ಅಕಾಲಿಕ ಮಳೆಗೆ ಬೆಳೆಹಾನಿ: ಆರ್ಥಿಕ ಬೆನ್ನೆಲುಬೇ ಮುರಿದಿದೆಯೆಂದು ಕಣ್ಣೀರಿಟ್ಟ ರೈತ

Date:

ನಷ್ಟ ಅನುಭವಿಸಿದ ಪ್ರತಿ ರೈತರಿಗೂ ತಾರತಮ್ಯವಿಲ್ಲದೆ ನೇರವಾಗಿ ಸೂಕ್ತ ಪರಿಹಾರ ಧನವನ್ನು ತಲುಪಿಸಬೇಕಿದೆ. ಇದರೊಂದಿಗೆ, ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಬಲ್ಲ ತಂತ್ರಜ್ಞಾನ ಮತ್ತು ಸುಲಭ ಬೆಳೆ ವಿಮೆ ಯೋಜನೆಗಳನ್ನು ಹಳ್ಳಿ ಹಳ್ಳಿಗೂ ತಲುಪಿಸುವ ದೀರ್ಘಕಾಲೀನ ಕೃಷಿ ನೀತಿಗಳ ಅಗತ್ಯವಿದೆ. 

ಸಾಮಾನ್ಯವಾಗಿ ಮೇ ತಿಂಗಳು ಬಿಸಿಲಿನ ತಾಪದಿಂದ ಕೂಡಿರುತ್ತದೆ. ಮುಂಗಾರು ಮಳೆಯ ಆಗಮನಕ್ಕೆ ಭೂಮಿಯನ್ನು ಸಿದ್ಧಗೊಳಿಸುವ ಕಾಲವಿದು. ಆದರೆ, ಇತ್ತೀಚೆಗೆ ಮೇ ತಿಂಗಳಲ್ಲಿ ರಾಜ್ಯದಾದ್ಯಂತ ಸುರಿದ ಅಕಾಲಿಕ ಹಾಗೂ ಅತಿವೃಷ್ಟಿ ಮಳೆಯು ರೈತರ ಬದುಕನ್ನು ಸಂಪೂರ್ಣವಾಗಿ ಕಂಗೆಡಿಸಿದೆ. ವರದಾನವಾಗಬೇಕಿದ್ದ ಮಳೆ ಶಾಪವಾಗಿ ಪರಿಣಮಿಸಿದ್ದು, ಕಟಾವಿಗೆ ಬಂದಿದ್ದ ಹತ್ತಾರು ಬಗೆಯ ಬೆಳೆಗಳು ನೆಲಕಚ್ಚಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವ ಅನ್ನದಾತರ ಇಂದಿನ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.

- Advertisement -

ಭೀಕರ ಮಳೆ ಮತ್ತು ವ್ಯಾಪಕ ಬೆಳೆಹಾನಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ರಾಜ್ಯದಾದ್ಯಂತ ಮೇ ತಿಂಗಳಲ್ಲಿ ಸುರಿದ ಬಿರುಗಾಳಿ ಸಹಿತ ಅಕಾಲಿಕ ಮಳೆ ಹಾಗೂ ಕೆಲವೆಡೆ ಬಿದ್ದ ಆಲಿಕಲ್ಲು ಮಳೆಗೆ ಹಾಗೂ ಕೆಲವೆಡೆ ಬಿದ್ದ ಆಲಿಕಲ್ಲು ಮಳೆಗೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿದ್ದ ತರಕಾರಿ, ಹಣ್ಣು-ಹಂಪಲುಗಳಿಂದ ಹಿಡಿದು ವಾಣಿಜ್ಯ ಬೆಳೆಗಳವರೆಗೆ ಎಲ್ಲವೂ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ನಾಶವಾಗಿವೆ. ಪ್ರಮುಖವಾಗಿ ಹಾವೇರಿ, ತುಮಕೂರು, ಕಲಬುರಗಿ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಮತ್ತು ಕೋಲಾರ ಜಿಲ್ಲೆಗಳ ರೈತರನ್ನು ಬೀದಿಗೆ ತಂದಿದೆ.

ತೋಟಗಾರಿಕೆ ಬೆಳೆಗಳಿಗೆ ಭಾರೀ ಪೆಟ್ಟು: ಮಾವು, ಬಾಳೆ, ಪಪ್ಪಾಯಿ ಮತ್ತು ದಾಳಿಂಬೆ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ವಿಶೇಷವಾಗಿ ‘ಹಣ್ಣುಗಳ ರಾಜ’ ಮಾವಿನ ಇಳುವರಿ ಈ ಬಾರಿ ಕೈಕೊಟ್ಟಿದೆ. ಬಿರುಗಾಳಿಗೆ ಸಿಕ್ಕಿ ಟನ್ ಗಟ್ಟಲೆ ಮಾವಿನಕಾಯಿಗಳು ಉದುರಿ ನೆಲದ ಪಾಲಾಗಿವೆ.

ಕಟಾವಿನ ಹಂತದಲ್ಲಿದ್ದ ಭತ್ತ, ಮೆಕ್ಕೆಜೋಳ, ಮತ್ತು ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿ ಇಡೀ ಬೆಳೆ ಕೊಳೆತು ಹೋಗಿದ್ದು, ವಾಣಿಜ್ಯ ಬೆಳೆಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.

ಟೊಮೆಟೊ, ಈರುಳ್ಳಿ, ಮೆಣಸಿನಕಾಯಿ ಹಾಗೂ ಹಸಿರು ತರಕಾರಿಗಳು ಮಳೆನೀರಲ್ಲೇ ಕೊಳೆತು ನಾರುತ್ತಿದ್ದು, ಮಾರುಕಟ್ಟೆಗೆ ಸಾಗಿಸಲೂ ಯೋಗ್ಯವಿಲ್ಲದಂತಾಗಿವೆ. ತರಕಾರಿ ಬೆಳೆಗಳನ್ನೇ ನಂಬಿಕೊಂಡಿದ್ದ ರೈತರು ಒಂದೆರೆಡು ಮಳೆಗೆ ಬೆಳೆಗಳನ್ನು ಕಳೆದುಕೊಂಡು ದಿಕ್ಕೇ ತೋಚದೆ ಬಹುತೇಕ ರೈತರು ಕಂಗಾಲಾಗಿದ್ದಾರೆ.

ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಮತ್ತು ಭಾರೀ ಗಾಳಿಯಿಂದಾಗಿ ಟೊಮೆಟೊ ಬೆಳೆ ತೀವ್ರವಾಗಿ ಹಾನಿಗೊಳಗಾಗಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಟೊಮೆಟೊ ಮತ್ತು ತರಕಾರಿ ಬೆಳೆಗಾರರು ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದರಿಂದ ಕಣ್ಣೀರು ಹಾಕುತ್ತಿದ್ದಾರೆ. ಹೂವು, ತರಕಾರಿ ಬೆಳೆ, ಮಾವು ಬೆಳೆಗಳು ಸಂಪೂರ್ಣ ಹಾನಿಯಾಗಿವೆ.

“ವರ್ಷಪೂರ್ತಿ ಸಾಲ ಸೋಲ ಮಾಡಿ, ಹಗಲಿರುಳು ಬೆವರು ಹರಿಸಿ ಬೆಳೆದ ಬೆಳೆ ಕಣ್ಣೆದುರೇ ನಾಶವಾಗುವುದನ್ನು ನೋಡುವುದಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಮಾರುಕಟ್ಟೆಗೆ ಕೊಂಡೊಯ್ಯುವ ಮುನ್ನವೇ ಎಲ್ಲವೂ ಮಣ್ಣು ಪಾಲಾಗಿದೆ. ಈ ಅಕಾಲಿಕ ಮಳೆ ಕೇವಲ ಬೆಳೆಗಳನ್ನು ಮಾತ್ರ ನಾಶ ಮಾಡಿಲ್ಲ, ನಮ್ಮ ಆರ್ಥಿಕ ಬೆನ್ನೆಲುಬನ್ನೇ ಮುರಿದು ಬಿಟ್ಟಿದೆ” ಎಂದು ಚಿಕ್ಕಬಳ್ಳಾಪುರದ ರೈತ ಶ್ರೀನಿವಾಸ ಎಂಬುವವರು ಈ ದಿನ.ಕಾಮ್‌ನೊಂದಿಗೆ ಅವಲತ್ತುಕೊಂಡರು.

“ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಆಳುಗಳು ಮತ್ತು ಕೀಟನಾಶಕಗಳಿಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದೆವು. ಈಗ ಹಾಕಿದ್ದ ಬಂಡವಾಳವೂ ವಾಪಸ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕುಗಳಲ್ಲಿ, ಲೇವಾದೇವಿಗಾರರ ಬಳಿ ಕೈಗಡ ಸಾಲ ಪಡೆದು ಕೃಷಿ ಮಾಡಿದ್ದೆವು. ಬೆಳೆ ಕೈಕೊಟ್ಟಿರುವುದರಿಂದ ಹೇಗೆ ಸಾಲ ಮರುಪಾವತಿ ಮಾಡಬೇಕೆಂಬ ಚಿಂತೆ ಕಾಡುತ್ತಿದೆ. ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲೆಯ ತಿಪಟೂರು ಹಾಗೂ ಹುಳಿಯಾರು ಭಾಗದ ರೈತರ ಅಳಲು: ತಿಪಟೂರು ತಾಲೂಕಿನ ಮಟ್ಟಿಹಳ್ಳಿ, ಬೆಣ್ಣೆನಹಳ್ಳಿ, ಮಡಿಹಳ್ಳಿ, ಅಂಚೆಕೊಪ್ಪಲು ಮತ್ತು ತಡಸೂರು ಮುಂತಾದ ಹಳ್ಳಿಗಳ ರೈತರಾದ ರಮೇಶ್, ಮಂಜುನಾಥ್, ಸಿದ್ದಲಿಂಗಪ್ಪ, ಗಿಡ್ಡಮ್ಮ ಎಂಬುವವರ ತೋಟಗಳಲ್ಲಿದ್ದ ಸುಮಾರು 35,000ಕ್ಕೂ ಹೆಚ್ಚು ಕಟಾವಿಗೆ ಬಂದಿದ್ದ ಬಾಳೆ ಗಿಡಗಳು, ನೂರಾರು ತೆಂಗು ಮತ್ತು ಅಡಿಕೆ ಮರಗಳು ಬಿರುಗಾಳಿಗೆ ಸಿಕ್ಕಿ ನೆಲಸಮವಾಗಿವೆ.

ಹಾವೇರಿ ಜಿಲ್ಲೆಯ ರೈತರು: ಹಾವೇರಿ ಜಿಲ್ಲೆಯ ಬ್ಯಾಡಗಿ, ರಾಣೇಬೆನ್ನೂರು, ಹಿರೇಕೆರೂರು, ಸವಣೂರು ಮತ್ತು ರಟ್ಟೀಹಳ್ಳಿ ಭಾಗದಲ್ಲಿ ಬರೋಬ್ಬರಿ 1,378 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಭತ್ತ, ಬಾಳೆ, ಪಪ್ಪಾಯಿ, ಮಾವು ಮತ್ತು ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. ಹಾವೇರಿಯಲ್ಲಿ ಒಬ್ಬರು ರೈತರು ತನ್ನ ಹೆಂಡತಿಯ ತಾಳಿ ಸರವನ್ನು ಅಡವಿಟ್ಟು, ಭತ್ತ ಬೆಳೆ ನಾಟಿ ಮಾಡಿದ್ದು, ಇಡೀ ಬೆಳೆ ಮಳೆಯಿಂದ ಹಾನಿಯಾಗಿರುವುದನ್ನು ಕಂಡ ರೈತ ಅಕ್ಷರಶಃ ಕುಸಿದುಹೋಗಿದ್ದಾರೆ.

ಗದಗ ಜಿಲ್ಲೆಯ ಕಳಸಾಪುರದಲ್ಲಿ ರೈತ ನಸೀರ್‌ ಅಹಮದ್‌ ಭಂಡಾರಿ ಅವರು ಮಾತನಾಡಿ, “ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ಪೂರ್ತಿ ಹಾನಿಯಾಗಿದ್ದು, ಕೈಗೆ ಬಂದದ್ದು ಬಾಯಿಗೆ ಬರದಂತಾಗಿದೆ…. ನಾಲ್ಕೈದು ತಿಂಗಳಿಂದ ಕಾಪಾಡಿಕೊಂಡು ಬಂದಿದ್ದೆ. ಗೊನೆಗಳು ಬಲಿಯುತ್ತಿದ್ದವು. ಇನ್ನು ಕೆಲವೇ ದಿನಗಳಲ್ಲಿ ಕಟಾವು ಮಾಡಿಸಿಕೊಳ್ಳುತ್ತಿದ್ದವು. ಗೊನೆಗಳ ಭಾರ ಹೊತ್ತು ನಿಂತಿದ್ದ ಬಾಳೆ ಗಿಡಗಳು ಒಂದೇ ಒಂದು ಬಾರಿಯ ಬಿರುಗಾಳಿ ಮಳೆಗೆ ಸಿಲುಕಿ ನೆಲ್ಲಕ್ಕೆ ಅಪ್ಪಳಿಸಿವೆ. ಕೈ ಕೆಸರಾದರೆ ಬಾಯಿ ಮೊಸರು ಎನ್ನುತ್ತಾರೆ. ಆದರೆ, ಕೈ ಕೆಸರನ್ನು ಕಣ್ಣೀರಿನಿಂದ ತೊಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ” ಎಂದು ಸಂಕಟ ವ್ಯಕ್ತಪಡಿಸಿದರು.

ಕಲಬುರಗಿ ಮತ್ತು ಬಯಲುಸೀಮೆ ಭಾಗದ ರೈತರು: ಇತ್ತ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು 45 ಹೆಕ್ಟೇರ್‌ಗೂ ಅಧಿಕ ತೋಟಗಾರಿಕೆ ಬೆಳೆಗಳು ಮಣ್ಣು ಪಾಲಾಗಿವೆ. ಒಟ್ಟಾರೆಯಾಗಿ, ದಕ್ಷಿಣ ಒಳನಾಡಿನಿಂದ ಹಿಡಿದು ಉತ್ತರ ಕರ್ನಾಟಕದ ಗಡಿ ಗ್ರಾಮಗಳವರೆಗಿನ ಸಾವಿರಾರು ರೈತ ಕುಟುಂಬಗಳು ಈ ಮಳೆಯ ಆರ್ಭಟದಿಂದಾಗಿ ತಮ್ಮ ಇಡೀ ವರ್ಷದ ಆದಾಯವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಪರಿಹಾರ ಕಾರ್ಯ ಮತ್ತು ಸರ್ಕಾರದ ಮುಂದಿರುವ ಸವಾಲು

ರೈತ ಮುಖಂಡ ಮಲ್ಲಿಕಾರ್ಜುನ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬೆಳೆಹಾನಿಯ ತೀವ್ರತೆಯನ್ನು ಅರಿತು ಸರ್ಕಾರ ಮತ್ತು ಕೃಷಿ ಇಲಾಖೆ ತಕ್ಷಣದ ಕ್ರಮಗಳಿಗೆ ಮುಂದಾಗಬೇಕಿದೆ. ಕಂದಾಯ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ, ನಷ್ಟದ ನಿಖರ ಅಂದಾಜು(Spot ಜಂಟಿ ಸಮೀಕ್ಷೆ) ಮಾಡಬೇಕಾಗಿದೆ. ವಿಳಂಬವಿಲ್ಲದೆ ತಂತ್ರಜ್ಞಾನ ಬಳಸಿ ಬೆಳೆಹಾನಿ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು” ಎಂದು ಆಗ್ರಹಿಸಿದರು.

“ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ'(NDRF) ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ ನಿಯಮಾವಳಿಗಳಡಿ ಅರ್ಹ ರೈತರಿಗೆ ತಾರತಮ್ಯವಿಲ್ಲದೆ ನೇರವಾಗಿ ಬ್ಯಾಂಕ್ ಖಾತೆಗಳಿಗೆ (DBT) ಪರಿಹಾರ ಧನ ತಲುಪಿಸಬೇಕು” ಎಂದು ಒತ್ತಾಯಿಸಿದರು.

ಮನುಷ್ಯನ ಶಕ್ತಿ ಮಿತಿಯಾದದ್ದು, ಎಂದಿಗೂ ಪ್ರಕೃತಿಯ ವಿಕೋಪದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬುದನ್ನು ಮೇ ತಿಂಗಳ ಅಕಾಲಿಕ ಮಳೆ ಮತ್ತೊಮ್ಮೆ ಸಾಬೀತುಪಡಿಸಿದೆ. ಇಡೀ ದೇಶಕ್ಕೆ ಅನ್ನ ನೀಡುವ ರೈತ ತಾನು ಬೆಳೆದ ಬೆಳೆಯನ್ನು ಕಣ್ಣೆದುರೇ ಕಳೆದುಕೊಂಡು ಅಸಹಾಯಕನಾಗಿ ನಿಂತಿರುವುದನ್ನು ಕಂಡರೆ ಕರುಳು ಹಿಂಡಿವಂತಾಗುತ್ತದೆ.

ಇದನ್ನೂ ಓದಿದ್ದೀರಾ? ‌ಅಮೆರಿಕ, ಬ್ರಿಟನ್ ʼಮಾವು ಮಾರುಕಟ್ಟೆʼಯತ್ತ ತಿರುಗಿದ ಕರ್ನಾಟಕ

ಕೃಷಿ ಕೇವಲ ಒಂದು ಕಾಯಕವಲ್ಲ, ಅದು ನಮ್ಮ ದೇಶದ ಜೀವನಾಡಿ. ಆದ್ದರಿಂದ, ಇಂತಹ ಸಂಕಷ್ಟದ ಸಮಯದಲ್ಲಿ ಕೇವಲ ಕಾಗದದ ಮೇಲಿನ ಆಶ್ವಾಸನೆಗಳು ಅಥವಾ ವಿಳಂಬ ನೀತಿಗಳಿಂದ ರೈತನ ಹೊಟ್ಟೆ ತುಂಬುವುದಿಲ್ಲ. ಸರ್ಕಾರವು ತಕ್ಷಣವೇ ಸ್ಪಂದಿಸಿ, ರಾಜಕೀಯವನ್ನು ಬದಿಗಿಟ್ಟು ಜಿಪಿಎಸ್ ಆಧಾರಿತ ನಿಖರ ಸಮೀಕ್ಷೆ ನಡೆಸಿ, ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತನಿಗೂ ತಾರತಮ್ಯವಿಲ್ಲದೆ ನೇರವಾಗಿ ಸೂಕ್ತ ಪರಿಹಾರ ಧನವನ್ನು ತಲುಪಿಸಬೇಕಿದೆ. ಇದರೊಂದಿಗೆ, ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಬಲ್ಲ ತಂತ್ರಜ್ಞಾನ ಮತ್ತು ಸುಲಭ ಬೆಳೆ ವಿಮೆ ಯೋಜನೆಗಳನ್ನು ಹಳ್ಳಿ ಹಳ್ಳಿಗೂ ತಲುಪಿಸುವ ದೀರ್ಘಕಾಲೀನ ಕೃಷಿ ನೀತಿಗಳ ಅಗತ್ಯವಿದೆ. ಅನ್ನದಾತನಿಗೆ ಇಂದು ಕೇವಲ ಆರ್ಥಿಕ ಸಹಾಯ ಮಾತ್ರವಲ್ಲ, ಆತ ಮತ್ತೆ ಧೃತಿಗೆಡದೆ ನೇಗಿಲು ಹಿಡಿದು ಭೂಮಿಗೆ ಇಳಿಯುವಂತೆ ಮಾಡುವ ನೈತಿಕ ಬೆಂಬಲ ಮತ್ತು ಧೈರ್ಯದ ತುರ್ತು ಅಗತ್ಯವಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಭೀಕರ ಅಪಘಾತ: ಇಬ್ಬರಿಗೆ ಗಂಭೀರ 

ವಾಹನ ಅಪಘಾತ,ಜೆಸಿಬಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು...

ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ; ಸರ್ವಾಧ್ಯಕ್ಷರಾಗಿ ಸಿ.ಜಿ.ಹಂಪಣ್ಣ ಆಯ್ಕೆ

ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ನಗರದ...

ಬೀದರ್ | ಜಿಪಂ, ತಾಪಂ ಮೀಸಲಾತಿ ಹಂಚಿಕೆಯಲ್ಲಿ ಒಬಿಸಿಗೆ ಅನ್ಯಾಯ: ಶ್ರೀಕಾಂತ ಸ್ವಾಮಿ ಆರೋಪ

ಬೀದರ್ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಯ ಎಂಟು ತಾಲೂಕು ಪಂಚಾಯಿತಿಗಳ ಚುನಾವಣೆಗೆ...

‘ಎಸ್ಐಆರ್’ ವಿರುದ್ಧ ಸಿಡಿದೆದ್ದ ರೈತ-ದಲಿತ ಸಂಘಟನೆಗಳು: ಅ.23ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ

ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಆಯೋಗದ ಏಕಪಕ್ಷೀಯ ನಿರ್ಧಾರಗಳನ್ನು...