ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ; ರೈತ ಚಂ.ಸು ಪಾಟೀಲ್ ಸಾವಯವ ಸಾಧನೆ

Date:

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು ಸಾವಯವ ಕೃಷಿಯ ಪವಾಡ" ಎಂದು ಚಂ.ಸು ಪಾಟೀಲ್ ಸಾವಯವ ಕೃಷಿಯ ಅನುಕೂಲಗಳನ್ನು ವಿಶ್ಲೇಷಿಸುತ್ತಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ತೀವ್ರ ಬರಗಾಲ ಆವರಿಸಿಕೊಂಡಿದೆ.‌ ಕೃಷಿಕರ ಜೀವನ ಅತ್ಯಂತ ಗಂಬೀರ ಪರಿಸ್ಥಿತಿಗೆ ಬಂದೊದಗಿದೆ. ಮಳೆ ಕೊರತೆಯಿಂದ ಬೀಜ ಬಿತ್ತಿದ ರೈತ ಮುಗಿಲಿಗೆ ಮುಖವೆತ್ತಿ ಮಳೆಗಾಗಿ ಆಸೆಗಣ್ಣಿನಲಿ ನೋಡುವಂತಾಗಿದೆ. ಮಳೆ ಕೊರತೆಯಿಂದ ಹಾವೇರಿಗೂ ಬರದ ಛಾಯೆ ಆವರಿಸಿದೆ ಇಂತಹ ಬರಗಾಲದಲ್ಲಿಯೂ ಪಾರಂಪರಿಕ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ತಮ್ಮ ಹೊಲದಲ್ಲಿ ಮೆಕ್ಕೆಜೋಳ ಬೆಳೆದು ಯಶಸ್ವಿಯಾದ ಪ್ರಗತಿಪರ ರೈತ ಹಾಗೂ ಕವಿ ಚಂ.ಸು ಪಾಟೀಲ್ ಜಿಲ್ಲೆ ರಾಜ್ಯದ ರೈತರಿಗೆ ಮಾದರಿಯಾಗಿದ್ದಾರೆ.

- Advertisement -

ಹಾವೇರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿಯ ಎಲ್ಲ ರೈತರು ಕೃಷಿಯನ್ನೆ ಬದುಕಾಗಿಸಿಕೊಂಡವರು. ಆದರೆ ಜಿಲ್ಲೆಯ ರೈತರು ಈ ವರ್ಷ ಮಳೆ ತೀವ್ರ ಕೊರತೆಯಿಂದ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದು, ಬರಗಾಲವನ್ನು ಎದುರಿಸುತ್ತಿದ್ದಾರೆ. ಆದರೆ ಚಂ.ಸು.ಪಾಟೀಲ್ ಅವರು ಕೃಷಿಯಲ್ಲಿ ವಿಭಿನ್ನ ಆಲೋಚನೆಗಳನ್ನು ಮಾಡುವವರು. ಅಧುನಿಕ ಯುಗದಲ್ಲಿಯೂ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ತಮ್ಮ ಹೊಲದಲ್ಲಿ ಮೆಕ್ಕೆಜೋಳ ಬೆಳೆಯನ್ನು ಉತ್ತಮ ಬೆಳೆದು ಮಾದರಿಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...
69bd076e 6f5f 4e79 93be 2735bf566616 1

“ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು ಸಾವಯವ ಕೃಷಿಯ ಪವಾಡ” ಎಂದು ಚಂಸು ಪಾಟೀಲ್ ಸಾವಯವ ಕೃಷಿ ಬಗ್ಗೆ ವಿಶ್ಲೇಷಿಸುತ್ತಾರೆ.

ಚಂಸು ಪಾಟೀಲ್ ಅವರು ವಿದ್ಯಾರ್ಥಿ ಜೀವನದಲ್ಲಿ ಇರುವಾಗಲೇ ಸಹಜ ಕೃಷಿಯತ್ತ ಒಲವು ತೋರಿದ್ದರು. ಸುಮಾರು ವರ್ಷಗಳಿಂದ, ಇಷ್ಟೆಲ್ಲ ಜಮೀನು ಇದ್ದರೂ ಸಹಿತ ನಮ್ಮ ತಂದೆಯವರು ಇನ್ನೂ ಸಾಲದಿಂದ ಮುಕ್ತವಾಗಲಿಲ್ಲ ಎಂದು ಆಲೋಚಿಸಿದ್ದರು. ಈ ನಡುವೇ ಒಂದಷ್ಟು ವರ್ಷಗಳ ಕಾಲ ಬೇರೆ ಬೇರೆ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದರೂ, ಕೃಷಿ ಕಡೆಗೆ ಒಲವು ಜಾಸ್ತಿ ಇದ್ದುದರಿಂದ ಪತ್ರಕರ್ತ ಕೆಲಸಕ್ಕೆ 2006ರಲ್ಲೊ ರಾಜೀನಾಮೆ ನೀಡಿ, ಕೃಷಿ ಕಡೆಗೆ ಮುಖ ಮಾಡುವರು. ಸಹಜ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಅಲ್ಲಿಂದ ಇಲ್ಲಿಯವರೆಗೂ ತಮ್ಮ ಜಮೀನಿನಲ್ಲಿ ಬಿತ್ತಿದ ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಸಿಂಪಡನೆ ಮಾಡದೇ ಫಸಲು ಪಡೆದರು.

ಚಂಸು ಪಾಟೀಲ್ ಸಾವಯವ ಕೃಷಿಯನ್ನು ಅಳವಡಿಸಿಕೊಂಡು 2005ರಲ್ಲಿ ಮೆಕ್ಕೆಜೋಳ ಐದು‌ ಕ್ವಿಂಟಾಲ್ ಬೆಳೆದಿದ್ದರು. 2010ರಲ್ಲಿ ಹತ್ತರಿಂದ ಹದಿನೈದು‌ ಕ್ವಿಂಟಾಲ್ ಮೆಕ್ಕೆಜೋಳ ಬೆಳೆದಿದ್ದರು. ಈ ವರ್ಷ ಉತ್ತಮ ಮೆಕ್ಕೆಜೋಳ ಇಳುವರಿ ಬಂದಿದೆ. ಬೀಜಕ್ಕೆ ಐದು ಸಾವಿರ, ಬೇಸಿಗೆಯಲ್ಲಿ ರಂಟೆ ಹೊಡೆದದ್ದು, ಹರಗಿದ್ದು, ಬಿತ್ತಿದ್ದು ಸೇರಿ ಹದಿನೈದು ಸಾವಿರ, ವಕ್ಕಲಿಕ್ಕೆ ಐದು ಸಾವಿರ ಒಟ್ಟು ಇಪ್ಪತ್ತರಿಂದ ಇಪ್ಪತೈದು ಸಾವಿರ ಖರ್ಚು ತಗುಲಿದೆ. ಸಾವಯವ ಕೃಷಿಯಿಂದ ಉತ್ತಮ ಮೆಕ್ಕೆಜೋಳ ಬಂದಿದ್ದು, ಮೂವತ್ತೈದರಿಂದ ನಲವತ್ತು ಕ್ವಿಂಟಾಲ್ ಮೆಕ್ಕೆಜೋಳ ಇಳುವರಿ ಬರುವ ನೀರಿಕ್ಷೆಯಲ್ಲಿದ್ದಾರೆ.

69bd076e 6f5f 4e79 93be 2735bf566616

ಸಾವಯವ ಕೃಷಿ ಒಂದು ರೀತಿಯಲ್ಲಿ ಖರ್ಚಿಲ್ಲದ, ವಿಶ್ರಾಂತಿ‌ ಸಹಿತ ಉತ್ತಮ ಬೆಳೆಯನ್ನು ಬೆಳೆಯಬಹುದು. ಯಾವುದೇ ಗೊಬ್ಬರ, ಕಳೆನಾಶಕ ಸಿಂಪಡಿಸದೇ ಕೃಷಿಯನ್ನು ಮಾಡಿದರೇ ಆರೋಗ್ಯಕರ ಗಾಳಿ, ನೀರು, ಆಹಾರ ಎಲ್ಲವೂ ಸಿಗುವುದರ ಜೊತೆಗೆ ಉತ್ತಮ ಬೆಳೆಯನ್ನು ಬೆಳೆಯಬಹುದು.

