ಈ ದಿನ ಫ್ಲ್ಯಾಶ್‌‌‌

ಸಚಿವ ಸಂಪುಟದಲ್ಲಿ ಮಹಿಳೆಯ ಸದ್ದಿಲ್ಲ; ಇದು ಪ್ರಾತಿನಿಧ್ಯವೋ, ನಾಟಕವೋ?

ಚುನಾವಣಾ ಸುಧಾರಣೆಗಳಿಗಾಗಿ ಶ್ರಮಿಸುತ್ತಿರುವ ಪ್ರಮುಖ ಸಂಸ್ಥೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ಮತ್ತು 'ನ್ಯಾಷನಲ್ ಎಲೆಕ್ಷನ್ ವಾಚ್' ಇತ್ತೀಚೆಗೆ ಬಿಡುಗಡೆ ಮಾಡಿರುವ 'ಭಾರತದಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಮತ್ತು ಪ್ರಾತಿನಿಧ್ಯ' ವರದಿಯು...

ಐಎಎಸ್ ಅಧಿಕಾರಿ ಫೌಜಿಯಾರನ್ನು ‘ಪಾಕಿಸ್ತಾನಿ’ ಎಂದಿದ್ದ ಬಿಜೆಪಿಯ ರವಿಕುಮಾರ್‌ಗೆ ಹೈಕೋರ್ಟ್ ತರಾಟೆ

ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಕಲಬುರಗಿ ಜಿಲ್ಲಾಧಿಕಾರಿ, ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌ ಅವರ ವಿರುದ್ಧ ವಿವಾದಾತ್ಮಕ, ಕೋಮುದ್ವೇಷದ ಹೇಳಿಕೆ ನೀಡಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ (MLC) ಎನ್‌. ರವಿಕುಮಾರ್‌ ಅವರಿಗೆ...

ರೈಲ್ವೆ ನಿಲ್ದಾಣಗಳ 112 ಹೋಟೆಲ್‌ಗಳ ಮೇಲೆ ದಾಳಿ: ಹಲವೆಡೆ ನೈರ್ಮಲ್ಯ ಕೊರತೆ, ಶಿಲೀಂಧ್ರವಿದ್ದ ಆಹಾರ ಪತ್ತೆ

ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸರಬರಾಜು ಮಾಡಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಬೃಹತ್ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ಆರೋಗ್ಯ ಮತ್ತು ಕುಟುಂಬ...

ಬಾಗಲಕೋಟೆ | ವಾಲ್ಮೀಕಿ ನಿಗಮ ಹಗರಣ; ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ...

ವಿಜಯನಗರ | ತಂಬ್ರಳ್ಳಿ ತೆಪ್ಪ ದುರಂತ: ಅಜ್ಜಪ್ಪನ ಮೃತದೇಹ ಹೊರತೆಗೆದ ಈಶ್ವರ್ ಮಲ್ಪೆ ತಂಡ

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದಲ್ಲಿ ಮೀನಿನ ಬಲೆ ಹಾಕಲು ಹೋಗಿ ನೀರುಪಾಲಾಗಿದ್ದವರ ಪೈಕಿ ಮತ್ತೋರ್ವನ ಮೃತದೇಹ ಪತ್ತೆಯಾಗಿದೆ. ನಿನ್ನೆ ನಡೆಸಿದ ಶೋಧಕಾರ್ಯದಲ್ಲಿ ಯಮನೂರಪ್ಪ ಎಂಬ ಯುವಕನ ಮೃತದೇಹ ಪತ್ತೆಯಾಗಿತ್ತು. ಇಂದು...

2013ರ ಲೈಂಗಿಕ ದೌರ್ಜನ್ಯ ಪ್ರಕರಣ: ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತರುಣ್ ತೇಜ್‌ಪಾಲ್

2013ರ ಕಿರಿಯ ಸಹೋದ್ಯೋಗಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮಗೆ ಬಾಂಬೆ ಹೈಕೋರ್ಟ್ ವಿಧಿಸಿರುವ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಪ್ರಶ್ನಿಸಿ 'ತೆಹಲ್ಕಾ' ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಸುಪ್ರೀಂ...

ವಿಜಯಪುರ | ಎಸ್‌ಐಆರ್‌ ಮೊದಲ ಹಂತ ಪೂರ್ಣ; ಲಕ್ಷಾಂತರ ಮತದಾರರು ಮಿಸ್ಸಿಂಗ್

ಜಿಲ್ಲೆಯಲ್ಲಿ ಜೂನ್ 30ರಿಂದ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದ್ದು, ಬರೋಬ್ಬರಿ 2,97,147 ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವುದು ಜಿಲ್ಲಾಡಳಿತದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ಜಿಲ್ಲೆಯ 8...

1984ರ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ನಿಧನ

1984ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ (80) ಅವರು ಗುರುವಾರ ನವದೆಹಲಿಯಲ್ಲಿ ನಿಧನರಾಗಿದ್ದಾರೆ. ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್...

ವಿಮುಕ್ತ ದೇವದಾಸಿಯರ ಮಹಾಒಕ್ಕೂಟದಿಂದ ಪ್ರತಿಭಟನೆ; ಮೊಳಗಿದೆ ಸಾಮಾಜಿಕ ನ್ಯಾಯದ ಹೋರಾಟದ ಧ್ವನಿ

ʼವಿಮುಕ್ತ ದೇವದಾಸಿ ತಾಯಂದಿರ ಮಹಾಒಕ್ಕೂಟʼದ ನೇತೃತ್ವದಲ್ಲಿ, ಸಾವಿರಾರು ದೇವದಾಸಿ ತಾಯಂದಿರು ತಮ್ಮ ಘನತೆಯ ಬದುಕಿಗಾಗಿ ಹೋರಾಟ ಹಮ್ಮಿಕೊಂಡಿದ್ದಾರೆ. ದೇವದಾಸಿ ಪದ್ಧತಿಯಿಂದ ವಿಮುಕ್ತರಾದ ಮಹಿಳೆಯರ ಬದುಕಿನ ನೋವು, ಹೋರಾಟ ಮತ್ತು ನಿರೀಕ್ಷೆಗಳು ಇಂದಿಗೂ ಮುಗಿದಿಲ್ಲ. ಒಂದು...

ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಕೇಂದ್ರಕ್ಕೆ ಸಿಎಂ ಡಿಕೆಶಿ ಒತ್ತಾಯ

"ಕರ್ನಾಟಕ ಬಲಿಷ್ಠವಾದಾಗ, ದಕ್ಷಿಣ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದಾಗ, ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ನಾವು ಭಾರತದ ಅಭಿವೃದ್ಧಿಯ ಪಾಲುದಾರರು. ನಮಗೆ ನಮ್ಮ ನಿಧಿಗಳಲ್ಲಿ, ನಮ್ಮ ಧ್ವನಿಯಲ್ಲಿ ನ್ಯಾಯಬೇಕು. ನಮಗೆ ನ್ಯಾಯಯುತವಾಗಿ...

ವರ್ಷಕ್ಕೆ 2 ಸಾವಿರಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು: ಕಾಯ್ದೆಗಿಲ್ಲ ಕವಡೆ ಕಿಮ್ಮತ್ತು

ಕರ್ನಾಟಕದಲ್ಲಿ ಪ್ರತಿ ವರ್ಷ ಸುಮಾರು ಎರಡು ಸಾವಿರಕ್ಕೂ ಹೆಚ್ಚು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ ಎಂಬುದು ಕಳವಳಕಾರಿ ವಿಷಯ. ದೌರ್ಜನ್ಯ ಪ್ರಕರಣಗಳ ಸಂಖ್ಯೆ, ಅವುಗಳ ಫಲಿತಾಂಶ, ಕಾಯ್ದೆಗಳ ಅನುಷ್ಠಾನ, ಮೀಸಲಾತಿ ಮತ್ತು...

‘ನೀವು ಕಾಕ್ರೋಚ್‌ಗಳಲ್ಲವೆಂದು ಗಟ್ಟಿಯಾಗಿ ಹೇಳಿ’ ಎಂದ ಕೇರಳ ವಿವಿ ಉಪಕುಲಪತಿಗೆ ಮುಖಭಂಗ

ಕೇರಳ ವಿಶ್ವವಿದ್ಯಾನಿಲಯದ ಉಪಕುಲಪತಿ (ವೈಸ್ ಚಾನ್ಸಲರ್) ಮೋಹನ್ ಕುನ್ನುಮ್ಮಲ್ ಭಾಗವಹಿಸಿದ್ದ ವಿದ್ಯಾರ್ಥಿಗಳ ಸಭೆಯೊಂದರಲ್ಲಿ ವಿಚಿತ್ರ ಹಾಗೂ ಮುಜುಗರದ ಸನ್ನಿವೇಶವೊಂದು ನಡೆದಿದ್ದು, ಉಪಕುಲಪತಿಗಳಿಗೆ ತೀವ್ರ ಮುಖಭಂಗವಾಗಿದೆ. ಸಭೆಯಲ್ಲಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ, "ನೀವು ಜಿರಳೆಗಳಲ್ಲ...

ಈ ಹೊತ್ತಿನ ಪ್ರಮುಖ ಸುದ್ದಿ