ಈ ದಿನ ಸಂಪಾದಕೀಯ | ಸೋನಿಯಾ ಆತ್ಮಕಥನ ಕುರಿತು ಮೋದಿಗೇಕೆ ಭಯ?

Date:

ಸೋನಿಯಾ ಅವರ ಪುಸ್ತಕದಲ್ಲಿ ಏನಿದೆ ಎಂಬುದಕ್ಕಿಂತ, ಅದರಲ್ಲಿ ಏನನ್ನು ಭಾರತೀಯರು ಓದಬಾರದು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಈ ಜಟಿಲ ಪರಿಸ್ಥಿತಿಯಲ್ಲಿ; ಭಾರತದ ಆಳುವವರಿಗೆ ಮುಜುಗರ ಆಗಬಹುದಾದ ಸಂಗತಿಯನ್ನು ದಿಟ್ಟವಾಗಿ ಪ್ರಕಟಿಸಲು ಪ್ರಕಾಶಕರಿಗೆ ಹೆಚ್ಚಿನ ಧೈರ್ಯ ಬೇಕಾಗಿದೆ!

ಒಂದು ಪುಸ್ತಕ ಇನ್ನೂ ಭಾರತೀಯ ಓದುಗರ ಕೈಗೆ ಬಂದಿಲ್ಲ. ಅದರ ಸಂಪೂರ್ಣ ಪಠ್ಯ ಸಾರ್ವಜನಿಕವಾಗಿಲ್ಲ. ಯಾವ ಪುಟದಲ್ಲಿ ಯಾವ ವಾಕ್ಯ ಇದೆ ಎಂಬುದೂ ಬಹುತೇಕರಿಗೆ ಗೊತ್ತಿಲ್ಲ. ಆದರೂ ಆ ಪುಸ್ತಕ ಈಗಾಗಲೇ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಆಳುವವರಲ್ಲಿ ಆತಂಕ-ಭಯವನ್ನೂ ಹುಟ್ಟುಹಾಕಿರುವಂತೆಯೂ ತೋರುತ್ತದೆ.

- Advertisement -

ಸೋನಿಯಾ ಗಾಂಧಿ ಅವರ ‘Belonging: A Journey of Love’ ಆತ್ಮಕಥನದ ಭಾರತ ಪ್ರಕಟಣೆ ವಿಚಾರದಲ್ಲಿ ಸುತ್ತುವರಿದಿರುವ ವಿವಾದವು ಕೇವಲ ಪ್ರಕಾಶನ ಒಪ್ಪಂದದ ವೈಫಲ್ಯ ಮಾತ್ರವಲ್ಲ. ಪ್ರಧಾನಿ ನರೇಂದ್ರ ಮೋದಿ, RSS ಮತ್ತು ಚೀನಾ ಗಡಿ ಅತಿಕ್ರಮಣಕ್ಕೆ ಸಂಬಂಧಿಸಿದ ಕೆಲವು ಭಾಗಗಳನ್ನು ಬದಲಾಯಿಸುವ ಅಥವಾ ತೆಗೆದುಹಾಕುವುದರ ಕುರಿತಾದ ಗಂಭೀರ ವಿಚಾರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಆತ್ಮಕಥನದ ಪ್ರಕಟಣೆಗೆ ಮುಂದಾಗಿದ್ದ ‘Penguin Random House India’ ಸಂಸ್ಥೆಯು ಪುಸ್ತಕದಲ್ಲಿನ ಪ್ರಮುಖ ವಿಚಾರಗಳನ್ನು ತಿದ್ದಲು, ತಿಳಿಗೊಳಿಸಲು ಹಾಗೂ ತೆಗೆದುಹಾಕಲು ಸೂಚಿಸಿತ್ತು. ಆದರೆ, ಸೋನಿಯಾ ಗಾಂಧಿ ಅದಕ್ಕೆ ಒಪ್ಪದ ಕಾರಣ, ಪ್ರಕಟಣೆಯ ಮಾತುಕತೆ ಮುರಿದುಬಿದ್ದಿದೆ ಎಂದು ವರದಿಗಳು ಹೇಳುತ್ತಿವೆ. ಅಂದರೆ, ಒಂದು ಆತ್ಮಕಥೆಯ ಮೂರು ಅಥವಾ ನಾಲ್ಕು ಭಾಗಗಳು ಆಳುವವರ ಆತಂಕಕ್ಕೆ ಕಾರಣವಾಗಿದೆ.

ಇದನ್ನು ಓದಿದ್ದೀರಾ?: ​’ಶುದ್ಧೀಕರಣವು ಅಸ್ಪೃಶ್ಯತೆಯ ಮತ್ತೊಂದು ಹೆಸರು’: ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಸೋನಿಯಾ ಗಾಂಧಿ ತಮ್ಮ ದೀರ್ಘ ರಾಜಕೀಯ ಜೀವನದಲ್ಲಿ ನೇರವಾಗಿ ಕಂಡದ್ದು, ಅನುಭವಿಸಿದ್ದು ಮತ್ತು ರಾಜಕೀಯವಾಗಿ ಎದುರಿಸಿದ ಘಟನೆಗಳನ್ನು ಆತ್ಮಕಥನದಲ್ಲಿ ಬರೆದಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಭೇಟಿಗಳು, ಅವರ ಬಗ್ಗೆ ತಮ್ಮ ಅಭಿಪ್ರಾಯಗಳು, ಹಿಂದಿನ ಪ್ರಧಾನಿಗಳೊಂದಿಗೆ ಮೋದಿಯ ಹೋಲಿಕೆಗಳು ಹಾಗೂ ರಾಜಕೀಯ ಘಟನೆಗಳ ಕುರಿತ ತಮ್ಮ ಮೌಲ್ಯಮಾಪನಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಜೊತೆಗೆ, ತಮ್ಮನ್ನು ಮೋದಿ ಅವರು ‘ಜರ್ಸಿ ಹಸು’ ಎಂದು ಮೂದಲಿಸಿದ್ದನ್ನೂ ಉಲ್ಲೇಖಿಸಿದ್ದಾರೆ. ಅದೇ ಕಾರಣಕ್ಕೆ ಪುಸ್ತಕದ ಕೆಲವು ಭಾಗಗಳು ಸಾಮಾನ್ಯ ರಾಜಕೀಯ ಟೀಕೆಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಇದು ಮೋದಿ ಮತ್ತು ಅವರ ಪಕ್ಷಕ್ಕೆ ಭೀತಿ ಸೃಷ್ಟಿಸಿದೆ.

ರಾಜಕಾರಣಿಯೊಬ್ಬರು ವೇದಿಕೆಯಲ್ಲಿ ಹೇಳುವ ಮಾತು ಒಂದು ದಿನ ಸುದ್ದಿಯಾಗಬಹುದು; ಆದರೆ ಆತ್ಮಕಥೆಯಲ್ಲಿ ಬರೆದಿರುವ ಮಾತು ಬೇರೆ ರೀತಿಯ ರಾಜಕೀಯ ದಾಖಲೆಯಾಗಿ ಉಳಿಯುತ್ತದೆ. ಅದು ಮುಂದಿನ ಪೀಳಿಗೆಗೆ ಇತಿಹಾಸವನ್ನು ವಿವರಿಸುತ್ತದೆ. ಇಂದಿನ ಆಡಳಿತಗಾರರ ಬಗ್ಗೆ ನಾಳೆಯ ಇತಿಹಾಸಕಾರರು ಯಾವ ದಾಖಲೆಗಳನ್ನು ಆಧರಿಸುತ್ತಾರೆ ಎಂಬುದರಲ್ಲಿ ಇಂತಹ ಆತ್ಮಕಥೆಗಳ ಪಾತ್ರ ದೊಡ್ಡದು. ಅದಕ್ಕೇ ಆತ್ಮಕಥೆಗಳು- ವಿಶೇಷವಾಗಿ ಅಧಿಕಾರದಲ್ಲಿರುವವರ ಕುರಿತು ವೈಯಕ್ತಿಕ ಅನುಭವ, ಆಪ್ತ ಭೇಟಿಗಳು, ಸಂಭಾಷಣೆಗಳು ಹಾಗೂ ರಾಜಕೀಯ ಮೌಲ್ಯಮಾಪನಗಳಿದ್ದಾಗ- ಆಳುವವರಿಗೆ ಅಸಹಜ ಆತಂಕ ಸೃಷ್ಟಿಸುತ್ತವೆ.

ಲಭ್ಯ ಮಾಹಿತಿ ಪ್ರಕಾರ, ಸೋನಿಯಾ ತಮ್ಮ ಆತ್ಮಕಥನದಲ್ಲಿ ಭಾರತ–ಚೀನಾ ಸಂಬಂಧ, ಗಡಿ ನುಸುಳುವಿಕೆ ಹಾಗೂ ಅರುಣಾಚಲ ಪ್ರದೇಶ ಸೇರಿದಂತೆ ಭಾರತೀಯ ಭೂಪ್ರದೇಶದ ಮೇಲೆ ಚೀನಾದ ಅತಿಕ್ರಮಣದ ಕುರಿತು ಉಲ್ಲೇಖಿಸಿದ್ದಾರೆ. ಗಾಲ್ವಾನ್ ನಂತರದ ವಾಸ್ತವ ನಿಯಂತ್ರಣ ರೇಖೆಯ ಪರಿಸ್ಥಿತಿ, ಚೀನಾದ ಪ್ರವೇಶಗಳ ಕುರಿತು ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳು, ಭಾರತೀಯ ಸೇನೆಯ ಪೆಟ್ರೋಲಿಂಗ್ ಹಕ್ಕುಗಳು, ಸರ್ಕಾರದ ಅಧಿಕೃತ ಹೇಳಿಕೆಗಳು ಹಾಗೂ ನೆಲಮಟ್ಟದ ವಾಸ್ತವ ಚಿತ್ರಣಗಳ ಕುರಿತು ಸೋನಿಯಾ ತಮ್ಮ ಪುಸ್ತಕದಲ್ಲಿ ಚರ್ಚಿಸಿದ್ದಾರೆ.  

ಗಮನಾರ್ಹವಾಗಿ, ಕಳೆದೊಂದು ದಶಕದಲ್ಲಿ “ಭಾರತದ ಭೂಪ್ರದೇಶದಲ್ಲಿ ಚೀನಾ ಎಷ್ಟು ಒಳಬಂದಿದೆ? ತನ್ನದೇ ನೆಲದಲ್ಲಿ ಭಾರತಕ್ಕೆ ಎಷ್ಟು ಪ್ರದೇಶಗಳ ಪ್ರವೇಶ ಕಳೆದುಹೋಗಿದೆ? ವಾಸ್ತವ ನಿಯಂತ್ರಣ ರೇಖೆಯಲ್ಲಿನ ಸ್ಥಿತಿ ಏನು? ಸಂಸತ್ತಿನಲ್ಲಿ ಸಂಪೂರ್ಣ ಚರ್ಚೆ ಯಾಕಿಲ್ಲ” ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನಿರಂತರವಾಗಿ ಎತ್ತುತ್ತಿವೆ. ಇಂತಹ ಸಂದರ್ಭದಲ್ಲಿ ಮೂರು ದಶಕಗಳ ರಾಜಕೀಯ ಅನುಭವ ಹೊಂದಿರುವ ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ಚೀನಾ ಪ್ರಶ್ನೆಯನ್ನು ದಾಖಲಿಸಿದ್ದರೆ, ಅದು ಸಾಮಾನ್ಯ ಪಕ್ಷದ ಹೇಳಿಕೆಯಾಗಿ ಉಳಿಯುವುದಿಲ್ಲ. ಅದು ಅವರ ರಾಜಕೀಯ ಸಾಕ್ಷ್ಯವಾಗಿ ಓದಲಾಗುತ್ತದೆ. ಆದಾಗ್ಯೂ, ಈ ಉಲ್ಲೇಖಗಳಿಗೆ ಪೆಂಗ್ವಿನ್ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿದೆ.

ಮುಖ್ಯವಾಗಿ, ಸೋನಿಯಾ ಅವರು ಬರೆದಿರುವ ಪರಿಪೂರ್ಣ ಪುಸ್ತಕವನ್ನು ಯಥಾವತ್ತಾಗಿ ‘ಪೆಂಗ್ವಿನ್ ರ್‍ಯಾಂಡಮ್ ಹೌಸ್’ನ ಭಾಗವಾಗಿರುವ Alfred A. Knopf ಜಾಗತಿಕವಾಗಿ ಪ್ರಟಿಸುತ್ತಿದೆ. ನವೆಂಬರ್ 10ರಂದು ಪುಸ್ತಕ ಪ್ರಕಟಣೆಗೊಳ್ಳಲಿದೆ. ಆದರೆ, ಪೆಂಗ್ವಿನ್‌ನ ಭಾರತೀಯ ಘಟಕ ಮಾತ್ರವೇ ಆಕ್ಷೇಪಗಳನ್ನು ಎತ್ತಿದೆ. ಇದರ ಹಿಂದೆ, ಮೋದಿ ಸರ್ಕಾರದ ಒತ್ತಡ ಇರುವುದನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ!

ಈ ಹಿಂದೆ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಇನ್ನೂ ಪ್ರಕಟವಾಗದ ಆತ್ಮಕಥೆಯ ವಿಷಯದಲ್ಲಿಯೂ ಇದೇ ‘ಪೆಂಗ್ವಿನ್ ಇಂಡಿಯಾ’ ಪ್ರಕಾಶನ ಸಂಸ್ಥೆ ವಿವಾದಕ್ಕೆ ಸಿಲುಕಿತ್ತು. ಆ ಪುಸ್ತಕದಲ್ಲಿನ ಚೀನಾ ಗಡಿ ಘಟನೆಗಳ ಉಲ್ಲೇಖಗಳು ಸಂಸತ್ತಿನಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಗಿದ್ದವು. ರಾಹುಲ್ ಗಾಂಧಿ ಅದರ ಕೆಲವು ಅಂಶಗಳನ್ನು ಪ್ರಸ್ತಾಪಿಸಲು ಮುಂದಾದಾಗ ವಿರೋಧವೂ ಎದುರಾಗಿತ್ತು. ಇಂತಹ ಘಟನೆಗಳು ಒಂದಕ್ಕೊಂದು ಸೇರಿಕೊಂಡಾಗ, ಸಮಸ್ಯೆ ಒಂದೇ ಪುಸ್ತಕದ ಬಗ್ಗೆಯಲ್ಲ. ಅದರಲ್ಲಿ ಕಟು ವಾಸ್ತವಗಳ ಕುರಿತು ಆಳುವವರಿಗೆ ಇರುವ ಭಯ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ.

ಆದ್ದರಿಂದಲೇ, ಸೋನಿಯಾ ಅವರ ಪುಸ್ತಕದ ವಿಚಾರದಲ್ಲಿ, “ಜಗತ್ತಿನಾದ್ಯಂತ ಮುದ್ರಣವಾಗುತ್ತಿರುವ ಪುಸ್ತಕವನ್ನು ಭಾರತದಲ್ಲಿ ಪ್ರಕಟಿಸಲು ಯಾವ ಕಾರಣ ಅಥವಾ ಯಾವ ಒತ್ತಡ ತಡೆಯುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಚೀನಾ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಕುರಿತು ಬರೆಯಲಾಗಿರುವ ಭಾಗಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಮೇಲೆ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್ಎಸ್‌ನಿಂದ ಒತ್ತಡ ಹಾಕಲಾಗಿದೆ” ಎಂದು ಕಾಂಗ್ರೆಸ್‌ ನಾಯಕರು ಕೂಡ ಆರೋಪಿಸಿದ್ದಾರೆ.

ಮಿಗಿಲಾಗಿ, ಆತ್ಮಕಥೆ ಎಂದರೆ ಲೇಖಕಿಯ ದೃಷ್ಟಿಕೋನವೇ ಕೇಂದ್ರವಾಗಿರುವ ಕೃತಿ. ಆ ದೃಷ್ಟಿಕೋನವನ್ನೇ ಬದಲಿಸಬೇಕು ಅಥವಾ ತಿಳಿಗೊಳಿಸಬೇಕು ಎಂಬುದು ಪರಿಷ್ಕರಣೆಗಿಂತ ಹೆಚ್ಚಾಗಿ ನಿಯಂತ್ರಣ-ನಿರ್ಬಂಧದ ಪ್ರಶ್ನೆಯಾಗುತ್ತದೆ.

ಈ ಲೇಖನ ಓದಿದ್ದೀರಾ?: ಮೋದಿ ಸರ್ಕಾರದ IBC ಕಾನೂನು ಬಂಡವಾಳಶಾಹಿಗಳ ಸಾಲ ಮನ್ನಾಕ್ಕೆ ರಾಜಮಾರ್ಗ

ಒಂದು ವೇಳೆ, ಪುಸ್ತಕದಲ್ಲಿ ಕೆಲವು ಉಲ್ಲೇಖಗಳು ತಪ್ಪಾಗಿದ್ದರೆ ಅದನ್ನು ವಿಮರ್ಶಿಸಬಹುದು. ವಾಸ್ತವದೋಷವಿದ್ದರೆ ದಾಖಲೆಗಳೊಂದಿಗೆ ಬಯಲು ಮಾಡಬಹುದು, ಮಾನಹಾನಿಕರ ಅಂಶವಿದ್ದರೆ ಕಾನೂನಾತ್ಮಕವಾಗಿ ಎದುರಿಸಬಹುದು, ಮೋದಿ ಕುರಿತು ಸೋನಿಯಾ ಗಾಂಧಿ ಬರೆದಿರುವುದು ಪಕ್ಷಪಾತಪೂರ್ಣವೆಂದರೆ ಬಿಜೆಪಿ ತನ್ನ ಪ್ರತಿವಾದವನ್ನು ಪ್ರಕಟಿಸಬಹುದು, RSS ಬಗ್ಗೆ ತಪ್ಪು ಬರಹವಿದ್ದರೆ, ದಾಖಲೆಗಳೊಂದಿಗೆ ಪ್ರತಿಕ್ರಿಯಿಸಬಹುದು ಹಾಗೂ ಚೀನಾ ಕುರಿತು ತಪ್ಪು ಮಾಹಿತಿ ಇದ್ದರೆ ಸರ್ಕಾರ ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಬಹುದು. ಇದೇ ಪ್ರಜಾಪ್ರಭುತ್ವದ ಸರಿಯಾದ ವಿಧಾನ.

ಆದರೆ, ಓದುಗರಿಗೆ ತಲುಪುವ ಮೊದಲೇ ಪಠ್ಯವನ್ನು ಸರಳೀಕರಿಸುವುದು ಅಥವಾ ಅಳಿಸುವುದು ಅಕ್ಷಮ್ಯ. ಖಂಡನೀಯ.

ಪ್ರಜಾಪ್ರಭುತ್ವ ಎಂದರೆ, ಎಲ್ಲ ದನಿಗಳಿಗೂ ಮುಕ್ತ ಅಭಿವ್ಯಕ್ತಿಯ ಅವಕಾಶ ಇರಬೇಕು, ವಿಮರ್ಶೆಗೆ ಜಾಗ ಒದಗಿಸಬೇಕು. ಆದರೆ, ಮೋದಿ ಆಡಳಿತದಲ್ಲಿ ನಮಗೆ ಇಷ್ಟವಾದ ಮಾತುಗಳಿಗೆ ಸ್ವಾತಂತ್ರ್ಯ- ವಿರೋಧಿ ಧ್ವನಿಯ ದಮನ ವ್ಯವಸ್ಥಿತವಾಗಿ ನಡೆಯುತ್ತಿದೆ.

ಈಗ, ಸೋನಿಯಾ ಅವರ ಪುಸ್ತಕದಲ್ಲಿ ಏನಿದೆ ಎಂಬುದಕ್ಕಿಂತ, ಅದರಲ್ಲಿ ಏನನ್ನು ಭಾರತೀಯರು ಓದಬಾರದು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಈ ಜಟಿಲ ಪರಿಸ್ಥಿತಿಯಲ್ಲಿ; ಭಾರತದ ಆಳುವವರಿಗೆ ಮುಜುಗರ ಆಗಬಹುದಾದ ಸಂಗತಿಯನ್ನು ದಿಟ್ಟವಾಗಿ ಪ್ರಕಟಿಸಲು ಪ್ರಕಾಶಕರಿಗೆ ಹೆಚ್ಚಿನ ಧೈರ್ಯ ಬೇಕಾಗಿದೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಈ ದಿನ ಸಂಪಾದಕೀಯ | ಏರಿದ ಬೆಲೆ; ಇಳಿದ ಜೀವನಮಟ್ಟ; ಇದೇನಾ ಮೋದಿಯವರ ಆರ್ಥಿಕ ಅಭಿವೃದ್ಧಿ?

ಬ್ಲೂಮ್‌ಬರ್ಗ್ ವೇದಿಕೆ ಮೇಲೆ ನಿಂತು ಪ್ರಧಾನಿ ಮೋದಿಯವರು, ಜಿಡಿಪಿ ಶೇ.7.8ರಷ್ಟು ಜಿಗಿದಿದೆ,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...