವಾಗಿರುವುದು. ಹಾಗಾಗಿ ಅವರು ಈ ಅಜೆಂಡಾವನ್ನು ಒಪ್ಪದೇ ಇದ್ದ ಡಿಸ್ಪರೇಟ್‌ ಪಕ್ಷಗಳ ಜೊತೆಗೆ ಕೂಡ ಮೈತ್ರಿಮಾಡಿಕೊಳ್ಳಬೇಕಾಗಿ ಬಂದದ್ದು.

‘ಒಂದು ದೇಶ- ಒಂದು ಚುನಾವಣೆ’ ಪರಿಕಲ್ಪನೆಯು ಮಧ್ಯಮ ವರ್ಗದ, ವಿಶೇಷವಾಗಿ ವೃತ್ತಿಪರ ವರ್ಗಗಳು-ನಿವೃತ್ತ ನಾಗರಿಕರು, ಸಶಸ್ತ್ರ ಪಡೆಗಳ ಅಧಿಕಾರಿಗಳು, ತಂತ್ರಜ್ಞರು, ಬಂಡವಾಳಶಾಹಿಗಳು, ವ್ಯಾಪಾರಿ ವರ್ಗಗಳು ಮತ್ತು ಸಂಘ ಪರಿವಾರದ ಸದಸ್ಯರನ್ನು ಹಾಗೂ ಸಂಘ ಪರಿವಾರದ ಬಗ್ಗೆ ಸಹಾನುಭೂತಿ ಹೊಂದಿರುವವರನ್ನು ಆಕರ್ಷಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ಇವರೇ ದೇಶದ ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವವನ್ನು ಗೊಂದಲಕಾರಿ ಎಂದು ಪರಿಗಣಿಸುವ ವರ್ಗ. ಇವರೇ ‘ರಾಷ್ಟ್ರ’ವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸುವಲ್ಲಿ ಎಡವಲು ಪ್ರಮುಖ ಕಾರಣ. ಏಕರೂಪತೆ, ಸುವ್ಯವಸ್ಥೆ ಮತ್ತು ಶಿಸ್ತು – ಇವು ಈ ಚಿಂತನೆಯ ಕೀವರ್ಡ್‌ಗಳು. ಹೀಗಾಗಿ ಇವರು ಏಕರೂಪದ ಮತದಾರರ ದೃಷ್ಟಿಯಲ್ಲಿ ಇಡೀ ರಾಷ್ಟ್ರದ ಪ್ರಜಾಪ್ರಭುತ್ವವು ಶಿಸ್ತುಬದ್ಧವಾಗುತ್ತದೆ ಮತ್ತು ಬಲವಾದ ದೇಶ ಓರ್ವ ಪ್ರಬಲವಾದ ನಾಯಕನ ನಿಯಂತ್ರಣದಲ್ಲಿರುತ್ತದೆ ಎಂದು ನಂಬುತ್ತಾರೆ.

ಇತ್ತೀಚಿನ ಬೆಳವಣಿಗೆಯೊಂದನ್ನು ನೀವು ಗಮನಿಸುವುದಾದರೆ, ಬಿಜೆಪಿ ಜೊತೆಗೆ ಈಗ ರಾಜಕೀಯ, ಮಾಧ್ಯಮ, ಶಿಕ್ಷಣ ಮತ್ತು ವೃತ್ತಿಗಳಲ್ಲಿ ಸ್ವತಂತ್ರವಾಗಿರುವಂತೆ ತೋರುವ ವ್ಯಕ್ತಿಗಳಿದ್ದಾರೆ. ಬಿಜಯಂತ್ ಜಯ್ ಪಾಂಡಾರಂತೆ ʼತಟಸ್ಥವಾಗಿʼ ಕಾಣುವ ಮತ್ತು ಭಯ ಹುಟ್ಟಿಸುವ ಬಲಪಂಥೀಯ ವರ್ತನೆಗಳುಳ್ಳ ʼಹೊರಗಿನವರಾದʼ ಇವರು ಕಾರಣ ಮತ್ತು ಸಂಯಮದ ದನಿಗಳಾಗಿ ತೋರಿಸಿಕೊಳ್ಳುತ್ತಾರೆ.

‘ಒಂದು ದೇಶ- ಒಂದು ಚುನಾವಣೆ’ ಬೇಕೆನ್ನುವ ಕೂಗು ಬಲಿಷ್ಠವಾಗಿದೆ. ಇದು ಕೇಂದ್ರೀಕೃತ ಏಕರೂಪದ ರಾಷ್ಟ್ರೀಯ ಸಿದ್ದಾಂತವನ್ನು ಸ್ಥಾಪಿಸುವ ಹಿನ್ನಾರವಾಗಿದೆ. ಮೊದಲು ಜನರಿಗೆ ಏಕರೂಪದ ರಾಷ್ಟ್ರದ ಪರಿಕಲ್ಪನೆಯನ್ನು ನೀಡಿ, ಅವರನ್ನು ಒಟ್ಟಾಗಿಸಿದ ನಂತರ ಅವರಿಗೊಬ್ಬ ಧಣಿಯನ್ನು ತರುತ್ತಾರೆ.

ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸುವಾಗ ಇತರ ಉಪ ರಾಷ್ಟ್ರೀಯತೆಯ ನಿರೂಪಣೆಗಳು ಭಿನ್ನತೆಯನ್ನು ಕಾಯ್ದುಕೊಳ್ಳಲೇ ಬೇಕು. ರಾಷ್ಟ್ರದ ಈ ಮಹಾನ್‌ ಉದ್ದೇಶ (grand national purpose) ಪ್ರಜಾಸತ್ತೆಯ ಅಡಿಯಲ್ಲಿಯೇ ನಡೆಯಬೇಕು. ರಾಷ್ಟ್ರದ ಈ ಮಹಾನ್ ಉದ್ದೇಶ ಏನೆಂದು ನಮಗೆಲ್ಲರಿಗೂ ತಿಳಿದಿದೆ. ಹಾಗಾಗಿ, ಸದ್ಯ ಹಿಂದೂ ರಾಷ್ಟ್ರ ಕಟ್ಟುತ್ತೇವೆ ಎನ್ನುತ್ತಾ ಸಾರ್ವಜನಿಕವಾಗಿ ಶಂಖ ಜಾಗಟೆ ಭಾರಿಸುತ್ತಿದ್ದಾರೆ. ನಾವು ಮಾತ್ರ ಹುಷಾರಾಗಿರಬೇಕು.

ಇದನ್ನು ಓದಿ ಒಂದು ದೇಶ, ಒಂದು ಚುನಾವಣೆ | ‘ಒಂದುತನ’ದ ವ್ಯಸನ; ಒಕ್ಕೂಟ ವ್ಯವಸ್ಥೆಯ ವಿನಾಶ

ಚುನಾಯಿತ ಪ್ರತಿನಿಧಿಗಳು ಫೆಡರಲ್ ಪ್ರಜಾಪ್ರಭುತ್ವದಲ್ಲಿ ಬೇರೆ ಬೇರೆ ಸಮಯಗಳಲ್ಲಿ ಬಹು ಹಂತಗಳ ಚುನಾವಣೆಗಳನ್ನು ನಡೆಸುವುದು ಒಂದು ದೊಡ್ಡ ಉಪದ್ರವ ಎಂದು ಭಾವಿಸುವ ಏಕೈಕ ಪ್ರಜಾಪ್ರಭುತ್ವವಿದ್ದರೆ ಬಹುಶಃ ಅದು ಭಾರತವೇ ಇರಬೇಕು.

ಕೆಲವು ದಿನಗಳ ಹಿಂದೆ, ತನ್ನದೇ ಪಕ್ಷದ ಪರವಾಗಿಯೇ ನಿಲ್ಲದ ಒಡಿಶಾದ ಬಿಜೆಡಿ ಸಂಸದ ಬಿಜಯಂತ್ ಜಯ್ ಪಾಂಡಾ ಅವರು ಟಿವಿ ಪ್ಯಾನೆಲ್ ಚರ್ಚೆಯೊಂದರಲ್ಲಿ ರಾಜ್ಯಗಳು ಒಟ್ಟಿಗೆ ಚುನಾವಣೆಯನ್ನು ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ಪ್ರತಿ ರಾಜ್ಯದ ಚುನಾವಣೆಯನ್ನು ಈಗ ಇಡೀ ದೇಶದ ಜನಾಭಿಪ್ರಾಯವೆಂದು ಪರಿಗಣಿಸಲಾಗುತ್ತಿರುವುದರಿಂದ ‘ಆಡಳಿತ ಯಂತ್ರವು’ ಒಂದು ಘಾತಕವಾಗಿ ಪರಿಣಮಿಸುತ್ತಿದೆ. ಪ್ರಧಾನಿ ಮೋದಿಯರು ಪ್ರತಿಪಾದಿಸುತ್ತಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಒಂದು ಸ್ವಾಗತಾರ್ಹ ಸುಧಾರಣೆಯಾಗಿದ್ದು, ಇದು ದೇಶದ ಸಮಯ, ಸಂಪನ್ಮೂಲ ಮತ್ತು ಶಕ್ತಿಯನ್ನು ಉಳಿಸುತ್ತದೆ ಹಾಗೂ ‘ಆಡಳಿತ’ ಯಾವುದೇ ಗೊಂದಲವಿಲ್ಲದೆ ಮುಂದುವರಿಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದರು. ಇದಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗುತ್ತದೆ. ಆದರೆ, ಪಾಂಡಾ ಅವರ ಪ್ರಕಾರ ಅಂತಹ ಒಂದು ತಿದ್ದುಪಡಿಯು ರಾಜಕೀಯ ಸುಧಾರಣೆಯ ಪ್ರತೀಕವಾಗಿದೆ.

ಕೆಲವು ವರ್ಷಗಳ ಹಿಂದಿನವರೆಗೆ ಗಣತಂತ್ರ ವ್ಯವಸ್ಥೆಯ ವಕಾಲತ್ತು ವಹಿಸುತ್ತಾ ಮಾತನಾಡುತ್ತಿದ್ದ ಈ ವ್ಯಕ್ತಿ ದಿಢೀರನೇ ಕೇಂದ್ರೀಕೃತ ವ್ಯವಸ್ಥೆಯನ್ನು ಸಮರ್ಥಿಸಿ ಇಂತಹ ಉದ್ದಟತನದ ಹೇಳಿಕೆಗಳನ್ನು ನೀಡುವುದು ವಿಪರ್ಯಾಸವೇ ಸರಿ. ರಾಜಕಾರಣಿಗಳ ಬೌದ್ಧಿಕ ದಿವಾಳಿತನ ನಮಗೆ ಅಚ್ಚರಿಯನ್ನು ಉಂಟು ಮಾಡದೇ ಇದ್ದರೂ ಶಕ್ತಿಶಾಲಿ ಫೆಡರಲ್ ಚಿಂತನೆಯ ಮೂಲಕ ರಾಜಕೀಯವಾಗಿ ಅಧಿಕಾರಕ್ಕೆ ಬಂದ ಪ್ರಾದೇಶಿಕ ಪಕ್ಷವೊಂದರ ಚುನಾಯಿತ ಪ್ರತಿನಿಧಿಯಾದ ಇವರು ಹೆಚ್ಚು ಸಂವೇದನಾಶೀಲರಾಗಿ ವರ್ತಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಬೃಹತ್‌ ಫೆಡರಲಿಸಂ ವ್ಯವಸ್ಥೆಯ ಶ್ರೇಣಿಕೃತ ವ್ಯವಸ್ಥೆಯನ್ನು ಮುರಿದು ಮತ್ತು ಅದರ ತತ್ವಗಳನ್ನು ನಾಶಮಾಡಲು ಕಾಯುತ್ತಿರುವ ಸಂಘ ಪರಿವಾರಕ್ಕೆ ಇವರು ಕೃತಜ್ಞರಾಗಿರುವುದು ದೊಡ್ಡ ದುರಂತ.

ಚುನಾವಣಾ ಸುಧಾರಣೆಯಂತೆ ಕಾಣುವ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವನೆಗೆ ಸಾಂವಿಧಾನಿಕವಾಗಿ ಗುರುತಿಸಲ್ಪಟ್ಟ ಮತ್ತು ವ್ಯಾಖ್ಯಾನಿಸಲ್ಪಟ್ಟಿರುವ ಪ್ರತಿಯೊಂದು ಆಡಳಿತ ಘಟಕದ ಸಣ್ಣ -ದೊಡ್ಡ ಡೊಮೇನ್‌ಗಳು ಸ್ವಾಯತ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿರುವ ನಮ್ಮ ಫೆಡರಲ್ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕಿಂಚಿತ್ತು ಗೌರವ ಕೂಡ ಇಲ್ಲ. ಆ ಡೊಮೇನ್ ಒಳಗೆ ಅದರ ಹಿತಾಸಕ್ತಿಗಳು, ಆದ್ಯತೆಗಳು, ನೀತಿಗಳು ಮತ್ತು ನಡವಳಿಕೆಗಳು ತನ್ನತನವನ್ನು ಕಾಯ್ದುಕೊಂಡು ಸಂವಿಧಾನದ ಕಡ್ಡಾಯಗೊಳಿಸಿರುವ ಆಶಯಗಳಿಗೆ ಬದ್ದವಾಗಿವೆಯೇ ಹೊರತು, ಕೇಂದ್ರಕ್ಕೆ ಅಧೀನವಾಗಿಲ್ಲ. ಒಂದು ರಾಜ್ಯದ ಶಾಸಕಾಂಗ ಸಭೆಯ ಅವಧಿಗೆ ಲೋಕಸಭೆಯ ಅವಧಿಯೊಂದಿಗೆ ಯಾವುದೇ ಸಂಬಂಧವಿಲ್ಲ, ಆದರೆ ಇದು ಆ ರಾಜ್ಯದ ಚುನಾವಣಾ ರಾಜಕೀಯದ ಮೇಲೆ ಪ್ರಾಥಮಿಕವಾಗಿ ಅವಲಂಬಿತವಾಗಿದೆ. ಇದು ಸ್ವಾತಂತ್ರ್ಯದ ನಂತರ ಹಲವು ವರ್ಷಗಳ ಕಾಲ ಇದ್ದಂತೆ ಲೋಕಸಭೆಯ ಅವಧಿಗೆ ಹೊಂದಿಕೆಯಾದರೂ, ಇದರಿಂದ ಉಪಯೋಗವಿದೆ ಎಂದು ಹೇಳಲು ಸಾಧ್ಯವಿಲ್ಲ. ಭಾರತದಂತಹ ಫೆಡರಲ್ ಪ್ರಜಾಪ್ರಭುತ್ವದಲ್ಲಿ ಕೇಂದ್ರದ ಆಡಳಿತಾತ್ಮಕ ಅನುಕೂಲಗಳು ಅಥವಾ ಚುನಾವಣಾ ಆಯೋಗ ರಾಜ್ಯದ ರಾಜಕೀಯ ಪ್ರಕ್ರಿಯೆಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ.

