ಬಾಗಲಕೋಟೆ ನೋಡಲ್ ವ್ಯಾಪ್ತಿಯ ವಿವಿಧ ವಿದ್ಯುತ್ ಕೇಂದ್ರಗಳಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.10ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ನವನಗರ, ವಿದ್ಯಾಗಿರಿ, ಗದ್ದನಕೇರಿ, ಸೂಳಿಕೇರಿ, ಯಡಹಳ್ಳಿ, ವೀರಾಪೂರ, ಕೆಇಬಿ ಕಾಲೊನಿ, ಸಿಂದಗಿ, ಹಲಕುರ್ಕಿ, ಕೆರೂರ, ಉಗಲವಾಟ, ಹಾಲಿಗೇರಿ, ಮುಷ್ಟಿಗೇರಿ, ಜಲಗೇರಿ, ಕೈನಕಟ್ಟಿ, ನವನಗರ ಯೂನಿಟ್-2, ದುರ್ಗಾನಗರ, ಮಂಗಳಗುಡ್ಡ, ಕಲಾದಗಿ, ಚಿಕ್ಕಶೆಲ್ಲಿಕೇರಿ, ಗೋವಿಂದಕೊಪ್ಪ, ತುಳಸಿಗೇರಿ ಸೇರಿದಂತೆ ಬಾಗಲಕೋಟೆ ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಅದೇ ರೀತಿ ಬಾದಾಮಿ, ಶಿವಪುರ, ಹೊಸೂರ, ಬೇಲೂರು, ಯರಗೊಪ್ಪ, ಮಲ್ಲಾಪೂರ, ಚಾಲುಕ್ಯ, ಕಬ್ಬಗೇರಿ, ಗೊಂದಿ, ಆಡಗಲ್, ಶಿಪ್ಪರಮಟ್ಟಿ, ಹೊಸಕೋಟೆ, ಬೀರೇಶ್ವರ, ಕುಳಗೇರಿ, ಮಮಟಗೇರಿ, ಚಿಮ್ಮನಕಟ್ಟಿ, ಕಾಕನೂರ, ನೀಲಗುಂದ, ಸುಂಕದಕಟ್ಟಿ, ಲಖಮಾಪುರ, ಕಿತ್ತಲಿ, ಕಾತರಕಿ, ಹೆಬ್ಬಳ್ಳಿ ಹಾಗೂ ಸುಳ್ಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇದರೊಂದಿಗೆ ಬಿವಿವಿಎಸ್ ಕ್ಯಾಂಪಸ್, ಕೆಎಚ್‌ಬಿ ಕಾಲೊನಿ, ಶೀಗಿಕೇರಿ, ನೀರಲಕೇರಿ, ತಿಮ್ಮಾಪೂರ, ಜಂಗವಾಡ, ನೀಲಾನಗರ, ಶಿರೂರ, ಲಿಂಗಾಪೂರ, ಕಮತಗಿ, ಅಂಬಲಿಕೊಪ್ಪ, ಮುಗನೂರು, ರಾಮಥಾಳ, ಬೇನಾಳ, ಚಬ್ಬಿ, ಯಡಹಳ್ಳಿ ಹಾಗೂ ಗದ್ದನಕೇರಿ ಕ್ರಾಸ್ ಸೇರಿದಂತೆ ಹಲವು ಪ್ರದೇಶಗಳು ವಿದ್ಯುತ್ ಕಡಿತದ ವ್ಯಾಪ್ತಿಗೆ ಒಳಪಡಲಿವೆ.
ವಿದ್ಯುತ್ ನಿರ್ವಹಣಾ ಕಾಮಗಾರಿಯ ಪರಿಣಾಮವಾಗಿ ಚಬ್ಬಿ, ಯಡಹಳ್ಳಿ, ಗದ್ದನಕೇರಿ ಕ್ರಾಸ್ ಸೇರಿದಂತೆ ವಿವಿಧೆಡೆ ನೀರು ಸರಬರಾಜು ಮಾಡುವ ಜಾಕ್‌ವೆಲ್‌ಗಳಿಗೂ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ. ಹೀಗಾಗಿ ಈ ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಯ ಮೇಲೂ ತಾತ್ಕಾಲಿಕ ಪರಿಣಾಮ ಬೀರುವ ಸಾಧ್ಯತೆಯಿದೆ. ನಿಗದಿತ ಅವಧಿಯಲ್ಲಿ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸಹಕರಿಸುವಂತೆ ಹೆಸ್ಕಾಂ ಮನವಿ ಮಾಡಿದೆ.





