ಈ ದಿನ ಸಂಪಾದಕೀಯ | ಐಪಿಎಲ್ ಕಾಲ್ತುಳಿತ ದುರಂತದಲ್ಲಿ ಬಲಿಯಾದವರಿಗೆ ನ್ಯಾಯ ಸಿಕ್ಕಿತೇ?

Date:

ಕಾಲ್ತುಳಿತದ ಕಳಂಕದಿಂದ ನುಣುಚಿಕೊಳ್ಳಲು, ಆಗ ಅಧಿಕಾರಿಗಳ ಮೇಲೆ ಹಾಕಿದ ಸರ್ಕಾರ, ಈಗ ಅದೇ ಅಧಿಕಾರಿಗಳನ್ನು ದೋಷಮುಕ್ತರನ್ನಾಗಿಸಿದೆ. ರಾಜ್ಯ ಸರ್ಕಾರದ ನಡೆ ಹೇಗಿದೆ ಎಂದರೆ, 11 ಅಮಾಯಕರ ದಾರುಣ ಸಾವಿಗೆ ಕಾರಣ ಯಾರೂ ಅಲ್ಲ, ಅವರಾಗಿಯೇ ಬಂದು ಸತ್ತರು ಎನ್ನುವಂತಿದೆ, ಅಲ್ಲವೇ?

ಕಳೆದ ವರ್ಷ ಜೂನ್ 4ರಂದು, ಐಪಿಎಲ್‌ನಲ್ಲಿ ಜಯ ಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೌರವಾರ್ಥವಾಗಿ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‍‌ಸಿಬಿ ಮತ್ತು ಡಿಎನ್ಎ ಎಂಟರ್ಟೈನ್ಮೆಂಟ್ ಸಹಯೋಗದಲ್ಲಿ ವಿಜಯೋತ್ಸವವನ್ನು ಆಯೋಜಿಸಲಾಗಿತ್ತು.

- Advertisement -

ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಕೇವಲ 35 ಸಾವಿರವಿದ್ದರೂ, ಆರ್‍‌ಸಿಬಿ ಸಂಸ್ಥೆ ಸಾಮಾಜಿಕ ಮಾಧ್ಯಮಗಳಲ್ಲಿ ಉಚಿತ ಪ್ರವೇಶ ಘೋಷಿಸಿತು. ಅದಕ್ಕೆ ದೃಶ್ಯ ಮಾಧ್ಯಮಗಳ ಅಬ್ಬರದ ಪ್ರಚಾರ ಜೊತೆಯಾಯಿತು. ಇದರ ಫಲವಾಗಿ 3 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಜಮಾಯಿಸಿದರು. ನೂಕುನುಗ್ಗಲು ಏರ್ಪಟ್ಟು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರು ಅಸುನೀಗಿದರು. 30ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಅದು ಭಾರೀ ಸುದ್ದಿಯಾಯಿತು, ಸಂಚಲನ ಸೃಷ್ಟಿಸಿತು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಜೊತೆಗೆ ಕರ್ನಾಟಕ ಮಾತ್ರವಲ್ಲ, ದೇಶದ ಇತಿಹಾಸದಲ್ಲೂ ಕಪ್ಪು ಚುಕ್ಕೆಯಾಗಿ ದಾಖಲಾಯಿತು.

ಹನ್ನೊಂದು ಅಮಾಯಕರು ಹೆಣವಾಗಿ ಮಲಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡಿತ್ತು. ಆ ಹೆಣಗಳನ್ನಿಟ್ಟು ದೃಶ್ಯಮಾಧ್ಯಮಗಳು ಟಿಆರ್‍‌ಪಿ ಗಳಿಸಲು ಯತ್ನಿಸಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆ ತಕ್ಷಣ ಸ್ಪಂದಿಸುವುದು ಸರ್ಕಾರದ ಆದ್ಯತೆಯಾಗಿತ್ತು. 

