ಬಳ್ಳಾರಿ | ಮನರೇಗಾ ಯೋಜನೆಯಡಿ ʼಖಾತ್ರಿʼ ಕೆಲಸ ನೀಡುವಂತೆ ಒತ್ತಾಯ

Date:

  • ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ
  • ಕಂಪ್ಲಿ ತಾಲೂಕಿನ ಹೊಸ ದರೋಜಿ ಗ್ರಾಮ ಪಂಚಾಯತ್ ಮುಂದೆ ಗ್ರಾಕೂಸ ಪ್ರತಿಭಟನೆ

ಬಡ ಕೂಲಿ ಕಾರ್ಮಿಕರು ಮೂರು ತಿಂಗಳಿಂದ ಕೆಲಸವಿಲ್ಲದೆ ಬೇರೆ ನಗರಗಳಿಗೆ ಗುಳೆ ಹೋಗುತ್ತಿದ್ದು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಮನರೇಗಾ ಅಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವಂತೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.

ಈ ಸಂಬಂಧ ಕಂಪ್ಲಿ ತಾಲೂಕಿನ ಹೊಸ ದರೋಜಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭುಗೌಡ ಅವರಿಗೆ ಗ್ರಾಮೀಣ ಕೂಲಿಕಾರ ಸಂಘಟನೆಯ ಕಾರ್ಯಕರ್ತರು ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಂಪ್ಲಿ ತಾಲ್ಲೂಕು ಕಾರ್ಯಕರ್ತೆ ವಾಣಿ ಅವರು ಈದಿನ.ಕಾಮ್ ಜೊತೆ ಮಾತನಾಡಿ, “ನಾವು ಕೆಲಸ ಕೇಳಿದರೆ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ. ಫಾರ್ಮ್ ನಂ. 6 ಕೊಟ್ಟು ಬಂದಿದ್ದೇವೆ ಎಂದು ಸಬೂಬ್ ಹೇಳುತ್ತಾರೆ. ಮನರೇಗಾ ದಡಿಯಲ್ಲಿ ಕೆಲಸ ಇಲ್ಲ, ಭತ್ತ ಕೊಯ್ಯುವುದು ಇದೆ ಎಂದು ಹೇಳುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಬೆಂಗಳೂರು, ಪುನಾ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಕೆಲಸವಿದ್ದರೂ ಕಾರ್ಮಿಕರಿಗೆ ಕೆಲಸ ನೀಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಹಿಂದೆ ತಾ.ಪಂ., ಜಿ.ಪಂ. ಸೇರಿದಂತೆ ಸಂಬಂಧಪಟ್ಟ ಎಲ್ಲಾರಿಗೂ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಲಿಲ್ಲ. ಹೀಗೆ ಮುಂದುವರದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ನೂರರ ನೆನಪು | ದೇವಾನಂದ್ ಎಂಬ ಸಾಹಸಿಗ, ಚಿರಯೌವನಿಗ

ಈ ಸಂದರ್ಭದಲ್ಲಿ ಗ್ರಾಕೂಸ ಪ್ರಮುಖರಾದ ಯಲ್ಲಮ್ಮ, ಸಿದ್ದಾರೂಡಪ್ಪ, ಮಹೇಶ್, ಈರಮ್ಮ , ರೇಣುಕಾ, ರಾಜಮ್ಮ, ಚೌಡಮ್ಮ, ನಿಂಗಮ್ಮ, ಮಹಾಲಕ್ಷ್ಮಿ, ಮಾರಮ್ಮ , ಲಕ್ಷ್ಮಿ, ಪಾರ್ವತಮ್ಮ, ಗಂಗಮ್ಮ, ಭೀಮಕ್ಕ , ಮಂಗಳಮ್ಮ, ಹುಲಿಗೆಮ್ಮ ಉರುಕುಂದಮ್ಮ ಸರಸ್ವತಿ , ಹೊಳೆಮ್ಮ , ಪಾರ್ವತಿ, ಯಲ್ಲಪ್ಪ ,ತಿಪ್ಪಮ್ಮ , ಗಂಗಪ್ಪ, ಹಾಲೇಶ, ರಹಮತ್ ಬೀ, ಸಾಹೇರ ಬಾನು ,ಗಿರಿರಾಜ, ಖಾಜಾ ಬಾನು ,ಲಕ್ಷ್ಮಮ್ಮ, ಮೀನಾಕ್ಷಿ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವದಾರಿ ಉಕ್ಕು ಗಣಿಗಾರಿಕೆ | ಆರು ವರ್ಷಗಳ ಹಿಂದೆ ವಿರೋಧ – ಇಂದು ಒಪ್ಪಿಗೆ; ಇದು ಕೇಂದ್ರ ಸಚಿವ ಎಚ್‌ಡಿಕೆ ವರಸೆ!

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿದ್ದು, ಮೋದಿ ನೇತೃತ್ವದ ಎನ್‌ಡಿಎ...

ಬಳ್ಳಾರಿ ಲೋಕಸಭಾ ಕ್ಷೇತ್ರ | ಗಣಿ ನಾಡಿನಲ್ಲಿ ಯಾರ ಕೊರಳಿಗೆ ಈ ಬಾರಿ ವಿಜಯದ ಹಾರ?

1999ರಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯ ಸುಷ್ಮಾ...

ಬಳ್ಳಾರಿ | ಅವಮಾನವಾದ ಸ್ಥಳದಲ್ಲೇ ಸನ್ಮಾನದ ವಿಶ್ವಾಸವಿದೆ: ರಾಮುಲು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಮೂಲಕ ಅವಮಾನವಾಗಿದೆ. ಅವಮಾನವಾದ ಸ್ಥಳದಲ್ಲೇ ಭಗವಂತ...

ಬಳ್ಳಾರಿ | ಅಕ್ರಮವಾಗಿ ಲೈಂಗಿಕ ಚಟುವಟಿಕೆ ಆರೋಪ; ಮಹಿಳೆ ಬಂಧನ

ಅಕ್ರಮ ಲೈಂಗಿಕ ಚಟುವಟಿಕೆ, ಮಹಿಳೆಯರ ಸಾಗಾಟ ಮಾಡುತ್ತಿದ್ದ ಅರೋಪದ ಮೇಲೆ ಮಹಿಳೆಯೊಬ್ಬರನ್ನು...