ಬೆಂಗಳೂರು | ಖಾಲಿ ಜಮೀನಿನಲ್ಲಿ ನವಜಾತ ಶಿಶು ಪತ್ತೆ; ಪೊಲೀಸರಿಂದ ರಕ್ಷಣೆ

Date:

  • ಶಿಶುಪಾಲನಾ ಕೇಂದ್ರಕ್ಕೆ ನವಜಾತ ಶಿಶು ರವಾನೆ
  • ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರಿನ ಆನೇಕಲ್ ಬಳಿ ಹುಲ್ಲಹಳ್ಳಿಯ ಖಾಲಿ ಜಮೀನಿನಲ್ಲಿ ಮಂಗಳವಾರ ನವಜಾತ ಶಿಶುವೊಂದು ಪತ್ತೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪೊಲೀಸರು ಮಗುವನ್ನು ರಕ್ಷಿಸಿಸಿದ್ದಾರೆ ಮತ್ತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಲ್ಲಹಳ್ಳಿಯ ಸಿದ್ದಲಾಂಗಾರೆಡ್ಡಿ ಅವರ ಜಮೀನಿನಲ್ಲಿ ಮಂಗಳವಾರ ಬೆಳಗ್ಗೆ ಮಗು ಅಳುತ್ತಿರುವ ಶಬ್ದ ಕೇಳಿಸುತ್ತಿತ್ತು. ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ಅಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಬಳಿಕ, ಈ ಬಗ್ಗೆ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶಿಶು ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಕವಿತಾ, ಇನ್ಸ್​​​​ಪೆಕ್ಟರ್ ಉಮಾಮಹೇಶ್ ಅವರು ಸ್ಥಳಕ್ಕೆ ಬಂದು ಶಿಶುವನ್ನು ರಕ್ಷಿಸಿ, ಆರೈಕೆ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀತಿ ಸಂಹಿತೆ ಜಾರಿಯಾದರೂ ರಾರಾಜಿಸುತ್ತಿವೆ ಫೋಟೊ-ಬ್ಯಾನರ್ ಗಳು: ದಂಡದ ಎಚ್ಚರಿಕೆ

“ಮೊದಲಿಗೆ ಮಗುವಿನ ಪ್ರಾಥಮಿಕ ಆರೈಕೆಗಾಗಿ ಜಿಗಣಿ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ಆನೇಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಹೆಚ್ಚಿನ ಆರೈಕೆಗೆ ಕಳುಹಿಸಿಕೊಡಲಾಗಿದೆ” ಎಂದು ಶಿಶು ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಕವಿತಾ ಹೇಳಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಶಿಶುವನ್ನು, ಶಿಶುಪಾಲನಾ ಕೇಂದ್ರಕ್ಕೆ ರವಾನಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಭ್ರೂಣಲಿಂಗ ಹತ್ಯೆ ಪ್ರಕರಣ: ಮತ್ತೋರ್ವ ನರ್ಸ್​​ ಬಂಧನ

ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ...

ತೆಲಂಗಾಣ | ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಸಿಎಂ ಕೆಸಿಆರ್

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನತ್ತ ಸಾಗುತ್ತಿದೆ. ಬಹುತೇಕ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು...

ಬೆಂಗಳೂರು | ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಇಬ್ಬರ ಬಂಧನ

ಭಾರತ್ ಮತ್ತು ಆಸ್ಟ್ರೇಲೀಯಾ ಟಿ-20 ಪಂದ್ಯದ ವೇಳೆ ಪಾಕಿಸ್ತಾನದ ಪರ ಘೋಷಣೆ...

ಮಂಡ್ಯ ಭ್ರೂಣಹತ್ಯೆ ಪ್ರಕರಣ; ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿ ನರ್ಸ್‌

ಭ್ರೂಣಹತ್ಯೆ ಕುರಿತ ಹಲವಾರು ಮಾಹಿತಿಗಳನ್ನು ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಮಂಜುಳಾ...