ಬಿಸಿಲ ಬೇಗೆಗೆ ಮಾವು ಬೆಳೆ ನಾಶ, ಬೆಲೆ ಕುಸಿತ, ಬೆಳೆಗಾರರಿಗೆ ನೆರವಾಗುವುದೇ ಸರ್ಕಾರ?

Date:

ತಾಪಮಾನದ ತೀವ್ರ ಏರಿಕೆ, ಅಕಾಲಿಕ ಮಳೆ ಮತ್ತು ಜೋನಿ ರೋಗದ ಕಾಟದಿಂದ ಮಾವಿನ ತೋಟಗಳು ತುತ್ತಾಗಿವೆ.  ಇದು ಕೇವಲ ಬೆಳೆ ನಷ್ಟದ ಸಮಸ್ಯೆಯಲ್ಲ, ರೈತರ ಬದುಕಿನ ಪ್ರಶ್ನೆಯಾಗಿದೆ. ಈ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ವಿಜ್ಞಾನಾಧಾರಿತ ಕೃಷಿ ವಿಧಾನಗಳು, ಸರ್ಕಾರಿ ಬೆಂಬಲ ಮತ್ತು ರೈತರ ಜಾಗೃತಿ‌ ಅಗತ್ಯವಾಗಿದೆ. 

ತಾಪಮಾನದ ತೀವ್ರ ಏರಿಕೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ತೋಟಗಾರಿಕೆ ಬೆಳೆಗಳಲ್ಲಿ, ಅದರಲ್ಲೂ ಮಾವಿನ ತೋಟಗಳಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಕಾಲಿಕ ಮಳೆ, ಬೇಸಿಗೆಯ ಉಷ್ಣತೆ ವಿಪರೀತವಾಗಿ ಏರುತ್ತಿರುವುದು, ಬಿಸಿಗಾಳಿಯ ಪ್ರಭಾವ ಹಾಗೂ ಜೋನಿ ರೋಗದ ಕಾಟ ಎಲ್ಲವೂ ಸೇರಿ ಮಾವು ಕಾಯಿಕಚ್ಚುವ ಮುನ್ನವೇ ಉದುರುವ ಘಟನೆಗಳು ಹೆಚ್ಚುತ್ತಿವೆ. ಇದರಿಂದಾಗಿ ಮಾವು ಬೆಳೆ ನಾಶವಾಗುತ್ತಿದ್ದು, ಹವಾಮಾನ ವೈಪರೀತ್ಯ ಬೆಳೆಗಾರರನ್ನು ಸಂಕಷ್ಟದ ಕೂಪಕ್ಕೆ ತಳ್ಳಿವೆ.

- Advertisement -

ಮಾವಿನ ಮರವು ಸಾಮಾನ್ಯವಾಗಿ ಬಿಸಿ ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆ. ಆದರೆ, ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಮೀರಿದಾಗ ಅದರ ಸುಸ್ಥಿರ ಕೃಷಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿಶೇಷವಾಗಿ ಹೂ ಬಿಟ್ಟ ನಂತರ ಕಾಯಿಗಳು ರೂಪುಗೊಳ್ಳುವ ಹಂತದಲ್ಲಿ ಹೆಚ್ಚಿನ ಉಷ್ಣತೆ ಕಂಡುಬಂದರೆ, ಮರದ ಒಳಗಿನ ನೀರಿನ ಅಂಶ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಮರದಲ್ಲಿನ ಕಾಯಿ ಉದುರುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದು ಸಹಜವಾಗಿ ಮರದ ರಕ್ಷಣಾತ್ಮಕ ಕ್ರಿಯೆಯಾದರೂ, ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಇದು ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಮಣ್ಣಿನ ತೇವಾಂಶ ಇಲ್ಲದಿರುವುದು ಈ ಸಮಸ್ಯೆಗೆ ಇನ್ನೊಂದು ಪ್ರಮುಖ ಕಾರಣವಾಗಿದೆ. ತಾಪಮಾನ ಹೆಚ್ಚಿದಂತೆ ಭೂಮಿಯಲ್ಲಿನ ನೀರಿನ ಅಂಶ ಆವಿಯಾಗುವ ಪ್ರಮಾಣವೂ ಹೆಚ್ಚುತ್ತದೆ. ಇದರಿಂದ ಬೇರುಗಳಿಗೆ ಅಗತ್ಯವಾದ ನೀರು ಲಭ್ಯವಾಗುವುದಿಲ್ಲ. ನೀರಿನ ಕೊರತೆಯಿಂದ ಮರದಲ್ಲಿ ಪೋಷಕಾಂಶಗಳ ಸಾಗಣೆ ಕುಂಠಿತವಾಗುತ್ತದೆ. ಹೀಗಾಗಿ, ಕಾಯಿಯ ಬೆಳವಣಿಗೆಗೆ ಬೇಕಾದ ಶಕ್ತಿ ದೊರೆಯದೆ ಉದುರುತ್ತವೆ.

Advertisements

ಇದಲ್ಲದೆ, ಬಿಸಿಗಾಳಿಯ ಪರಿಣಾಮವೂ ಗಂಭೀರವಾಗಿದೆ. ಬಿಸಿಗಾಳಿ(ಹೀಟ್ ವೇವ್ಸ್) ಉಂಟಾದಾಗ ಮರದ ಎಲೆಗಳು ಒಣಗುತ್ತವೆ, ಫೋಟೋಸಿಂಥಸಿಸ್ ಕ್ರಿಯೆ ಕುಂಠಿತವಾಗುತ್ತದೆ. ಇದರ ಪರಿಣಾಮವಾಗಿ ಆಹಾರ ಉತ್ಪಾದನೆ ಕಡಿಮೆಯಾಗುತ್ತದೆ. ಆಹಾರದ ಕೊರತೆಯಿಂದ ಮರವು ಎಲ್ಲ ಕಾಯಿಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕೆಲವು ಕಾಯಿಗಳು ಉದುರಿಹೋಗುತ್ತವೆ.

ಇತ್ತೀಚಿನ ಹವಾಮಾನ ಬದಲಾವಣೆಯ ಪರಿಣಾಮವಾಗಿ ಈ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ. ಮಳೆಯ ಅನಿಯಮಿತತೆ, ಉಷ್ಣತೆಯ ಅಸಾಧಾರಣ ಏರಿಕೆ ಮತ್ತು ಗಾಳಿಯ ತೀವ್ರತೆ- ಈ ಎಲ್ಲ ಅಂಶಗಳು ಮಾವಿನ ಮರಗಳ ಮೇಲೆ ಒತ್ತಡ ಹೇರುತ್ತವೆ. ಇದರ ಪರಿಣಾಮವಾಗಿ ಮಾವಿನ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಗಮನಾರ್ಹವಾಗಿದೆ.

ಈ ಸಮಸ್ಯೆಯಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಒಂದು ಮಾವಿನ ತೋಟವನ್ನು ಬೆಳೆಸಲು ಸಾಕಷ್ಟು ಸಮಯ, ಹಣ ಮತ್ತು ಶ್ರಮ ಬೇಕಾಗುತ್ತದೆ. ಆದರೆ, ಫಲ ಕೊಡುವ ಸಮಯದಲ್ಲಿ ಕಾಯಿಗಳು ಉದುರಿದರೆ ರೈತರಿಗೆ ನಿರೀಕ್ಷಿತ ಆದಾಯ ದೊರೆಯುವುದಿಲ್ಲ. ಇದರಿಂದ ಸಾಲದ ಬಾಧೆ ಹೆಚ್ಚಾಗುವ ಸಾಧ್ಯತೆಯೂ ಇದೆ.

ಜೋನಿ ರೋಗದ ಹೊಡೆತ

ರಾಮನಗರ ಜಿಲ್ಲೆಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಹೂವು ಚೆನ್ನಾಗಿ ಬಂದು ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದ್ದ ತೋಟಗಳು ಜೋನಿ ರೋಗಕ್ಕೆ ತುತ್ತಾಗಿದ್ದು, ಕಾಯಿ ಬೆಳವಣಿಗೆಯ ಹಂತದಲ್ಲೇ ದೊಡ್ಡ ಹಾನಿ ಉಂಟಾಗಿದೆ. ಈ ರೋಗದಿಂದ ಕಾಯಿಗಳ ಬೆಳವಣಿಗೆ ಕುಂಠಿತಗೊಂಡು ಉದುರುತ್ತಿವೆ. ಇದರಿಂದಾಗಿ ರೈತರು ನಿರೀಕ್ಷಿಸಿದ್ದ ಲಾಭ ಕ್ಷಣಾರ್ಧದಲ್ಲಿ ನಷ್ಟವಾಗಿ ಪರಿಣಮಿಸಿದೆ.

ರಾಜ್ಯದಲ್ಲಿಯೇ ಮಾವು ಬೆಳೆಯಲ್ಲಿ ಎರಡನೇ ಸ್ಥಾನ ಗಳಿಸಿರುವ ರಾಮನಗರದಲ್ಲಿ 27 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಾದಾಮಿ ತಳಿಯ ಮಾವನ್ನೇ ಬೆಳೆಯಲಾಗುತ್ತದೆ. ಬರೋಬ್ಬರಿ 22,830 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಾದಾಮಿ ಮಾವನ್ನು ಬೆಳೆಯಲಾಗುತ್ತದೆ. ಕಳೆದ ಬಾರಿ 1,96,690 ಮೆಟ್ರಿಕ್‌ ಟನ್‌ ಬಾದಾಮಿ ಇಳುವರಿ ಬಂದಿತ್ತು. ಆದರೆ ಈ ವರ್ಷ ಬಾದಾಮಿ ತಳಿಯ ಮಾವು ಕೈಕೊಟ್ಟಿದೆ. ಹಾಗಾಗಿ ಕೇವಲ 82,667 ಮೆಟ್ರಿಕ್‌ ಟನ್‌ ಇಳುವರಿ ಬರುವ ನಿರೀಕ್ಷೆಯಿದೆ. ಈ ಮೂಲಕ ಶೇ.60ಕ್ಕಿಂತ ಅಧಿಕ ಬಾದಾಮಿ ಇಳುವರಿ ಕುಂಠಿತವಾಗಲಿದೆ ಎಂದು ಅಂದಾಜಿಸಲಾಗಿದೆ.

ಇದರ ಬೆನ್ನಲ್ಲೇ ಹಲವಾರು ಬೆಳೆಗಾರರು ತಮ್ಮ ತೋಟಗಳಲ್ಲಿ ಶೇಕಡಾವಾರು ಪ್ರಮಾಣದಲ್ಲಿ ಕಾಯಿ ಉದುರುವಿಕೆಯನ್ನು ಗಮನಿಸಿ ಆತಂಕಗೊಂಡಿದ್ದು, ಜಿಲ್ಲೆಯ ಮಾವು ಬೆಳೆಗಾರರ ನಿಯೋಗವು ಉಪಮುಖ್ಯಮಂತ್ರಿ ಹಾಗೂ ಜಿಲ್ಲೆಯವರೇ ಆದ ಡಿ ಕೆ ಶಿವಕುಮಾರ್‌ ಅವರನ್ನು ಭೇಟಿಯಾಗಲು ತೀರ್ಮಾನಿಸಿದೆ. ಡಿಸಿಎಂ ಎದುರು ಮಾವು ಬೆಳೆಗಾರರ ಪರಿಸ್ಥಿತಿ ಮತ್ತು ಪಡಿಪಾಟಲುಗಳನ್ನು ಹೇಳಿಕೊಳ್ಳುವ ಮೂಲಕ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲು‌ ರೈತರು ಸಜ್ಜಾಗಿದ್ದಾರೆ.

ದಿನೇಶ್‌ ಬಿಳಗುಂಬ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಬಾರಿ ವಿಪರೀತ ಬಿಸಿಲು ಇರುವ ಕಾರಣದಿಂದಾಗಿ ಮಾವಿನ ಬೆಳೆ ಜೋನಿ ರೋಗದ ಜತೆಗೆ ಇತರೆ ರೋಗಗಳು ಮತ್ತು ಕೀಟಗಳ ದಾಳಿಗೂ ಒಳಗಾಗಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಬೂದಿರೋಗ, ಥ್ರಿಪ್ಸ್‌ಗಳ ದಾಳಿ ಹಾಗೂ ಹೂವು-ಕಾಯಿ ಉದುರುವಿಕೆ ಎಲ್ಲ ಸಮಸ್ಯೆಗಳಿಂದ ಇಳುವರಿ ಕುಗ್ಗುತ್ತಿದೆ. ತಾಪಮಾನ ಏರಿಕೆಯಿಂದ ಮರಗಳಲ್ಲಿನ ಆಹಾರ ಉತ್ಪಾದನೆ ಕುಂಠಿತವಾಗುವುದರಿಂದ, ಮರವು ಎಲ್ಲ ಕಾಯಿಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕೆಲವು ಕಾಯಿಗಳನ್ನು ಬಿಟ್ಟುಬಿಡುತ್ತದೆ. ಆಗ ಕಾಯಿಗಳು ಉದುರಲಾರಂಭಿಸುತ್ತವೆ” ಎಂದು ಹೇಳಿದರು.

“ಮಾವಿನ ತೋಟ ಬೆಳೆಸುವುದು ದೀರ್ಘಾವಧಿಯ ಹೂಡಿಕೆ. ಹಲವು ವರ್ಷಗಳ ಶ್ರಮ, ಹಣ ಮತ್ತು ನಿರೀಕ್ಷೆಗಳೊಂದಿಗೆ ಬೆಳೆಸಿದ ತೋಟಗಳಲ್ಲಿ ಕೊನೆಗೆ ಫಸಲು ಇಲ್ಲದಿರುವುದನ್ನು ನೋಡಿದಾಗ ತುಂಬಾ ಬೇಸರವಾಗುತ್ತದೆ. ರೈತರಿಗೆ ಬಂಡವಾಳವೂ ವಾಪಸ್ಸಾಗದ ಪರಿಸ್ಥಿತಿ ಉಂಟಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಈ ಮೊದಲು ಮಾವಿನ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಅನುಸರಿಸುತ್ತಿದ್ದೆವು. ಎಲೆಗಳಿಂದ ಹಿಡಿದು ಸಣ್ಣ ಸಣ್ಣ ಕಾಯಿ, ಹಣ್ಣುಗಳವರೆಗೆ ಇದರಿಂದ ಒಳ್ಳೆ ಲಾಭ ಇರುತ್ತಿತ್ತು. ಈಗ ಮಳೆಯ ಕೊರತೆ, ವಿಪರೀತ ಬಿಸಿಲು ಇವೆಲ್ಲ ಒಂದು ಕಡೆಯಾದರೆ, ಮತ್ತೊಂದು ಕಡೆ ಔಷಧಿ ಸಿಂಪಡಿಸದೇ ಇದ್ದರೆ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಬಂದ ಬೆಳೆಗೆ ಸರಿಯಾದ ಬೆಲೆಯೂ ಸಿಗುವುದಿಲ್ಲ. ಅಡಕೆ-ತೆಂಗು ಬೆಳೆಗಳಿಗೆ ಸರ್ಕಾರ ನೆರವಾದಂತೆ ಮಾವು ಬೆಳೆಗೆ ಯಾವುದೇ ರೀತಿಯ ಆದ್ಯತೆ ನೀಡುವುದಿಲ್ಲ. ಇದರಿಂದಾಗಿ ರೈತರು ನಷ್ಟ ಅನುಭವಿಸುವ ಬದಲು ಮರಗಳನ್ನು ಕಟಾವು ಮಾಡಿ ಪರ್ಯಾಯ ಬೆಳೆಗಳಿಗೆ ಬದಲಾಗುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಎರಡು ವರ್ಷದಿಂದಲೂ ಭಾರೀ ನಷ್ಟವಾಗುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಶೇ.50ರಷ್ಟು ಇಳುವರಿ ಕುಂಠಿತವಾಗಿದೆ. ನನ್ನ ತೋಟದಲ್ಲಿಯೇ 150 ಮರಗಳಿವೆ. ಎರಡು ವರ್ಷಗಳಿಂದ ಒಂದೇ ಒಂದು ರೂಪಾಯಿ ಆದಾಯ ಇಲ್ಲ. ಔಷಧಿ ಗೊಬ್ಬರಕ್ಕೆ ಖರ್ಚು ಮಾಡುವುದನ್ನೂ ತೆಗೆದುಕೊಳ್ಳುವುದು ಕಷ್ಟವಾಗಿದೆ” ಎಂದರು.

“ಕೀಟ, ರೋಗಬಾಧೆ ಹಾಗೂ ಹೂ, ಕಾಯಿ ಕಚ್ಚುವ ಸಮಯದಲ್ಲಿ ಉಂಟಾದ ನೀರಿನ ಕೊರತೆ, ಅಲ್ಲದೆ ಹೆಚ್ಚುತ್ತಿರುವ ಬಿಸಿಲು ಈ ಬಾರಿಯ ಫಸಲಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಕಟ್ಟದ ಕಾರಣ ಶೇ. 50ಕ್ಕಿಂತಲೂ ಅಧಿಕ ಇಳುವರಿ ಕುಸಿದಿದೆ. ರೈತರು ಮಾವಿನ ಬೆಳೆ ನಿರ್ವಹಣೆಗೆ ಮಾಡಿದ್ದ ಸಾಲವನ್ನು ಹೇಗೆ ತೀರಿಸುವುದು ಎಂಬ ಆತಂಕದಲ್ಲಿದ್ದಾರೆ” ಎಂದು ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪೆನಿ ಅಧ್ಯಕ್ಷ ಧರಣೀಶ್‌ ಕುಮಾರ್‌ ಹೇಳಿದ್ದಾರೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಗ್ರ ಕ್ರಮಗಳು ಅಗತ್ಯವಾಗಿದೆ. ಮೊದಲನೆಯದಾಗಿ, ತೋಟಗಳಲ್ಲಿ ನೀರಿನ ಸಮರ್ಪಕ ನಿರ್ವಹಣೆ ಅತ್ಯಂತ ಮುಖ್ಯ. ಡ್ರಿಪ್ ಇರಿಗೇಶನ್‌ ಪದ್ಧತಿ ಬಳಸಿ ನೀರನ್ನು ಸಮರ್ಥವಾಗಿ ಬಳಸಬೇಕು. ಮಲ್ಚಿಂಗ್ ವಿಧಾನದಿಂದ ಮಣ್ಣಿನ ತೇವಾಂಶವನ್ನು ಕಾಪಾಡಬೇಕು. ಎರಡನೆಯದಾಗಿ, ಜೋನಿ ರೋಗ ನಿಯಂತ್ರಣಕ್ಕೆ ಬೇವಿನ ಎಣ್ಣೆ ಸಿಂಪಡಣೆ ಮತ್ತು ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು. ಮೂರನೆಯದಾಗಿ, ತಾಪಮಾನವನ್ನು ನಿಯಂತ್ರಿಸಲು ಮರಗಳಿಗೆ ಸೂಕ್ತ ನೆರಳು ಒದಗಿಸುವುದು ಅಥವಾ ಗಾಳಿಯ ತೀವ್ರತೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ, ಸಸ್ಯಾಹಾರ ಪೋಷಕಾಂಶಗಳನ್ನು ಸರಿಯಾದ ಸಮಯದಲ್ಲಿ ನೀಡುವುದರಿಂದ ಮರದ ಆರೋಗ್ಯವನ್ನು ಸುಧಾರಿಸಬಹುದು. ವಿಶೇಷವಾಗಿ ಪೋಟಾಷಿಯಂ ಮತ್ತು ಬೋರಾನ್ ಅಂಶಗಳು ಕಾಯಿ ಹಿಡಿತವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.

ಇದನ್ನೂ ಓದಿದ್ದೀರಾ? ತುಮಕೂರು | ಉಂಡೆ ಕೊಬ್ಬರಿಗೆ ದಾಖಲೆಯ ಬೆಲೆ: ಇಳುವರಿ ಕುಸಿತ

ಇದಲ್ಲದೆ, ರೈತರಿಗೆ ಸಮಯಕ್ಕೆ ಸರಿಯಾದ ಹವಾಮಾನ ಮಾಹಿತಿ ಒದಗಿಸುವುದು ಬಹಳ ಮುಖ್ಯ. ಮುಂಚಿತ ಎಚ್ಚರಿಕೆ ವ್ಯವಸ್ಥೆಗಳು ಇದ್ದರೆ, ರೈತರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ಈ ದಿಕ್ಕಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ.

ಒಟ್ಟಿನಲ್ಲಿ, ತಾಪಮಾನದ ತೀವ್ರ ಏರಿಕೆ, ಅಕಾಲಿಕ ಮಳೆ ಮತ್ತು ಜೋನಿ ರೋಗದ ಕಾಟದಿಂದ ಮಾವಿನ ತೋಟಗಳು ತುತ್ತಾಗಿವೆ. ಇದು ಕೇವಲ ಬೆಳೆ ನಷ್ಟದ ಸಮಸ್ಯೆಯಲ್ಲ, ರೈತರ ಬದುಕಿನ ಪ್ರಶ್ನೆಯಾಗಿದೆ. ಈ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ವಿಜ್ಞಾನಾಧಾರಿತ ಕೃಷಿ ವಿಧಾನಗಳು, ಸರ್ಕಾರಿ ಬೆಂಬಲ ಮತ್ತು ರೈತರ ಜಾಗೃತಿ‌ ಅಗತ್ಯವಾಗಿದೆ. ಇಲ್ಲವಾದರೆ, ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ಬೆಳೆಗಾರರು ನಷ್ಟಕ್ಕೊಳಗಾಗುವ ಸಾಧ್ಯತೆ ಅಧಿಕವಾಗಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು ಇಳಿಕೆ: ಯಾವೆಲ್ಲ ಔಷಧಿ ಅಗ್ಗ? ಪಡೆಯುವ ವಿಧಾನ ಹೇಗೆ?

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು ಸೇರಿ 11 ಬಂದರುಗಳನ್ನು ಮಾರಲು ಹೊರಟ ಮೋದಿ

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ...

OBC ಮೀಸಲಾತಿಗೆ ಮತಾಂತರದ ಬೇಲಿ: ಸುಪ್ರೀಂ ಹೊಸ ಆದೇಶದಲ್ಲಿ ಸಾಂವಿಧಾನಿಕ ವಿರೋಧಾಭಾಸ!

ಧರ್ಮ ಬದಲಾದರೆ ಸಾಮಾಜಿಕ ಹಿಂದುಳಿದಿರುವಿಕೆಯೂ ಅಳಿಸಿಹೋಗುತ್ತದೆಯೇ? ಮಂಡಲ್ ಆಯೋಗದ 11 ಮಾನದಂಡಗಳಲ್ಲಿ...