ಬೆಂಗಳೂರು | ಕಳೆದ 11 ತಿಂಗಳಲ್ಲಿ 16 ಸಾವಿರ ಸೈಬರ್ ಪ್ರಕರಣ ದಾಖಲು

Date:

2023 ವರ್ಷ ಕಳೆಯಲು ಇನ್ನು ಒಂದೇ ತಿಂಗಳು ಬಾಕಿ ಉಳಿದಿದೆ. ಈ ವರ್ಷದಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದು, ಕಳೆದ 11 ತಿಂಗಳಿನಲ್ಲಿ ನಾನಾ ಬಗೆಯ 16 ಸಾವಿರ ಸೈಬರ್ ಪ್ರಕರಣಗಳು ದಾಖಲಾಗಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಭಾನುವಾರ ‘ಕ್ರೈಮ್ ಇನ್ ಇಂಡಿಯಾ 2022’ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ 2022ರಲ್ಲಿ ನಗರದಲ್ಲಿ 9,940 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದವು. ಬೆಂಗಳೂರಿನ ತಂತ್ರಜ್ಞಾನ-ಬುದ್ಧಿವಂತ ಜನರು ಸೈಬರ್ ವಂಚಕರಿಂದ ಹೆಚ್ಚು ಬೇಟೆಯಾಡಲ್ಪಟ್ಟಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವಾರ್ಷಿಕ ವರದಿ ನೀಡಿದ ಕೆಲವೇ ದಿನಗಳಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್‌ಮೆಂಟ್‌ (ಸಿಐಡಿ) ಡೇಟಾವೊಂದನ್ನು ಹಂಚಿಕೊಂಡಿದ್ದು, “ಬೆಂಗಳೂರಿನಲ್ಲಿ ನಡೆದ ಒಟ್ಟು ಅಪರಾಧಗಳ ಸಂಖ್ಯೆ 67,446 ರಷ್ಟಿದ್ದು, ಈ ಪೈಕಿ ಅಂದರೆ 15,779 (23.4%) ಅಪರಾಧಗಳು ಸೈಬರ್‌ ಕ್ರೈಂಗೆ ಸಂಬಂಧಿಸಿದ ಪ್ರಕರಣಗಳಾಗಿವೆ. ನಗರದಲ್ಲಿ ವರದಿಯಾದ 46 ಸೈಬರ್ ಅಪರಾಧಗಳಲ್ಲಿ ಓಟಿಪಿ ವಂಚನೆ, ಸುಲಿಗೆ ಪ್ರಕರಣಗಳು ಇಗೀಗ ಅತ್ಯಂತ ಸಾಮಾನ್ಯವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸೈಬರ್ ಅಪರಾಧಗಳು ಪ್ರಸ್ತುತ ನಗರದ ಒಟ್ಟು ಪ್ರಕರಣಗಳಲ್ಲಿ 28% ಒಳಗೊಂಡಿವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2011ರ ಜನಗಣತಿಯ ಪ್ರಕಾರ ಅಂದಾಜು 85 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನಲ್ಲಿ ಸೈಬರ್ ಪ್ರಕರಣಗಳು ಹೆಚ್ಚಳವಾಗಿವೆ. ಕಳೆದ ವರ್ಷದ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಮುಂಬೈ (4,724) ಮತ್ತು ಹೈದರಾಬಾದ್ (4,436) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

2021ಕ್ಕೆ ಹೋಲಿಸಿದರೆ 2022ರಲ್ಲಿ ಸೈಬರ್ ಅಪರಾಧಗಳಲ್ಲಿ 54.75% ಹೆಚ್ಚಳವಾಗಿ ಎಂದು ಎನ್‌ಸಿಆರ್‌ಬಿ ವರದಿ ಬಹಿರಂಗಪಡಿಸಿದೆ. ಇನ್ನು ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ಆತಂಕಕಾರಿ ಪ್ರವೃತ್ತಿಯನ್ನು ತೋರುತ್ತಿದೆ.

2020ರಲ್ಲಿ ಬೆಂಗಳೂರಿನಲ್ಲಿ 8,892 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ. 2021ರಲ್ಲಿ, 6,423 ವರದಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 27.76% ರಷ್ಟು ಇಳಿಕೆ ಕಂಡುಬಂದಿದೆ. ಆದರೆ, 2022ರಲ್ಲಿ 9,940 ಪ್ರಕರಣಗಳು ದಾಖಲಾಗಿದ್ದವು.

2022ರಲ್ಲಿ ಸುಮಾರು 9,501 ಪ್ರಕರಣಗಳು ಕಂಪ್ಯೂಟರ್ ಸಂಬಂಧಿತ ಅಪರಾಧಗಳಾಗಿವೆ. ಇದರಲ್ಲಿ 6,319 ಕಂಪ್ಯೂಟರ್ ಬಳಸಿಕೊಂಡು ವ್ಯಕ್ತಿಗತ ವಂಚನೆ ಪ್ರಕರಣಗಳು ಸೇರಿವೆ. 422 ಪ್ರಕರಣಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಅಥವಾ ಲೈಂಗಿಕ ಕ್ರಿಯೆಗಳ ಪ್ರಕಟಣೆ ಅಥವಾ ಪ್ರಸಾರಕ್ಕೆ ಸಂಬಂಧಿಸಿವೆ ಎಂದು ವರದಿ ಹೇಳಿದೆ.

ನಗರದಲ್ಲಿ 2022ರಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವಂಚನೆ, ಓಟಿಪಿ ವಂಚನೆ, ಡೇಟಾ ಕಳ್ಳತನ ಮತ್ತು ಸೈಬರ್‌ಸ್ಟಾಕಿಂಗ್ ಅಥವಾ ಜನರನ್ನು ಬೆದರಿಸುವ ಪ್ರಕರಣಗಳು ವರದಿಯಾಗಿವೆ.

“ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಮತ್ತು ಆನ್‌ಲೈನ್ ಹಣಕಾಸು ವಹಿವಾಟಿನ ಮೇಲೆ ಅವಲಂಬನೆ ಹೆಚ್ಚಾಗಿರುವ ಕಾರಣ ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿವೆ” ಎಂದು ರಾಜ್ಯ ಸಿಐಡಿ ಮುಖ್ಯಸ್ಥ ಡಾ.ಎಂ.ಎ.ಸಲೀಂ ಹೇಳಿದ್ದಾರೆ.

“ದರೋಡೆ, ಡಕಾಯಿತಿ, ಮನೆ ಕಳ್ಳತನ ಹಾಗೂ ಚೈನ್ ಸ್ನ್ಯಾಚಿಂಗ್ ಪ್ರಕರಣಗಳಂತಹ ದೈಹಿಕ ಅಪರಾಧಗಳು ಕಡಿಮೆಯಾಗುತ್ತಿವೆ. ಡಿಜಿಟಲ್ ಅಪರಾಧಗಳು ಹೆಚ್ಚಳವಾಗುತ್ತಿವೆ. ನಗರದಲ್ಲಿ ಸೈಬರ್ ಅಪರಾಧಗಳಿಗೆ ಮಾತ್ರ ಎಂಟು ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಮೀಸಲಿರಿಸಲಾಗಿದೆ. ಎಲ್ಲ ಪೊಲೀಸ್ ಠಾಣೆಗಳಿಗೆ ಸೈಬರ್ ಕ್ರೈಂ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರ ನೀಡಲಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹1,500 ಹಣದ ಸಂಧಾನಕ್ಕೆ ತೆರಳಿದ ವ್ಯಕ್ತಿಯ ಕೊಲೆ

“ಸೈಬರ್ ಅಪರಾಧಗಳ ತನಿಖೆ, ಡಿಜಿಟಲ್ ಸಾಕ್ಷ್ಯಗಳನ್ನು ನಿರ್ವಹಿಸುವುದು. ಡೇಟಾವನ್ನು ಹೇಗೆ ಹೊರತೆಗೆಯುವುದು ಎಂಬುದರ ಕುರಿತು ಎಲ್ಲ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳ ಸ್ಟೇಷನ್ ಹೌಸ್ ಅಧಿಕಾರಿಗಳಿಗೆ (ಎಸ್‌ಹೆಚ್‌ಒ) ತರಬೇತಿ ನೀಡುತ್ತಿದ್ದೇವೆ” ಎಂದರು.

“ಸಂಶಯಾಸ್ಪದ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ವಾಟ್ಸಾಪ್‌ನಲ್ಲಿ ಅಪರಿಚಿತ ಫೋನ್ ಸಂಖ್ಯೆಗಳಿಂದ ಬರುವ ವೀಡಿಯೊ ಕರೆಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ. ಮೆಸೇಜ್ ಮೂಲಕ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ” ಎಂದು ತಿಳಿಸಿದರು.

ಆನ್‌ಲೈನ್, ಅರೆಕಾಲಿಕ ಉದ್ಯೋಗ ವಂಚನೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆ, ವೈವಾಹಿಕ ವಂಚನೆ, ಲಾಟರಿ ಹಗರಣಗಳು, ವಂಚನೆ, ಓಟಿಪಿ ವಂಚನೆ, ಕ್ರಿಪ್ಟೋಕರೆನ್ಸಿ, ಷೇರು ಹೂಡಿಕೆ ವಂಚನೆ ಸೇರಿದಂತೆ ನಾನಾ ತರಹದ ಮೂಲಕ ಜನರನ್ನು ವಂಚಿಸಲು ವಂಚಕರ ಜಾಲ ಕಾಯುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗದ ಒಂದೇ ಕುಟುಂಬದ ನಾಲ್ವರ ಹತ್ಯೆ: ಪ್ರಕರಣ ಭೇದಿಸಿದ ಪೊಲೀಸರು: ಮಗ ವಿನಾಯಕನಿಂದಲೇ ಸುಪಾರಿ!

ಲೋಕಸಭಾ ಚುನಾವಣೆಯ ಹೊತ್ತಲ್ಲೇ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮೂರು ದಿನಗಳ ಹಿಂದೆ...

ಕಲಬುರಗಿ | ಸರ್ಕಾರಗಳಿಂದ ತೊಗರಿಬೆಳೆಗಾರರಿಗೆ ದ್ರೋಹ: ಶರಣಬಸಪ್ಪ ಮಮಶೆಟ್ಟಿ

ಕಲ್ಯಾಣ ಕರ್ನಾಟಕ ನಾಡಿನ ತೊಗರಿಕಣಜದ ಅಭಿವೃದ್ಧಿ ಕುಂಟಿತಾ ಕಂಡಿದೆ ಇದೊಂದು ತೊಗರಿ...

ಉಡುಪಿ | ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯ; ಚೆಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಚೆಂಬು ಹಿಡಿದುಕೊಂಡು...

ಉಡುಪಿ | ಮತದಾನ ಬಹಿಷ್ಕಾರ ಹಿಂಪಡೆದ ಕಟ್ಟಿಂಗೇರಿ ಮತದಾರರು

ರಸ್ತೆಯ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದ ಮತದಾರರ ಮನವೊಲಿಸುವಲ್ಲಿ ಮಾಜಿ...