ಜಿಲ್ಲೆಗಳು

ರಾಯಚೂರು | ಎಸ್‌ಐಆರ್: ಎಎಸ್‌ಡಿಡಿಒ ಅಡಿ 2.54 ಲಕ್ಷ ಮಂದಿ ಮತದಾರರ ಹೆಸರಿಗೆ ಕತ್ತರಿ ಭೀತಿ

ಮತದಾರರ ಪಟ್ಟಿ ನಿಖರವಾಗಿ ಮತ್ತು ಪಾರದರ್ಶಕವಾಗಿರುವುದು ಪ್ರಜಾಪ್ರಭುತ್ವದ ಆಧಾರ. ಆದ್ದರಿಂದ, ಜಿಲ್ಲಾಡಳಿತ, ಚುನಾವಣಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಿ, ಯಾರೂ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಇದು ಕೇವಲ...

ಕೊಪ್ಪಳ | ಲಂಚಾರೋಪ: ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮಾನತಿಗೆ ಶಿಫಾರಸ್ಸು

ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಅವರನ್ನು ಅಮಾನತುಗೊಳಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಶಿಫಾರಸು ಮಾಡಿದ್ದಾರೆ. ಲೇಔಟ್ ಅನುಮೋದನೆಗಾಗಿ ಮಾಲೀಕರೊಬ್ಬರಿಗೆ 3 ಲಕ್ಷ ರೂಪಾಯಿ ಹಣದ...

ರಾಯಚೂರು | ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗೆ ಬೆಂಕಿ: ಸಂಪೂರ್ಣ ಭಸ್ಮ

ಪೂಜಾ ಸಾಮಗ್ರಿಗಳ ಅಂಗಡಿಯಲ್ಲಿ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಅಂಗಡಿ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ರಾಯಚೂರು ನಗರದ ಭಂಗಿಕುಂಟಾ ರಸ್ತೆ ಬದಿಯಲ್ಲಿ ನಡೆದಿದೆ. ಪೂಜಾ ಸಾಮಗ್ರಿಗಳ ಇರುವ ಟಿನ್ ಶೆಡ್ ಅಂಗಡಿಯಲ್ಲಿ ಏಕಾಏಕಿ...

ಕೋಲಾರ | ದಲ್ಲಾಳಿಗಳ ಹಾವಳಿ, ಲಂಚ ಆರೋಪ; ಪಿ.ನಂಬರ್ ದುರಸ್ತಿ ಹಾಗೂ ಒತ್ತುವರಿ ತೆರವಿಗೆ ವಿಶೇಷ ತಂಡ ರಚನೆಗೆ ಆಗ್ರಹ

ತಾಲ್ಲೂಕು ಆಡಳಿತದಲ್ಲಿನ ಅವ್ಯವಸ್ಥೆ, ದಲ್ಲಾಳಿಗಳ ಹಾವಳಿ ಹಾಗೂ ಲಂಚದ ಆರೋಪಗಳನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ತಹಸಿಲ್ದಾರ್ ಕಛೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಸುಬ್ರಹ್ಮಣ್ಯ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ...

ಬೆಳಗಾವಿ | ಕುರಿಗಳ ಹಿಂಡಿಗೆ ಕಾರು ಡಿಕ್ಕಿ: 48ಕ್ಕೂ ಹೆಚ್ಚು ಕುರಿಗಳ ಸಾವು, 15ಕ್ಕೂ ಹೆಚ್ಚು ಗಾಯ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕೊಪ್ಪ ಗ್ರಾಮದ ಸಮೀಪ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರೊಂದು ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ 48ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ...

ಚೇಳೂರು | ನಾರೇಮದ್ದೇಪಲ್ಲಿ ಗ್ರಾಮದ ಮುಸ್ಲಿಮರು ಬತ್ತಿದ ಕೆರೆಯಲ್ಲಿ ಕುಳಿತು ಮಳೆಗಾಗಿ ನಮಾಜ್

ತಾಲ್ಲೂಕಿನ ನಾರೇಮದ್ದೇಪಲ್ಲಿ ಗ್ರಾಮದಲ್ಲಿ ಮಳೆಗಾಗಿ ಮುಸ್ಲಿಮರು ಗ್ರಾಮದಲ್ಲಿ ಬತ್ತಿರುವ ಕೆರೆ ಅಂಗಳದಲ್ಲಿ ಕುಳಿತು ಶುಕ್ರವಾರ ಸಾಮೂಹಿಕ ನಮಾಜ್ ಮಾಡಿದರು. ತಾಲ್ಲೂಕಿನ ನಾರೇಮದ್ದೇಪಲ್ಲಿ ಗ್ರಾಮದ ಮುಸ್ಲಿಮರು ಮಳೆಗಾಗಿ ಪ್ರಾರ್ಥಿಸಿ ಸಾಮೂಹಿಕ ನಮಾಜ್ ಸಲ್ಲಿಸಿದರು. ಮಳೆಗಾಲ ಆರಂಭವಾಗಿ...

ಉಡುಪಿ | ಹಿರಿಯಡಕ ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ತರಬೇತಿ ಸಮಾರೋಪ

ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಹಾಗೂ ಐ.ಟಿ. ಘಟಕಗಳ ಆಶ್ರಯದಲ್ಲಿ ಕಾರ್ಕಳದ ಕೆ.ಜಿ.ಟಿ.ಟಿ.ಐ. ವತಿಯಿಂದ ಜುಲೈ 13ರಿಂದ ಆಗಸ್ಟ್ 1ರವರೆಗೆ ಆಯೋಜಿಸಲಾಗಿದ್ದ 90 ಗಂಟೆಗಳ 'ಕಂಪ್ಯೂಟರ್ ತರಬೇತಿ' ಕಾರ್ಯಾಗಾರದ ಸಮಾರೋಪ...

ಎರಡು ತಿಂಗಳ ನಿಷೇಧ ಅಂತ್ಯ: ಕಡಲಿಗಿಳಿಯಲು ಸಜ್ಜಾದ ಕರಾವಳಿಯ ಮೀನುಗಾರರು

ಮೀನುಗಳ ಸಂತಾನೋತ್ಪತ್ತಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಎರಡು ತಿಂಗಳ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಅವಧಿ ಅಂತ್ಯಗೊಂಡಿದ್ದು, ಶನಿವಾರ (ಆ.1)ರಿಂದ ಕರಾವಳಿ ಕರ್ನಾಟಕದಲ್ಲಿ ಮತ್ತೆ ಆಳಸಮುದ್ರ ಮೀನುಗಾರಿಕೆ ಆರಂಭವಾಗುತ್ತಿದೆ. ಎರಡು ತಿಂಗಳ ವಿಶ್ರಾಂತಿಯ...

ಬಾಗಲಕೋಟೆ | 3 ತಿಂಗಳಲ್ಲಿ 12,234 ಹೆಸರು ಗಾಯಬ್: ಎಸ್‌ಐಆರ್ ಸುತ್ತ ಸಂಶಯದ ಹುತ್ತ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಸಾವಿರಾರು ಮತದಾರರ ಹೆಸರುಗಳ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. 34,355 ಮತದಾರರು ಕರಡು ಪಟ್ಟಿಯಿಂದ ಹೊರಕ್ಕೆ...

ಮಂಗಳೂರು | ನಿರಂತರ ಮಳೆ, ಬಂಟ್ವಾಳ ತಾಲೂಕಿನ ವಿವಿಧೆಡೆ ಮನೆಗಳಿಗೆ ಹಾನಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆಹಾನಿ ಸಂಭವಿಸಿದೆ. ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಪ್ರದೇಶದಲ್ಲಿ ಜಯ ಸಪಲ್ಯ ಅವರ ಮನೆಯ ಚಾವಣಿ ಕುಸಿದು ಬಿದ್ದಿದ್ದು, ಮನೆಗೆ ಹಾನಿಯಾಗಿದೆ. ರಾಯಿ...

ಕೊಡಗು | ಭಾರೀ ಮಳೆ: ಹಾರಂಗಿಯಿಂದ 13,000 ಕ್ಯೂಸೆಕ್ ನೀರು ಹೊರಕ್ಕೆ

ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲ ಪ್ರದೇಶದಲ್ಲಿ ಶುಕ್ರವಾರದಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದ ಕಾವೇರಿ ತುಂಬಿ ಹರಿದಿದೆ. ಹಾರಂಗಿಯಿಂದ 13,000 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಗಾಳಿ ಮಳೆ ಹೆಚ್ಚಾಗುವ ಮುನ್ಸೂಚನೆ ದೊರೆಯುತ್ತಿದ್ದಂತೆ, ಮುಂಜಾಗ್ರತಾ...

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಕುಮಾರಧಾರಾ ನದಿ ನೀರಿನ ಮಟ್ಟ ಏರಿಕೆ, ಕುಕ್ಕೆ ಸ್ನಾನಘಟ್ಟ ಮುಳುಗಡೆ

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಮತ್ತು ಘಾಟಿ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕುಮಾರಧಾರಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಸ್ನಾನಘಟ್ಟ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಸುರಕ್ಷತಾ ದೃಷ್ಟಿಯಿಂದ ಪ್ರವಾಸಿಗರು...

ಈ ಹೊತ್ತಿನ ಪ್ರಮುಖ ಸುದ್ದಿ