(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ನಮ್ಮೂರ ಬದಿಗೆ, ಹೀರಿಕಾಯಿ ಇರ್ಲಿ ಸೊಪ್ಪಿರ್ಲಿ, ರೊಟ್ಟಿ ಇರ್ಲಿ ಒಂದ ರಾಶಿ ಕಾಯಿಸುಳಿ ಹಾಕ್ಬಿಟ್ರೆ ನಮ್ಗ ಹನಿ ಸಮಾಧಾನ. ಅದ್ಕೆ ಯಾವ ರುಚಿನೂ ಸರಿಗಟ್ಟುಕೂ ಆಗುದಿಲ್ಲ ಬಿಡಿ. ಇನ್ನು, ಸಾರು ತರಕಾರಿದಿರ್ಲಿ ಮೀನಿರ್ಲಿ, ಕೋಳಿ ಸಾರೇ ಇರ್ಲಿ, ಕಾಯಿ ಮಸಾಲಿ ಇಲ್ದೆ ನಮಗೆ ಅಡ್ಗಿ ಮಾಡುಕೇ ಬರುದಿಲ್ಲ
“ತಂಗಿ, ಕಾಯ್ ಮರ ಹತ್ತುಕೆ ಯಾರರೂ ಸಿಕ್ಕುರೇನೆ… ಮನಿಲ ಒಂದ ಕಾಯೂ ಇಲ್ಲ ಮಾರೆತಿ. ಹನ್ನೆಡ ಗಂಟಿ ಅತೇ ಬಂತ, ಹನಿ ಅಡ್ಗಿನೂ ಆಲೆಲಾ… ತಮ್ಮ ಉಣ್ಣುಕ ಬರುಕಾಯ್ತ…”
-ಹಿಂದಿನ ಮನಿ ಪಾರ್ವತಕ್ಕ ನಮ್ಮನಿ ಅಂಗಳ ಗ್ವಾಡಿದಲಿ ನಿಂತು ಕೇಳದ್ಕುಡ್ಲೆಯಾ…
“ಇಲ್ವೆ ಪಾರ್ವತಕ್ಕ… ಯಾರೂ ಸಿಕ್ಕುದೆಲಾ… ನಮ್ಮನಿದೇ ಎರ್ಡ ಕೊಡ್ತಿ ಇರ ತಕಂಡೋಗ್ಲಕಾ,” ಅಂದಿ ಕತ್ತಿ ತಕಂಡಿ ಎರಡ ಕಾಯ ಸುಲ್ದಿ ಕೊಟ್ಟೆ.
“ನಮ್ಮನಿ ಕಾಯ್ ಕೊಯ್ದು ಕುಡ್ಲೆ ಕೊಡ್ತಿ ಅಪು ಹಾಂ… ಅಂವ ಹಾಳಾಗೋಗ್ಲೆ ಯಾವಾಗ್ ಬತ್ನೇನ…” ಹೇಳಿ ಪಾರ್ವತಕ್ಕ ಕಾಯನ ಜುಬರ ತೆಕ್ಕಂತಿ ಮನಿಗ ಹೋಯ್ತು.
ಈ ಕಾಯಿ ಅಂದ್ರೆ ತೆಂಗಿನಕಾಯಿ. ಒನ್ನಮ್ನಿ ನಮ್ಮ ಉತ್ತರ ಕನ್ನಡದ ಅಡ್ಗಿ ಮನಿ ರಾಜ ಇದ್ದಂಗೇಯ.
ಬೆಳಗ್ಗಿನ ತಿಂಡಿಂದ ಹಿಡ್ಕಂಡಿ ಪಲ್ಯ, ಸಾರು, ಪೂಜೆ, ಉಡಿ ಯಾವ್ದಕ್ಕೂ ಈ ಕಾಯಿ ಇಲ್ದಿದ್ರೆ ನೆಡುದೇ ಇಲ್ಲ.
