ಬೀದರ್ ವಿವಿ ನೂತನ ಮೌಲ್ಯಮಾಪನ ಕುಲಸಚಿವರಾಗಿ ರಾಜಕುಮಾರ್ ಮಾಲಿಪಾಟೀಲ ನೇಮಕ

Date:

ಬೀದರ್ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಹುದ್ದೆಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ರಾಜಕುಮಾರ್ ಮಾಲಿಪಾಟೀಲ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

- Advertisement -

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 18(1)ರಡಿ ಪ್ರದತ್ತವಾದ ಅಧಿಕಾರ ಬಳಸಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ಈ ನೇಮಕ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

ಹಂತಕ ಗೋಡ್ಸೆಯ ಹೇಳಿಕೆಯೇ ಇತಿಹಾಸವಲ್ಲ; ಸ್ವಾತಂತ್ರ್ಯ ಹೋರಾಟಗಾರರ ಚಾರಿತ್ರ್ಯಹರಣಕ್ಕೆ...

ಅಡ್ಡಂಡ ಕಾರ್ಯಪ್ಪನವರ ‘ಗಾಂಧಿ ಹತ್ಯೆಯ ಸತ್ಯ’ ಪುಸ್ತಕ ಮತ್ತು ನಾಟಕವನ್ನು ನಿಷೇಧಿಸಬೇಕೆಂಬ ಆಗ್ರಹಕ್ಕೆ ಬಲವಾದ ಐತಿಹಾಸಿಕ ಕಾರಣಗಳಿವೆ. ಮನಶಾಸ್ತ್ರದ ದೃಷ್ಟಿಯಿಂದಲೂ ಹಂತಕನ ಸಮರ್ಥನೆಗೆ ಎಚ್ಚರಿಕೆ ಅಗತ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿದಂತೆ ಅಡ್ಡಂಡ...

ಕಲ್ಯಾಣ ಯೋಜನೆಗಳಿಗೆ ‘ಆಧಾರ್’ ಬದಲು ‘ಎಪಿಕ್’: ಬಡಜನರ ಹೊಟ್ಟೆಯ...

ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಕರು ಎಚ್ಚರಿಸುವಂತೆ, ಕಳೆದ ಒಂದು ದಶಕದ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯ ಇತಿಹಾಸವನ್ನು ನೋಡಿದರೆ, ಹೊಸ ತಂತ್ರಜ್ಞಾನಗಳು ಬಂದಾಗಲೆಲ್ಲ ಅತ್ಯಂತ ದುರ್ಬಲ ವರ್ಗದವರನ್ನು ವ್ಯವಸ್ಥೆಯಿಂದ ಹೊರಗಿಡುತ್ತಲೇ ಬರಲಾಗಿದೆ. ಆಧಾರ್ ಜೋಡಣೆ...

ಈ ಹಿಂದೆ ಬೀದರ್ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಪರಮೇಶ್ವರ ನಾಯ್ಕ ಟಿ. ಅವರನ್ನು ಅವರ ಮಾತೃ ಕಾಲೇಜು ಆದ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿಗೆ ಹಿಂದಿರುಗಿಸಲಾಗಿದೆ.

ನೂತನವಾಗಿ ನೇಮಕಗೊಂಡಿರುವ ಪ್ರೊ. ರಾಜಕುಮಾರ್ ಮಾಲಿಪಾಟೀಲ ಅವರು ಕೂಡಲೇ ಬೀದರ್ ವಿಶ್ವವಿದ್ಯಾಲಯದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಅವರ ನಿಯೋಜನೆಗೆ ಸಂಬಂಧಿಸಿದ ಸೇವಾ ಷರತ್ತು ಮತ್ತು ನಿಬಂಧನೆಗಳ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-1) ಸರ್ಕಾರದ ಅಧೀನ ಕಾರ್ಯದರ್ಶಿ ವಿದ್ಯಾ ಎಚ್. ಪೈ ಅವರು ರಾಜ್ಯಪಾಲರ ಆದೇಶಾನುಸಾರ ಅಧಿಸೂಚನೆ ಹೊರಡಿಸಿದ್ದಾರೆ.

ಬೀದರ್‌ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಂದು (ನ.6) ನೂತನ ಮೌಲ್ಯಮಾಪನ ಕುಲಸಚಿವ ಡಾ.ರಾಜಕುಮಾರ ಮಾಲಿಪಾಟೀಲ್‌ ಅವರು ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ಮಾತ್ರ ಕಾಲೇಜಿಗೆ ವರ್ಗಾವಣೆಯಾದ ಪ್ರೊ.ಪರಮೇಶ್ವರ ನಾಯ್ಕ್‌ ಟಿ, ಅವರನ್ನು ಬೀಳ್ಕೊಡಲಾಯಿತು.

ಇದನ್ನೂ ಓದಿ : ಬೀದರ್‌ | ವಚನ-ದಾಸ ಸಾಹಿತ್ಯದಲ್ಲಿ ಮೊಳಗಿದ ಬಂಡಾಯ ಧ್ವನಿ: ಸಚಿವ ಈಶ್ವರ ಖಂಡ್ರೆ

WhatsApp Image 2026 10 10 at 7.46.08 PM 38
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ; 186 ಅಧಿಕಾರಿಗಳಿಗೆ ದಂಡ!

ಮಾಹಿತಿ ಹಕ್ಕು ಕಾಯ್ದೆಯಡಿ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದೆ ಕರ್ತವ್ಯ ಲೋಪ...

ಇ.ಡಿ. ‘ಸೂಪರ್ ಕಾಪ್’ ಅಲ್ಲ, ಸ್ವತಂತ್ರವಾಗಿ ತನಿಖೆ ನಡೆಸಲು ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯಕ್ಕೆ...

ಶಿವಮೊಗ್ಗ | ನೂತನ ಜಿಲ್ಲಾಧಿಕಾರಿಯಾಗಿ ಪ್ರಕಾಶ್‌ ಜಿ.ಟಿ ನಿಟ್ಟಾಲಿ ನೇಮಕ

ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಐಎಎಸ್‌...