“ನಗರ ಹಾಗೂ ಹಳ್ಳಿಗಳಲ್ಲಿ ಇಂದು‌ ಆರೋಗ್ಯಕರ ಬದುಕು ಎಲ್ಲಿಯೂ ಕಂಡು ಬರುವುದು ಅಪರೂಪ. ಚಿಕ್ಕ ಮಕ್ಕಳಿಂದ ಹಿಡಿದು, ಮೂವತ್ತೈದು ನಲವತ್ತು ವರ್ಷಕ್ಕೆ ಸಾವು-ನೋವುಗಳನ್ನು ನೋಡುತ್ತಿದ್ದೇವೆ. ಸಣ್ಣ ಸಣ್ಣ ಮಕ್ಕಳಲ್ಲಿಯೂ ಆರೋಗ್ಯ ಸಮಸ್ಯೆಯನ್ನು ನೋಡುತ್ತಿದ್ದೇವೆ. ಬದುಕಿನಲ್ಲಿ ಮಾನಸಿಕ ಅಸ್ಥಿರತೆ, ನೆಮ್ಮದಿ ಬದುಕು ಸಮಾಜದಲ್ಲಿ ಕಾಣುತ್ತಿಲ್ಲ. ಇದಕ್ಕೆಲ್ಲ ಮುಖ್ಯವಾಗಿ‌ ಆರೋಗ್ಯ ದುಬಾರಿಯಾಗಿದೆ. ಹಾಗಾಗಿ ಶುದ್ಧ ಪರಿಸರ, ಶುದ್ಧ ನೀರು, ಶುದ್ಧ ಗಾಳಿ ಪಡೆಯಲು ಮತ್ತೆ ಸಾವಯವ ಕೃಷಿ, ನೈಸರ್ಗಿಕ, ಪಾರಂಪರಿಕ ಕೃಷಿಯತ್ತ ಮರಳುವ ಅಗತ್ಯವಿದ್ದು, ಪರಿಸರಕ್ಕೆ ಪೂರಕವಾಗಿರುವ ಕೃಷಿಯನ್ನು ಮಾಡವುದು ಅಗತ್ಯವಿದೆ” ಎನ್ನುತ್ತಾರೆ ಚಂಸು.

“ಮಣ್ಣಿನಲ್ಲಿ ಅಸಂಖ್ಯಾತ ಸಜೀವ ಬ್ಯಾಕ್ಟಿರಿಯಾ ಹಾಗೂ ಫಂಗಸ್‌ನಿಂದ ಕೂಡಿದ ಅಮೂಲ್ಯ ಸಂಪತ್ತು. ಮಣ್ಣಿನಲ್ಲಿ ಬ್ಯಾಕ್ಟಿರಿಯಾ ಬೆಳೆಯಲು, ಭೂಮಿಯ ತೇವಾಂಶ ಚೆನ್ನಾಗಿ ಹಿಡಿದಿಟ್ಟುಕೊಳ್ಳಲು ಸಾವಯವ ಕೃಷಿ ತೀರಾ ಅವಶ್ಯ. ಆದರೆ ಮನುಷ್ಯನ ದುರಾಸೆಗೆ ರಾಸಾಯನಿಕ‌ ಗೊಬ್ಬರ, ಕೀಟನಾಶಕಗಳನ್ನು ಸಿಂಪಡನೆ ಮಾಡುವ ಮೂಲಕ ಮಣ್ಣಿನಲ್ಲಿರುವ ಶಕ್ತಿ ಕಡಿಮೆ ಆಗುತ್ತಿದೆ. ಇದರ ಪರಿಣಾಮವಾಗಿ ಬರಗಾಲದ ಪರಿಸ್ಥಿತಿ ಮತ್ತಷ್ಟು ತೀವ್ರಗತಿಯಲ್ಲಿ ತೇವಾಂಶ ಆರಿಕೆ ಬರುತ್ತದೆ. ಬೆಳೆಗಳು ಒಣಗಿ ಹೋಗುತ್ತವೆ. ಸಾವಯವ ಕೃಷಿಯಲ್ಲಿ ಮಣ್ಣಿಗೆ ಸ್ಥಿರತೆ ಇರುತ್ತದೆ. ಮಳೆ ಆಗದಿದ್ದರೂ ತೇವಾಂಶ ಇರುತ್ತದೆ. ಹೀಗಾಗಿ ಮಳೆ ಕೊರತೆಯ ಸಮಯದಲ್ಲೂ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ” ಎಂದು ತಮ್ಮ ಸಾವಯುವ ಕೃಷಿಯ ಅನುಭವ ಹಂಚಿಕೊಂಡರು.

ಇಂದಿನ‌ ದಿನಮಾನಗಳಲ್ಲಿ ವಿಮೆ ಕಂಪನಿಗಳು, ರಾಸಾಯನಿಕ ಕಂಪನಿಗಳ ಹೆಚ್ಚಿಗಿವೆ. ರಾಜ್ಯ ಸರ್ಕಾರಕ್ಕೆ ಜನರ ಆರೋಗ್ಯದ ಮೇಲೆ‌ ಕಾಳಜಿ‌ ಇದ್ದರೇ, ಪರಿಸರದ ಮೇಲೆ‌ ಕಾಳಜಿ‌ ಇದ್ದರೆ, ತುರ್ತಾಗಿ ಸಾವಯವ ಕೃಷಿ ಕಡೆಗೆ ರೈತರು ಮುಖಮಾಡುವಂತೆ ಉತ್ತೇಜನ ನೀಡುವ ಅಗತ್ಯವಿದೆ. ಇಂದು ಎಲ್ಲವೂ ಕಲಬೆರಕೆಯಾಗುತ್ತಿದೆ. ಶುದ್ಧ ಪರಿಸರ, ಶುದ್ಧ ಗಾಳಿ, ಶುದ್ಧ ನೀರು ನಮ್ಮ ಮುಂದಿನ ಪೀಳಿಗೆಗೆ ದೊರೆಯಬೇಕು. ಸಹಜ ಕೃಷಿಯ ಜೊತೆಗೆ ಅಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ‌ ಮಾರ್ಪಾಡು ಮಾಡಿದರೆ ಕೃಷಿ ಕ್ಷೇತ್ರ ಸಮೃದ್ಧವಾಗುತ್ತದೆ.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಮ್ಯಾರಥಾನ್‌ನಲ್ಲಿ ಐತಿಹಾಸಿಕ ಬೆಳ್ಳಿ, ಶೂಟಿಂಗ್‌ನಲ್ಲೂ ಬೆಳಗಿದ ಭಾರತ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ 8ನೇ ದಿನದಂದು ಭಾರತೀಯ...

ಬೀದರ್‌ | ಬಿಎಸ್‌ಎಸ್‌ಕೆ ಶೀಘ್ರ ಪುನಶ್ಚೇತನಕ್ಕೆ ಜೈಕರವೇ ಆಗ್ರಹ

ಬೀದರ್ ಜಿಲ್ಲೆಯ ರೈತರು ಹಾಗೂ ಕಾರ್ಮಿಕರ ಪ್ರಮುಖ ಆಧಾರವಾಗಿರುವ ಹುಮನಾಬಾದ್ ತಾಲೂಕಿನ...

ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಜಾಗತಿಕ ಬಹಿಷ್ಕಾರ: ಖುರ್ಚಿಗೆ ಅಂಟಿಕೊಂಡ ಭಾರತದ ಧೋರಣೆಗೆ ಖಂಡನೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ...

ಪುತ್ರ ಚುನಾವಣಾ ಆಯೋಗದ ವಕೀಲರಾಗಿದ್ದರೂ ಕಾಯ್ದೆ ವಿಚಾರಣೆ: ಸುಪ್ರೀಂ ಜಡ್ಜ್ ನಡೆಗೆ ನೈತಿಕತೆಯ ಪ್ರಶ್ನೆ

ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ–2023ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ...