ಬೆಂಗಳೂರು | ಶಬ್ದ ಕಡಿಮೆ ಮಾಡಿ ಎಂದಿದ್ದಕ್ಕೆ ಹಲ್ಲೆ : ಗಾಯಾಳು ಸಾವಿನ ನಂತರ ಆರೋಪಿಗಳ ಬಂಧನ

Date:

  • ಏ. 2ರಂದು ರಾತ್ರಿಯ ವೇಳೆ ನಡೆದಿದ್ದ ಘಟನೆ
  • ಘಟನೆ ನಡೆದ ಎರಡು ದಿನಗಳ ನಂತರ ಲಾಯ್ಡ್‌ ಸಾವು

ಕಳೆದ ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಹೆಚ್ಚು ಶಬ್ದದೊಂದಿಗೆ ಹಾಡು ಹಾಕುತ್ತಿದ್ದಾರೆ ಎಂದು ದೂರು ನೀಡಿದ ನೆರೆಹೊರೆಯವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರು ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

54 ವರ್ಷದ ವ್ಯಕ್ತಿಯೊಬ್ಬರನ್ನು ನೆರೆಹೊರೆಯವರು ಮಾರಣಾಂತಿಕವಾಗಿ ಥಳಿಸಿದ್ದ ಘಟನೆ ಬೆಂಗಳೂರಿನ ವಿಜ್ಞಾನ ನಗರದಲ್ಲಿ ನಡೆದಿತ್ತು. ಥಳಿತಕ್ಕೊಳಗಾದ ವ್ಯಕ್ತಿ ಎರಡು ದಿನಗಳ ನಂತರ ಸಾವನ್ನಪ್ಪಿದ್ದರು.

ಲಾಯ್ಡ್ ನೆಹೆಮಿಯಾ (54) ಎಂಬುವವರು ಸಾವನ್ನಪ್ಪಿದ್ದರು. ರಾಮ್ ಸಮಂತ್ ರೈ, ಬಸುದೇವ್ ಸಮಂತ್ ರೈ ಹಾಗೂ ಅಭಿಷೇಕ್ ಸಿಂಗ್ ಹಲ್ಲೆ ಮಾಡಿದ ಆರೋಪಿಗಳು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾತ್ರಿ ವೇಳೆ ಹಾಡಿನ ಶಬ್ದ ಕಡಿಮೆ ಮಾಡಿ ಎಂದ ನೆರೆಯವರು; ಥಳಿತಕ್ಕೊಳಗಾದ ವ್ಯಕ್ತಿ ಸಾವು

ಒಂದೇ ಬಡಾವಣೆಯಲ್ಲಿ ವಾಸಿಸುತ್ತಿರುವ ಇವರು ಏ. 2ರಂದು ರಾತ್ರಿಯ ವೇಳೆ, ಮನೆಯಲ್ಲಿ ವಯಸ್ಸಾದ ತಾಯಿ ಇದ್ದಾರೆ. ಸಂಗೀತದ ಧ್ವನಿ ಕಡಿಮೆ ಮಾಡಿ ಎಂದು ಲಾಯ್ಡ್‌ ಅವರು ಈ ಮೂವರು ಆರೋಪಿಗಳಲ್ಲಿ ಮನವಿ ಮಾಡಿದ್ದರು.

ಆದರೆ, ಇದಕ್ಕೆ ಒಪ್ಪದ ಅವರು ಲಾಯ್ಡ್‌ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಘಟನೆ ನಡೆದ ಎರಡು ದಿನಗಳ ನಂತರ ಲಾಯ್ಡ್‌ ಅವರು ಸಾವನ್ನಪ್ಪಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಸಾಂಪ್ರದಾಯಿಕ ಗರಡಿ ಮನೆಗೆ ಹೂಡಿಕೆ ಮಾಡಿದ ಕ್ರಿಕೆಟಿಗ ಧೋನಿ

ಕ್ರಿಕೆಟ್‌ ಇತಿಹಾಸದಲ್ಲಿ ಶ್ರೇಷ್ಠ ನಾಯಕ ಎಂದೆನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಅವರು...

ಮಹಾಧರಣಿ | ದುಡಿವ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿಎಂ ಸಭೆ: ಸಚಿವ ಕೃಷ್ಣ ಬೈರೇಗೌಡ

ಧರಣಿನಿರತರ ಹಕ್ಕೊತ್ತಾಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಲು ಒಪ್ಪಿದ್ದಾರೆ. ಶೀಘ್ರದಲ್ಲೇ...

ಬೆಂಗಳೂರು | ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆ ಪ್ರವೇಶಿಸಿದ ಮಹಿಳೆ

ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆ ಪ್ರವೇಶ ಪಡೆದಿದ್ದ...

ಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ತಪಾಸಣೆಗೆ ನೂತನ ತಂತ್ರಜ್ಞಾನ ಅಳವಡಿಕೆ

ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ...