ರೋಗಿಗಳ ಜೀವದೊಂದಿಗೆ ಚೆಲ್ಲಾಟ; 1,434ಕ್ಕೂ ಹೆಚ್ಚು ನಕಲಿ ವೈದ್ಯರ ವಿರುದ್ಧ ದೂರು ದಾಖಲು

Date:

ರಾಜ್ಯದಲ್ಲಿ ಮತ್ತೆ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಎಂಬಿಬಿಎಸ್‌ ಪದವಿ ಮುಗಿಸದೇ, ಸ್ಟೆತಸ್ಕೋಪ್‌‌ ಕೊರಳಿಗೆ ಹಾಕಿಕೊಂಡು ಕ್ಲಿನಿಕ್‌ ನಡೆಸುತ್ತಿರುವ ಹಲವು ನಕಲಿ ವೈದ್ಯರ ಬಗ್ಗೆ ದೂರುಗಳು ದಾಖಲಾಗುತ್ತಿವೆ. ಈ ಹಿನ್ನೆಲೆ, ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆ 1,434ಕ್ಕೂ ಹೆಚ್ಚು ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲು ಮಾಡಿದೆ.

ವ್ಯಕ್ತಿಯೊಬ್ಬರ ಜೀವ ಉಳಿಸುವಲ್ಲಿ ವೈದ್ಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದರೆ, ಕೆಲವರು ಹಣದ ಆಸೆ ಸೇರಿದಂತೆ ನಾನಾ ಕಾರಣಗಳಿಂದ ನಕಲಿ ವೈದ್ಯರ ವೇಷ ಧರಿಸಿ ಜನರ ಜೀವದ ಜತೆಗೆ ಆಟವಾಡುತ್ತಿದ್ದಾರೆ. ವಿದ್ಯೆ ಕಲಿಯದೇ ಸರ್ಜರಿ ಮಾಡಲು ಪ್ರಯತ್ನಿಸುವ ಈ ನಕಲಿ ವೈದ್ಯರು ಹಲವರ ಸಾವಿಗೆ ಕಾರಣವಾಗಿದ್ದಾರೆ. ಇಂತಹ ನಕಲಿ ವೈದ್ಯರ ಪ್ರಕರಣಗಳು ಈ ಹಿಂದೆಯೂ ರಾಜ್ಯದಲ್ಲಿ ಪತ್ತೆಯಾಗಿದ್ದವು. ಇದೀಗ, ಮತ್ತೆ ರಾಜ್ಯದಲ್ಲಿ ದಾಪುಗಾಲಿಟ್ಟಿರುವ ಈ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ.

ಇನ್ನು ಕೊರೊನಾ ಸಮಯದಲ್ಲಿ ಕೆಲವರು ಕೆಲಸ ಇಲ್ಲದೇ, ಜೀವನ ನಡೆಸಲು ಅನ್ಯ ಮಾರ್ಗಗಳನ್ನು ಹಿಡಿದಿದ್ದಾರೆ. ಈ ಪೈಕಿ ಎಂಬಿಬಿಎಸ್‌ ಪದವಿ ಮುಗಿಸದೇ ಇದ್ದರೂ, ಹಲವು ಜನ ಹಳ್ಳಿಗಳಲ್ಲಿ, ನಗರ ಪ್ರದೇಶಗಳಲ್ಲಿ ಹಾಗೂ ಗಡಿ ಭಾಗದಲ್ಲಿ ಹೆಚ್ಚಾಗಿ ಕ್ಲಿನಿಕ್‌ ತೆರೆದು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 1,500ಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದ್ದು, ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದೆ. ಸದ್ಯ 1,434ಕ್ಕೂ ಹೆಚ್ಚು ನಕಲಿ ವೈದ್ಯರ ಮೇಲೆ ಆರೋಗ್ಯ ಇಲಾಖೆ ಪ್ರಕರಣ ದಾಖಲಿಸಿದೆ.

ಹೊರ ರಾಜ್ಯಗಳಿಂದ ಬರುತ್ತಿರುವ ನಕಲಿ ವೈದ್ಯರು ಹೊಸೂರು, ಆನೇಕಲ್ ಹಾಗೂ ಜಿಲ್ಲೆಗಳ ಗಡಿ ಭಾಗಗಳಲ್ಲಿ ಮೊಬೈಲ್ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಿ ಜನರ ಪ್ರಾಣಕ್ಕೆ ಅಪಾಯ ತರುತ್ತಿದ್ದಾರೆ.

ವೈದ್ಯರ ಪ್ರಮಾಣ ಪತ್ರ ಹಾಗೂ ಆಸ್ಪತ್ರೆಗಳ ಪ್ರಮಾಣಿಕೃತ ಪತ್ರ ನೋಡದೆ ಚಿಕಿತ್ಸೆ ಪಡೆದು ಸಮಸ್ಯೆಗೆ ಒಳಗಾಗಬೇಡಿ. ಸಾರ್ವಜನಿಕರು ನೋಂದಾಯಿತ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 300ಕ್ಕೂ ಹೆಚ್ಚು ನಕಲಿ ವೈದ್ಯರು ಇರುವ ಬಗ್ಗೆ ಮಾಹಿತಿ ಇದ್ದು, ಡಿಸೆಂಬರ್ ಕೊನೆಯ ವೇಳೆಗೆ ನಕಲಿ ವೈದ್ಯರು ಹಾಗೂ ಕ್ಲಿನಿಕ್‌ಗೆ ಬೀಗ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.

ಈ ಸುದ್ದಿ ಓದಿದ್ದೀರಾ? ದೇಶದಲ್ಲೇ ಅಗ್ರಸ್ಥಾನ ಪಡೆದ ಬೆಂಗಳೂರು: ಕಳೆದ ವರ್ಷ ಅತಿ ಹೆಚ್ಚು ಆ್ಯಸಿಡ್ ದಾಳಿ ಪ್ರಕರಣ ದಾಖಲು

ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಕಲಿ ವೈದ್ಯರು ಹುಟ್ಟಿಕೊಳ್ಳಲು ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಸಹಕರಿಸಿದ್ದಾರೆ ಎಂಬ ಆರೋಪವಿದೆ. ಅಲೋಪಥಿ, ನ್ಯಾಚುರೋಪಥಿ, ಆಯುರ್ವೆದ ಹಾಗೂ ಹೋಮಿಯೋಪಥಿ ಹೆಸರಿನಲ್ಲಿ ದಂಧೆ ನಡೆಸುತ್ತಿರುವ ನಕಲಿ ವೈದ್ಯರ ಪಟ್ಟಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

ಬೀದರ್ನಲ್ಲಿ ಅತಿ ಹೆಚ್ಚು 423 ನಕಲಿ ವೈದ್ಯರು ಸಿಕ್ಕಿಬಿದ್ದಿದ್ದು, ಕೋಲಾರನಲ್ಲಿ 179 ನಕಲಿ ವೈದ್ಯರು ಸಿಕ್ಕಿಬಿದ್ದಿದ್ದಾರೆ. ಬೆಳಗಾವಿಯಲ್ಲಿ 170, ಕಲಬುರಗಿಯಲ್ಲಿ 82 ನಕಲಿ ವೈದ್ಯರು ಸಿಕ್ಕಿಬಿದ್ದಿದ್ದಾರೆ. ಇಂತಹ ನಕಲಿ ವೈದ್ಯರ ಕ್ಲಿನಿಕ್ಗಳಲ್ಲಿ ಚಿಕಿತ್ಸೆ ಪಡೆದಿರುವ ಸಾಕಷ್ಟು ರೋಗಿಗಳು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ನಟ ದ್ವಾರಕೀಶ್ ನಿಧನಕ್ಕೆ ಶಿವರಾಜ್‌ಕುಮಾರ್ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ ನಿಧನರಾದರು....

ದಾವಣಗೆರೆ | ಲೋಕಸಭಾ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐ ಬೆಂಬಲ ಘೋಷಣೆ

ದೇಶಾದ್ಯಂತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷವು ಇಂಡಿಯಾ ಒಕ್ಕೂಟದ...

ವಿಜಯೇಂದ್ರ, ಸಿಟಿ ರವಿ, ಪಿ.ರಾಜೀವ್‌ನಿಂದ ಬಿಜೆಪಿ ಹಾಳಾಗುತ್ತಿದೆ: ಮಾಲೀಕಯ್ಯ ಗುತ್ತೇದಾರ ಕಿಡಿ

ಸಹೋದರ ನಿತಿನ್ ಗುತ್ತೇದಾರ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಚಿವ...