ಬಾಗಲಕೋಟೆ 

ಬಾಗಲಕೋಟೆ ಕಾಂಗ್ರೆಸ್‌ಗೆ ಹೊಸ ಸಾರಥಿ: ದಯಾನಂದ ಪಾಟೀಲ ಹೆಗಲಿಗೆ ನಾಯಕತ್ವದ ಹೊಣೆ

ಹಲವು ವರ್ಷಗಳ ಬಳಿಕ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಂಘಟನೆಯ ಸಾರಥ್ಯ ಬದಲಾಗಿದೆ. ಮುಧೋಳದ ದಯಾನಂದ ಪಾಟೀಲ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಪಕ್ಷದ ಹೈಕಮಾಂಡ್ ಯುವ ನಾಯಕತ್ವಕ್ಕೆ ಮಣೆ ಹಾಕಿದೆ. ಎಐಸಿಸಿ...

ಬಾಗಲಕೋಟೆ | ಡಿಸಿಸಿ ಬ್ಯಾಂಕ್‌ ದುರಾಡಳಿತದ ವಿರುದ್ಧ ಹೋರಾಟಕ್ಕೆ ರೈತ ಮುಖಂಡ ಯಲ್ಲಪ್ಪ ಹೆಗಡೆ ಕರೆ

ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ದುರಾಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 21ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರೈತ ಯುವ ಮುಖಂಡ...

ಬಾಗಲಕೋಟೆ | ಕೆಪಿಎಸ್ ಶಾಲೆಗೆ ಡಿಸಿ, ಜಿಪಂ ಸಿಇಒ ಭೇಟಿ; ಮೂಲಸೌಕರ್ಯ ಪರಿಶೀಲನೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರೇಬೂದಿಹಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಹಾಗೂ...

ಬೀಳಗಿ | ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹ

ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಕೃಷಿ ಪಂಪ್‌ಸೆಟ್‌ಗಳಿಗೆ ಸಮಯಕ್ಕೆ ಸರಿಯಾಗಿ ಹಾಗೂ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ...

ಬಾಗಲಕೋಟೆ | ಶ್ರಮಿಕ ಭೋವಿಗರಿಗೆ ಕಿರುಕುಳ ನೀಡದಿರಿ: ಅಧಿಕಾರಿಗಳಿಗೆ ರಾಮಪ್ಪ ಎಂ ಸೂಚನೆ

ಕುಲಕಸುಬಾಗಿ ತಲೆತಲಾಂತರಗಳಿಂದ ಕೈಯಿಂದ ಕಲ್ಲು ಒಡೆಯುವ ಮೂಲಕ ಜೀವನ ನಡೆಸುತ್ತಿರುವ ಶ್ರಮಿಕ ಭೋವಿ ಸಮುದಾಯದವರಿಗೆ ಪೊಲೀಸ್, ಅರಣ್ಯ ಹಾಗೂ ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಕರ್ನಾಟಕ ಭೋವಿ...

ಮುಧೋಳ | ಕಬ್ಬಿನ ನ್ಯಾಯಯುತ ದರ ನಿಗದಿಗೆ ಕೋಡಿಹಳ್ಳಿ ಚಂದ್ರಶೇಖರ ಆಗ್ರಹ

ಕಬ್ಬಿನ ದರ ನಿಗದಿ ವಿಚಾರ ಇದೀಗ ಮತ್ತೆ ರೈತರು ಹಾಗೂ ಸರ್ಕಾರದ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಲಕ್ಷಣಗಳು ಗೋಚರಿಸಿವೆ. ಕಾರ್ಖಾನೆಗಳ ಒತ್ತಡಕ್ಕೆ ಮಣಿದು ದರ ನಿಗದಿ ಮಾಡುವ ಬದಲು, ರೈತರ ಹಿತದೃಷ್ಟಿಯಿಂದ ನ್ಯಾಯಯುತ...

ಬಾಗಲಕೋಟೆ | ಸೆ. 10ರಂದು ವಿದ್ಯುತ್, ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಬಾಗಲಕೋಟೆ ನೋಡಲ್ ವ್ಯಾಪ್ತಿಯ ವಿವಿಧ ವಿದ್ಯುತ್ ಕೇಂದ್ರಗಳಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.10ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ...

ಚಿತ್ತರಗಿ ಮಠದ ಜಾತ್ರಾ ಮಹೋತ್ಸವ: ಸೌಹಾರ್ದ ಸಮಾಜಕ್ಕೆ ಮಾದರಿಯಾದ ಇಳಕಲ್

ಶರಣ ಸಂಸ್ಕೃತಿಯ ಐತಿಹಾಸಿಕ ಪುಣ್ಯಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಸಮಾಜದ ಮುಖಂಡರು ಪಾಲ್ಗೊಂಡು ಹಿಂದು–ಮುಸ್ಲಿಂ ಭಾವೈಕ್ಯತೆ, ಪರಸ್ಪರ...

ಬಾಗಲಕೋಟೆ | 4 ಪಿಎಚ್‌ಸಿ ನಿರ್ವಹಣೆಗೆ ಒಬ್ಬ ವೈದ್ಯಾಧಿಕಾರಿ; ಹಳಿ ತಪ್ಪಿದ ಆರೋಗ್ಯ ಸೇವೆ

ಒಂದೆಡೆ ವೈದ್ಯರ ಕೊರತೆ, ಮತ್ತೊಂದೆಡೆ ನಾಲ್ಕು ಆರೋಗ್ಯ ಕೇಂದ್ರಗಳ ಆಡಳಿತದ ಹೊಣೆ. ಹೀಗಾಗಿ ವೈದ್ಯಾಧಿಕಾರಿಗೆ ರೋಗಿಗಳ ತಪಾಸಣೆ ಜತೆಗೆ ನಾಲ್ಕೂ ಕೇಂದ್ರಗಳ ಆಡಳಿತಾತ್ಮಕ ಜವಾಬ್ದಾರಿಯನ್ನೂ ನಿಭಾಯಿಸುವ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯ ಗ್ರಾಮೀಣ ಜನರ ಆರೋಗ್ಯ...

ಬಾಗಲಕೋಟೆ | ಶಾಲಾ ಚಾವಣಿ ಕುಸಿತ: ಎಂಜಿನಿಯರ್‌ಗಳ ವಿರುದ್ಧ ಕ್ರಮಕ್ಕೆ ಸೂಚನೆ

ಶಾಲಾ ಕೊಠಡಿಗಳ ಸುಸ್ಥಿತಿ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರೂ ಬಾಗಲಕೋಟೆ ಜಿಲ್ಲೆಯ ಮುಗುಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯ ಚಾವಣಿ ಕುಸಿದಿರುವುದು ಗಂಭೀರ ವಿಚಾರವಾಗಿದೆ. ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸದೇ ವರದಿ...

ಮುಗಳೊಳ್ಳಿ ಶಾಲೆ ಕಾಂಕ್ರೀಟ್ ಕುಸಿತ: ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಲೋಕಾಯುಕ್ತ

ಬಾಗಲಕೋಟೆ ಜಿಲ್ಲೆಯ ಮುಗಳೊಳ್ಳಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿದ್ಯಾರ್ಥಿಗಳ ಮೇಲೆ ಕಾಂಕ್ರೀಟ್ ಕುಸಿದು ಗಾಯಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ...

ಮುಧೋಳ | ಮಳೆ ಅಭಾವ, ಒಣಗಿದ ಬೆಳೆ; ಬರ ಪಟ್ಟಿ ಪರಿಷ್ಕರಣೆಗೆ ರೈತರ ಆಗ್ರಹ

ಮುಂಗಾರು ಕೈಹಿಡಿಯಲಿದೆ, ಬಿತ್ತನೆ ಮಾಡಿದ ಬೆಳೆ ಕೈತುಂಬ ಫಸಲು ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಜಮೀನಿಗೆ ಇಳಿದಿದ್ದ ಮುಧೋಳ ತಾಲೂಕಿನ ರೈತರಿಗೆ ಇದೀಗ ಮಳೆಯೇ ಮುಳುವಾಗಿದೆ. ಬಿತ್ತನೆ...

ಈ ಹೊತ್ತಿನ ಪ್ರಮುಖ ಸುದ್ದಿ