ಈ ದಿನ ಸಂಪಾದಕೀಯ | ಸರ್ಕಾರ ಸುರಂಗ ರಸ್ತೆಯತ್ತ; ನಾಗರಿಕರ ಚಿತ್ತ ಪರಿಸರ ಸಂರಕ್ಷಣೆಯತ್ತ

Date:

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಯಾವುದೇ ಪ್ರಜಾಪ್ರಭುತ್ವ ಸರ್ಕಾರದ ಆದ್ಯ ಕರ್ತವ್ಯ. ಸುರಂಗ ರಸ್ತೆಯಂತಹ ಬೃಹತ್ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಕೇವಲ ರಾಜಕೀಯ ಹಠಕ್ಕೆ ಬೀಳದೆ, ಸಾರ್ವಜನಿಕರ ಆತಂಕಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷೆಯ, ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ 16.75 ಕಿಲೋಮೀಟರ್ ಉದ್ದದ ಅವಳಿ ಸುರಂಗ ರಸ್ತೆ ಯೋಜನೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ.

- Advertisement -

ಈ ಬೃಹತ್ ಯೋಜನೆಗೆ ಖ್ಯಾತ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಕಂಪನಿ, 22,267 ಕೋಟಿ ಮೊತ್ತದ ಬಿಡ್ ಸಲ್ಲಿಸಿ ಮುಂಚೂಣಿಯಲ್ಲಿದೆ. ಆದರೆ, ಸರ್ಕಾರದ ಅಂದಾಜು ವೆಚ್ಚಕ್ಕಿಂತ ಬಿಡ್ ಮೊತ್ತ ಹೆಚ್ಚಿರುವ ಕಾರಣ ಟೆಂಡರ್ ಅಂತಿಮಗೊಳಿಸುವುದು ತಡವಾಗುತ್ತಿದೆ. ಈ ನಡುವೆ ಅದಾನಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದು ರಾಷ್ಟ್ರಮಟ್ಟದಲ್ಲಿ ಅದಾನಿಯನ್ನು, ಅವರೊಂದಿಗೆ ಪ್ರಧಾನಿ ಮೋದಿಗಿರುವ ಸಂಬಂಧವನ್ನು ಪ್ರಶ್ನಿಸುವ, ಟೀಕಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಿಲುವಿಗೆ ವಿರುದ್ಧವಾಗಿದೆ. ಇದು ಸಹಜವಾಗಿಯೇ ವಿರೋಧ ಪಕ್ಷವಾದ ಬಿಜೆಪಿ ನಾಯಕರ ಕೈಗೆ ಅಸ್ತ್ರ ಸಿಕ್ಕಂತಾಗಿದೆ. ರಾಜ್ಯ ಸರ್ಕಾರದ ಇಬ್ಬಗೆಯ ನೀತಿಯನ್ನು ಹಣಿಯುತ್ತಲೇ, ರಾಜಕೀಯವಾಗಿ ಲಾಭ ಪಡೆಯಲು ಹವಣಿಸುತ್ತಿದೆ.

ಏತನ್ಮಧ್ಯೆ ಸುರಂಗ ರಸ್ತೆ ನಿರ್ಮಾಣಕ್ಕಾಗಿ ಲಾಲ್‌ಬಾಗ್ ಜಾಗವನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದನ್ನು ವಿರೋಧಿಸಿ ಲಾಲ್ ಬಾಗ್ ಉಳಿಸಿ ಅಭಿಯಾನ ನಡೆಸುತ್ತಿರುವ ಪರಿಸರ ತಜ್ಞರು, ಪರಿಸರವಾದಿಗಳು, ಪರಿಸರ ಪ್ರೇಮಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು, ಕಾರ್ಯಕರ್ತರು, ಕಲಾವಿದರು, ಸಾರ್ವಜನಿಕರೊಂದಿಗೆ ವಿರೋಧ ಪಕ್ಷವಾದ ಬಿಜೆಪಿಯೂ ಕೈ ಜೋಡಿಸಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸೋನಿಯಾ ಆತ್ಮಕಥನ ಕುರಿತು ಮೋದಿಗೇಕೆ ಭಯ?

ಜನರ ಹೋರಾಟಕ್ಕೆ ಬಿಜೆಪಿ ಬೆಂಬಲಿಸಿದ್ದು, ಅವರ ಜೊತೆಗೂಡಿದ್ದು ಶ್ಲಾಘನೀಯ. ಆದರೆ, ಅದೇ ಬಿಜೆಪಿ ಅರಾವಳಿ ಬೆಟ್ಟಗಳ ಬುಡದಲ್ಲಿ ಗಣಿಗಾರಿಕೆಗೆ ಅದಾನಿಗೆ ಪರವಾನಗಿ ಕೊಟ್ಟ ವಿಚಾರದಲ್ಲಿ; ಬಿಹಾರ ಮತ್ತು ಮಹಾರಾಷ್ಟ್ರದ ಸಾವಿರಾರು ಮರಗಳನ್ನು ಕಡಿಯಲು ಅದಾನಿಗೆ ಅನುಮತಿಸಿರುವ ವಿಷಯದಲ್ಲಿ ಮೌನವಾಗಿದೆ. ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿ- ಎರಡೂ ಪಕ್ಷಗಳು ಅಧಿಕಾರದಲ್ಲಿದ್ದಾಗ ಜನವಿರೋಧಿ; ಇಲ್ಲದಿದ್ದಾಗ ಜನಪರ ಎಂಬುದು ನಿಚ್ಚಳವಾಗಿದೆ. ಎರಡೂ ಪಕ್ಷಗಳ ಇಬ್ಬಂದಿ ನೀತಿ ಬಯಲಾಗಿದೆ.   

ಆದರೂ ರಾಜ್ಯ ಸರ್ಕಾರ, ಬೆಂಗಳೂರು ಮಿತಿಮೀರಿ ಬೆಳೆಯುತ್ತಿದೆ, ಸಂಚಾರ ದಟ್ಟಣೆ ನಿಯಂತ್ರಿಸಲಾಗದ ಮಟ್ಟ ಮುಟ್ಟಿದೆ, ಇದಕ್ಕೆ ಪರಿಹಾರವಾಗಿ ಸುರಂಗ ರಸ್ತೆ ಯೋಜನೆ ಬಹಳ ಮುಖ್ಯ ಎನ್ನುತ್ತಿದೆ. ಜನರಿಗಾಗಿ ಮಾಡುತ್ತಿರುವ ಯೋಜನೆ ಎನ್ನುತ್ತಲೇ, ಅದರ ಸಾಧಕ-ಬಾಧಕಗಳನ್ನು ಜನರೊಂದಿಗೆ ಚರ್ಚಿಸದೆ, ಏಕಮುಖ ನಿರ್ಧಾರ ಕೈಗೊಳ್ಳುತ್ತಿದೆ. ಜನರ ವಿರೋಧವನ್ನು ನಿರ್ಲಕ್ಷಿಸಿ, ಹಟಮಾರಿ ಧೋರಣೆ ತಳೆಯುತ್ತಿದೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಬೆಂಗಳೂರಿನ ವಿಭಿನ್ನ ಭೂಗರ್ಭ ರಚನೆಯಲ್ಲಿ ಸುರಂಗ ತೋಡುವುದು ತಾಂತ್ರಿಕವಾಗಿ ತೊಂದರೆಯನ್ನು ಆಹ್ವಾನಿಸುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಅಧ್ಯಯನಗಳ ಪ್ರಕಾರ, ಸುರಂಗ ರಸ್ತೆಗಳು ಕೇವಲ ತಾತ್ಕಾಲಿಕ ಉಪಶಮನ ನೀಡಬಲ್ಲವು. ಸುರಂಗದಿಂದ ಹೊರಬರುವ ವಾಹನಗಳು ಪ್ರಮುಖ ಜಂಕ್ಷನ್‌ಗಳಲ್ಲಿ ಮತ್ತಷ್ಟು ಸಂಚಾರ ದಟ್ಟಣೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ. ಅಕಸ್ಮಾತ್ ಯೋಜನೆ ದೀರ್ಘಾವಧಿ ತೆಗೆದುಕೊಂಡರೆ, ಆ ವೇಳೆಗೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿ, ಅದು ಇನ್ನೊಂದು ಸಮಸ್ಯೆ ಸೃಷ್ಟಿಸಲಿದೆ.

ಹಾಗಾಗಿ ತಜ್ಞರು ಸುರಂಗ ರಸ್ತೆಗಿಂತ ಮೆಟ್ರೋ ವಾಸಿ ಎನ್ನುತ್ತಿದ್ದಾರೆ. ಮೆಟ್ರೋ ಉತ್ತಮ ಗುಣಮಟ್ಟದ, ಕಡಿಮೆ ವೆಚ್ಚದ ಸಾರ್ವಜನಿಕ ಸಾರಿಗೆಯಾಗಿದೆ. ಸುರಂಗ ರಸ್ತೆ ಮುಖ್ಯವಾಗಿ ಕಾರುಗಳಂತಹ ಖಾಸಗಿ ವಾಹನಗಳ ಸಂಚಾರಕ್ಕೆ ನೆರವಾದರೂ, ಖಾಸಗಿಯವರ ಕೈಯಲ್ಲಿದ್ದು ಟೋಲ್ ತುಟ್ಟಿಯಾಗಿ ಜನರ ಜೇಬಿಗೆ ಹೊರೆಯಾಗಲಿದೆ. ನಗರ ಸಂಚಾರ ನೀತಿಯ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಹೂಡಿಕೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕಿದೆ. ಅಲ್ಲದೆ, ಬೆಂಗಳೂರು ಈಗಾಗಲೇ ವಾಹನ ದಟ್ಟಣೆ ಎದುರಿಸುತ್ತಿರುವ ನಗರವಾಗಿರುವುದರಿಂದ, ಒಂದು ಹೊಸ ರಸ್ತೆ ನಿರ್ಮಾಣದಿಂದ ದೀರ್ಘಾವಧಿಯಲ್ಲಿ ಸಂಚಾರ ಸಮಸ್ಯೆ ಪರಿಹಾರವಾಗುತ್ತದೆಯೇ ಎಂಬುದನ್ನೂ ಯೋಚಿಸಬೇಕಾಗಿದೆ.

ಅದರಲ್ಲೂ, ಬೆಂಗಳೂರಿನ ಹೆಮ್ಮೆಯ ಪ್ರಕೃತಿ ತಾಣಗಳಾದ ಲಾಲ್‌ಬಾಗ್ ಮತ್ತು ಸ್ಯಾಂಕಿ ಕೆರೆಯ ಆಸುಪಾಸಿನಲ್ಲಿ ಈ ಸುರಂಗ ರಸ್ತೆ ಹಾದುಹೋಗುವುದರಿಂದ ಪರಿಸರಪ್ರಿಯರು ತೀವ್ರ ಆಕ್ಷೇಪ ಎತ್ತಿದ್ದಾರೆ. ಇತ್ತೀಚೆಗೆ ಲಾಲ್‌ಬಾಗ್ ಉಳಿಸಿ ಅಭಿಯಾನದಡಿ ಸಾವಿರಾರು ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಉದ್ಯಾನವನಗಳ ಜಾಗವನ್ನು ಇಂತಹ ಯೋಜನೆಗಳಿಗೆ ಬಳಸುವುದು ನಗರದ ಹಸಿರು ಹೊದಿಕೆಯನ್ನು ನಾಶಪಡಿಸುತ್ತದೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.

ಕಳೆದ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿಯವರು, ‘ಲಾಲ್‌ಬಾಗ್‌ಗೆ ಸುರಂಗ ಕೊರೆಯುವ ಮೂಲಕ ಬೆಂಗಳೂರಮ್ಮನಿಗೆ ಚೂರಿ ಹಾಕಿ ಅಮ್ಮನ ಕಣ್ಣಲ್ಲಿ ನೀರು ಮಾತ್ರವಲ್ಲ ರಕ್ತ ಬರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸರ್ಕಾರ ಜನಸಾಮಾನ್ಯರ ಧ್ವನಿಯನ್ನು ಆಲಿಸಿ, ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಈ ಅವಿವೇಕದ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದಿದ್ದಾರೆ. ಸುರಂಗ ರಸ್ತೆ ಯೋಜನೆ ಮತ್ತು ಉದ್ಯಾನಗಳ ಶೇ. 5ರಷ್ಟು ಭೂಮಿ ಪರಭಾರೆ ಮಾಡುವುದನ್ನು ಉಗ್ರವಾಗಿ ವಿರೋಧಿಸಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶಭರಿತರಾಗಿಯೇ ಮಾತನಾಡಿದ್ದಾರೆ.

ಅಷ್ಟಕ್ಕೂ ಉದ್ಯಾನಗಳು ಅಭಿವೃದ್ಧಿಗೆ ಅನಾಯಾಸವಾಗಿ ಬಳಸಿಕೊಳ್ಳಲು ಇರುವ ಖಾಲಿ ಜಾಗಗಳಲ್ಲ. ಅವು ನಗರವಾಸಿಗಳ ಉಸಿರು. ಪರಿಸರದ ಸಮತೋಲನ ಕಾಪಾಡುವ, ಮಳೆ ನೀರನ್ನು ಭೂಮಿಗೆ ಇಂಗಿಸುವ, ವಾಯು ಮಾಲಿನ್ಯ ಕಡಿಮೆ ಮಾಡುವ, ಉಷ್ಣತೆಯನ್ನು ನಿಯಂತ್ರಿಸುವ ಮತ್ತು ಜೀವವೈವಿಧ್ಯಕ್ಕೆ ಆಶ್ರಯ ನೀಡುವ ತಾಣಗಳು. ಜೊತೆಗೆ ಮಕ್ಕಳ ಆಟದ ಮೈದಾನ, ವೃದ್ಧರ ನೆಮ್ಮದಿಯ ತಾಣ ಮತ್ತು ಭವಿಷ್ಯದ ಪೀಳಿಗೆಗೆ ನಾವು ಉಳಿಸಲೇಬೇಕಾದ ಸಾರ್ವಜನಿಕ ಆಸ್ತಿ. ಇಂತಹ ಭೂಮಿಯನ್ನು ನಿರಂತರವಾಗಿ ನಿರ್ಮಾಣ ಕಾರ್ಯಗಳಿಗೆ ಬಳಸತೊಡಗಿದರೆ; ಗೇಣಿ, ದೇಣಿಗೆ, ಮಾರಾಟ ಮಾಡಿದರೆ ಭವಿಷ್ಯ ಬರಿದಾಗಲಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಇತ್ತ ಮೌಢ್ಯ ಬಿತ್ತನೆ, ಅತ್ತ ಮೋಡ ಬಿತ್ತನೆ- ಇದು ಎಡಬಿಡಂಗಿ ಸರ್ಕಾರ

ಅಭಿವೃದ್ಧಿಯೂ ಮುಖ್ಯ. ಆದರೆ, ಸಾರ್ವಜನಿಕ ಉದ್ಯಾನಗಳು ಅದಕ್ಕಿಂತ ಮುಖ್ಯ. ಉದ್ಯಾನ ಬಳಸದಿರುವುದು ಸರ್ಕಾರ ಮತ್ತು ಸಮಾಜದ ನೈತಿಕ ಹೊಣೆಗಾರಿಕೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ಜನಾಭಿಪ್ರಾಯ ಪಡೆಯದೆ ತಮ್ಮಷ್ಟಕ್ಕೆ ತಾವೇ ಅನುಮೋದನೆ ಪಡೆದುಕೊಳ್ಳುವ, ಪ್ರಜಾಪ್ರಭುತ್ವವನ್ನು ಅಣಕಿಸುವ ಪರಿಪಾಟ ಹೆಚ್ಚಾಗುತ್ತಿದೆ. ಈಗಾಗಲೇ ಅಭಿವೃದ್ಧಿಯ ನೆಪದಲ್ಲಿ ನಗರದ ಕೆರೆಗಳನ್ನು ಕಣ್ಮರೆ ಮಾಡಲಾಗಿದೆ. ಹತ್ತಾರು ವರ್ಷಗಳ ಹಿಂದೆ 280 ಕೆರೆಗಳಿದ್ದವು, ಈಗ 180ಕ್ಕೆ ಬಂದು ನಿಂತಿದೆ. ಕೆರೆಗಳಂತೆ ಉದ್ಯಾನಗಳ ಕತೆಯು ವಿನಾಶವೇ ಹೊರತು ಬೇರೇನೂ ಅಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಯಾವುದೇ ಪ್ರಜಾಪ್ರಭುತ್ವ ಸರ್ಕಾರದ ಆದ್ಯ ಕರ್ತವ್ಯ. ಸುರಂಗ ರಸ್ತೆಯಂತಹ ಬೃಹತ್ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಕೇವಲ ರಾಜಕೀಯ ಹಠಕ್ಕೆ ಬೀಳದೆ, ನ್ಯಾಯಾಲಯದಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಮತ್ತು ಸಾರ್ವಜನಿಕರ ಆತಂಕಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಸಿರು ಬೆಂಗಳೂರಿನ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ಹಾಗೂ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗದಂತೆ ಸಮಗ್ರ ವೈಜ್ಞಾನಿಕ ಪರಿಶೀಲನೆಯ ನಂತರವಷ್ಟೇ ಮುನ್ನಡೆಯಬೇಕು. ಅದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆಯಾಗಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...