ಪ್ರತೀ ಮನಿಲೂ ಮನಿಗ ಸಾಕಾಗೊಷ್ಟಾರೂ ಕಾಯ್ ಮರ ಇಲ್ದಿದ್ರೆ, ಅವ್ರಿಗ್ ಜೀವನ ಕಳುದು ಬಾಳ ಕಷ್ಟನೇಯಾ.
ನಾ ಮೊದ್ಲು ವಿಜಾಪುರ ಶಾಲಿ ಜಾಯಿನ್ ಆದಗೆ, ರೂಮ್ ಮಾಡಿದ್ ದಿನಾನೇ ಅಡ್ಗಿ ಮಾಡುಕ ಹೋದೆ. ಅನ್ನ ಆದ್ಮೇಲ ಮಸಾಲಿ ಅರುಕೆ ಕಾಯ್ ಬೇಕಾಯ್ತಲಾ… ನಾನು ನಮ್ಮನಿಯವ್ರು ರಸ್ತಿ-ರಸ್ತಿ ತಿರ್ಗಿ ಕಾಯ್ ಹುಡ್ಕಿದ್ರೆ… ಕಾಯ್ ಎಲ್ಲದೆ? ಎಷ್ಟು ಹುಡ್ಕದ್ರೂ ಯಾವ ಅಂಗ್ಡಿಲೂ ಕಾಯೇ ಇಲ್ಲ…
ಅಂಗ್ಡಿ ತಿರ್ಗಿ-ತಿರ್ಗಿ ಸಾಕಾಗಿ, ಇಲ್ಲಿ ಕಾಯೇ ಇಲ್ದೇ ಹೆಂಗ ಜೀವ್ನ ಮಾಡುದಪ್ಪಾ ಅಂದಿ ಇನ್ನೇನ ಕಣ್ಣಲ್ ಹನಿ ನೀರ ಬರ್ಬೇಕು… ಆ ಟೈಮಿಗೆ ಒಬ್ಬಂವ, “ಪಾಪ ಟೀಚರ್… ಕಾರವಾರದಿಂದ ಬಂದಾರ್ರೀ… ಟೆಂಗಿನ ಕಾಯೇನ್ರೀ, ಹಸೀ ಕೊಬ್ರಿ ಹೌದಿಲ್ರೀ… ಬರ್ರೀ ಅಲ್ಲದಾವ… ಮಕಾಂದಾರ ಅಗಂಡ್ಯಾಗ…” ಅಂದ್ಕಂಡಿ, ಇನ್ನೊಂದಿಷ್ಟ ಬಿಸ್ಲಲ್ಲಿ ತಿರ್ಗ್ಸಿ-ತಿರ್ಗ್ಸಿ ದೂರದ ಅಂಗ್ಡಿಗ ಕರ್ಕಂಡ ಹೋದ.
ಅಂತೂ ಆ ಅಂಗ್ಡಿಲ ಸಿಮೆಂಟಿನ ಚೀಲ್ದಲ್ಲಿ ಸಿಪ್ಪೆ ಅರ್ಧಮರ್ದ ಸುಲ್ದಿರೋ ರಾಶಿ-ರಾಶಿ ಕಾಯಿ! ಅರೆ…! ನಮ್ಗಂತೂ ಖುಷಿ ಆಗುಕ ಬಾಕಿ ಇಲ್ಲ… ಮತ್ ನಮ್ಮೂರಿಗೆ ಒಂದ ಹೊಸ ಸುರಂಗ ಮಾರ್ಗನೇ ಸಿಕ್ದಂಗ ಆಗಿ, ಇನ್ ಬಿಟ್ರ ಸಿಕ್ಕುದೆಲ್ಲ ಹೇಳಿ, ಒಂದ್ ಇಪ್ಪತ್ ಕಾಯಿ ಸುಲ್ಕೊಡ್ರಿ ಅಂದಿ ಸುಲಿಸ್ಕಂಡು ಚೀಲ್ದಲ್ಲಿ ತುಂಬ್ಕಂಡ್ರು.
ಅಂಗಡಿಯಂವ ಅಂತೂ ಇಷ್ಟ ಕಾಯ ತಕಂಡವ್ರನ್ನ ಜೀವಮಾನದಲ್ಲಿ ನೋಡಿದ್ನಾ ಇಲ್ವೆನಾ… ನಮ್ಮನ್ನ ಒನ್ನಮ್ನಿ ಅನ್ಯಗ್ರಹ ಜೀವಿ ನೋಡದಂಗೆ ನೋಡ್ತ ಕಾಯ್ ಸುಲ್ಕೊಟ್ಟ. ಅದೂ ಸುಲಿಯುದರೂ ಯಾವ್ ನಮನಿ… ಒಂದು ಕಾಯಗೆ ಹತ್ ನಿಮಿಷ ತಕಂಡ.
ಆಯ್ತು… ತಕಬಂದಿ ಮೆಟ್ ಗತ್ತಿಲೆ ಕೆರಿವಾ ಹೇಳಿ ಒಂದು ಕಾಯಿ ಒಡೆದ್ರೆ, ನಮ್ಮ ಸಿಂಯಾಳದಂಗೆ ತೆಳು ತಿರುಳು – ದ್ವಾಸಿಯಷ್ಟದೆ. ನಮ್ಮ ಕಡಿಗ ಒಂದ ಕಡಿ ಕೆರದ್ರೆ ಒಂದ ಬಟ್ಟಲ ತುಂಬಿ ರಾಶಿ-ರಾಶಿ ಸುಳಿ ಆದ್ರೆ, ಇದ್ರದ್ದು ಎರಡೂ ಕಡಿ ಕೆರದ್ರೂ ಎರಡು ಬೊಗಸೆ ತುಂಬ್ಲೆಲಾ. ಯೇ ರಾಮ… ಇದೆಂತ ಕಾಯಿ ಹೇಳಿ ಬೈಕಂತೇಯಾ ಹೆಂಗೋ ಸಾರ ಮಾಡಿ, ಉಳ್ದಿದ್ದ ಎಲ್ಲಾ ಕಾಯೂವಾ ಕಾಟಿನ ಅಡಿಗ ಹಾಕಿಟ್ರು.
ಮಾರನೆ ದಿನ ಮತ್ ಕಾಯಿ ತೆಗ್ದು ನೋಡದ್ರೆ ಅಟ್ಟೂ ಕಾಯಿ ಪಟಾ ಪಟಾ ಒಡದು ಬಿರುಕು ಬಿಟ್ ಬಿದ್ದದೆ. ಯೇ ದ್ಯಾವ್ರೆ… ಇದೆಂತಪ್ಪ ಹೇಳಿ, ಆವಾಗಿಂದ ಬೇಕಾದಾಗಟ್ಟೇ ಒಂದೇ ಕಾಯಿ ತರುದು, ಮತ್ತೆ ಅವ್ರು ಅಂಗಡಿಲಿ ಇಟ್ಟಂಗೇಯಾ ಸಿಪ್ಪಿಗೂಡೇ ತರುದೂ ರೂಡಿ ಮಾಡ್ಕಂಡ್ರು.
ಅದಾಯ್ತು ಬಿಡಿ… ನಮ್ಮ ಕಡೆ ಕತಿ ಹೇಳುದಾದ್ರೆ ನಮ್ಮೂರ ಬದಿಗೆ ನಾವ್ ಎಣ್ಣಿ ಜಾಸ್ತಿ ತಿನ್ವರಲ್ಲ, ಹೀರಿಕಾಯಿ ಇರ್ಲಿ ಸೊಪ್ಪಿರ್ಲಿ, ರೊಟ್ಟಿ ಇರ್ಲಿ ಒಂದ ರಾಶಿ ಕಾಯಿಸುಳಿ ಹಾಕ್ಬಿಟ್ರೆ ನಮ್ಗ ಹನಿ ಸಮಾಧಾನ. ಅದ್ಕೆ ಯಾವ ರುಚಿನೂ ಸರಿಗಟ್ಟುಕೂ ಆಗುದಿಲ್ಲ ಬಿಡಿ.
ಇನ್ನು, ಸಾರು ತರಕಾರಿದಿರ್ಲಿ ಮೀನಿರ್ಲಿ, ಕೋಳಿ ಸಾರೇ ಇರ್ಲಿ, ಕಾಯಿ ಮಸಾಲಿ ಇಲ್ದೆ ನಮಗೆ ಅಡ್ಗಿ ಮಾಡುಕೇ ಬರುದಿಲ್ಲ. ಆರಾಮಾಗಿ ಕೂತ್ಕಂಡು ಕಾಯಿ ಕೆರಿಯು ಮೆಟ್ಟಗತ್ತಿ ಇಲ್ಲಿ ಎಲ್ರ ಮನಿಲೂ ಇದ್ದೇ ಇರ್ತದೆ.
ಯಾವ ಮರ ಇಲ್ದಿದ್ರೂ ಕಾಯ್ ಮರ ಇಲ್ದಿರೋ ಮನಿಯಂತೂ ನಮ್ಮಲ್ಲಿ ಇರುದೇ ಇಲ್ಲ. ಇನ್ನು ಕಾಯಿ ಸುಲ್ದ ಮೇಲೆ ಅದ್ರ ಸಿಪ್ಪಿ ಮತ್ತೆ ಗೆರಟೆ ಒಲಿ ಒಟ್ಟುಕೆ, ಹಂಗೇಯ ಅದ್ರ ಜುಬರು ಪಾತ್ರೆ ತಿಕ್ಕುಕೆ ಬಳಸ್ವರು ನಾವು.
ಕಡಿಗೆ ಮರದ ಮಡ್ಲು ಚಪ್ರ ಹಾಕುಕೆ, ಒಣ ಮಡ್ಲು ಬೆಂಕಿ ಹಿಡಿಸುಕೆ, ಕರಮಡ್ಲು ಮಳೆಗಾಲ್ದಲ್ಲಿ ಒಲೆ ಒಟ್ಟುಕೆ ಮಸ್ತಾತದೆ. ಸೊಳ್ಳೆ ರಾಶಿ ಅದ್ರೆ ಕಾಯಿ ಸಿಪ್ಪಿ ಹೊಗಿ ಹಾಕದ್ರೆ ಒಂದೊಂದ್ ಇರುದಿಲ್ಲ. ಕೆಂಡ ಮಾಡುದಿದ್ರೆ, ಕೆಂಡ ಮಾಡುಕೆ ಮತ್ತೊಂದು ಕಡೆ ಕೆಂಡ ತಕಂಡಿ ಹೋಗುದಿದ್ರೆ ಕಾಯಿ ಸಿಪ್ಪಿ ಬಾಳ ಚಲೋ ಅತದೆ.
ಮೊದ್ಲೆಲ್ಲ ಮಸಾಲಿ ಅರು ಕಲ್ಲು ತೊಳ್ದು ಗುಂಡಿಂದ ನೀರು ಹತ್ತ ತೆಗುಕೂ ಹಳೇ ಗೆರಟೆನೇ ಇಟ್ಕಂತಿದ್ರು. ದೊಡ್ಡ ಕಾಯಾದ್ರೆ ಮಿಯುಕ ಚಂಬೂ ಅದೇಯಾ. ಸಾರು ಬಡ್ಸುಕೆ ಚಿಪ್ಪೂವ ತೆಂಗಿನ ಗೆರಟೆಲೇ ಮಾಡುದಾಗಿತ್ತು.
ಮತ್ತೆ ತೆಂಗಿನ ಮರಕ್ಕೆ ಕಲ್ಪವೃಕ್ಷ ಹೇಳಿ ಸುಮ್ಮನೆ ಹೇಳುದಾ?
ಕಾಯ್ ತಂಬಳಿ, ಕಾಯ್ ಚಟ್ನಿ, ಕಾಯ್ ಹಲ್ವಾ, ಊಟಕ್ಕೆ ಏನೂ ಇಲ್ದಿದ್ರೆ ನಂಜುಕೆ ಕಾಯ ಚೂರು ಸುಟ್ಕಂಡಿ ತಿನ್ನುದೂವ. ಸುಟ್ಟ ಗಾಯದ ಕಲೆಗೆ ಕಾಯ್ ಚೂರು ಸುಟ್ಟು ಉಪ್ಪು ತೇದು ಹಚ್ಚುದು ಕಾಯಂದೇಯ.
ಕಾಯಮರದ ಹೆಡಿಪುಂಟಿ ಅಂತೂವಾ ಕಾಲು ಸಂಕಕ್ಕೆ, ಮಕ್ಕಳಿಗೆ ಕ್ರಿಕೇಟ್ ಆಡುಕೆ, ಹೆಡಿಪುಂಟಿ ತಕ ಹೊಡಿತಿ ನೋಡ… ಅಂದ ಬೈಯುಕೂ ನಮಗೆ ಬೇಕೇ ಆತಿತ್ತು.
ಅದ್ರ ಕೊನೆಮಂಜಾರ ತರಕು ಬರಗುಕೆ, ಕೊಟ್ಟಿಗಿ ಸಗಣಿ ತೆಗುಕೆ ಮಸ್ತಾತದೆ.
ಹೇಳ್ತೆ ಹೋದ್ರೆ ಒಂದೆರಡು ನಮನಿ ಅಲ್ಲ ನಮ್ಮದು ಕಾಯಿದು ಸಂಬಂಧ.
ಮೊದ್ಲೆಲ್ಲಾ ಮನಿ ಜನಾನೇ ಮರ ಹತ್ತುದ ಕಲ್ತಿ, ಕಾಯಿ ಸಿಂಯಾಳ ಬೇಕಾದಗೆಲ್ಲ ಕೊಯ್ದಿ-ಕೊಯ್ದಿ ಹೊತಾಕ್ತಿದ್ರು. ಈಗ ಮನಿ ಮಕ್ಕಳಿಗೆ ಅದ್ಕೆಲ್ಲ ಬಿಡುದಿಲ್ಲ. ಕಾಯ ಕೊಯ್ಯುಕೆ ಜನನೂ ಸಿಗುದಿಲ್ಲ ಹೇಳುದು ದೊಡ್ಡ ಫಜೀತಿನೇಯ.
ಮಡ್ಲು ಮತ್ತೆ ಕಾಯೆಲ್ಲ ಮರದಲ್ಲೇ ಒಣಗಿ, ಯೇ ಅಲ್ಲಿ ಕುಳ್ಬೆಡ್ವೆ ಕಾಯ ಬೀಳುದು, ಮಡ್ಲೆಡಿ ಬೀಳುದು ಹೇಳ್ಕತಾ ಆ ಮರ ಹತ್ತು ಸೀತಾರಾಮ ಯಾವಾಗ ಬತ್ನೇನ ಹೇಳಿ ಬೈಕಂತಿರುದೇಯ…
ಮತ್ತೆಂತ ಹೇಳುದು… ಒಂದ್ಕೆಲ್ಸಾ ಮಾಡಿ, ಇವತ್ ಉಂಬುಕೆ ನಮ್ಮನಿಗೆ ಬನ್ನಿ… ಹೆಂಗೂ ಎರಡ ಕಾಯಿ ಒಡೆದು ಸಾರು, ಪಲ್ಯ ಮಾಡಿದ್ದೆ. ಉಣ್ತೇಯಾ ಮತ್ತಿಷ್ಟು ಕಾಯಿನ ಸುದ್ದಿ ಮಾತಾಡ್ವ… ಹ್ಞಾಂ?
ಹೆಚ್ಚಿನ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ: ನುಡಿ ಹಲವು | ಅಂಕಣ | ವೈವಿಧ್ಯ
ಸಂದ್ಯಕ್ಕ… ಮನ ಮುಟ್ಟುವ ನಿಮ್ಬ ಭಾವನಾತ್ಮಕ ಬರಹಗಳಿಗೆ ಫ್ಯಾನ್ ಆಗಿದ್ದೆ ನಾನು. ಈಗ ನೈಜತೆಯ ನಿಮ್ಮ ದ್ವನಿ ಸುರುಳಿಗೆ ಸಹ ಮರುಳಾದೆ. ಗುಡ್ ಜಾಬ್ ….
ಥ್ಯಾಂಕ್ಯೂ ನೇಹಾ.. ನಿಮ್ಮ ಈ ನುಡಿಯ ಮೇಲಿನ ಪ್ರೀತಿ ನಮಗೂ ಖುಷಿ ❤
Its really nice to hear our side kannada.
Its really nice to hear our side kannada.
ಸರ್ ಥ್ಯಾಂಕ್ಯೂ ತಮ್ಮ ಪ್ರತಿಕ್ರಿಯೆಗೆ 🙏
❤️ಉತ್ತಮ ಬರಹ💐🙏
ನನ್ನೂರಿನ ಸಿರಿಯ ಸೊಬಗಿನ ವರ್ಣನೆಯ ನೈಜತೆಗೆ ಸಿಕ್ಕಾ ಸಮಯ ವ್ಯಯಿಸುತ್ತಿರುವುದು ನಿಮ್ಮ ಪ್ರೌಢಿಮೆಯನ್ನು ತೋರ್ಪಢಿಸುತ್ತದೆ.
ಒಬ್ಬ ಆಸಾಮಾನ್ಯ ಶಿಕ್ಷಕಿಯಾಗಿ ತೋರುವ ವೃತ್ತಿ ಕೌಶಲ್ಯದ ಜೊತೆ ಸಾಹಿತ್ಯ, ಕತೆ, ಕಾದಂಬರಿಯ ರಚನೆಯ ಕವಿ ಹೃದಯ ಹೊಂದಿರುವ ನೀವು ಇತರರಿಗೆ ಮಾದರಿ ಆಗಿರುತ್ತತೀರಿ.
ಶುಭಾಶಯಗಳು 💐🙏🙏🙏🙏🙏🙏
ತುಂಬ ಧನ್ಯವಾದಗಳು ತಮ್ಮ ಭಾಷೆಯ ಪ್ರೀತಿಗೆ 🙏
ತುಂಬಾ ಚೆನ್ನಾಗಿದೆ ಸಂಧ್ಯಾ… ನಿಮ್ಮ ಈ ಲೇಖನ ನನಗೆ ಕಳೆದ ಹತ್ತು ವರ್ಷಗಳ ಹಿಂದೆ ನಾನು ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಬರೆಯುತ್ತಿದ್ದ ‘ ಅವಳ ಅಂತರಂಗ ‘ ಅಂಕಣಗಳಲ್ಲಿಯದೇ ಒಂದು ಎಪಿಸೋಡ್ ಅನಿಸುವಷ್ಟು ಆತ್ಮೀಯವಾಯ್ತು..😊
ಸಂಧ್ಯಾ….
ನಮ್ಮೂರ ಹುಡ್ಗಿ ಅಂಬುಕ್ ಖುಷಿ ಆತದೆ. ಒಂದ್ ತೆಂಗಿನ ಕಾಯಿ ಜೊತಿಗ್ ನಮ್ ಕುಮಟಿ ಜನ್ರ ಸಂಬಂಧ ಎಂತದು ಹೇಳಿ ಚಂದ್ಕ್ ಹೇಳಿದೆ…ಬರವಣಿಗೆ ಶೈಲಿ ಮಸ್ತ್ ಇತ್…ಹಾಂ…👌
ತುಂಬ ಧನ್ಯವಾದಗಳು ನಮ್ಮ ಭಾಷೆ ನಮ್ಮ ಹೆಮ್ಮೆ
ಹೌದಾ ಸರ್.. ಕರಾವಳಿ ಮುಂಜಾವು ನಾವೂ ಓದುತ್ತೇವೆ..ಅವಳ ಅಂತರಂಗದ ಪ್ರತಿಗಳಿದ್ದರೆ ಹಂಚಿಕೊಳ್ಳಿ.. ಧನ್ಯವಾದಗಳು ತಮಗೆ
ತುಂಬಾ ಚೆನ್ನಾಗಿದೆ
ಥ್ಯಾಂಕ್ಯೂ ❤
ತುಂಬ ಚೆನ್ನಾಗಿ ಬರ್ದೀದಿರ ಊರಿನ ಸೊಬಗು, ಸೊಡಗು. ಬಟ್ ನೆಕ್ಸ್ಟ್ ಟೈಂ ಕಾಯಿ ಊರಿಂದನೆ ತಗೊಂಡ್ ಹೋಗಿ… 😁
ತಗೊಂಡು ಹೋಗಿದ್ವಿ.. ಅವೂ ಒಡಿತವೆ ಅಲ್ಲಿ.. ಈಗ ಟ್ರಾನ್ಸಫರ್ ಬಂದಾಯ್ತು
ನಮ್ ಕುಮ್ಟಾ ಕನಡ ಕೇಳಕಷ್ಟೇ ಅಲಾ ಓದುಕೂ ಛಲೋ ಆಗ್ತದೆ…
ಹಿಂಗೇ ಬೇರೆ ಕತೆ ಬರೀರಿ. ಚಿತ್ತಾಲ್ರ ನಂತ್ರ ಯಾರೂ ನಮ್ ಬದಿ ಕತೆ ಬರೆಯೋರೇ ಇಲ್ಲ.
ಅವರ ಮಟ್ವಕ್ಕೆ ಬರೆಯಲಾಗದೇ ಹೋದರೂ ಕೆಲವು ಕತೆಗಳಿವೆ ಬರೆದಿದ್ದವು.
ಅಬ್ಬಾ ಊರ್ ಬದಿಗೆ ಹೋಗಿ ಹೊಳೀಲಿ ಮುಳಗಿ ಎದ್ಕ ಬಂದ್ಕಂಡಿ ಹನಿ ಬಂಗ್ಡಿ ಸಾರ್ ಮಾಡ್ಕ ಉಂಡ್ಕಂಡ್ ಅರಾಮ್ ಮನಿಕಂಡಷ್ಟು ಖುಷಿ ಆಯಿತು ಇದರ ಓದಿ 🙏
ಬರೆದಿದಿದ್ದು ಸಾರ್ಥಕ ಆಯ್ತು ಇಷ್ಟಾದ್ರೆ
ಬಯಲು ಸೀಮೆಯ ತಿಪಟೂರು ಭಾಗದ ಕನ್ನಡಕ್ಕೆ ಅದರದ್ದೇ ಆದ ಸೊಗಸಿದೆ. ಸಾಧ್ಯವಾದರೆ ಅದನ್ನೂ ವಸಿ ತನ್ನಿ. ಕೊಲೋರಿಕೆ.
ಎಲ್ಲಾ ಭಾಗದ ಕನ್ನಡವಿದೆ ಓದಿ ಮೆಡಂ.. ನೀವೂ ಸಾಧ್ಯವಿದ್ದರೆ ಬರೆಯಿರಿ