ಸಚಿವ ಸಂಪುಟದಲ್ಲಿ ಮಹಿಳೆಯ ಸದ್ದಿಲ್ಲ; ಇದು ಪ್ರಾತಿನಿಧ್ಯವೋ, ನಾಟಕವೋ?

Date:

ಚುನಾವಣಾ ಸುಧಾರಣೆಗಳಿಗಾಗಿ ಶ್ರಮಿಸುತ್ತಿರುವ ಪ್ರಮುಖ ಸಂಸ್ಥೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ಮತ್ತು ‘ನ್ಯಾಷನಲ್ ಎಲೆಕ್ಷನ್ ವಾಚ್’ ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಭಾರತದಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಮತ್ತು ಪ್ರಾತಿನಿಧ್ಯ’ ವರದಿಯು ದೇಶದ ರಾಜಕೀಯದಲ್ಲಿ ಮಹಿಳೆಯರ ಸ್ಥಾನಮಾನ ಎಷ್ಟು ಶೋಚನೀಯವಾಗಿದೆ ಎಂಬುದನ್ನು ಅಂಕಿ-ಅಂಶಗಳ ಸಮೇತ ಬಹಿರಂಗಪಡಿಸಿದೆ. ADR ಸಂಸ್ಥೆಯು ದೇಶದಾದ್ಯಂತ ಇರುವ ಒಟ್ಟು 4,666 ಸಂಸದರು ಮತ್ತು ಶಾಸಕರ ವಿಶ್ಲೇಷಣೆ ನಡೆಸಿದ್ದು, ಅವರಲ್ಲಿ ಕೇವಲ 464 ಅಂದರೆ ಶೇಕಡಾ 10ರಷ್ಟು ಮಾತ್ರ ಮಹಿಳೆಯರಿದ್ದಾರೆ.

- Advertisement -

ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯದ ಸಚಿವ ಸಂಪುಟ ವಿಸ್ತರಣೆಯು ಭಾರತೀಯ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ರಾಜಕೀಯ ಸ್ಥಾನಮಾನದ ಕುರಿತು ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದೆ. ಒಟ್ಟು 33 ಸದಸ್ಯರ ಬಲವಿರುವ ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಸಚಿವರಿಲ್ಲದಿರುವುದು ಪ್ರಜಾಪ್ರಭುತ್ವದ ಆಶಯಗಳ ಹಿಮ್ಮುಖ ಚಲನೆಗೆ ಹಿಡಿದ ಕನ್ನಡಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವೈಯಕ್ತಿಕ...

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಿಂಚದೆ ಹಿನ್ನಡೆ ಅನುಭವಿಸಿವೆ. ಕಳೆದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಈ ಎರಡು ವಿಭಾಗಗಳಿಂದ ಬರೋಬ್ಬರಿ 51...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಆರಂಭದಲ್ಲಿ ಕೆಲವು ಶಾಸಕಿಯರ ಹೆಸರುಗಳು ಹೈಕಮಾಂಡ್ ಮಟ್ಟದಲ್ಲಿ ಪ್ರಸ್ತಾಪವಾದರೂ, ಅಂತಿಮ ಪಟ್ಟಿಯಲ್ಲಿ ಜಾತಿ, ಪ್ರಾದೇಶಿಕತೆ ಹಾಗೂ ಪ್ರಭಾವಿ ಬಣಗಳ ಸಮೀಕರಣಗಳನ್ನು ಸರಿದೂಗಿಸುವ ನೆಪದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಸಂಪೂರ್ಣವಾಗಿ ಕೈಬಿಡಲಾಯಿತು. ಈ ಬೆಳವಣಿಗೆಯು ಕೇವಲ ಒಂದು ರಾಜ್ಯ ಅಥವಾ ಒಂದು ಪಕ್ಷಕ್ಕೆ ಸೀಮಿತವಾದದ್ದಲ್ಲ; ಬದಲಿಗೆ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರನ್ನು ‘ನಿರ್ಣಾಯಕ ಮತದಾರರು’ ಎಂದು ಪರಿಗಣಿಸುವ ಪಕ್ಷಗಳು, ಅವರನ್ನು ‘ನಿರ್ಣಾಯಕ ಆಡಳಿತಗಾರರು’ ಎಂದು ಒಪ್ಪಿಕೊಳ್ಳಲು ಇಂದಿಗೂ ಸಿದ್ಧವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಭಾರತೀಯ ರಾಜಕೀಯದ ಇತ್ತೀಚಿನ ಅತ್ಯಂತ ಗಮನಾರ್ಹ ಬೆಳವಣಿಗೆಯೆಂದರೆ ಮಹಿಳಾ ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ. 2019 ಮತ್ತು 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಗಳು ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರ ಮತದಾನದ ಪ್ರಮಾಣವು ಪುರುಷರಿಗಿಂತ ಹೆಚ್ಚಾಗಿದೆ ಅಥವಾ ಸಮಾನವಾಗಿದೆ. ಉಚಿತ ಸಾರಿಗೆ, ನೇರ ಹಣ ವರ್ಗಾವಣೆ, ಸಬ್ಸಿಡಿಗಳಂತಹ ಅನೇಕ ಕಲ್ಯಾಣ ಯೋಜನೆಗಳು ಚುನಾವಣೆ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತಿವೆ ಎಂಬುವುದನ್ನು ನಿರಾಕರಿಸಲಾಗದು. ರಾಜಕೀಯ ಪಕ್ಷಗಳಿಗೆ ಮಹಿಳೆಯರು ಅತ್ಯಂತ ಪ್ರಭಾವಿ ‘ಮತಬ್ಯಾಂಕ್’ ಆಗಿ ಕಾಣಿಸುತ್ತಿದ್ದಾರೆ. ಆದರೆ, ಮತಪೆಟ್ಟಿಗೆಯನ್ನು ತುಂಬಿಸುವಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರಿಗೆ ಅಧಿಕಾರ ಹಂಚಿಕೆಯ ವಿಷಯ ಬಂದಾಗ ಹಿನ್ನಡೆ ಎದುರಾಗುತ್ತಿದೆ. ಮತದಾರರಾಗಿ ಮಹಿಳೆಯರನ್ನು ಓಲೈಸುವ ರಾಜಕೀಯ ನಾಯಕತ್ವ, ಶಾಸನಸಭೆ ಅಥವಾ ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ನೀಡುವಾಗ “ಗೆಲ್ಲುವ ಸಾಧ್ಯತೆ” “ಸಂಘಟನಾತ್ಮಕ ಅನುಭವದ ಕೊರತೆ” ಅಥವಾ “ಜಾತಿ ಸಮೀಕರಣದ ಒತ್ತಡ” ಎಂಬ ಸಾಂಪ್ರದಾಯಿಕ ನೆಪಗಳನ್ನು ಮುನ್ನೆಲೆಗೆ ತರುತ್ತದೆ.

DK Shivakumar 1 2

ಭಾರತದಲ್ಲಿ ರಾಜಕೀಯ ಅಧಿಕಾರ ರಚನೆಯಲ್ಲಿ ಮಹಿಳೆಯರ ಉಪಸ್ಥಿತಿಯು ಅತ್ಯಂತ ನಿರಾಶಾದಾಯಕವಾಗಿದೆ ಎಂಬ ಕಟುಸತ್ಯ ಅಂಕಿ-ಅಂಶಗಳನ್ನು ಗಮನಿಸದಾಗ ಕಣ್ಣಿಗೆ ರಾಚುತ್ತದೆ. 18ನೇ ಲೋಕಸಭೆಯಲ್ಲಿ ಆಯ್ಕೆಯಾಗಿರುವ ಮಹಿಳಾ ಸಂಸದರ ಸಂಖ್ಯೆ 74. ಅಂದರೆ, ಒಟ್ಟು ಸದಸ್ಯರ ಶೇಕಡಾ 13.6% ಮಾತ್ರ. ಇದು ಜಾಗತಿಕ ಸರಾಸರಿಯಾದ ಶೇಕಡಾ 27.5% ಗಿಂತ ತೀರಾ ಕೆಳಗಿದೆ. ಇಂಟರ್-ಪಾರ್ಲಿಮೆಂಟರಿ ಯೂನಿಯನ್ ನೀಡಿರುವ ಜಾಗತಿಕ ರಾಜಕೀಯ ಮಹಿಳಾ ಪ್ರಾತಿನಿಧ್ಯದ ಶ್ರೇಯಾಂಕದಲ್ಲಿ ಭಾರತವು 153ನೇ ಸ್ಥಾನದಲ್ಲಿದೆ. ರಾಜ್ಯ ವಿಧಾನಸಭೆಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ದೇಶದ ಬಹುತೇಕ ವಿಧಾನಸಭೆಗಳಲ್ಲಿ ಮಹಿಳಾ ಶಾಸಕರ ಪ್ರಮಾಣ ಶೇಕಡಾ 10ರ ಗಡಿಯನ್ನು ದಾಟಿಲ್ಲ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, 224 ಸದಸ್ಯರ ಬಲವಿರುವ ವಿಧಾನಸಭೆಯಲ್ಲಿ ಪ್ರಸ್ತುತ ಇರುವುದು ಕೇವಲ 10 ಜನ ಮಹಿಳಾ ಶಾಸಕರು,ಶೇಕಡಾ 4.4% ಮಾತ್ರ.ಆಯ್ಕೆಯಾಗಿರುವ ಬಹುತೇಕ ಶಾಸಕಿಯರು ರಾಜಕೀಯ ಹಿನ್ನಲೆಯುಳ್ಳ ಕುಟುಂಬದವರು ಎಂಬುವುದನ್ನೂ ಗಮನಿಸಬೇಕು.

ಚುನಾವಣಾ ಸುಧಾರಣೆಗಳಿಗಾಗಿ ಶ್ರಮಿಸುತ್ತಿರುವ ಪ್ರಮುಖ ಸಂಸ್ಥೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ಮತ್ತು ‘ನ್ಯಾಷನಲ್ ಇಲೆಕ್ಷನ್ ವಾಚ್’ ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಭಾರತದಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಮತ್ತು ಪ್ರಾತಿನಿಧ್ಯ’ ವರದಿಯು ದೇಶದ ರಾಜಕೀಯದಲ್ಲಿ ಮಹಿಳೆಯರ ಸ್ಥಾನಮಾನ ಎಷ್ಟು ಶೋಚನೀಯವಾಗಿದೆ ಎಂಬುದನ್ನು ಅಂಕಿ-ಅಂಶಗಳ ಸಮೇತ ಬಹಿರಂಗಪಡಿಸಿದೆ. ADR ಸಂಸ್ಥೆಯು ದೇಶದಾದ್ಯಂತ ಇರುವ ಒಟ್ಟು 4,666 ಸಂಸದರು ಮತ್ತು ಶಾಸಕರ ವಿಶ್ಲೇಷಣೆ ನಡೆಸಿದ್ದು, ಅವರಲ್ಲಿ ಕೇವಲ 464 ಅಂದರೆ ಶೇಕಡಾ 10ರಷ್ಟು ಮಾತ್ರ ಮಹಿಳೆಯರಿದ್ದಾರೆ. ಈ ತಾರತಮ್ಯವು ಟಿಕೆಟ್ ಹಂಚಿಕೆಯ ಪ್ರಕ್ರಿಯೆಯಿಂದಲೇ ಆರಂಭವಾಗುತ್ತದೆ. ದೇಶಾದ್ಯಂತ ಸ್ಪರ್ಧಿಸಿದ ಒಟ್ಟು 51,708 ಅಭ್ಯರ್ಥಿಗಳಲ್ಲಿ ಕೇವಲ 5,095 (ಶೇ. 10) ಮಹಿಳೆಯರಿಗೆ ಮಾತ್ರ ರಾಜಕೀಯ ಪಕ್ಷಗಳು ಸ್ಪರ್ಧಿಸಲು ಅವಕಾಶ ನೀಡಿದ್ದವು. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 8,360 ಅಭ್ಯರ್ಥಿಗಳಲ್ಲಿ ಕೇವಲ 800 (ಶೇ. 9.6) ಮಹಿಳೆಯರಿದ್ದರು. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಲ್ಲಿ (ಶೇ. 28) ಒಬ್ಬರೇ ಒಬ್ಬರು ಮಹಿಳಾ ಅಭ್ಯರ್ಥಿಯೂ ಕಣದಲ್ಲಿರಲಿಲ್ಲ. ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳ ಶೇ. 41ರಷ್ಟು ಕ್ಷೇತ್ರಗಳಲ್ಲಿ (1,698 ಕ್ಷೇತ್ರಗಳು) ಯಾವುದೇ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿರಲಿಲ್ಲ. ನಾಗಾಲ್ಯಾಂಡ್ (2%), ಅರುಣಾಚಲ ಪ್ರದೇಶ (5%) ಮತ್ತು ಜಮ್ಮು ಮತ್ತು ಕಾಶ್ಮೀರಗಳಂತಹ (5%) ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ತೀರಾ ತಳಮಟ್ಟದಲ್ಲಿದೆ.

ಮಹಿಳೆಯರಿಗೆ ಟಿಕೆಟ್ ನಿರಾಕರಿಸುವಾಗ ಅಥವಾ ಸಂಪುಟದಲ್ಲಿ ಸ್ಥಾನ ನೀಡದಿರುವಾಗ “ಮಹಿಳೆಯರಿಗೆ ಗೆಲ್ಲುವ ಸಾಮರ್ಥ್ಯ ಕಡಿಮೆ” ಎಂಬ ನೆಪ ಹೇಳುತ್ತವೆ. ಆದರೆ ADR ವರದಿಯು ಈ ವಾದ ಸಂಪೂರ್ಣ ಸುಳ್ಳು ಎಂಬುದನ್ನು ಸಾಬೀತುಪಡಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇಕಡಾ 9ರಷ್ಟಿದ್ದರೆ, ಪುರುಷ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇಕಡಾ 6ರಷ್ಟಿತ್ತು. ಅಂದರೆ, ಮಹಿಳೆಯರಿಗೆ ರಾಜಕೀಯ ಪಕ್ಷಗಳು ಸೂಕ್ತ ವೇದಿಕೆ ಮತ್ತು ಟಿಕೆಟ್ ನೀಡಿದರೆ, ಅವರು ಪುರುಷರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಚುನಾವಣೆ ಗೆಲ್ಲಬಲ್ಲರು ಎಂಬುದನ್ನು ಈ ದತ್ತಾಂಶಗಳು ಸ್ಪಷ್ಟಪಡಿಸುತ್ತವೆ.ಹಾಗಿದ್ದರೂ, ಪಕ್ಷಗಳು ಟಿಕೆಟ್ ನೀಡುವಾಗ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ (ಶೇ.16) ಮತ್ತು ಕಾಂಗ್ರೆಸ್ (ಶೇ. 13) ನಂತಹ ಪಕ್ಷಗಳು ಸಹ ಶೇ. 20ರ ಗಡಿಯನ್ನು ದಾಟಲು ಸಾಧ್ಯವಾಗಿಲ್ಲ.

ಇನ್ನು, ಕೇಂದ್ರ ಸರ್ಕಾರದಲ್ಲಾಗಲಿ ಅಥವಾ ವಿವಿಧ ರಾಜ್ಯಗಳ ಸಂಪುಟದಲ್ಲಿ ಮಹಿಳೆಯರಿಗೆ ನೀಡಲಾಗುವ ಸ್ಥಾನಗಳು ಬಹುತೇಕ ಮಹಿಳಾ ಮತ್ತು ಮಕ್ಕಳ ಕಲ್ಯಾಣದಂತಹ ‘ಸಾಂಕೇತಿಕ’ ಇಲಾಖೆಗಳನ್ನು ನೀಡಲಾಗುತ್ತದೆಯೇ ವಿನಃ ಹಣಕಾಸು, ಗೃಹ, ಕಂದಾಯ, ನಗರಾಭಿವೃದ್ಧಿ ಅಥವಾ ಮೂಲಸೌಕರ್ಯದಂತಹ ನಿರ್ಣಾಯಕ ಖಾತೆಗಳ ಜವಾಬ್ದಾರಿ ಸಿಗುವುದು ತೀರಾ ವಿರಳ. ಪುರುಷ ಪ್ರಧಾನ ರಾಜಕೀಯ ಸಮೀಕರಣ ಗಮನಿಸಿದರೆ ಲಿಂಗ ಸಮಾನತೆ ಎಂಬುದು ಕೊನೆಯ ಆದ್ಯತೆಯಾಗಿಯೂ ಉಳಿಯುವುದಿಲ್ಲ. ಕರ್ನಾಟಕದ ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕ ಪ್ರಾತಿನಿಧ್ಯ, ಪ್ರಭಾವಿ ಸಮುದಾಯಗಳ ಓಲೈಕೆ ಮತ್ತು ಆಂತರಿಕ ಪಣಕ್ಕೆ ಬಿದ್ದ ಬಣ ರಾಜಕೀಯಕ್ಕೆ ಸಿಕ್ಕ ಪ್ರಾಶಸ್ತ್ಯ, ಮಹಿಳಾ ಜನಸಂಖ್ಯೆಯ ಪ್ರಾತಿನಿಧ್ಯಕ್ಕೆ ಸಿಗಲಿಲ್ಲ. ಇದರ ಹಿಂದೆ ಕೆಲಸ ಮಾಡುತ್ತಿರುವುದು ರಾಜಕೀಯ ಪಕ್ಷಗಳ ಆಂತರಿಕ ಪುರುಷಾಧಿಪತ್ಯದ ಮನಸ್ಥಿತಿ. ಪಕ್ಷದ ಟಿಕೆಟ್ ಹಂಚಿಕೆ, ಕಾರ್ಯಾಕಾರಿ ಸಮಿತಿಗಳ ನಿರ್ಧಾರಗಳು ಮತ್ತು ಹೈಕಮಾಂಡ್ ಮಟ್ಟದ ಮಾತುಕತೆಗಳಲ್ಲಿ ಪುರುಷ ನಾಯಕರದ್ದೇ ಸಂಪೂರ್ಣ ಮೇಲುಗೈ ಇರುತ್ತದೆ. ನಾಯಕಿಯರನ್ನು ಕೇವಲ ಮಹಿಳಾ ಮೋರ್ಚಾಗಳಿಗೆ ಅಥವಾ ಚುನಾವಣಾ ಪ್ರಚಾರದ ಗ್ಲಾಮರ್ ಆಕರ್ಷಣೆಗಳಿಗೆ ಸೀಮಿತಗೊಳಿಸುವ ಪ್ರವೃತ್ತಿ ಇಂದಿಗೂ ಜೀವಂತವಾಗಿದೆ.

2023ರಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡ ‘ನಾರಿ ಶಕ್ತಿ ವಂದನ್ ಅಧಿನಿಯಮ’ (ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ. 33 ಮಹಿಳಾ ಮೀಸಲಾತಿ) ಭಾರತೀಯ ರಾಜಕೀಯದ ಮೈಲಿಗಲ್ಲು ಎಂದು ಬಣ್ಣಿಸಲಾಯಿತು. ಆದರೆ ADR ವರದಿಯ ಪ್ರಕಾರ, ಕಾಯ್ದೆ ಅಂಗೀಕಾರಗೊಂಡ ನಂತರ ದೇಶದ ವಿವಿಧ 20 ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ ಒಟ್ಟು 31,429 ಅಭ್ಯರ್ಥಿಗಳಲ್ಲಿ ರಾಜಕೀಯ ಪಕ್ಷಗಳು ನೀಡಿದ್ದು ಕೇವಲ 3,273 (ಶೇ. 10.2) ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್! ಈ ಅಂಕಿಸಂಖ್ಯೆಗಳನ್ನು ಮೀರಿಯೂ ಆಶಾಭಾವನೆ ಹೊಂದಿದರೂ, ಈ ಕಾಯ್ದೆಯು ಮುಂಬರುವ ಜನಗಣತಿ ಹಾಗೂ ಗಡಿ ವಿಂಗಡಣೆ ಪ್ರಕ್ರಿಯೆಗಳ ನಂತರವಷ್ಟೇ ಜಾರಿಗೆ ಬರಲಿದೆ. ಅಂದರೆ, ಕನಿಷ್ಠ 2029ರವರೆಗೂ ಈ ಕಾಯ್ದೆಯ ಪ್ರತ್ಯಕ್ಷ ಫಲ ಸಿಗುವುದು ಅನುಮಾನ.ಇಲ್ಲಿ ಏಳುವ ಪ್ರಮುಖ ಪ್ರಶ್ನೆಯೆಂದರೆ, ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಕಾನೂನಿನ ಒತ್ತಾಯವೇ ಬೇಕೇ? ಯಾವುದೇ ರಾಜಕೀಯ ಪಕ್ಷಕ್ಕೆ ತಮ್ಮ ಸಂಘಟನಾತ್ಮಕ ರಚನೆಯಲ್ಲಿ ಹಾಗೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ವಯಂಪ್ರೇರಿತವಾಗಿ ಶೇ. 30-35ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಲು ಅಥವಾ ಸಂಪುಟದಲ್ಲಿ ಮಹಿಳಾ ಸಚಿವರನ್ನು ಸೇರ್ಪಡೆಗೊಳಿಸಲು ಯಾವುದೇ ಕಾನೂನು ತಡೆಯಿಲ್ಲ. ಕಾಯ್ದೆಯನ್ನು ಅಂಗೀಕರಿಸಿ ಹೆಮ್ಮೆಪಡುವ ಪಕ್ಷಗಳು, ತಾವೇ ಅಧಿಕಾರ ನಡೆಸುವ ರಾಜ್ಯಗಳಲ್ಲಿ ಒಬ್ಬಳೂ ಮಹಿಳೆಯಿಲ್ಲದ ಸಂಪುಟ ರಚಿಸುವುದು ಅವರ ರಾಜಕೀಯ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ. ಕೇವಲ ಯೋಜನೆಗಳ ಫಲಾನುಭವಿಗಳಲ್ಲ, ಅಧಿಕಾರದ ಪಾಲುದಾರರು ಎಂಬುವುದನ್ನು ಸಾಬೀತುಪಡಿಸಲು ಮತ್ತು ಭಾರತೀಯ ರಾಜಕೀಯದಲ್ಲಿ ಮಹಿಳೆಯರ ಸ್ಥಿತಿಗತಿ ಸುಧಾರಿಸಬೇಕಾದರೆ ಮೂಲಭೂತ ಸಾಂಸ್ಥಿಕ ಬದಲಾವಣೆಗಳು ಅಗತ್ಯವಾಗಿವೆ.

women voters

ಪ್ರತಿಯೊಂದು ರಾಜಕೀಯ ಪಕ್ಷವೂ ಅಭ್ಯರ್ಥಿಗಳ ಆಯ್ಕೆ ಹಂತದಲ್ಲೇ ಕನಿಷ್ಠ ಶೇ. 30ರಷ್ಟು ಟಿಕೆಟ್‌ಗಳನ್ನು ಕಡ್ಡಾಯವಾಗಿ ಮಹಿಳೆಯರಿಗೆ ನೀಡುವ ಸ್ಪಷ್ಟ ನೀತಿ ರೂಪಿಸಬೇಕು. ಸಂಪುಟದಲ್ಲಿ ಮಹಿಳೆಯರಿದ್ದಾಗ ಅವರಿಗೆ ಕೇವಲ ಸಾಂಪ್ರದಾಯಿಕ ಖಾತೆಗಳನ್ನಷ್ಟೇ ನೀಡದೆ, ದೇಶದ ಮೂಲಸೌಕರ್ಯ ಮತ್ತು ಆರ್ಥಿಕ ನೀತಿ ನಿರೂಪಿಸುವ ಸಚಿವಾಲಯಗಳ ಜವಾಬ್ದಾರಿ ನೀಡಬೇಕು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇ. 50ರಷ್ಟು ಮೀಸಲಾತಿಯಿಂದಾಗಿ ಲಕ್ಷಾಂತರ ಮಹಿಳೆಯರು ತಳಮಟ್ಟದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ಸ್ಥಳೀಯ ನಾಯಕಿಯರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯಕ್ಕೆ ಬೆಳೆಯಲು ಸೂಕ್ತ ವೇದಿಕೆ ಹಾಗೂ ತರಬೇತಿ ಸಿಗಬೇಕು. ಮಹಿಳೆಯರನ್ನು ಕೇವಲ ‘ಸರ್ಕಾರದ ಉಚಿತ ಯೋಜನೆಗಳ ಫಲಾನುಭವಿಗಳು’ ಎಂಬಂತೆ ನೋಡುವ ರಾಜಕೀಯ ಧೋರಣೆ ಬದಲಾಗಬೇಕು. ಅವರು ನಾಯಕತ್ವ ವಹಿಸುವ ಸಾಮರ್ಥ್ಯವಿರುವ ನಾಗರಿಕರು ಎಂಬುದನ್ನು ರಾಜಕೀಯ ಪಕ್ಷಗಳು ಒಪ್ಪಿಕೊಳ್ಳಬೇಕು. ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನದ ದಿನದಂದು ಸಾಲಿನಲ್ಲಿ ನಿಂತು ಬೆರಳಿಗೆ ಶಾಯಿ ಹಾಕಿಸಿಕೊಳ್ಳುವುದಷ್ಟೇ ಅಲ್ಲ; ಅದು ನೀತಿ ನಿರೂಪಣೆ ಮತ್ತು ಅಧಿಕಾರ ಹಂಚಿಕೆಯಲ್ಲಿ ಸಮಾನ ಭಾಗವಹಿಸುವಿಕೆಯನ್ನು ಬಯಸುತ್ತದೆ.

ಇದನ್ನೂ ಓದಿ ಐಎಎಸ್ ಅಧಿಕಾರಿ ಫೌಜಿಯಾರನ್ನು ‘ಪಾಕಿಸ್ತಾನಿ’ ಎಂದಿದ್ದ ಬಿಜೆಪಿಯ ರವಿಕುಮಾರ್‌ಗೆ ಹೈಕೋರ್ಟ್ ತರಾಟೆ

ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಮಹಿಳೆಯರನ್ನು ಆಡಳಿತದ ಅತ್ಯುನ್ನತ ನಿರ್ಧಾರಕ ಅಂಗವಾದ ಸಚಿವ ಸಂಪುಟದಿಂದ ಹೊರಗಿಡುವುದು ಪ್ರಜಾಪ್ರಭುತ್ವದ ಆಶಯಕ್ಕೆ ಎಸಗುವ ದ್ರೋಹ.ಕರ್ನಾಟಕದಲ್ಲಿ ಕಂಡುಬಂದ ‘ಮಹಿಳಾ ರಹಿತ’ ಸಂಪುಟದ ಬೆಳವಣಿಗೆಯು ಪ್ರಜಾಪ್ರಭುತ್ವದ ಪ್ರತಿಯೊಬ್ಬ ನಾಗರಿಕನಿಗೂ ಒಂದು ಎಚ್ಚರಿಕೆಯ ಗಂಟೆಯಾಗಬೇಕು. ಮಹಿಳೆಯರು ರಾಜಕೀಯ ನಾಯಕರ ದಯೆಗಾಗಿ ಕಾಯುವ ಕಾಲ ಮುಗಿದಿದೆ; ಮತದಾರರಾಗಿ ತಮ್ಮ ಪ್ರಭಾವ ಸಾಬೀತುಪಡಿಸಿರುವ ಮಹಿಳೆಯರು, ತಮ್ಮ ಸಂವಿಧಾನಾತ್ಮಕ ಅಧಿಕಾರದ ಪಾಲನ್ನು ಕಸಿದುಕೊಳ್ಳುವ ಕಾಲ ಬಂದಿದೆ. ರಾಜಕೀಯ ಪಕ್ಷಗಳು ಈ ವಾಸ್ತವವನ್ನು ಎಷ್ಟು ಬೇಗ ಅರಿತುಕೊಳ್ಳುತ್ತವೆಯೋ, ಅಷ್ಟು ಬೇಗ ಭಾರತೀಯ ಪ್ರಜಾಪ್ರಭುತ್ವ ಪರಿಪೂರ್ಣಗೊಳ್ಳುತ್ತದೆ.

?s=150&d=mp&r=g
ಡಾ. ಸುರೇಶ ತಾಕತರಾವ
+ posts

ಸಹಾಯಕ ಪ್ರಾಧ್ಯಾಪಕರು,
ಸರಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿ

ಪೋಸ್ಟ್ ಹಂಚಿಕೊಳ್ಳಿ:

ಡಾ. ಸುರೇಶ ತಾಕತರಾವ
ಡಾ. ಸುರೇಶ ತಾಕತರಾವ
ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವೈಯಕ್ತಿಕ ಚಿನ್ನದ ಕೊರತೆ; ಒಲಿಂಪಿಕ್ಸ್‌ಗೆ ಎಚ್ಚರಿಕೆಯ ಗಂಟೆ

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ...

ದೆಹಲಿ ಪತ್ರಕರ್ತೆಗೆ ಪೊಲೀಸರಿಂದ ಲೈಂಗಿಕ ಕಿರುಕುಳ: ಕರ್ನಾಟಕ ಪತ್ರಕರ್ತೆಯರ ಸಂಘದಿಂದ ಖಂಡನೆ

ದೆಹಲಿಯ ಜಂತ‌ರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...

ಜಮಖಂಡಿ | ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ: 4 ಸಾವಿರ ಅರ್ಜಿಗಳ ಪೈಕಿ 3 ಸಾವಿರಕ್ಕೂ ಹೆಚ್ಚು ವಿಲೇವಾರಿ

ಸರ್ಕಾರದ ವಿವಿಧ ಸೇವೆ ಹಾಗೂ ಸೌಲಭ್ಯಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡುವ ಬದಲು...

ಚುನಾವಣಾ ಪ್ರಚಾರದಲ್ಲಿ ಅಪ್ರಾಪ್ತನ ಬಳಕೆ ಮಾಡಿರುವ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಎಫ್‌ಐಆರ್ ದಾಖಲು

ತಮಿಳುನಾಡಿನ ಧರಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಅಪ್ರಾಪ್ತ ಬಾಲಕನನ್ನು...