ಬೆಂಗಳೂರು | ರಾತ್ರಿ ವೇಳೆ ಹಾಡಿನ ಶಬ್ದ ಕಡಿಮೆ ಮಾಡಿ ಎಂದ ನೆರೆಯವರು; ಥಳಿತಕ್ಕೊಳಗಾದ ವ್ಯಕ್ತಿ ಸಾವು

Date:

  • ಥಳಿತಕ್ಕೊಳಗಾದ ವ್ಯಕ್ತಿ ಎರಡು ದಿನಗಳ ನಂತರ ಸಾವು
  • ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ ಲಾಯ್ಡ್ ಮನೆಯವರು

ರಾತ್ರಿ ವೇಳೆ ಹೆಚ್ಚು ಶಬ್ದದೊಂದಿಗೆ ಹಾಡು ಹಾಕುತ್ತಿದ್ದಾರೆಂದು ಕೇಳಿದ್ದಕ್ಕಾಗಿ 54 ವರ್ಷದ ವ್ಯಕ್ತಿಯೊಬ್ಬರನ್ನು ನೆರೆಹೊರೆಯವರು ಮಾರಣಾಂತಿಕವಾಗಿ ಥಳಿಸಿದ್ದ ಘಟನೆ ಬೆಂಗಳೂರಿನ ವಿಜ್ಞಾನ ನಗರದಲ್ಲಿ ನಡೆದಿತ್ತು. ಥಳಿತಕ್ಕೊಳಗಾದ ವ್ಯಕ್ತಿ ಎರಡು ದಿನಗಳ ನಂತರ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ರಾಮ್ ಸಮಂತ್ ರೈ, ಬಸುದೇವ್ ಸಮಂತ್ ರೈ ಹಾಗೂ ಅಭಿಷೇಕ್ ಸಿಂಗ್ ಹಲ್ಲೆ ಮಾಡಿದ ಆರೋಪಿಗಳು. ಇವರು 26 ರಿಂದ 30 ವರ್ಷ ವಯಸ್ಸಿನವರು. ಅದೇ ಬಡಾವಣೆಯಲ್ಲಿ ವಾಸಿಸುತ್ತಿದ್ದಾರೆ.

ವಿಜ್ಞಾನ ನಗರದಲ್ಲಿ ಏಪ್ರಿಲ್ 2ರಂದು ಬೆಳಗಿನ ಜಾವ 4.30ರ ಸುಮಾರಿಗೆ ನೆರೆಯ ಮನೆಯವರು ರಾತ್ರಿ ವೇಳೆ ಹೆಚ್ಚು ಶಬ್ಧದೊಂದಿಗೆ ಹಾಡು ಹಾಕಿದ್ದರು. ‘ತಮ್ಮ ಮನೆಯಲ್ಲಿ ವಯಸ್ಸಾದ ತಾಯಿ ಇದ್ದಾರೆ. ಅವರಿಗೆ ತೊಂದರೆಯಾಗುತ್ತದೆ. ಶಬ್ದವನ್ನು ಕಡಿಮೆ ಮಾಡಿ’ ಎಂದು ಲಾಯ್ಡ್ ಮನವಿ ಮಾಡಿದ್ದರು. ಆದರೆ, ಆರೋಪಿಗಳು ಲಾಯ್ಡ್ ಅವರಿಗೆ ಬೈದು ಕಳುಹಿಸಿದ್ದರು ಎನ್ನಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೆಚ್ಚು ಶಬ್ದದಿಂದ ಕಿರಿಕಿರಿಗೊಂಡಿದ್ದ ಲಾಯ್ಡ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಇದರಿಂದ ಕೋಪಗೊಂಡ ಮೂವರು ಆರೋಪಿಗಳು ಏ. 2ರಂದು ಲಾಯ್ಡ್ ಅವರನ್ನು ಥಳಿಸಿದ್ದಾರೆ. ಈ ವೇಳೆ, ಲಾಯ್ಡ್ ಅವರನ್ನು ರಕ್ಷಿಸಲು ಹೋದ ಲಾಯ್ಡ್ ಕುಟುಂಬಸ್ಥರು ಮತ್ತು ನೆರೆಹೊರೆಯವರ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಘಟನೆಯನ್ನು ಲಾಯ್ಡ್ ಮನೆಯವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಹೊಯ್ಸಳ ಗಸ್ತು ಪೊಲೀಸರು ಬಂದು ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ಕುಡಿದ ಅಮಲಿನಲ್ಲಿದ್ದ ಆರೋಪಿಗಳನ್ನು ಬೇರೆಡೆಗೆ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

“ಏಪ್ರಿಲ್ 2ರ ಮುಂಜಾನೆ ಮೂವರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಲಾಯ್ಡ್ ನೆಹೆಮಿಯಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ಮಂಗಳವಾರ ರಾತ್ರಿ 10.30 ರ ಸುಮಾರಿಗೆ ನಿಧನರಾದರು” ಎಂದು ಲಾಯ್ಡ್ ಅವರ ಕಿರಿಯ ಸಹೋದರ ಡೇವಿಡ್ ನೆಹೆಮಿಯಾ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದರೋಡೆ ಮಾಡಲು ವಿಮಾನದಲ್ಲಿ ತೆರಳಿದ್ದ ಇಬ್ಬರ ಬಂಧನ, ₹67 ಲಕ್ಷ ಮೌಲ್ಯದ ವಸ್ತುಗಳು ವಶ

“ಈ ಘಟನೆ ನಡೆದ ಬಳಿಕ ಲಾಯ್ಡ್‌ ಅವರ ತಾಯಿಯನ್ನು ಐಸಿಯುನಲ್ಲಿ ಸೇರಿಸಲಾಗಿದೆ. ಅವರಿಗೆ ಲಾಯ್ಡ್ ಅವರ ಸಾವಿನ ಬಗ್ಗೆ ಗೊತ್ತಿಲ್ಲ. ಈ ಸುದ್ದಿಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಆತಂಕವಿದೆ” ಎಂದು ಡೇವಿಡ್ ತಿಳಿಸಿದರು.

“ಪೊಲೀಸರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಂದಿಲ್ಲ. ಶಂಕಿತರಲ್ಲಿ ಒಬ್ಬರನ್ನು ದೆಹಲಿಗೆ ಪ್ರಯಾಣಿಸಲು ಪೊಲೀಸರು ಅವಕಾಶ ನೀಡಿದ್ದಾರೆ. ಯಾರನ್ನೂ ಬಂಧಿಸಿಲ್ಲ. ಪೊಲೀಸ್ ಠಾಣೆಯಲ್ಲಿ ಕೊಲೆ ದೂರು ದಾಖಲಿಸಲಾಗುವುದು” ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಊರಿಗೆ ಹೊರಟ ಮತದಾರರು; ಸುಲಿಗೆಗಿಳಿದ ಖಾಸಗಿ ಬಸ್‌ಗಳು

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26ರಂದು ಮತದಾನ...

ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರ | 16 ಕಡೆ ಶೋಧ ಕಾರ್ಯ: 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಪತ್ತೆ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಬೆಂಗಳೂರು ದಕ್ಷಿಣ...

ಬೆಂಗಳೂರು | ಅಗ್ನಿ ಅವಘಡ: ₹5 ಕೋಟಿ ಮೌಲ್ಯದ ಬಟ್ಟೆ, 40 ಬೈಕ್ ಭಸ್ಮ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್​ ಕಂಟ್ರಿ ರೋಡ್​​ನಲ್ಲಿರುವ ಟಿಂಬರ್​ ಯಾರ್ಡ್​ನಲ್ಲಿ...