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಆ ಕೂಡಲೇ, ದುರಂತದಲ್ಲಿ ಮೃತಪಟ್ಟವರ ಪ್ರತಿ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿತು. ‘ಬೆಳೆಯುವ ಸಿರಿಗೆ 10 ಲಕ್ಷವೇ’ ಎಂದು ವಿರೋಧ ವ್ಯಕ್ತವಾದಾಗ, ಅದನ್ನು 25 ಲಕ್ಷಕ್ಕೆ ಏರಿಸಿತು. ಗಾಯಗೊಂಡವರಿಗೆ ಉಚಿತ ಚಿಕಿತ್ಸಾ ವ್ಯವಸ್ಥೆ ಮಾಡಿತು. ಅಷ್ಟೇ ಅಲ್ಲ, ಕರ್ತವ್ಯಲೋಪ ಆರೋಪದಡಿ ಐಪಿಎಸ್ ಅಧಿಕಾರಿಗಳಾದ ಬಿ. ದಯಾನಂದ್, ವಿಕಾಸ್ ಕುಮಾರ್ ವಿಕಾಸ್, ಶೇಖರ್ ಎಚ್. ತೆಕ್ಕಣ್ಣನವರ್ ಅವರನ್ನು ಅಮಾನತುಗೊಳಿಸಿತು. ಘಟನೆಯ ಬಗ್ಗೆ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ಸಮಿತಿ ರಚಿಸಿತು. ಸಾಲದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ, ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಅವರಿಗೆ ಗೇಟ್ ಪಾಸ್ ನೀಡಲಾಯಿತು.

ಇದನ್ನು ಓದಿದ್ದೀರಾ?: SIRಗೆ ಅವಧಿ ವಿಸ್ತರಣೆ ಅಗತ್ಯ

ಅಂದರೆ, ಕಾಲ್ತುಳಿತದ ದುರಂತಕ್ಕೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದೆ ಎನ್ನುವುದು ಎದ್ದು ಕಾಣುತ್ತಿತ್ತು. ಅಮಾನತು, ಪರಿಹಾರ, ಸಮಿತಿ ರಚನೆಯ ಸುದ್ದಿಗಳನ್ನು ಮಾಧ್ಯಮಗಳು ಆದ್ಯತೆ ನೀಡಿ ಪ್ರಚಾರ ಕೊಟ್ಟಿದ್ದರಿಂದಾಗಿ ಜನರ ಆಕ್ರೋಶ ಕೊಂಚ ತಣ್ಣಗಾಗಿತ್ತು.

ಏತನ್ಮಧ್ಯೆ, ಜುಲೈ 2025ರಲ್ಲಿ ಆರ್‍‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿತು. ‘ಕಾರ್ಯಕ್ರಮ ನಡೆಸುವುದು ಅಸಾಧ್ಯ ಅಂತ ಗೊತ್ತಿದ್ದರೂ ಎಲ್ಲರೂ ಶಾಮೀಲಾಗಿ ಕಾರ್ಯಕ್ರಮ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಈ ಎಲ್ಲರ ಕರ್ತವ್ಯಲೋಪ, ನಿರ್ಲಕ್ಷ್ಯತನದ ಪರಮಾವಧಿ ಎದ್ದು ಕಾಣುತ್ತಿದೆ. ಕಾಲ್ತುಳಿತಕ್ಕೆ ಕೆಎಸ್‌ಸಿಎ, ಡಿಎನ್ಎ, ಆರ್‍‌ಸಿಬಿ ಹಾಗೂ ಪೊಲೀಸರು ನೇರ ಹೊಣೆ’ ಎಂದು ತಿಳಿಸಲಾಗಿತ್ತು.

ದಿನಗಳು ಉರುಳಿದಂತೆ ಆ ದುರಂತ ಘಟನೆ ಸಾರ್ವಜನಿಕರ ಸ್ಮೃತಿಪಟಲದಿಂದ ಮರೆಯಾಗಿತ್ತು. ಮುಖ್ಯಮಂತ್ರಿ ಕುರ್ಚಿಯಿಂದ ಸಿದ್ದರಾಮಯ್ಯನವರು ಕೆಳಗಿಳಿದರು. ಆಗ ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್, ಈಗ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು.

ಈ ಎಲ್ಲ ಬದಲಾವಣೆಗಳ ನಡುವೆಯೇ, ನಿನ್ನೆ ರಾಜ್ಯ ಸರ್ಕಾರ ಒಂದು ಘನಕಾರ್ಯ ಮಾಡಿದೆ. ಕಾಲ್ತುಳಿತದ ದುರಂತ ಘಟಿಸಿ ಒಂದು ವರ್ಷದ ನಂತರ, ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿಗಳ ವಿರುದ್ಧ ನಡೆದಿದ್ದ ವಿಭಾಗೀಯ ವಿಚಾರಣೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಮುಕ್ತಾಯಗೊಳಿಸಿದೆ. ಮೂವರು ಅಧಿಕಾರಿಗಳನ್ನು ದೋಷ ಮುಕ್ತರು ಎಂದು ಘೋಷಿಸಿದೆ.

ಹಾಗಾದರೆ, ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗ ರಚಿಸಿದ್ದೇಕೆ? ಅದು ಸಾರ್ವಜನಿಕರ ಕಣ್ಣೊರೆಸುವ ತಂತ್ರದ ಭಾಗವಾಗಿತ್ತೇ? ಕಾಲ್ತುಳಿತಕ್ಕೆ ಕೆಎಸ್‌ಸಿಎ, ಡಿಎನ್ಎ, ಆರ್‍‌ಸಿಬಿ ಹಾಗೂ ಪೊಲೀಸರು ನೇರ ಹೊಣೆ ಎಂದು ಅವರು ಕೊಟ್ಟ ವರದಿ ಏನಾಯಿತು? ಈಗ ಈ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. 

ಅಸಲಿಗೆ ಅಂದು ಆಗಿದ್ದೇನೆಂದರೆ, ಆರ್‍‌ಸಿಬಿ ಮತ್ತು 18 ವರ್ಷಗಳ ಕಾಯುವಿಕೆಯ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಆ ಸಂಭ್ರಮ, ಉನ್ಮಾದದ ಮಟ್ಟ ಮುಟ್ಟಿತ್ತು. ಅಭಿಮಾನಿಗಳ ಅತಿರೇಕವನ್ನು ನಿಯಂತ್ರಿಸಲಾಗದೆ ಪೊಲೀಸರು ಹೈರಾಣಾಗಿದ್ದರು. ಆದರೆ ಅಭಿಮಾನಿಗಳ ಸಡಗರ ಮತ್ತು ಸಂಭ್ರಮದ ಬಿಸಿ ಆರುವ ಮುನ್ನ ಅದರ ‘ಲಾಭ’ ಪಡೆಯಲು ಹವಣಿಸಿದ ಸರ್ಕಾರ ಮತ್ತು ಆರ್‍‌ಸಿಬಿ ಆಡಳಿತ ಮಂಡಳಿ, ಇಡೀ ತಂಡವನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರಮಾಡಿಕೊಂಡಿತ್ತು. ಗಡಿಬಿಡಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.

ಈ ನಿಟ್ಟಿನಲ್ಲಿ ‘ಮಂಗಳವಾರ ರಾತ್ರಿಯಿಂದಲೇ ಸರ್ಕಾರ ಮತ್ತು ಫ್ರಾಂಚೈಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಜನರ ಭಾವನೆ, ಉದ್ವೇಗ ತುಸು ತಣ್ಣಗಾದ ನಂತರ, ಮುಂದಿನ ಭಾನುವಾರ ಕಾರ್ಯಕ್ರಮ ಆಯೋಜಿಸಲು ಶಿಫಾರಸು ಮಾಡಿದ್ದೆವು’ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಅಧಿಕಾರಿಗಳ ಸಲಹೆಯನ್ನು ಆಳುವ ಸರ್ಕಾರ ಪ್ರಜ್ಞಾಪೂರ್ವಕವಾಗಿ ಧಿಕ್ಕರಿಸಿತು.

ಇದನ್ನು ಓದಿದ್ದೀರಾ?: ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ

ಇದೆಲ್ಲದರ ಫಲವಾಗಿ ಹನ್ನೊಂದು ಅಮಾಯಕರು ಅಸುನೀಗುವಂತಾಯಿತು. 30ಕ್ಕೂ ಹೆಚ್ಚು ಜನ ಗಾಯಗೊಂಡು ಆ ಕುಟುಂಬಗಳು ನೋವಿನಲ್ಲಿ ನರಳುವಂತಾಯಿತು. ಇಷ್ಟೆಲ್ಲ ಆದಮೇಲೂ ಆಳುವ ಸರ್ಕಾರ ತನ್ನ ಅಮಾನವೀಯ ನಡೆಯನ್ನೇ ಮುಂದುವರೆಸಿತು. ಮೊದಲ ಕಾಲ್ತುಳಿತ ವರದಿಯಾಗಿದ್ದು ಮಧ್ಯಾಹ್ನ 3.45ಕ್ಕೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ನಡೆಯುವ ಸಂಜೆ 5 ಗಂಟೆಯ ಸಮಯಕ್ಕೆ ದುರಂತದ ಸುದ್ದಿ ಆಳುವವರ ಕಿವಿ ಮುಟ್ಟಿತ್ತು. ಆದರೂ ಅಧಿಕಾರಸ್ಥರು ಕ್ರಿಕೆಟಿಗರ ಕೈ ಕುಲುಕಲು, ಅವರೊಂದಿಗೆ ನಿಂತು ನಗಲು, ಸನ್ಮಾನಿಸಲು, ಫೋಟೋ ಕ್ಲಿಕ್ಕಿಸಿಕೊಳ್ಳಲು ಹಿಂಜರಿಯಲಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯವಾಗಿತ್ತು.

ಹೀಗಿರುವಾಗ, ಕಾಲ್ತುಳಿತದ ಕಳಂಕದಿಂದ ನುಣುಚಿಕೊಳ್ಳಲು, ಆಗ ಅಧಿಕಾರಿಗಳ ಮೇಲೆ ಹಾಕಿದ ಸರ್ಕಾರ, ಈಗ ಅದೇ ಅಧಿಕಾರಿಗಳನ್ನು ದೋಷಮುಕ್ತರನ್ನಾಗಿಸಿದೆ. ರಾಜ್ಯ ಸರ್ಕಾರದ ನಡೆ ಹೇಗಿದೆ ಎಂದರೆ, 11 ಅಮಾಯಕರ ದಾರುಣ ಸಾವಿಗೆ ಕಾರಣ ಯಾರೂ ಅಲ್ಲ, ಅವರಾಗಿಯೇ ಬಂದು ಸತ್ತರು ಎನ್ನುವಂತಿದೆ, ಅಲ್ಲವೇ? ಸತ್ತೋನ್ ಕೆಟ್ಟ ಅನ್ನುವುದು ಇದಕ್ಕೇ ಅಲ್ಲವೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...

ರಾಜ್ಯದ 12 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಹವಾಮಾನ ಇಲಾಖೆ

ತೀವ್ರ ಮಳೆ ಕೊರತೆಯಿಂದ ಕೂಡಿದ್ದ ಮುಂಗಾರು ಹಂಗಾಮು ಕೊನೆಗೊಂಡಿದೆ. ಹಿಂಗಾರು ಆರಂಭವಾಗಿದೆ....