ಫೆಡರಲಿಸಂನ ಅತ್ಯಂತ ಮೂಲಭೂತ ತತ್ವಗಳ ಬಗೆಗಿನ ತಿರಸ್ಕಾರ ಭಾವ (ಕಳೆದ ವರ್ಷದವರೆಗೂ ಪ್ರಜಾಪ್ರಭುತ್ವಕ್ಕೆ ತಾವು ವಿಶಿಷ್ಟ ಕೊಡುಗೆ ನೀಡಿದ್ದೇನೆ ಎನ್ನುತ್ತಾ ನಮ್ಮ ಪ್ರಧಾನಮಂತ್ರಿಯವರು ‘ಕಾಪರೇಟಿವ್ ಫೆಡರಲಿಸಂʼನ ಚಾಂಪಿಯನ್ ಎಂದು ತಮ್ಮನ್ನು ಕರೆದುಕೊಂಡದನ್ನು ನಾವು ಮರೆಯಬಾರದು) ದೇಶದ ವೈವಿಧ್ಯತೆ ಮತ್ತು ಭಾರತೀಯ ರಾಜಕೀಯ ಹಾಗೂ ಭಾರತೀಯ ಸಮಾಜದ ಬಹುತ್ವದ ಬಗ್ಗೆ ಸಂಘಪರಿವಾರಕ್ಕಿರುವ ಆಳವಾದ ಅಪನಂಬಿಕೆಯನ್ನು ತೋರಿಸುತ್ತದೆ. ‘ಏಕರೂಪದ ರಾಷ್ಟ್ರ’ ಸಿದ್ದಾಂತವನ್ನು ಕೇಂದ್ರೀಕರಿಸಿ, ಮೊದಲು ‘ರಾಷ್ಟ್ರ’ವನ್ನು ರಾಜ್ಯದೊಂದಿಗೆ ಮತ್ತು ನಂತರ ರಾಜ್ಯವನ್ನು ಒಕ್ಕೂಟ ಅಥವಾ ಕೇಂದ್ರದೊಂದಿಗೆ ಜೋಡಿಸಿ ಅಧಿಕಾರಶಾಹಿಯಲ್ಲಿ ವ್ಯಾಪಕವಾದ ಏಕರೂಪತೆಯನ್ನು ತರುವುದೇ ಇವರ ಒಳಗೆ ಆಳವಾಗಿ ಹುದುಗಿರುವ ಹೆಬ್ಬಯಕೆ. ಇಲ್ಲಿ, ರಾಜ್ಯಗಳು ಮತ್ತು ಪ್ರಜಾಪ್ರಭುತ್ವದ ಇತರ ಘಟಕಗಳಾದ ಪಂಚಾಯತ್‌ಗಳು ಹಾಗೂ ಪುರಸಭೆಗಳು ತಮ್ಮನ್ನು ಫೆಡರಲ್ ಪ್ರಜಾಪ್ರಭುತ್ವದ ಸಮಾನ ಪಾಲುದಾರರೆಂದು ಪರಿಗಣಿಸದೆ, ಶ್ರೇಣೀಕೃತವಾಗಿ ತಮ್ಮ ಮೇಲಿರುವ ಆಡಳಿತದ ಘಟಕಗಳಿಗೆ ಅಧೀನ ಘಟಕಗಳಾಗಿ ಕೆಲಸಮಾಡಬೇಕಾಗುತ್ತದೆ.

ಇದನ್ನು ಓದಿ ಏನಿದು ‘ಒಂದು ರಾಷ್ಟ್ರ, ಒಂದು ಚುನಾವಣೆ?’ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾವೇನು?

‘ಒಂದು ರಾಷ್ಟ್ರ – ಒಂದು ಚುನಾವಣೆ’ ಪರಿಕಲ್ಪನೆಯ ಆಳದಲ್ಲಿ ಇರುವುದು ನಮ್ಮ ಫೆಡರಲ್ ವ್ಯವಸ್ಥೆಯನ್ನು ಕಡೆಗಣಿಸುವ ಯೋಚನೆ ಮಾತ್ರವಲ್ಲ, ಚುನಾವಣಾ ಪ್ರಜಾಪ್ರಭುತ್ವದ ಬಗೆಗಿನ ತಿರಸ್ಕಾರ ಭಾವವೂ ಗುಪ್ತವಾಗಿ ಅಡಗಿದೆ. ಅಧಿಕಾರವನ್ನು ನ್ಯಾಯಸಮ್ಮತತೆಯನ್ನು ಪಡೆಯಲು ಇರುವ ಚುನಾವಣೆಗಳನ್ನು ಒಂದು ಕಿರಿಕಿರಿ ಎಂಬಂತೆ ನೋಡಲಾಗಿದೆ. ಅವರಿಗೆ ಚುನಾವಣೆ ತಮ್ಮ ಅಧಿಕಾರವನ್ನು ಭದ್ರಪಡಿಸಲು ಇರುವ ಸಾಧನವಾಗಿದೆಯೇ ಹೊರತು, ಅದಕ್ಕೆ ಯಾವುದೇ ಬೆಲೆ ನೀಡಿದಂತೆ ಕಾಣುವುದಿಲ್ಲ. ಹೆಚ್ಚು ಕಡಿಮೆ ಅವರಿಗೆ ಇದು ‘ಆಡಳಿತ’ದ ಹೆಸರಿನಲ್ಲಿ ಬಿಸಿನೆಸ್‌ ಮಾಡುವ ಒಂದು ಮಾರ್ಗ.

ಕಾಲಕಾಲಕ್ಕೆ ಜನಾದೇಶವನ್ನು ಪಡೆಯಬೇಕಾದ ಅಗತ್ಯ ಇರುವುದರಿಂದ ಆಡಳಿತ ವ್ಯವಸ್ಥೆಗೆ ಇದೊಂದು ಅನಗತ್ಯ ಹೊರೆ ಎಂಬುದು ಒಂದು ಅಪಾಯಕಾರಿ ಹೇಳಿಕೆ. ‘ಆಡಳಿತ’ ಎಂಬುದು ತಾನೇ ಶ್ರೇಷ್ಠವೆಂದು ಬೀಗುವ ಅಧಿಕಾರಶಾಹಿಯಾಗಿದ್ದು, ಪ್ರಜಾಪ್ರಭುತ್ವದ ಹೊರಗೆ ನಿಂತು ಆಡಳಿತ ವ್ಯವಸ್ಥೆಯನ್ನು ಮತ್ತು ತನ್ನನ್ನು ನಿಯಂತ್ರಿಸುವ ಪೊಲಿಟಿಕಲ್‌ ಎಕ್ಸಿಕ್ಯೂಟಿವನ್ನು ಸಂರಕ್ಷಣೆ ಮಾಡುತ್ತದೆ. ಜನರಿಗೆ, ಅಂದರೆ ಮತದಾರರಿಗೆ ಇದರ ಜೊತೆಗೆ ಸಂಬಂಧವೇ ಇಲ್ಲ.

ಆಡಳಿತ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗಿ ಜನತೆ ಪಾಲ್ಗೊಳ್ಳುವ ಹಲವಾರು ವಿಭಿನ್ನ ವಿಧಾನಗಳಲ್ಲಿ ಹಳೆಯ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ವಿಧಾನಗಳಿಗೆ ಹೋಲಿಸಿದರೆ ಈ ಮನಸ್ಥಿತಿಯು ನಮ್ಮ ಪ್ರಜಾಪ್ರಭುತ್ವವನ್ನು ದುರಂತ ನೂಕುವ ಪ್ರಯತ್ನಕ್ಕೆ ಒಂದು ಸಾಕ್ಷಿಯಾಗಿ ಕಾಣುತ್ತದೆ. ಕೆಲವೊಮ್ಮೆ ಇದು ನೇರವಾಗಿ ಸಾರ್ವಜನಿಕ ವಿಚಾರಣೆಗಳು ಮತ್ತು ಜನಾಭಿಪ್ರಾಯ ಸಂಗ್ರಹಣೆಗಳ ಮೂಲಕವಾದರೆ, ಹೆಚ್ಚಾಗಿ ಚುನಾಯಿತ ಪ್ರತಿನಿಧಿಗಳೊಂದಿಗೆ ಸಮಾಲೋಚನೆಯ ಔಪಚಾರಿಕವಾದ ಸಾಂಸ್ಥಿಕ ಪ್ರಕ್ರಿಯೆಗಳ ಮೂಲಕ ಕೂಡ ನಡೆಯುತ್ತದೆ. ಕಾರ್ಯನಿರ್ವಾಹಕ ಅಧಿಕಾರದ (executive power) ಪ್ರಕ್ರಿಯೆಯಲ್ಲಿ ಸರ್ಕಾರಗಳು ಚುನಾಯಿತ ಪ್ರತಿನಿಧಿಗಳೊಂದಿಗೆ ನಿರಂತರವಾಗಿ ಸಂವಹನ ನಡೆಸುವ ಅಗತ್ಯವಿರುವ ವ್ಯಾಪಕವಾದ ಸಾಂಸ್ಥಿಕ ಕಾರ್ಯವಿಧಾನಗಳು (institutional mechanisms) ಕೂಡ ಅಸ್ತಿತ್ವದಲ್ಲಿವೆ. ಸಂಸತ್ತಿನ ಪರಿಶೀಲನೆಗಳು ಮತ್ತುಕಾರ್ಯನಿರ್ವಾಹಕ ನಿರ್ಧಾರ ತೆಗೆದುಕೊಳ್ಳುವುದರ ಮೇಲಿನ ನಿಯಂತ್ರಣವು ನಿರಂತರವಾಗಿದ್ದು, ಶಾಸಕಾಂಗ ಸಂಬಂಧಿತ ಸಮಿತಿಗಳೊಂದಿಗೆ ಸಮಾಲೋಚನೆ ನಡೆಸದೆ ಮತ್ತು ಅನುಮೋದನೆಯಿಲ್ಲದೆ ಕಾರ್ಯಾಂಗಕ್ಕೆ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಅವರ ಕಡೆಯಿಂದ ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು ಮತ್ತು ನೀತಿಗಳನ್ನು ಜಾರಿ ಮಾಡುವಾಗ ಅಥವಾ ಯಾವುದೇ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರು ತಮ್ಮ ಮತದಾರರ ಅಭಿಪ್ರಾಯಗಳಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು.

ಮತ್ತೊಂದು ಕಡೆ ನಮ್ಮಲ್ಲಿ ಶಾಸಕಾಂಗದ ಸಂಸ್ಥೆಗಳು ಕಾರ್ಯನಿರ್ವಾಹಕ ನಿರ್ಧಾರ (executive decision) ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹೊರಗಿನಿಂದ ಪಾತ್ರವನ್ನು ವಹಿಸುತ್ತವೆ. ರಾಜಕೀಯ ಮಟ್ಟದ ಸಮಾಲೋಚನೆಯು ಕಡಿಮೆ ಮತ್ತು ಅಸಮಂಜಸವಾಗಿರುತ್ತದೆ. ಉದಾಹರಣೆಗೆ, ಡಿಮಾನಿಟೈಸೇಷನ್‌ ನಂತಹ ನಿರ್ಧಾರವನ್ನು ಯಾವುದೇ ಪೂರ್ವ ಸಮಾಲೋಚನೆಯಿಲ್ಲದೆ ಮನಸ್ಸಿಗೆ ಬಂದಂತೆ ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜನರು ತಮಗೆ ಸಾಕಾಗಿ ಹೋಗಿರುವ ನಾಯಕರನ್ನು ಒದ್ದು ಓಡಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂಬುನದನ್ನು ಮನಸ್ಸಿನಲ್ಲಿಟ್ಟುಕೊಂಡು, ಅಧಿಕಾರದಲ್ಲಿರುವವರ ಬಗ್ಗೆ ಜನರು ಏನು ಯೋಚಿಸುತ್ತಾರೆ ಎಂಬುದನ್ನು ಅರಿಯಲು ಚುನಾವಣೆಗಳೇ ಏಕೈಕ ಮಾರ್ಗವೆಂದು ಪರಿಗಣಿಸಬೇಕು.

ಮತದಾರನಿಗೆ ತಾನು ಎಲ್ಲದರಲ್ಲೂ ತನ್ನದೇ ಮೇಲುಗೈ ಇರಬೇಕು ಎಂಬುದು ಅರಿವಾಗುವುದು ಚುನಾವಣೆಗಳ ಸಮಯದಲ್ಲಿ ಮಾತ್ರ. ರಾಜ್ಯ ಮಟ್ಟದ ಮತ್ತು ಪಂಚಾಯತ್, ಮುನ್ಸಿಪಲ್ ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಗಳೂ ಸಹ ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖವಾಗುವುದರೊಂದಿಗೆ, ಸಾಮಾಜಿಕ ಮಾಧ್ಯಮಗಳ ಶಕ್ತಿಯೊಂದಿಗೆ, ಅಧಿಕಾರದಲ್ಲಿರುವವರ ಮೇಲೆ ಪ್ರಭಾವ ಬೀರುತ್ತಾ, ಅವರ ದಬ್ಬಾಳಿಕೆಯನ್ನು ನಿಯಂತ್ರಣದಲ್ಲಿಡುವ ಶಕ್ತಿ ಚುನಾವಣೆಗಿದೆ.

ಒಂದಲ್ಲೊಂದು ರಾಜ್ಯವು ಕೆಲವು ತಿಂಗಳಿಗೊಮ್ಮೆ ಚುನಾವಣೆಗಳನ್ನು ನಡೆಸಬೇಕು ಮತ್ತು ಕೇಂದ್ರ ಸರ್ಕಾರವು ಪ್ರತಿ ಚುನಾವಣೆಯಲ್ಲೂ ಮತದಾರರ ಜೊತೆಗೆ ಸಂವೇದನಾಶೀಲವಾಗಿ ವರ್ತಿಸಬೇಕು ಎಂಬ ಅಂಶವೇ ಈಗಿನ ಕೇಂದ್ರ ಸರ್ಕಾರಕ್ಕೆ ಏಕರೂಪದ ಪ್ರೋಟೋ ಫ್ಯಾಸಿಸ್ಟ್‌ ಅಜೆಂಡಾವನ್ನು ಸ್ಥಾಪಿಸಲು ಕಷ್ಟವಾಗಿರುವುದಕ್ಕೆ ಕಾರಣಗಳಲ್ಲಿ ಒಂದು. ಪ್ರತಿ ರಾಜ್ಯಕ್ಕೆ ಭಿನ್ನವಾದ ರಾಜಕೀಯ ಲೆಕ್ಕಾಚಾರಗಳಿವೆ. ಜಾತಿ ಮತ್ತು ಸಮುದಾಯಗಳ ಪರಿಗಣನೆಗಳು ವಿಭಿನ್ನವಾಗಿ ಸಮತೋಲನದಲ್ಲಿರುತ್ತವೆ. ಇದಕ್ಕೆ ಅನುಗುಣವಾಗಿ ನೀತಿಗಳು ಹಾಗೂ ಯೋಜನೆಗಳನ್ನು ತಿರುಚಬೇಕಾಗುತ್ತದೆ. ಇದರಿಂದಾಗಿಯೇ ಏಕರೂಪದ ರಾಜಕೀಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ಬಿಜೆಪಿಗೆ ಕಷ್ಟವಾಗಿರುವುದು. ಹಾಗಾಗಿ ಅವರು ಈ ಅಜೆಂಡಾವನ್ನು ಒಪ್ಪದೇ ಇದ್ದ ಡಿಸ್ಪರೇಟ್‌ ಪಕ್ಷಗಳ ಜೊತೆಗೆ ಕೂಡ ಮೈತ್ರಿಮಾಡಿಕೊಳ್ಳಬೇಕಾಗಿ ಬಂದದ್ದು.

‘ಒಂದು ದೇಶ- ಒಂದು ಚುನಾವಣೆ’ ಪರಿಕಲ್ಪನೆಯು ಮಧ್ಯಮ ವರ್ಗದ, ವಿಶೇಷವಾಗಿ ವೃತ್ತಿಪರ ವರ್ಗಗಳು-ನಿವೃತ್ತ ನಾಗರಿಕರು, ಸಶಸ್ತ್ರ ಪಡೆಗಳ ಅಧಿಕಾರಿಗಳು, ತಂತ್ರಜ್ಞರು, ಬಂಡವಾಳಶಾಹಿಗಳು, ವ್ಯಾಪಾರಿ ವರ್ಗಗಳು ಮತ್ತು ಸಂಘ ಪರಿವಾರದ ಸದಸ್ಯರನ್ನು ಹಾಗೂ ಸಂಘ ಪರಿವಾರದ ಬಗ್ಗೆ ಸಹಾನುಭೂತಿ ಹೊಂದಿರುವವರನ್ನು ಆಕರ್ಷಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ಇವರೇ ದೇಶದ ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವವನ್ನು ಗೊಂದಲಕಾರಿ ಎಂದು ಪರಿಗಣಿಸುವ ವರ್ಗ. ಇವರೇ ‘ರಾಷ್ಟ್ರ’ವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸುವಲ್ಲಿ ಎಡವಲು ಪ್ರಮುಖ ಕಾರಣ. ಏಕರೂಪತೆ, ಸುವ್ಯವಸ್ಥೆ ಮತ್ತು ಶಿಸ್ತು – ಇವು ಈ ಚಿಂತನೆಯ ಕೀವರ್ಡ್‌ಗಳು. ಹೀಗಾಗಿ ಇವರು ಏಕರೂಪದ ಮತದಾರರ ದೃಷ್ಟಿಯಲ್ಲಿ ಇಡೀ ರಾಷ್ಟ್ರದ ಪ್ರಜಾಪ್ರಭುತ್ವವು ಶಿಸ್ತುಬದ್ಧವಾಗುತ್ತದೆ ಮತ್ತು ಬಲವಾದ ದೇಶ ಓರ್ವ ಪ್ರಬಲವಾದ ನಾಯಕನ ನಿಯಂತ್ರಣದಲ್ಲಿರುತ್ತದೆ ಎಂದು ನಂಬುತ್ತಾರೆ.

ಇತ್ತೀಚಿನ ಬೆಳವಣಿಗೆಯೊಂದನ್ನು ನೀವು ಗಮನಿಸುವುದಾದರೆ, ಬಿಜೆಪಿ ಜೊತೆಗೆ ಈಗ ರಾಜಕೀಯ, ಮಾಧ್ಯಮ, ಶಿಕ್ಷಣ ಮತ್ತು ವೃತ್ತಿಗಳಲ್ಲಿ ಸ್ವತಂತ್ರವಾಗಿರುವಂತೆ ತೋರುವ ವ್ಯಕ್ತಿಗಳಿದ್ದಾರೆ. ಬಿಜಯಂತ್ ಜಯ್ ಪಾಂಡಾರಂತೆ ʼತಟಸ್ಥವಾಗಿʼ ಕಾಣುವ ಮತ್ತು ಭಯ ಹುಟ್ಟಿಸುವ ಬಲಪಂಥೀಯ ವರ್ತನೆಗಳುಳ್ಳ ʼಹೊರಗಿನವರಾದʼ ಇವರು ಕಾರಣ ಮತ್ತು ಸಂಯಮದ ದನಿಗಳಾಗಿ ತೋರಿಸಿಕೊಳ್ಳುತ್ತಾರೆ.

‘ಒಂದು ದೇಶ- ಒಂದು ಚುನಾವಣೆ’ ಬೇಕೆನ್ನುವ ಕೂಗು ಬಲಿಷ್ಠವಾಗಿದೆ. ಇದು ಕೇಂದ್ರೀಕೃತ ಏಕರೂಪದ ರಾಷ್ಟ್ರೀಯ ಸಿದ್ದಾಂತವನ್ನು ಸ್ಥಾಪಿಸುವ ಹಿನ್ನಾರವಾಗಿದೆ. ಮೊದಲು ಜನರಿಗೆ ಏಕರೂಪದ ರಾಷ್ಟ್ರದ ಪರಿಕಲ್ಪನೆಯನ್ನು ನೀಡಿ, ಅವರನ್ನು ಒಟ್ಟಾಗಿಸಿದ ನಂತರ ಅವರಿಗೊಬ್ಬ ಧಣಿಯನ್ನು ತರುತ್ತಾರೆ.

ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸುವಾಗ ಇತರ ಉಪ ರಾಷ್ಟ್ರೀಯತೆಯ ನಿರೂಪಣೆಗಳು ಭಿನ್ನತೆಯನ್ನು ಕಾಯ್ದುಕೊಳ್ಳಲೇ ಬೇಕು. ರಾಷ್ಟ್ರದ ಈ ಮಹಾನ್‌ ಉದ್ದೇಶ (grand national purpose) ಪ್ರಜಾಸತ್ತೆಯ ಅಡಿಯಲ್ಲಿಯೇ ನಡೆಯಬೇಕು. ರಾಷ್ಟ್ರದ ಈ ಮಹಾನ್ ಉದ್ದೇಶ ಏನೆಂದು ನಮಗೆಲ್ಲರಿಗೂ ತಿಳಿದಿದೆ. ಹಾಗಾಗಿ, ಸದ್ಯ ಹಿಂದೂ ರಾಷ್ಟ್ರ ಕಟ್ಟುತ್ತೇವೆ ಎನ್ನುತ್ತಾ ಸಾರ್ವಜನಿಕವಾಗಿ ಶಂಖ ಜಾಗಟೆ ಬಾರಿಸುತ್ತಿದ್ದಾರೆ. ನಾವು ಮಾತ್ರ ಹುಷಾರಾಗಿರಬೇಕು.

ಅಮಿತಾಭ್‌ ಪಾಂಡೆ
+ posts

ನಿವೃತ್ತ ಐಎಎಸ್‌ ಅಧಿಕಾರಿ, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಅಮಿತಾಭ್‌ ಪಾಂಡೆ
ಅಮಿತಾಭ್‌ ಪಾಂಡೆ
ನಿವೃತ್ತ ಐಎಎಸ್‌ ಅಧಿಕಾರಿ, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತ ಮತ್ತು ನೀರು: ಸಮತೋಲನ ಹೇಗೆ?

ಡಾ. ಬಿ.ಆರ್. ಅಂಬೇಡ್ಕರ್ ಅವರು ನದಿ ನೀರು ರೈಲ್ವೆಯಂತೆ ರಾಷ್ಟ್ರೀಕರಣಗೊಳ್ಳಬೇಕು ಎಂದು...

ಅವಲೋಕನ | ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’; ದೇಶದ ಆರ್ಥಿಕತೆಯ ನಿಜ ದರ್ಶನ ಮಾಡಿಸುವ ಕೃತಿ

ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣಾಭಿವೃದ್ಧಿ ತಜ್ಞೆ ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ...

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹೈದರಾಬಾದ್ ಮೆಟ್ರೋ ನಷ್ಟದಲ್ಲಿದೆ ಎಂಬ ಎಲ್&ಟಿ ವಾದ ನಿಜವೇ?

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ...

ರಾಜ್ಯದಲ್ಲಿ ಬಿಜೆಪಿಗೆ ಮೂರನೇ ಬಾರಿ ‘ಆಪರೇಷನ್‌ ಕಮಲ’ ಸಾಧ್ಯವೇ?, ಅಂಕಿ-ಅಂಶ ಏನು ಹೇಳುತ್ತೆ?

ರಾಜ್ಯದ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು...